ಎಲಿಮಿನೇಷನ್‌ ಬಾಗಿಲಿಗೆ ಬಂದ ಭವ್ಯಾ ಗೌಡ; ಬಿಗ್ ಬಾಸ್ ಫೇಕ್‌ ಎಲಿಮಿನೇಷನ್‌ ಗಿಮಿಕ್‌ ಬಗ್ಗೆ ನೆಟ್ಟಿಗರು ಶಾಕ್!

By Vaishnavi Chandrashekar  |  First Published Nov 11, 2024, 1:41 PM IST

ಫೇಮ್‌ ಎಲಿಮಿನೇಷನ್‌ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಲು ಮುಂದಾದ ವೀಕ್ಷಕರು. ಭವ್ಯಾ ಗೌಡ ಪರ ಯಾರೆಲ್ಲಾ ನಿಂತಿದ್ದಾರೆ?
 


ಬಿಗ್ ಬಾಸ್ ಸೀಸನ್ 11 42ನೇ ದಿನಕ್ಕೆ ಕಾಲಿಟ್ಟಿದೆ. ಈ ವಾರ ಮನೆಯಿಂದ ಹೊರ ಹೋಗಲು ಬಲಶಾಲಿಗಳು ನಾಮಿನೇಟ್ ಆಗಿದ್ದಾರೆ, ಯಾರು ಹೊರ ಹೋಗಲಿದ್ದಾರೆ ಅನ್ನೋ ಲೆಕ್ಕಾಚಾರ ಹಾಕುತ್ತಿರುವ ವೀಕ್ಷಕರಿಗೆ ವೋಟಿಂಗ್ ಲೈನ್ ಆಫ್‌ ಇದೆ ಎಂದು ತಿಳಿದು ಶಾಕ್ ಆಗಿದೆ. ಅಲ್ಲಿಗೆ ಯಾರು ಸೇಫ್ ಆಗುತ್ತಾರೆ ಯಾರು ನಾಮಿನೇಟ್ ಮಾಡುತ್ತಾರೆ ಎಂದು ಗೆಸ್ ಮಾಡುವಷ್ಟರಲ್ಲಿ ಸುದೀಪ್ ನಾಮಿನೇಷನ್‌ ಇರುವುದಿಲ್ಲ ಎಂದು ಸ್ಪಷ್ಟನೆ ಕೊಡುತ್ತಾರೆ. ಈ ಸತ್ಯ ಮನೆಯಲ್ಲಿ ಇರುವ ಸದಸ್ಯರಿಗೆ ತಿಳಿದಿರುವುದಿಲ್ಲ......

ಈ ವಾರ ಮನೆಯಿಂದ ಹೊರ ಹೋಗಲು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್‌, ತ್ರಿವಿಕ್ರಂ, ಮೋಕ್ಷಿತಾ ಪೈ, ಗೋಲ್ಡ್‌ ಸುರೇಶ್ ಮತ್ತು ಧನರಾಜ್‌ ಆಚಾರ್ ನಾಮಿನೇಟ್ ಆಗಿದ್ದರು. ಒಬ್ಬೊಬ್ಬರನ್ನು ಸೇಫ್ ಮಾಡಿಕೊಂಡು ಬಂದ ಕಿಚ್ಚ ಸುದೀಪ್ ಎಲಿಮಿನೇಟ್ ಆಗಲು ಇಬ್ಬರನ್ನು ಕೊನೆಯವರೆಗೂ ತಂದು ನಿಲ್ಲಿಸುತ್ತಾರೆ...ಅವರೇ ಧನರಾಜ್ ಆಚಾರ್ ಮತ್ತು ಭವ್ಯಾ ಗೌಡ.ಇವರಿಬ್ಬರ ನಡುವೆ ಯಾರು ಹೊರ ಹೋಗಲಿದ್ದಾರೆ ಎಂದು ಮನೆಯಲ್ಲಿರುವ ಪ್ರತಿಯೊಬ್ಬರೂ ಧನರಾಜ್‌ ಎಂದು ಗೆಸ್ ಮಾಡಿದ್ದರು ಆದರೆ ಗೇಮ್‌ಗೆ ಟ್ವಿಸ್ಟ್‌ ನೀಡಲು ಸುದೀಪ್‌ ಭವ್ಯಾ ಹೊರ ಹೋಗಲಿದ್ದಾರೆ ಎಂದು ಅನೌನ್ಸ್ ಮಾಡಿಬಿಟ್ಟರು. 

