
ಗೀತಾ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿರುವ ಭವ್ಯಾ ಗೌಡ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೀಸನ್ 11ರ ಮೊದಲ ಸ್ವರ್ಧಿಯಾಗಿ ಎಂಟ್ರಿ ಕೊಟ್ಟಿರುವ ಭವ್ಯಾ ನೇರವಾಗಿ ಸ್ವರ್ಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಲ್ಲಿಂದ ಆಗಮಿಸಿದ್ದವರಲ್ಲಿ ಯಾರು ನರಕ್ಕೆ ಹೋಗಬೇಕು ಯಾರು ಸ್ವರ್ಗಕ್ಕೆ ಬರಬೇಕು ಎಂದು ನಿರ್ಧಾರಿಸಿದ್ದರು. ಭವ್ಯಾ ಆಯ್ಕೆ ಮಾಡಿಕೊಳ್ಳುತ್ತಿದ್ದ ರೀತಿ ಸರಿ ಇಲ್ಲದ ಕಾರಣ ನಿರ್ಧಾರ ಮಾಡುವ ಅವಕಾಶವನ್ನು ಲಾಯರ್ ಜಗದೀಶ್ ಮತ್ತು ಸತ್ಯ ಗೌತಮಿಗೆ ನೀಡಿದ್ದರು. ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಗೀತಾ ರೆಕಾರ್ಡ್ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮೊಬೈಲ್ ತುಂಬಾನೇ ಮುಖ್ಯ:
'ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಪಡೆದುಕೊಂಡಿದ್ದೀನಿ, ನಾನು ಏನೆಂದು ಪ್ರೂವ್ ಮಾಡಲು ಇದು ಬಹಳ ದೊಡ್ಡ ವೇದಿಕೆ. ಒಳಗೆ ಹೋಗು ಆಟವಾಡಲು ನಾನು ಯಾವುದೇ ತಯಾರಿ ಮಾಡಿಕೊಂಡಿಲ್ಲ ಆದರೆ ಬಟ್ಟೆ ಚಪ್ಪಲಿಗಳ ಬಗ್ಗೆ ಯೋಚನೆ ಮಾಡಿದ್ದೀನಿ ಅಷ್ಟೇ. ನಾನು ನಾನಾಗಿ ಇರಬೇಕು ಅಂತ ಹೋಗುತ್ತಿದ್ದೀನಿ. ನಾನು ಪೋನ್ ಬಿಟ್ಟು ಇರುವುದು ಮೂರು ಹೊತ್ತು ಫೋನ್ ಕೈಯಲ್ಲಿ ಇರಬೇಕು. ಊಟ ಮಾಡುವಾಗ ಫೋನ್ ನೋಡ್ತೀನಿ ಬಾತ್‌ರೂಮ್‌ನಲ್ಲಿದ್ದರೂ ಫೋನ್ ನೋಡ್ತೀನಿ ಆದರೆ ಮೂರು ತಿಂಗಳಲ್ಲಿ ಎಷ್ಟು ದಿನ ಇರ್ತೀನೋ ಅಷ್ಟೋ ದಿನ ಫೋನ್ ಇರುವುದಿಲ್ಲ...ಸೋಷಿಯಲ್ ಮೀಡಿಯಾ, ಮೆಸೇಜ್ ಮತ್ತು ಫೋನ್ ಕಾಲ್ ಬಿಟ್ಟು ಬೇರೆ ಬೇರೆ ಮನಸ್ಥಿತಿ ಇರುವ ಜನರ ಜೊತೆ ಇರಬೇಕು' ಎಂದು ಗೀತಾ ಮಾತನಾಡಿದ್ದಾರೆ.
ಮಗಳು ಹುಟ್ಟಿದ ನಾಲ್ಕೇ ದಿನಕ್ಕೆ 'ಪರಿ' ಅಂತ ಹೆಸರಿಡಲು ಕಾರಣ ರಿವೀಲ್ ಮಾಡಿದ ಡಾರ್ಲಿಂಗ್ ಕೃಷ್ಣ!
ಸಹೋದರಿಯರು ಮುಖ್ಯ:
ನನ್ನ ಜೀವನದ ಪ್ರತಿಯೊಂದು ಹಂತದಲ್ಲಿ ನನ್ನ ಅಕ್ಕ ತಂಗಿಯರು ಜೊತೆಗಿರುವುದು ಮುಖ್ಯವಾಗುತ್ತದೆ. ಯಾವತ್ತೂ ನನ್ನ ಫ್ಯಾಮಿಲಿಯನ್ನು ಬಿಟ್ಟು ಇರಲಿಲ್ಲ ಇದುವರೆಗೂ ಅಕ್ಕನ ಅಥವಾ ಅಮ್ಮ ಪಕ್ಕ ಮಲಗುವುದುವು ಆದರೆ ಬಿಗ್ ಬಾಸ್ ಮನೆಯಲ್ಲಿ ಒಬ್ಬಳೆ ಮಲಗಬೇಕು ಅನ್ನೋ ಬೇಸರ ತಲೆಯಲ್ಲಿ ಇದೆ. ಟಿವಿಯಲ್ಲಿ ನನ್ನನ್ನು ಅಪ್ಪ ಅಮ್ಮ ನೋಡುತ್ತಿರುತ್ತಾರೆ ಎಂದು ನಾನು ಆದಷ್ಟು ಪಾಸಿಟಿವ್ ಆಗಿರಬೇಕು. ಮುಂದಿನ ಜನ್ಮದಲ್ಲೂ ಇವರೇ ನನ್ನ ಫ್ಯಾಮಿಲಿ ಆಗಿ ಸಿಗಬೇಕು. ಏನೇ ಸಣ್ಣ ಪುಟ್ಟ ತಪ್ಪು ಮಾಡಿದರೂ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೀನಿ ಸ್ವಲ್ಪ ಸಮಯ ಕೊಡಿ ಎಂದು ಭವ್ಯಾ ಗೌಡ ಹೇಳಿದ್ದಾರೆ.
ಟ್ರೋಲಿಗರು ಕೂಡ ಗೆಸ್ ಮಾಡಿಲ್ಲ ಗುರು ನಿನ್ನ ಎಂಟ್ರಿನಾ; ಧನರಾಜ್ ಪರ ನೆಟ್ಟಿಗರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.