ಬಿಗ್‌ಬಾಸ್‌ ಕನ್ನಡ 11 ಕಡಿಮೆ ವೋಟು ಪಡೆದ ಭವ್ಯಾ ಔಟ್‌, ಸಿಕ್ಕಿದ ಬಹುಮಾನ ಹಣ ಜೊತೆಗೆ ಸಂಭಾವನೆ ವೆಷ್ಟು?

Published : Jan 25, 2025, 10:33 PM ISTUpdated : Jan 25, 2025, 11:11 PM IST
ಬಿಗ್‌ಬಾಸ್‌ ಕನ್ನಡ 11 ಕಡಿಮೆ ವೋಟು ಪಡೆದ  ಭವ್ಯಾ ಔಟ್‌, ಸಿಕ್ಕಿದ ಬಹುಮಾನ ಹಣ ಜೊತೆಗೆ ಸಂಭಾವನೆ ವೆಷ್ಟು?

ಸಾರಾಂಶ

ಬಿಗ್‌ಬಾಸ್‌ ಕನ್ನಡ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅದ್ದೂರಿಯಾಗಿ ಕಾರ್ಯಕ್ರಮ ಆರಂಭಿಸಿದರು. ಭವ್ಯಾ ಗೌಡ 5ನೇ ರನ್ನರ್‌ ಅಪ್‌ ಆಗಿ ಹೊರಬಂದ ಮೊದಲ ಸ್ಪರ್ಧಿ. ಉತ್ತಮ ಪ್ರದರ್ಶನ ನೀಡಿ, ಮೂರು ಬಾರಿ ಕ್ಯಾಪ್ಟನ್ ಆಗಿದ್ದ ಭವ್ಯಾ, ಉಳಿದ ಐವರು ಸ್ಪರ್ಧಿಗಳೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಗ್ರ್ಯಾಂಡ್ ಆಗಿ ಪ್ರಾರಂಭವಾಗಿದೆ. ಝಗಮಗಿಸುವ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಮಾಸ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮ್ಯಾಕ್ಸ್‌ ಸಿನಿಮಾ ಹಾಡಿಗೆ ನೃತ್ಯ ಮಾಡುವ ಮೂಲಕ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ನಡುವೆ ಬಿಗ್‌ಬಾಸ್‌ ಮನೆಯಿಂದ ಮೊದಲ ಸ್ಪರ್ಧಿ ಔಟ್ ಆಗಿದ್ದಾರೆ.

ಮೊದಲಿಗೆ 5ನೇ ರನ್ನರ್‌ ಅಪ್‌ ಆಗಿ  ಭವ್ಯಾ ಔಟ್‌ ಆದರು. ಹೌದು  ಬಿಗ್‌ಬಾಸ್‌ ಮನೆಯಿಂದ ಭವ್ಯಾ ಗೌಡ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.  ಇವರಿಗೆ ಅತೀ ಕಡಿಮೆ ಮತ ಅಂದರೆ  64 ಲಕ್ಷದ 48 ಸಾವಿರದ 853 ಮತಗಳು ಸಿಕ್ಕಿದೆ.  ಭವ್ಯಾ ಗೌಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟಾಸ್ಕ್‌ ಬಂದರೆ ಫೋಕಸ್‌ ಆಗಿ ಆಡಿ ಪುರುಷ ಸ್ಪರ್ಧಿಗಳಿಗೆ ಟಕ್ಕರ್‌ ಕೊಡುತ್ತಿದ್ದರು. ಅದೇ ಕಾರಣಕ್ಕೆ ಮನೆಯಲ್ಲಿ ಮೂರು ಬಾರಿ ಭವ್ಯಾ ಅವರು ಮನೆಯ ಕ್ಯಾಪ್ಟನ್‌ ಆಗಿ ಮೆರೆದಿದ್ದಾರೆ.

Bigg Boss Kannada 11 ವಿಜೇತರಿಗೆ ಸಿಕ್ಕ ಮತ ಎಷ್ಟು? ಸೃಷ್ಟಿಯಾಯ್ತು ಇತಿಹಾಸ!

