ನನ್ನ ಯೋಗ್ಯತೆ ಎಷ್ಟಿದೆ ಅಷ್ಟೇ ದುಡಿಯುವುದು; ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಸುದೀಪ್ ನೇರನುಡಿ!

By Vaishnavi ChandrashekarFirst Published Sep 23, 2024, 6:22 PM IST
Highlights

ಸಂಭಾವನೆಯ ವಿಚಾರಕ್ಕೆ ಮನಸ್ಥಾಪ? ಕೊನೆಗೂ ಕಿಚ್ಚ ಕೊಟ್ಟೇ ಬಿಟ್ರು ಕ್ಲಾರಿಟಿ....
 

ಕನ್ನಡ ಕಿರುತೆರೆಯಲ್ಲಿ ದೊಡ್ಡ ಇತಿಹಾಸ ಸೃಷ್ಟಿ ಮಾಡಿರುವ ರಿಯಾಲಿಟಿ ಶೋ ಬಿಗ್ ಬಾಸ್. 10 ಸೀಸನ್‌ಗಳನ್ನು ಮುಗಿಸಿರುವ ಬಿಗ್ ಬಾಸ್, ಸೆಪ್ಟೆಂಬರ್ 29ರಂದು 11ನೇ ಆರಂಭಿಸುತ್ತಿದ್ದಾರೆ. ಕಿಚ್ಚಾ ಸುದೀಪ್ ನೇತೃತ್ವದಲ್ಲಿ ಮೂಡಿ ಬರಲಿರುವ ಈ ಸೀಸನ್‌ನಲ್ಲಿ ಸಾಕಷ್ಟು ಬದಲಾವಣೆ ಮತ್ತು ಹೊಸತನ ಕಾಣಲಿದೆ. ಇಷ್ಟು ದಿನ ಅವರು ಬರ್ತಾರೆ ಇವರು ಬರಲಿದ್ದಾರೆ ಅಂತಿದ್ದ ಕನ್ಫ್ಯೂಷನ್‌ಗೆ ಕ್ಲಾರಿಟಿ ಸಿಗುವ ದಿನ ಹತ್ತಿರ ಬರುತ್ತಿದೆ. ಆದರೆ ಜನರಿಗೆ ಬೇಕಿದ್ದ ದೊಡ್ಡ ಕ್ಲಾರಿಟಿ ಏನೆಂದರೆ ಸುದೀಪ್ ಇರ್ತಾರ ಇರಲ್ವಾ ಎಂದು. ಇಂದು ನಡೆದ ಪ್ರೆಸ್ ಮೀಟ್‌ನಲ್ಲಿ ಸುದೀಪ್ ಉತ್ತರಿಸಿದ್ದಾರೆ.

ಸುದೀಪ್ ಸಂಭಾವನೆ:

Latest Videos

ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡಲು ಕೋಟಿಯಲ್ಲಿ ಸಂಭಾವನೆ ಪಡೆಯುತ್ತಾರೆ ಅಂತ ಜನರೇ ಲೆಕ್ಕಾಚಾರ ಹಾಕಿದ್ದಾರೆ ಏಕೆಂದರೆ ಇದುವರೆಗೂ ಎಲ್ಲಿಯೂ ರಿವೀಲ್ ಮಾಡಿಲ್ಲ. ವೀಕೆಂಡ್ ಮಾತುಕತೆ ನಡೆಸಲು ಬರುವ ಸುದೀಪ್ ಧರಿಸುವ ಬಟ್ಟೆ, ಶೂ, ವಾಚ್ ಮತ್ತು ಇನ್ನಿತ್ತರ ವಸ್ತುಗಳ ಬೆಲೆ ಲಕ್ಷಕ್ಕೂ ಹೆಚ್ಚಿರುತ್ತದೆ. ಗಂಟೆಗಟ್ಟಲೆ ನಿಂತುಕೊಂಡು ಪ್ರತಿಯೊಬ್ಬ ಸ್ಪರ್ಧಿಯ ಸಮಸ್ಯೆಗೆ ಉತ್ತರ ಕೊಡಬೇಕು, ಕ್ಲಾರಿಟಿ ಪಡೆಯಬೇಕು ಅಂದ್ರೆ ದೊಡ್ಡ ಟಾಕ್ಸ್‌. ಈ ನಡುವೆ ಸುದೀಪ್ ಯಾವ ಸಿನಿಮಾ ಶೂಟಿಂಗ್‌ನಲ್ಲಿದ್ದರೂ ವೀಕೆಂಡ್ ಆಗುತ್ತಿದ್ದಂತೆ ಬಿಗ್ ಬಾಸ್‌ ಸೆಟ್‌ನಲ್ಲಿ ಇರಬೇಕು. ಹೀಗಾಗಿ 11ನೇ ಸೀಸನ್‌ಗೆ ಕಾಲಿಡುತ್ತಿರುವ ಕಾರಣ ಸಂಭಾವನೆ ಹೆಚ್ಚಿದ್ಯಾ ಎಂದು ಪತ್ರಕರ್ತೆ ಕೇಳಿದ ಪ್ರಶ್ನೆಗೆ 'ನನ್ನ ತಟ್ಟೆ ಎಷ್ಟು ಅಗಲದೆ ನಾನು ಅಷ್ಟೇ ಊಟ ಮಾಡುವುದು, ನನ್ನ ಯೋಗ್ಯತೆ ಎಷ್ಟು ಇದೆ ಅಷ್ಟೇ ದುಡಿಯುವುದು. ಇಲ್ಲಿ ನನ್ನ ಯೋಗ್ಯತೆ ಏನಿದೆ ಎಂದು ನೀವು ಹೇಳಬೇಕು' ಎಂದು ಕಿಚ್ಚ ಉತ್ತರಿಸುತ್ತಾರೆ. ಸಂಭಾವನೆ ರಿವೀಲ್ ಮಾಡಿದರೆ ಏನಾಗುತ್ತದೆ ಹೇಳಬಹುದು ಅಲ್ವಾ ಎಂದು ಮತ್ತೆ ಪ್ರಶ್ನೆ ಮಾಡಿದಾಗ  ಇದು ಹೊಸ ಅಧ್ಯಾಯ ಎಂದು ಸುದೀಪ್ ನಕ್ಕಿದ್ದಾರೆ.

