
ಈಗ ಲಾಯರ್ ಜಗದೀಶ್ ಯಾರು ಅಂತ ಗೊತ್ತಿರದ ಕನ್ನಡಿಗರು ಕಡಿಮೆ ಎಂದೇ ಹೇಳಬಹುದು. ತಮ್ಮ ವಿಶಿಷ್ಟ ಶೈಲಿಯ ಮಾತು, ಹಾವ-ಭಾವಗಳಿಂದ ಸಖತ್ ವೈರಲ್ ಆಗಿರುವ ಲಾಯರ್ ಜಗದೀಶ್ ಅವರು ಅನಿರೀಕ್ಷಿತ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮತ್ತೊಬ್ಬ ಸ್ಪರ್ಧಿ ರಂಜಿತ್ ಜೊತೆ ಕಿರಿಕ್ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರದೂಡಲ್ಪಟ್ಟಿರುವ ಲಾಯರ್ ಜಗದೀಶ್, ಈಗ ಹೊರಗಡೆ ಕೂ ಅಷ್ಟೇ ಸೌಂಡ್ ಮಾಡುತ್ತಿದ್ದಾರೆ.
ಸದ್ಯ ಅದೊಂದು ವಿಡಿಯೋ ವೈರಲ್ ಆಗುತ್ತಿದೆ..! ಅದು ಎಂದರೆ ಯಾವುದು ಇರಬಹುದು ಎಂದು ನೀವು ತಲೆ ಕೆಡಿಸಿಕೊಳ್ಳುವುದು ಬೇಡ. ಏಕೆಂದರೆ, ಅದು ಬೇರಾವುದೂ ಅಲ್ಲ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಶೋ, ಹಾಗೂ ಅದರಲ್ಲಿ ಭಾಗಿಯಾಗಿದ್ದ ಲಾಯರ್ ಜಗದೀಶ್! ಹೌದು, ಲಾಯರ್ ಜಗ್ಗು ಅಲ್ಲಿ ಬಂದು ಸ್ಪರ್ಧಿಗಳ ಜೊತೆ ಡಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ, ಆ ಹಾಡು ಬೇರೆ ನಟ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರದ್ದು.
ಒಮ್ಮೆ ಊರ್ವಶಿ ಜೊತೆ ಸಿಟ್ಟಿಂಗ್ ಮಾಡಿದ್ದಕ್ಕೆ ಬಂದ ಬಿಲ್ ನೋಡಿ ಸಿಂಗರ್ ಹನಿ ಸಿಂಗ್ ಶಾಕ್!
ಸದ್ಯ ನಟ ದರ್ಶನ್ ಅವರು ಮಧ್ಯಂತರ ಬೇಲ್ ಮೇಲೆ ಆಚೆ ಬಂದಿದ್ದು ಗೊತ್ತೇ ಇದೆ. ಅನಾರೋಗ್ಯದ ಕಾರಣಕ್ಕೆ ಬೇಲ್ ಪಡೆದು ಆಚೆ ಬಂದಿರೋ ನಟ ದರ್ಶನ್ ಈಗ 'ಟಾಕ್ ಆಫ್ ದ ನ್ಯೂಸ್' ಆಗಿದ್ದಾರೆ. ಇದೇ ಸಮಯದಲ್ಲಿ, ದರ್ಶನ್ ನಟನೆಯ ಸಿನಿಮಾದ ಹಾಡಿನಲ್ಲಿ ಲಾಯರ್ ಕಾಣಿಸಿಕೊಂಡು ಧೂಳೆಬ್ಬಿಸಿದ್ದಾರೆ. ಜೀ ಕನ್ನಡದಲ್ಲಿ ನಡೆಯುತ್ತಿರೋ ಡಾನ್ಸ್ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' (DanceKarnataka Dance) ಶೋನಲ್ಲಿ ಹೆಜ್ಜೆ ಹಾಕಿ ಭಾರಿ ಹವಾ ಎಬ್ಬಿಸಿದ್ದಾರೆ ಲಾಯರ್ ಜಗದೀಶ್.
ಯಾರೂ ಏನೂ ಹೇಳುವ ಹಾಗಿಲ್ಲ..! ಯಾಕೆಂದರೆ, ಲಾಯರ್ ಜಗದೀಶ್ ಅವರನ್ನು ಸಹ 'ಜಗ್ಗು' ಎಂದು ಕರೆಯುವವರಿದ್ದಾರೆ. ಅದೇ ರೀತಿ ದರ್ಶನ್ ಸಿನಿಮಾ ಹೆಸರು ಕೂಡ ಅದೇ ಆಗಿದೆ. ಲಾಯರ್ ಜಗ್ಗು ಅದೇ ಹಾಡಿಗೆ ಹೆಜ್ಜೆ ಹಾಕಿದಾಗ ಎಲ್ಲರಿಗೂ ಖಂಡಿತವಾಗಿಯೂ ನಟ ದರ್ಶನ್ ನೆನಪಾಗುತ್ತಾರೆ, ಸಾಲದ್ದಕ್ಕೆ ದರ್ಶನ್ ಆ ಚಿತ್ರದಲ್ಲಿ ಹಾಕಿದ್ದ, ಟ್ರೆಂಡ್ ಆಗಿದ್ದ (ರೆಡ್ ಹಾಫ್ ಶರ್ಟ್-ಬ್ಲಾಕ್ ಪ್ಯಾಂಟ್) ಡ್ರೆಸ್ ಹಾಗೂ ಗಾಗಲ್ ಹಾಕಿಕೊಂಡು ಥೇಟ್ ನಟ ದರ್ಶನ್ ಅವರಂತೇ ಲುಕ್ ಮಾಡಿಕೊಂಡಿದ್ದಾರೆ ಲಾಯರ್ ಜಗದೀಶ್.
ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಮೆಟ್ಟಲ್ಲಿ ಹೊಡಿತೀನಿ: ಚೈತ್ರಾ ಕುಂದಾಪುರ
ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿಇತ್ತೀಚಿನ 'ದಾದಾಗಿರಿ' ಘಟನೆ ನಡೆದು ಲಾಯರ್ ಜಗದೀಶ್ ಅವರನ್ನು ಶೋ ದಿಂದ ಆಚೆ ಕಳಿಸಲಾಗಿದೆ. ಹೀಗಾಗಿ ಸದ್ಯ ಲಾಯರ್ ಜಗದೀಶ್ ಅವರು 'ಜಗ್ಗು ದಾದಾ' ಎಂದೇ ಭಾರೀ ಫೇಮಸ್ ಆಗಿದ್ದಾರೆ. ಈ ಎಲ್ಲ ಕಾರಣಗಳ ಜೊತೆ, ನಟ ಶಿವರಾಜ್‌ಕುಮಾರ್ ಅವರು ಆ ಶೋದಲ್ಲಿ ಕಾಣಿಸಿಕೊಂಡು, ಈ 'ಜಗ್ಗುದಾದಾ' ಹಾಡಿಗೆ ಮಾಡಿರುವ ಡಾನ್ಸ್‌ಅನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.