ಬಿಗ್ ಬಾಸ್‌ಗೆ ಕಾಲಿಟ್ಟು ಕಷ್ಟ ಪಡ್ತಿದ್ದಾರಾ ಧರ್ಮ? ಮನೆ ಮಂದಿಯಿಂದ ಬಂದ ಟೈಟಲ್ ಬೇಸರ ತಂದಿದೆ.....
ನವಗ್ರಹ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಟಾರ್ ನಟ ಕೀರ್ತಿ ರಾಜ್ ಪುತ್ರ ಧರ್ಮ. ಓಯ್ ಕ್ಯಾಡ್ಬರಿ ಅಂದ್ರೆ ಸಾಕು ಮೊದಲು ನೆನಪಾಗುವುದು ಧರ್ಮ ಕೀರ್ತಿರಾಜ್ ಏಕೆಂದರೆ ಮೊದಲ ಚಿತ್ರವೇ ನೇಮ್ ಆಂಡ್ ಫೇಮ್ ತಂದುಕೊಟ್ಟಿತ್ತು. ಅದಾದ ಮೇಲೆ ಧರ್ಮ ಮಾಡಿದ ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲವಾದರೂ ಧರ್ಮ ಮುಗ್ಧತೆ ಜನರಿಗೆ ಇಷ್ಟವಾಗಿತ್ತು. ಕರಿಯರ್ ಬ್ರೇಕ್ ಕಾಣದಲು ಮೊದಲ ಸರ ಧರ್ಮ ಕಿರುತೆರೆಗೆ ಕಾಲಿಟ್ಟರು, ಅದುವೇ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ. ಸೀಸನ್ 11ರ ಚಾಕೋಲೇಟ್ ಬಾಯ್ ಆಗಿರುವ ಧರ್ಮ ಎಂಟ್ರಿ ಕೊಡುತ್ತಿದ್ದಂತೆ ಸಪೊರ್ಟ್ ಆಗಿ ಜೊತೆಗಿದ್ದವರು ಅನುಷಾ.
ಚಪಾತಿ ಟೈಟಲ್ ವೈರಲ್!
undefined
ಲಾಯರ್ ಜಗದೀಶ್ ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ಚೈತ್ರಾ ಕುಂದಾಪುರ ಮತ್ತು ರಂಜಿತ್ ಧ್ವನಿ ಎತ್ತಿ ಜಗಳ ಮಾಡುತ್ತಾರೆ. ಮಾತಿಗೆ ಮಾತು ಬೆಳೆದು ಈ ಜಗಳಲ್ಲಿ ಇಡೀ ಮನೆ ಮಂದಿ ಭಾಗಿಯಾಗುತ್ತಾರೆ ಆದರೆ ಧರ್ಮ ಮತ್ತು ಅನುಷಾ ಹೊರ ಉಳಿಯುತ್ತಾರೆ. ಲೀವಿಂಗ್ ಏರಿಯಾದಲ್ಲಿ ಎಲ್ಲರೂ ಜಗಳ ಮಾಡುತ್ತಿದ್ದರೆ ಧರ್ಮ ಮತ್ತು ಅನುಷಾ ಅಡುಗೆ ಮನೆಯಲ್ಲಿ ಚಪಾತಿ ಲಟ್ಟಿಸಿಕೊಂಡು ಒಬ್ಬರಿಗೊಬ್ಬರು ತಿನ್ನಿಸಿಕೊಂಡು ನಗುತ್ತಿರುತ್ತಾರೆ. ಇದನ್ನು ಗಮನಿಸಿದ ಕಿಚ್ಚ ಸುದೀಪ್ ವೀಕೆಂಡ್ ಚರ್ಚೆಯಲ್ಲಿ ಪ್ರಶ್ನೆ ಮಾಡುತ್ತಾರೆ ಆಗ ಅನುಷಾ ಮತ್ತು ಧರ್ಮರವರಿಗೆ ಉತ್ತರವೇ ಇರುವುದಿಲ್ಲ...ಹೀಗಾಗಿ ತಮಾಷೆಗೆಂದು ಧರ್ಮ ಜೊತೆ ಮಾತನಾಡುವಾಗ ಸುದೀಪ್ ಹೇಳಿ ಮಿಸ್ಟರ್ ಚಪಾತಿ ಎಂದು ಕರೆಯುತ್ತಿದ್ದರು.
ಎಲಿಮಿನೇಷನ್ ಬಾಗಿಲಿಗೆ ಬಂದ ಭವ್ಯಾ ಗೌಡ; ಬಿಗ್ ಬಾಸ್ ಫೇಕ್ ಎಲಿಮಿನೇಷನ್ ಗಿಮಿಕ್
ನಾಲಾಯಕ್ ಕಪ್ ಪಡೆದ ಧರ್ಮ:
ಬಿಗ್ ಬಾಸ್ ಕಾರ್ಯಕ್ರಮ 42ನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಯಾವ ಸ್ಪರ್ಧಿ ಹೇಗೆ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ ಉತ್ತರ ಕೊಟ್ಟು ಅವರಿಗೊಂದು ಟ್ರೋಫಿ ಕೊಡಬೇಕು. ಈ ವೇಳೆ ಮನೆ ಮೆಚ್ಚಿದ ನಾಲಾಯಕ್ ಸ್ಪರ್ಧಿ ಯಾರು ಎಂದು ಸುದೀಪ್ ಪ್ರಶ್ನೆ ಮಾಡಿದಾಗ ಪ್ರತಿಯೊಬ್ಬರು ಇದನ್ನು ಧರ್ಮ ಕೀರ್ತಿ ರಾಜ್‌ಗೆ ನೀಡುತ್ತಾರೆ. ಮನೆಯಲ್ಲಿ ಭಾಗಿಯಾಗುವುದಿಲ್ಲ, ಯಾವುದೇ ಕೆಲಸ ಮಾಡುವುದಿಲ್ಲ, ಟಾಸ್ಕ್ ಮಾಡಲು ಹೆದರಿಕೊಳ್ಳುತ್ತಾರೆ ಎಂದು ಇನ್ನಿತರ ಸದಸ್ಯರು ಸ್ಪಷ್ಟನೆ ಕೊಟ್ಟರು. ವಿಧಿ ಇಲ್ಲದೆ ಅವಾರ್ಡ್ ಸ್ವೀಕರಿಸಿದ ಧರ್ಮ ನಾನು ಯಾವುದೇ ತಪ್ಪು ಮಾಡಿಲ್ಲ ನಾನು ನಾನಾಗಿ ಇರುವುದು ಪ್ರತಿ ಟಾಸ್ಕ್‌ನಲ್ಲಿ ಸ್ಪರ್ಧಿಸುತ್ತಿರುವ ಯಾರಿಗೂ ಹೆದರಿಕೊಳ್ಳುವುದಿಲ್ಲ ನನ್ನ ಟಾಸ್ಕ್ ನಾನು ಮಾಡಿರುವೆ ಆದರೂ ಈ ಅವಾರ್ಡ್ ನನಗೆ ಕೊಟ್ಟಿರುವುದಕ್ಕೆ ಬೇಸರ ಇದೆ. ನನ್ನನ್ನು ನಾನ ಪ್ರೂವ್ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ.
ಬಿಗ್ ಬಾಸ್ ರೂಪೇಶ್ ಶೆಟ್ಟಿಗೆ ಜೋಡಿಯಾದ ತುಳು ಸುಂದರಿ ಅದ್ವಿತಿ ಶೆಟ್ಟಿ!