ಬಿಗ್ ಬಾಸ್ ಫಿನಾಲೆಯಲ್ಲಿ 'ತಾಯ್ನಾಡು' ಪದಕ್ಕೆ ಅಗೌರವ; ರಜತ್ ಹಾಗೂ ಕಿಚ್ಚನ ಮಾತಿನ ಮರ್ಮವೇನು?

Published : Jan 26, 2025, 06:37 PM IST
ಬಿಗ್ ಬಾಸ್ ಫಿನಾಲೆಯಲ್ಲಿ 'ತಾಯ್ನಾಡು' ಪದಕ್ಕೆ ಅಗೌರವ; ರಜತ್ ಹಾಗೂ ಕಿಚ್ಚನ ಮಾತಿನ ಮರ್ಮವೇನು?

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ 'ತಾಯ್ನಾಡು' ಈ ಪದವನ್ನು ರಜತ್ ಕಿಶನ್ ಬಳಸಿದ್ದು, ಕಿಚ್ಚ ಸುದೀಪ್ ಕೂಡ ಇದಕ್ಕೆ ಬೆಂಬಲ ನೀಡಿದ್ದಾರೆ. ಈ ಪದಬಳಕೆ ಕನ್ನಡಪರ ಹೋರಾಟಗಾರರಿಂದ ಟೀಕೆಗೆ ಗುರಿಯಾಗಿದೆ.

ಬೆಂಗಳೂರು (ಜ.26): ಬಿಗ್ ಬಾಸ್ ಮನೆಯಲ್ಲಿ ನಾಡು, ನುಡಿ ಹಾಗೂ ಕನ್ನಡಾಂಬೆಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ. ಕೆಲವ ಒಂದು ವೇಳೆ ಕನ್ನಡ ಭಾಷೆ ಮಾತನಾಡಿದ್ದಾಗ ಅಂತಹ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ತಾಯ್ನಾಡು ಎಂಬ ತುಂಬಾ ಗೌರವವುಳ್ಳ ಪದಕ್ಕೆ ಬಿಗ್ ಬಾಸ್ ಮನೆಯಲ್ಲಿ ಅಗೌರವ ತರಲಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ತಾಯ್ನಾಡು ಎಂಬ ಪದಕ್ಕೆ ಎರಡೆರಡು ಬಾರಿ ಅಗೌರವ ತೋರಿದ ಘಟನೆ ನಡೆದಿದೆ. ತಾಯ್ನಾಡು ಎಂಬ ಪದವನ್ನು ಮಾತೃಭೂಮಿ, ಜನ್ಮಭೂಮಿ, ತಾನು ಹುಟ್ಟಿ ಬೆಳೆದ ಪ್ರದೇಶ ಎಂದು ಹೇಳಲಾಗುತ್ತದೆ. ಇದೀಗ ನಾವು ತಾಯ್ನಾಡು ಎಂದು ಹೇಳಿದರೆ ಅದು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ್ದ ಬಗ್ಗೆ ಹೇಳಿಕೊಂಡಂತೆ. ಆದರೆ, ಇದೇ ತಾಯ್ನಾಡು ಪದವನ್ನು ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ರಜತ್ ಕಿಶನ್ ಅವರು ತಾಯ್ನಾಡು ಎಂಬ ಪದವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿದ್ದು, ಇದಕ್ಕೆ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರೂ ಬೆಂಬಲ ನೀಡಿ ಮಾತನಾಡಿ ನಗಾಡಿದ್ದಾರೆ.

ರತಜ್ ಅವರ ತಾಯಿಗೂ ತಿಳಿಯದ ತಾಯ್ನಾಡು ಪದದ ಅರ್ಥ: ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕರಾದ ಕಿಚ್ಚ ಸುದೀಪ್ ಅವರು ಸ್ಪರ್ಧಿ ರಜತ್ ಅವರಿಗೆ ಪ್ರಶ್ನೆ ಮಾಡುತ್ತಾ ನೀವು ಬಿಗ್ ಬಾಸ್ ಮನೆಗೆ ಬಾರದಿದ್ದರೇ ಈ ಅವಧಿಯಲ್ಲಿ ಏನು ಮಾಡುತ್ತಿದ್ರಿ, ಎಲ್ಲಿಗಾದರೂ ಪ್ರವಾಸ ಹೋಗುತ್ತಿದ್ರಾ ಎಂದು ಕೇಳಿದ್ದಾರೆ. ಹೌದು ಸರ್, ತಾಯ್ನಾಡಿಗೆ ಹೋಗಿ ಬರುತ್ತಿದ್ದೆ ಎಂದು ಹೇಳಿದ್ದಾರೆ. ಆಗ ಕೆಲವರಿಗೆ ಅವರ ಮಾತಿನ ಮರ್ಮವೇನು ಎಂದು ಅರ್ಥವಾಗಿದೆ. ಆದರೆ, ನಾಡಿನ ಬಹುತೇಕರಿಗೆ ಈ ಮಾತಿನ ಮರ್ಮವೇ ತಿಳಿದುಬಂದಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ 5ನೇ ರನ್ನರ್ ಅಪ್ ಭವ್ಯಾ ಗೌಡ ಸಿಕ್ಕ ಹಣವೆಷ್ಟು? ಬಾಕಿ 14 ಸ್ಪರ್ಧಿಗಳಿಗೆ ಸಿಕ್ಕಿದ್ದೆಷ್ಟು?

