ಮಹಾನ್ ಶಿವಭಕ್ತ ಲಾಯರ್ ಜಗದೀಶ್‌ಗೆ ಭರತ್ ಬೊಮ್ಮಾಯಿ ವಿರುದ್ಧ ಟಿಕೆಟ್ ಸಿಗುತ್ತಾ?

By Shriram BhatFirst Published Oct 21, 2024, 11:35 AM IST
Highlights

'ನನಗೆ ಕಾಂಗ್ರೆಸ್ ಹೈಕಮಾಂಡ್ ಪರಿಚಯವಿಲ್ಲ. ಆದರೆ, ಒಮ್ಮೆ ಕಾಂಗ್ರೆಸ್ ನನಗೆ ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಟಿಕೆಟ್ ಕೊಟ್ಟರೆ ತಾವು ಅದಕ್ಕೆ ಸಿದ್ಧ'..

ಬಿಗ್ ಬಾಸ್ ಕನ್ನಡ ಸೀಸನ್ 11ರ ಶೋ ನಲ್ಲಿ ಗಲಾಟೆ ಮಾಡಿಕೊಂಡು ಹೊರಹಾಕಲ್ಪಟ್ಟಿರುವ ಸ್ಪರ್ಧಿ ಲಾಯರ್ ಜಗದೀಶ್ (Lawyer Jagadish) ಅವರೀಗ ಹೊಸದೊಂದ ಬಾಂಬ್ ಸಿಡಿಸಿದ್ದಾರೆ. ಬಿಗ್ ಬಾಸ್ ಶೋನ ಮೊದಲನೇ ವಾರದಲ್ಲಿ, ವೇದಿಯಲ್ಲಿ ಮಾತನಾಡುತ್ತ, ತಮಗೆ ಅವಕಾಶ ಕೊಟ್ಟರೆ ತಾವು ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದರು. ಆದರೆ ಈಗ ಅದಕ್ಕಿಂದ ಸ್ವಲ್ಪ ಹಿಂದೆ ಹೆಜ್ಜೆ ಇಟ್ಟಿದ್ದಾರೆ. ಅಂದರೆ, ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಕಾಂಗ್ರೆಸ್ ತಮಗೆ ಟಿಕೆಟ್ ಕೊಟ್ಟರೆ ಭರತ್ ಬೊಮ್ಮಾಯಿ (Bharath Bommai) ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಲಾಯರ್ ಜಗದೀಶ್ ಅವರ ಈ ಹೇಳಿಕೆಯೀಗ ಸಖತ್ ವೈರಲ್ ಆಗುತ್ತಿದೆ. ಅವರು ವೈರಲ್ ಆಗಲೀ ಅಂತಲೇ ಹೀಗೆಲ್ಲಾ ಹೇಳಿಕೆ ಕೊಡುತ್ತಾರೋ ಅಥವಾ ಅವರು ಏನೇ ಹೇಳಿದರೂ ಅದು ವೈರಲ್ ಆಗುತ್ತದೆಯೋ ಎಂಬುದು ಆ ಶಿವನಿಗೇ ಗೊತ್ತು. ಏಕೆಂದರೆ, ಲಾಯರ್ ಜಗದೀಶ್ ಅವರು ಮಹಾನ್ ಶಿವಭಕ್ತ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಈಗ ಬಹಿರಂಗ ಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲಾಯರ್ ಜಗದೀಶ್ ಅವರು ಶಿವಲಿಂಗದ ಮೇಲೆ ನೀರು ಹಾಕುತ್ತಿರುವ ವಿಡಿಯೋ ಶೇರ್ ಮಾಡಿರುವ ಕಿರಿಕ್ ಕೀರ್ತಿ ಅವರು ಅದಕ್ಕೊಂದು ಬರಹವನ್ನೂ ಸೇರಿಸಿದ್ದಾರೆ. 