ಬೆಂಗಳೂರು-ಮೈಸೂರು ಹೈವೇಯಲ್ಲಿ ಕಾರು ಚಲಿಸಿ 25 ಸಾವಿರ ಫೈನ್ ಕಟ್ಟಿದ ಯೂಟ್ಯೂಬರ್ ನಿಖಿಲ್; 1 ತಿಂಗಳಲ್ಲಿ ಏನ್

ಯಾಕೆ ಬಿಗ್ ಬಾಸ್ ಮಾಡಲ್ಲ ಅಂದಿದ್ದು:

ಕಿಚ್ಚ ಸುದೀಪ್ ನಿರೂಪಣೆ ಮಾಡಲ್ಲ ಬದಲಿಗೆ ರಿಷಬ್ ಶೆಟ್ಟಿ, ರಮೇಶ್ ಅರವಿಂದ್....ಹೀಗೆ ಸಾಲು ಸಾಲು ಹೆಸರುಗಳು ಕೇಳಿ ಬಂದಿತ್ತು. ಆದರೆ ಯಾಕೆ ಸುದೀಪ್ ಮಾಡುವುದಿಲ್ಲ ಅನ್ನೋ ಕ್ಲಾರಿಟಿ ಯಾರಿಗೂ ಇರಲಿಲ್ಲ.'ಈ ಸಲ ಬಿಗ್ ಬಾಸ್ ಸೀಸನ್ ಮಾಡಲ್ಲ ಅಂತ ಹೇಳಿದ್ದು ಖಂಡಿತಾ ಪೇಮೆಂಟ್ ವಿಚಾರದಿಂದ ಅಲ್ಲ ನಾನೊಬ್ಬ ಎಥಿಕಲ್ ವ್ಯಕ್ತಿ ಅದರಲ್ಲಿ ಏನೂ ಇಲ್ಲ. ನನಗೆ ಸುಸ್ತಾಗುತ್ತಿತ್ತು ನನಗೆ ಜಾಸ್ತಿ ಟ್ರಾವಲ್ ಆಗುತ್ತಿತ್ತು ಹೀಗಾಗಿ ಅವರಲ್ಲಿ ರಿಕ್ವೆಸ್ ಮಾಡಿಕೊಂಡೆ ಬಿಟ್ಟರೆ ಬೇರೆ ಏನೂ ಇಲ್ಲ. ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ ಏನೆಂದರೆ ಪ್ರತಿಯೊಬ್ಬರಿಗೂ ಮಾರ್ಕೆಟ್ ಇರುತ್ತದೆ. ನಾನು ಏನು ದುಡಿಯಬೇಕು ಅಂದುಕೊಂಡಿದ್ದೀನಿ ಅದನ್ನು 28 ವರ್ಷ ಇಂಡಸ್ಟ್ರಿಯಲ್ಲಿ ತೆಗೆದುಕೊಂಡಿದ್ದೀನಿ, 10 ವರ್ಷ ಬಿಗ್ ಬಾಸ್‌ನಲ್ಲಿ ತೆಗೆದುಕೊಂಡಿದ್ದೀನಿ ಆದರೂ ಚೆನ್ನಾಗಿ ದುಡಿಯುತ್ತಿದ್ದೀನಿ ತಾನೆ?' ಎಂದು ಸುದೀಪ್ ಉತ್ತರಿಸಿದ್ದಾರೆ. 

ಬಯಕೆಯಿಂದಾನೇ ನಂಗ್ಯಾವ ಮಗು ಹುಟ್ಟುತ್ತೆಂದು ಗೊತ್ತಿತ್ತು: ಯೂಟ್ಯೂಬರ್ ಪೂಜಾ ಕೆ ರಾಜ್

ಬಿಗ್ ಬಾಸ್ ಹೊರತು ಪಡಿಸಿ ಸುದೀಪ್ ಯಾವುದೇ ಕೆಲಸದಲ್ಲಿ ಬ್ಯುಸಿಯಾಗಿದ್ದರೂ ಶನಿವಾರ ಮತ್ತು ಭಾನುವಾರ ಮಾತುಕತೆ ಮಾಡಲು ತಯಾರಿ ಮಾಡಿಕೊಳ್ಳುತ್ತಾರೆ. ಇಡೀ ವಾರ ಪ್ರಸಾರವಾದ ಎಪಿಸೋಡ್‌ಗಳನ್ನು ನೋಡಿಕೊಂಡು ಆನಂತರ ಸ್ಪರ್ಧಿಗಳ ಜೊತೆ ಮಾತನಾಡುತ್ತಾರೆ. ಇಲ್ಲಿ ಯಾರ ಅಭಿಪ್ರಾಯದ ಮೇಲೆ ಡಿಪೆಂಡ್ ಆಗದೆ ತಮ್ಮ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ. ಕಿಚ್ಚ ಸುದೀಪ್ Straightforwardness  ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. 

click me!