ಸ್ವತಃ ರಜತ್ ಕಿಶನ್ ಅವರ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿ ಆಗಿದ್ದರೂ, ಮಗನ ಮಾತಿನ ಮರ್ಮ ಮಾತ್ರ ಅರ್ಥವಾಗಿಲ್ಲ. ಇದನ್ನು ಫಿನಾಲೆ ದಿನವೂ ಕಿಚ್ಚ ಸುದೀಪ್ ಅವರು ಚರ್ಚೆ ಮಾಡಿದ್ದಾರೆ. ಆಗಲೂ ತಾಯ್ನಾಡು ಎಂಬ ಪದವನ್ನೇ ಬಳಕೆ ಮಾಡುತ್ತಾ, ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ, ರತ್ ಅವರ ಪತ್ನಿ ಅಕ್ಷಿತಾ ಅವರಿಗೆ ನಿಮ್ಮ ಗಂಡನೊಂದಿಗೆ ತಾಯ್ನಾಡಿಗೆ ಹೋಗಿ ಬರುವಂತೆ ಹೇಳಿದ್ದಾರೆ. ಇದೇ ವೇಳೆ ರಜತ್ ಅವರ ತಾಯಿಗೆ ತಾಯ್ನಾಡು ಎಂಬುದರ ಅರ್ಥ ಕೇಳಿದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಮಗ ಎಂದು ಹೇಳಿದ್ದಾರೆ. ಸ್ವತಃ ರಜತ್ ಅವರ ತಾಯಿಗೂ ತಾಯ್ನಾಡು ಮಾತಿನ ಮರ್ಮ ಅರ್ಥವಾಗಿಲ್ಲ.

ಕಿಚ್ಚ ಸುದೀಪ್, ರಜತ್ ಅವರ ತಾಯ್ನಾಡು ಮಾತಿನ ಮರ್ಮವೇನು?
ಜಾಗತಿಕ ಮಟ್ಟದಲ್ಲಿ ಪ್ರವಾಸಿ ಸ್ಥಳದಲ್ಲಿ ಅತ್ಯಂತ ಪ್ರಸಿದ್ಧಿಯಾಗಿರುವ ಥೈಲ್ಯಾಂಡ್‌ಗೆ ಯುವಜನರು ಸೇರಿದಂತೆ ಎಲ್ಲ ವರ್ಗದ ಪುರುಷರು ಹೆಚ್ಚಾಗಿ ಪ್ರವಾಸಕ್ಕೆ ಹೋಗುತ್ತಾರೆ. ಥೈಲ್ಯಾಂಡ್‌ನಲ್ಲಿ ಥೈ ಮಸಾಜ್, ಥೈಲ್ಯಾಂಡ್ ಮಹಿಳೆಯರ ಬೀದಿ ಸೇರಿದಂತೆ ರಾತ್ರಿ ಜಗತ್ತಿನ ಅನಾವರಣವೇ ಆಗುತ್ತದೆ. ಇಲ್ಲಿ ಪುರುಷರು ಹೋಗುವ ಉದ್ದೇಶವೇ ಮಜಾ ಮಾಡಲಿಕ್ಕೆ ಎಂಬುದು ಸತ್ಯಾಂಶ ಆಗಿದೆ. ಆದರೆ, ಥೈಲ್ಯಾಂಡ್‌ಗೆ ಪ್ರವಾಸ ಹೋಗುವುದನ್ನು ತಾಯ್ನಾಡಿಗೆ ಹೋಗುವುದು ಎಂದು ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಹಾಗೂ ರಜತ್ ಕಿಶನ್ ಮಾತನಾಡಿದ್ದಾರೆ. ಇದನ್ನು ಹಾಸ್ಯಾತ್ಮಕವಾಗಿ ಮಾತನಾಡಲಾಗಿದೆಯೇ ಹೊರತು ಅಗೌರವ ತೋರುವ ಉದ್ದೇಶದಿಂದ ಮಾತನಾಡಿಲ್ಲ ಎಂಬುದು ಎಲ್ಲ ವೀಕ್ಷಕರಿಗೂ ತಿಳಿಸಿದೆ. ಆದರೆ, ಕೆಲವು ಕನ್ನಡಪರ ಹೋರಾಟಗಾರರಿಂದ ಥೈಲ್ಯಾಂಡ್‌ಗೆ ಮಜಾ ಮಾಡಲು ಪ್ರವಾಸ ಹೋಗುವುದಕ್ಕೆ 'ತಾಯ್ನಾಡು' ಪದ ಬಳಕೆ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್ ಫೈನಲಿಸ್ಟ್‌ಗಳ ಪೈಕಿ ಅತಿಹೆಚ್ಚು ಮನರಂಜನೆ ನೀಡಿದ ಸ್ಪರ್ಧಿ ಯಾರು? ಇಲ್ಲಿದೆ ವೋಟಿಂಗ್ ಅಪ್ಡೇಟ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?