Latest Videos

ನನಗಾದ ನಷ್ಟ ಯಾರು ಕೊಡ್ತಾರೆ? ಏಷ್ಯಾನೆಟ್‌ ಸುವರ್ಣಗೆ ರಂಜಿತ್ ಎಕ್ಸ್‌ಕ್ಲೂಸಿವ್ ಪ್ರಶ್ನೆ!

ಕಿರಿಕ್ ಕೀರ್ತಿ ಅವರು 'ಲಾಯರ್ ಜಗದೀಶ್ ಅವರ ದೈವಭಕ್ತಿಗೆ ಸೈ ಅನ್ನಲೇಬೇಕು.... ಅವರೊಬ್ಬ ಮಹಾನ್ ಶಿವಭಕ್ತ ಅಂತ ಗೊತ್ತಾಗಿದ್ದೇ ಇವಾಗ‌..' ಎಂದು ಬರೆದಿದ್ದಾರೆ. ಹೀಗಾಗಿ ಶಿವಭಕ್ತ ಲಾಯರ್ ಜಗದೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತಾ ಎಂಬುದೀಗ ಮಹಾನ್ ಪ್ರಶ್ನೆಯಾಗಿ ಎಲ್ಲರನ್ನೂ ಕಾಡತೊಡಗಿದೆ. ಲಾಯರ್ ಜಗದೀಶ್ ಅವರು 'ನನಗೆ ಕಾಂಗ್ರೆಸ್ ಹೈಕಮಾಂಡ್ ಪರಿಚಯವಿಲ್ಲ.

ಆದರೆ, ಒಮ್ಮೆ ಕಾಂಗ್ರೆಸ್ ನನಗೆ ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ಟಿಕೆಟ್ ಕೊಟ್ಟರೆ ತಾವು ಅದಕ್ಕೆ ಸಿದ್ಧ' ಎಂದಿದ್ದು ಭಾರೀ ಕಂಪನ ಸೃಷ್ಟಿಸಿದೆ. ಏಕೆಂದರೆ, ಹೇಳಿ ಕೇಳಿ ಭರತ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುಪುತ್ರ! ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯ ಒಳಗೆ ಇರಲಿ, ಹೊರಗೇ ಇರಲಿ, ತಮ್ಮ ಚಿತ್ರವಿಚಿತ್ರ ಹೇಳಿಕೆಗಳಿಂದ ಸಖತ್ ಸೌಂಡ್ ಮಾಡುತ್ತಿರುವುದಂತೂ ಸುಳ್ಳಲ್ಲ!

ಸುದೀಪ್ ಹಳೆಯ ಪೋಸ್ಟ್ ಈಗ ಭಾರೀ ವೈರಲ್, ಅಮ್ಮನ ಬಗ್ಗೆ ಏನ್ ಹೇಳಿದ್ರು ಕಿಚ್ಚ?!

ಇದೀಗ, ಭರತ್ ಬೊಮ್ಮಾಯಿಗೆ ಟಿಕೆಟ್ ಬಿಜೆಪಿಯಿಂದ ಟಿಕೆಟ್ ಕನ್ಫರ್ಮ್‌ ಆಗುತ್ತಿರುವಂತೆಯೇ ಸೃಷ್ಟಿಯಾಗಿರುವ ಅಲೆಗೆ, ಕಾಂಗ್ರೆಸ್‌ನಿಂದ ಲಾಯರ್ ಜಗದೀಶ್ ಮೂಲಕ ಕೌಂಟರ್ ಕೊಡಲಾಗುತ್ತದೆಯೇ ಎಂಬ ಚರ್ಚೆ ಶುರುವಾಗಿದೆ. ಆದರೆ ಇದಕ್ಕೆ ಕೆಲವರು, ಕಾಂಗ್ರೆಸ್‌ ಹೈಕಮಾಂಡ್ ಜಗದೀಶ್ ಅವರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತದೆಯೇ ೆಂಬ ಪ್ರಶ್ಎ ಮುಂದಿಟ್ಟಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕು, ಕಾಯೋಣ..!

click me!