ಬಿಗ್ ಬಾಸ್ ಸೀಸನ್ 11 ಹೊಸ ಟ್ವಿಸ್ಟ್: ರಾಜಾರಾಣಿ ಶೋ ಫೈನಲ್‌ನಲ್ಲಿ ಸ್ಪರ್ಧಿಗಳ ಹೆಸರು ರಿವೀಲ್!

By Sathish Kumar KH  |  First Published Sep 23, 2024, 4:58 PM IST

ಬಿಗ್ ಬಾಸ್ ಸೀಸನ್ 11 ರ ಕಂಟೆಸ್ಟೆಂಟ್‌ಗಳ ಹೆಸರನ್ನು ರಾಜಾ ರಾಣಿ ಶೋನಲ್ಲಿ ರಿವೀಲ್ ಮಾಡಲಾಗುತ್ತದೆ. ವೀಕ್ಷಕರಿಂದ ಆನ್‌ಲೈನ್ ಮೂಲಕ ಓಟಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಅತಿ ಹೆಚ್ಚಿನ ಮತಗಳನ್ನು ಪಡೆದವರು ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ.


ಬೆಂಗಳೂರು (ಸೆ.23): ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಈ ಬಾರಿ ಕಂಟೆಸ್ಟೆಂಟ್‌ಗಳ ಹೆಸರನ್ನು ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಮುಂಚೆಯೇ ರಿವೀಲ್ ಮಾಡಲಾಗುತ್ತದೆ. ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ರಾಜಾ ರಾಣಿ ವೇದಿಕೆಯಲ್ಲಿಯೇ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಇಡಲಾಗಿದೆ.

ಬಿಗ್ ಬಾಸ್ ಸೀಸನ್ 11 ಈಗ ಹೊಸ ಥೀಮ್‌ನಲ್ಲಿ ಬರುತ್ತಿದೆ. ಸ್ವರ್ಗ ಮತ್ತು ನರಕ ಥೀಮ್‌ನಲ್ಲಿಯೇ ಈ ಸೀಸನ್ ನಡೆಸಲಾಗುತ್ತಿದ್ದು, ಮನೆಯ ಒಳಾಂಗಣವನ್ನೂ ಅದೇ ರೀತಿಯಾಗಿ ನಿರ್ಮಾಣ ಮಾಡಲಾಗುತ್ತದೆ. ಆದರೆ, ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿಯ ಶೋಗಳ 10 ಸೀಸನ್‌ನಲ್ಲಿ ಕಂಟೆಸ್ಟೆಂಟ್‌ಗಳ ಹೆಸರನ್ನು ವೇದಿಕೆ ಮೇಲೆಯೇ ರಿವೀಲ್ ಮಾಡಿ, ಅವರನ್ನು ಪರಿಚಯ ಮಾಡಿಕೊಡಲಾಗುತ್ತಿತ್ತು. ಈ ಬಾರಿ ಮಾತ್ರ ಹೊಸದೊಂದು ರೀತಿಯಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತದೆ. ಇದೇ ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ರಾಜಾರಾಣಿ ಶೋನಲ್ಲಿ ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.

Latest Videos

undefined

ಬಿಗ್​ಬಾಸ್​ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?

ಹೊಸ ಟ್ವಿಸ್ಟ್ ಅಳವಡಿಸಿದ ಬಿಗ್ ಬಾಸ್: ಇನ್ನು ರಾಜಾರಾಣಿ ಶೋನಲ್ಲಿ ರಿವೀಲ್ ಮಾಡಿದ ಹೆಸರುಗಳಿಗೆ ವಾಹಿನಿಯ ವೀಕ್ಷಕರಿಂದಲೇ ಓಟಿಂಗ್ ಮಾಡಲು ಅವಕಾಶ ನೀಡಲಾಗುತ್ತದೆ. ಅಂದರೆ, ಬಿಗ್ ಬಾಸ್ ಕಂಟೆಸ್ಟೆಂಟ್‌ಗಳ ಹೆಸರನ್ನು ರಿವೀಲ್ ಮಾಡಿದ ನಂತರ ಜನರಿಂದ ಅವರಿಗೆ ಆನ್‌ಲೈನ್ ಮೂಲಕ ವೋಟಿಂಗ್ ಅನ್ನು ಪಡೆಯಲಾಗುತ್ತದೆ. ಅತಿ ಹೆಚ್ಚಿನ ಮತಗಳನ್ನು ಪಡೆದವರಿಗೆ ಬಿಗ್ ಬಾಸ್ ಮನೆಯೊಳಗೆ ಹೋಗಲು ಅವಕಾಶ ನೀಡಲಾಗುತ್ತದೆ.