Tap to resize

Latest Videos

undefined

ಹೇರ್‌ಕಟ್ ಮಾಡಿಸಿದ 'ರಾಮಾಚಾರಿ' ವೈಶಾಖ'; ಜೈಲ್‌ಗೆ ಹೋಗಿದ್ರೆ ಹೇರ್‌ಕಟ್‌ಗೆ ಯಾವಾಗ ಬಂದ್ರಿ

ಮನೆಯಿಂದ ಭವ್ಯಾ ಹೋರ ನಡೆಯುವಾಗ ಇಡೀ ಮನೆ ಫ್ರೀಜ್‌ ಆಗುತ್ತದೆ. ಹೀಗಾಗಿ ತಾವೇ ಪ್ರತಿಯಿಬ್ಬರನ್ನು ತಬ್ಬಿಕೊಂಡು ಸಾರಿ ಮತ್ತು ಥ್ಯಾಂಕ್ಸ್‌ ಹೇಳಿ ಹೊರ ನಡೆಯುತ್ತಾರೆ. ಬಾಗಿಲಿನ ಬಳಿ ಬಂದು ನಿಂತಾಗ 'ಭವ್ಯಾ ಗೌಡ ನಿಮ್ಮ ಬಿಗ್ ಬಾಸ್‌ ಜರ್ನಿ ಇಲ್ಲಿಂದ ಮುಂದುವರೆಯಲಿದೆ' ಎಂದು ಅನೌನ್ಸ್ ಮಾಡುತ್ತಾರೆ. ಅಯ್ಯೋ ಬಿಗ್ ಬಾಸ್‌ ನನ್ನ ಜೊತೆ ನೀವು ತಮಾಷೆ ಮಾಡಿದ್ದು ತಪ್ಪು ನಾನು ಆಗಲೇ ಅಮ್ಮ ಅಪ್ಪ ಮತ್ತು ತಂಗಿಯನ್ನು ನೋಡುತ್ತೀನಿ ಅನ್ನೋ ಖುಷಿಯಲ್ಲಿದ್ದೆ ಎಂದು ಸುಮ್ಮನೆ ಹೇಳುತ್ತಾರೆ ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಇಡೀ ಸೀನ್‌ ತೋರಿಸಿದ ಮೇಲೆ ಸುದೀಪ್ ಒಂದು ಮಾತು ಹೇಳುತ್ತಾರೆ , ಭವ್ಯಾ ಗೌಡ ಅವರಿಗೆ ಈ ಟ್ವಿಸ್‌ ಬೇಕಿತ್ತು ಎಂದು. ಅಲ್ಲಿಗೆ ಅರ್ಥವಾಗಲು ಶುರುವಾಗಿದ್ದು ಏನೆಂದರೆ ಭವ್ಯಾ ಗೌಡ ಪರ ಬಿಗ್ ಬಾಸ್ ನಿಂತಿದ್ದಾರೆ ಎಂದು. 

ಆಸ್ಟ್ರೇಲಿಯ ಯೂನಿವರ್ಸಿಟಿಯಲ್ಲಿ ಸ್ಕಾಲರ್ಶಿಪ್‌ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ ರೋಶನಿ ಪ್ರಕಾಶ್!

ಬಿಗ್ ಬಾಸ್‌ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಭವ್ಯಾ ಗೌಡ, ಎಂಟ್ರಿ ಕೊಡುತ್ತಿದ್ದಂತೆ ಸ್ವರ್ಗಕ್ಕೆ ಕಾಲಿಟ್ಟರು. ಅಲ್ಲಿಂದ ಸ್ವರ್ಗಕ್ಕೆ ಯಾರು ಬರಬೇಕು ಯಾರು ನರಕಕ್ಕೆ ಹೋಗಬೇಕು ಎಂದು ಪಟ್ಟಿ ಮಾಡಿದ್ದರು. 42 ದಿನಗಳನ್ನು ಗಮನಿಸಿ ನೋಡಿದರೆ ಬಿಗ್ ಬಾಸ್ ಭವ್ಯಾ ಗೌಡ ಪರವಾಗಿ ನಿಂತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಲು ಶುರ ಮಾಡಿದ್ದಾರೆ.

click me!