ಬಿಂದಾಸ್​ ನಿವೇದಿತಾಗೆ ಇದೇನಾಯ್ತು? ಗೆಳತಿ ಜತೆ ಲವ್​ಸಾಂಗ್​ ಮಾಡಿ ಕಮೆಂಟ್​ ಸೆಕ್ಷನ್ನೇ ಆಫ್​ ಮಾಡಿಬಿಟ್ರಲ್ಲಾ?

Published : Sep 23, 2024, 05:25 PM IST
ಬಿಂದಾಸ್​ ನಿವೇದಿತಾಗೆ ಇದೇನಾಯ್ತು? ಗೆಳತಿ ಜತೆ ಲವ್​ಸಾಂಗ್​  ಮಾಡಿ ಕಮೆಂಟ್​ ಸೆಕ್ಷನ್ನೇ ಆಫ್​  ಮಾಡಿಬಿಟ್ರಲ್ಲಾ?

ಸಾರಾಂಶ

ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದರಂತೆ ರೀಲ್ಸ್​ ಹಾಕಿ ಹಲ್​ಚಲ್​ ಸೃಷ್ಟಿಸ್ತಿರೋ ನಿವೇದಿತಾ ಗೌಡ, ಈಗ ಸ್ನೇಹಿತೆಯ ಜೊತೆ ಲವ್​ ಸಾಂಗ್​ ಮಾಡಿದ್ದಾರೆ. ಆದರೆ ಅವರು ಕಮೆಂಟ್ಸ್​ ಸೆಕ್ಷನ್ನೇ ಆಫ್​  ಮಾಡಿಕೊಂಡಿದ್ದು, ಇದರ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಂಡಿದ್ದಾರೆ.     

ಗಾಯಕ ಚಂದನ್​ ಶೆಟ್ಟಿ ಅವರಿಂದ ಡಿವೋರ್ಸ್​ ಪಡೆದ ಮೇಲೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರು ಮತ್ತಷ್ಟು ಹಾಟ್​ ಆಗಿ ಕಾಣಿಸಿಕೊಂಡು ಸೋಷಿಯಲ್​  ಮೀಡಿಯಾದಲ್ಲಿ ರೀಲ್ಸ್​ ಶೇರ್​  ಮಾಡಿಕೊಳ್ಳುತ್ತಿದ್ದಾರೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್​ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!


ಆದರೆ ಇದೀಗ ಕುತೂಹಲ ಎನ್ನುವಂತೆ ಕಮೆಂಟ್ಸ್​ ಸೆಕ್ಷನ್​ ಆಫ್​ ಮಾಡಿಬಿಟ್ಟಿದ್ದಾರೆ ನಿವೇದಿತಾ ಗೌಡ. ಯಾವುದಕ್ಕೂ ಹೆದರಾಕೆ ಈಗ ಹೀಗೇಕೆ ಮಾಡಿದ್ದಾರೆ ಎನ್ನುವುದು ಮಾತ್ರ ತುಂಬಾ ಕುತೂಹಲವಾಗಿದೆ. ಅಷ್ಟಕ್ಕೂ ಇದೀಗ ಅವರು,  ಸ್ನೇಹಿತೆಯೊಬ್ಬರ ಜೊತೆ ರೀಲ್ಸ್​ ಮಾಡಿದ್ದಾರೆ. ಈ ಹಿಂದೆ ಕೂಡ ಇದೇ ಸ್ನೇಹಿತೆ ಜೊತೆ ಕೆಲವು ರೀಲ್ಸ್​ ಮಾಡಿರೋ ನಿವೇದಿತಾ, ಇದೀಗ ಇಬ್ಬರೂ ಸೇರಿ ಲವ್​ಸಾಂಗ್​ಗೆ ರೀಲ್ಸ್ ಮಾಡಿದ್ದಾರೆ. ಈ ಹಿಂದಿನ ರೀಲ್ಸ್​ನಲ್ಲಿ  ಇಬ್ಬರೂ ಗೆಳತಿಯರು ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರಲಿಲ್ಲ. ಅದಕ್ಕೆ ನಿವೇದಿತಾ  ಐ ಲವ್​ ಯು ಎಂದು ಶೀರ್ಷಿಕೆ ಕೊಟ್ಟಿದ್ದಕ್ಕೆ ಸಕತ್​ ಟ್ರೋಲ್​ ಆಗಿತ್ತು. ಅಂದಹಾಗೆ, ಈ ಸ್ನೇಹಿತೆಯ ಹೆಸರು  ವಾಣಿ ಜಿ.ಎಸ್​. ಆಗಿದ್ದು, ಅವರಿಗೂ ನಿವೇದಿತಾ ರೀಲ್ಸ್​  ಟ್ಯಾಗ್​ ಮಾಡಿದ್ದಾರೆ. 

ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್​? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್​!
 

 ಈ ಹೊಸ ಗೆಳತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ತಡಕಾಡುತ್ತಿದ್ದಾರೆ.  ವಾಣಿ ಅವರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದಾಗಲೇ ಹಲವಾರು ರೀಲ್ಸ್​ ಮಾಡಿ ಶೇರ್​ ಮಾಡಿದ್ದಾರೆ. ಅಷ್ಟಕ್ಕೂ,  ವಿಚ್ಛೇದನದ ಬಳಿಕ,  ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್​  ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್​ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್​ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್​ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್​ಗಳೇ ಹರಿದಾಡುತ್ತಿವೆ. 

ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಇದೀಗ ದಿಢೀರ್​ ಎಂದು ಅದೂ ಸ್ನೇಹಿತೆಯ ಜೊತೆಗಿನ ರೀಲ್ಸ್​ನಲ್ಲಿ ಕಮೆಂಟ್ಸ್​ ಸೆಕ್ಷನ್​ ಆಫ್​ ಮಾಡಿರೋದು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ. 
 
ಚಂದನ್​ ಶೆಟ್ಟಿ ಕಾರಿನ ಮೇಲೂ ಮಾಜಿ ಪತ್ನಿ ನಿವೇದಿತಾ ಗೌಡ! ನಂಬರ್​ ಪ್ಲೇಟ್​ ಮೇಲೆ ಫ್ಯಾನ್ಸ್​ ಕಣ್ಣು
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುಮಗಳ ಲುಕ್​ನಲ್ಲಿ ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ- ಇದರ ಗುಟ್ಟೇನು ಗೊತ್ತಾ? Something Special?
Bigg Boss ಮನೆಗೆ ನಿಮ್ಮನ್ನು ಸೆಲೆಕ್ಟ್​ ಮಾಡಲು ಬರ್ತಿದ್ದಾರೆ ಈ ಹ್ಯಾಂಡ್​ಸಮ್​: ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