ಈ ಬಾರಿ ಬಿಗ್‌ ಬಾಸ್‌ ಮನೆಗೆ ಬಂದಿದ್ದ ಒಟ್ಟು 17 ಮಂದಿ ಸ್ಪರ್ಧಿಗಳ ಪೈಕಿ ನಾಲ್ಕು ಮಂದಿ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಲ್ಲಿ ಇಬ್ಬರು ಮನೆಯೊಳಗಿದ್ದಾರೆ. ಒಟ್ಟು ಆರು ಮಂದಿ ಬಿಗ್ ಬಾಸ್ ಕನ್ನಡ 11 ಕಿರೀಟಕ್ಕಾಗಿ ಪೈಪೋಟಿ ನಡೆಸಿದ್ದರು. ಇದರಲ್ಲಿ ಭವ್ಯಾ ಈಗ ಹೊರಬಂದಿದ್ದು 5 ಮಂದಿ ಮುಂದಿನ ಸಂಚಿಕೆಗೆ ಸೆಲೆಕ್ಟ್ ಆಗಿದ್ದಾರೆ. ಅಂದರೆ ರಜತ್‌, ತ್ರಿವಿಕ್ರಮ್ , ಮೋಕ್ಷಿತಾ ಮತ್ತು ಹನುಮಂತ ಜನವರಿ 26ರ ಸಂಚಿಕೆಗೆ ಸೆಲೆಕ್ಟ್ ಆಗಿದ್ದಾರೆ.

ʼಮೀಸಲಾತಿ, ಸಿಂಪಥಿಯಿಂದಲೇ ಹನುಮಂತ Bigg Boss ಫಿನಾಲೆ ತಲುಪಿದ್ದುʼ : ಹಂಸ ಹೇಳಿಕೆಗೆ ಆಕ್ರೋಶ ಹೊರಹಾಕಿದ ವೀಕ್ಷಕರು!

ಸಿಕ್ಕಾಪಟ್ಟೆ ಬೇಸರವಾಗುತ್ತಿದೆ. 1 ದಿನ ಮಿಸ್‌ ಮಾಡಿದೆ ಅನ್ನುವ ನೋವಿದೆ. ಸಿಕ್ಕಾಪಟ್ಟೆ ಬೇಜಾರಿದೆ. ಇವತ್ತು ಅಳಬಾರದು ಖುಷಿಯಿಂದ ಹೋಗೋಣ ಅಂದುಕೊಂಡಿದ್ದೇನೆ ಎಲ್ಲ ಸ್ಪರ್ಧಿಗಳನ್ನು ಎದುರಿಸಿ ಟಾಪ್‌ 6 ಸ್ಪರ್ಧಿಯಾಗಿದ್ದೇನೆ ಎನ್ನುವುದಕ್ಕೆ ಖುಷಿ ಇದೆ ಎಂದು ಭವ್ಯಾ ಮನೆಯಿಂದ ಹೊರಬಂದ ಬಳಿಕ ವೇದಿಕೆಯಲ್ಲಿ ಸುದೀಪ್‌ ಬಳಿ ಹೇಳಿಕೊಂಡಿದ್ದಾರೆ.

ಎಷ್ಟು ಗೆದ್ದಿದ್ದಾರೆ ಭವ್ಯಾ?: ಇನ್ನು ಮನೆಯಿಂದ ಹೊರಬಂದ ಭವ್ಯಾ ಗೌಡ ಅವರಿಗೆ ವಿವಿಧ ಸ್ಪಾನ್ಸರ್ ಕಡೆಯಿಂದ ಒಟ್ಟು 3,50,000 ನಗದು ಹಣ ಬಹುಮಾನ ಸಿಕ್ಕಿದೆ, ಜೊತೆಗೆ ಭವ್ಯ ಅವರು ಮನೆಯಲ್ಲಿ ವಾರಕ್ಕೆ ಬಿಗ್‌ ಬಾಸ್‌ನಿಂದ ವಾರಕ್ಕೆ 40 ಸಾವಿರ ಸಂಭಾವನೆ ಸಿಗುತ್ತಿತ್ತು ಎಂದು ಸುದ್ದಿ ಆಗಿತ್ತು. ಇದರಂತೆ ಲೆಕ್ಕ ಹಾಕಿದರೆ ಕಮ್ಮಿ ಎಂದರೂ 25 ರಿಂದ 27 ಲಕ್ಷ ರೂ ಭವ್ಯಾ ಅವರಿಗೆ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕಿಚ್ಚ ಸುದೀಪ್‌ ಇದ್ರೂ ಕ್ಯಾರೆ ಎನ್ನಲಿಲ್ಲ. ಅಸಭ್ಯ ಎಂದು ಕಿತ್ತಾಡ್ಕೊಂಡ ರಜತ್‌, ಧ್ರುವಂತ್!
ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್