ಬಿಗ್ ಬಾಸ್ ಸೀಸನ್ ಮಾಡೊಲ್ಲ ಎಂದಿದ್ದು ನಿಜ: ನಮ್ಮ ದೇಶದಲ್ಲಿ ಅತಿ ಹೆಚ್ಚು ಸೀಸನ್‌ಗಳನ್ನು ನಡೆಸಿಕೊಟ್ಟ ಕೀರ್ತಿ ಕಿಚ್ಚ ಸುದೀಪ್ ಅವರಿಗೆ ಸಲ್ಲುತ್ತದೆ. ಆದರೆ, ನಾನು ಈ ಬಾರಿ ಬಿಗ್ ಬಾಸ್ ನಿರೂಪಕನಾಗಿ ಹೋಗದಿರಲು ನಿರ್ಧರಿಸಿದ್ದೆನು. ಈ ವಿಚಾರವನ್ನು ಚಾನೆಲ್‌ನೊಂದಿಗೂ ಹೇಳಿಕೊಂಡಿದ್ದೆ. ಆಗ ಕಲರ್ಸ್ ಕನ್ನಡದ ಬಹುತೇಕರು ನಮ್ಮ ಮನೆಗೆ ಬಂದಿದ್ದರು. ಎಲ್ಲರ ಒತ್ತಾಯದ ಮೇರೆಗೆ ಈ ಬಾರಿಯೂ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದೇನೆ. ಇದರಿಂದಾಗಿಯೇ ಇಷ್ಟು ಸುದ್ದಿಗಳು, ಗಾಸಿಪ್‌ಗಳು ಹರಡಿಕೊಂಡಿದ್ದವು. ಇದೀಗ ಎಲ್ಲದಕ್ಕೂ ತೆರೆ ಎಳೆದಿದ್ದೇವೆ. ಶನಿವಾರ ಶುರುವಾದ್ರೆ ಭಾನುವಾರವೇ ಅವರು ನಮ್ಮನ್ನು ಬಿಡುವುದು. 10 ವರ್ಷ ಆಯ್ತು ಶೋ ಶುರು ಮಾಡಿ. ಬಿಗ್ ಬಾಸ್ ಅಂದ್ರೆ ನಮ್ಮ ಮನೆಯಲ್ಲಿ ಯಾರೋ ಕೂತು ಬಯ್ಯುತ್ತಿದ್ದರೆ, ನನಗೆ ಬಯ್ಯುತ್ತಿದ್ದಾರೆ ಅನಿಸುತ್ತದೆ. ಬಿಗ್ ಬಾಸ್ ಸ್ಟೇಜ್ ಮೇಲೆ ಯಾವುದೂ ರಿಟೇಕ್ ಆಗುವುದಿಲ್ಲ. ಬಿಗ್ ಬಾಸ್ ಶುರುವಾಗುವುದಕ್ಕೂ ಮುನ್ನ ನಾವು ಹೇಳುವಾಗ ಸ್ವಲ್ಪ ರಿಟೇಕ್ ಆಗುತ್ತದೆ. ಆದರೆ, ಒಂದು ಸಾರಿ ಮನೆ ಒಳಗಡೆ ಹೋದರೆ ಯಾವುದೂ ರಿಟೇಕ್ ಆಗುವುದಿಲ್ಲ ಎಂದು ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಹೇಳಿದರು.

ಬಿಟ್ಹಾಕಿ #MeToo ಫೈಟ್.. ಕಿಚ್ಚನ ಪಾಸಿಟಿವ್ ಥಾಟ್: ಯಾರೇನೇ ಅನ್ನಲಿ.. ನಾವು ಹಿರಿಯರ ಹಾದಿಯಲ್ಲಿ!

ಕಲರ್ಸ್ ಕನ್ನಡ ಬಿಸಿನೆಸ್ ಹೆಡ್ ಪ್ರಶಾಂತ್ ನಾಯ್ಕ ಮಾತನಾಡಿ, ಬಿಗ್ ಬಾಸ್ ಸೀಸನ್ ನಲ್ಲಿ ವೇದಿಕೆಯ ಮೇಲೆ ಕಂಟೆಸ್ಟೆನ್ಟ್ ಗಳನ್ನ ಪರಿಚಯ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಯ ಮಾಡಲ್ಲ. ವಿಶೇಷವಾಗಿ ಶನಿವಾರ ಪ್ರಸಾರವಾಗುವ ರಾಜಾ- ರಾಣಿ ವೇದಿಯ ಮೇಲೆ ಪರಿಚಯಿಸುತ್ತೇವೆ. ಸಾರ್ವಜನಿಕರಿಗೂ ವೋಟು ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿದರು.

click me!