ಸೋಷಿಯಲ್ ಮೀಡಿಯಾ ಸ್ಟಾರ್ ಧನರಾಜ್ ಆಚಾರ್ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಧನು ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡುವ ಮನಸ್ಸು ಮಾಡಿದ್ದರಂತೆ.
Image credits: our own
ಕಾಮಿಡಿ ಕಿಂಗ್ ಧನರಾಜ್
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಸೀಸನ್ 2 ಮೂಲಕ ಕಿರುತೆರೆಗೆ ಕಾಲಿಟ್ಟ ಧನರಾಜ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಜಾಲಿ ಮಾಡುತ್ತಿದ್ದಾರೆ.
Image credits: our own
ಪತ್ನಿ ಬಿಗ್ ಸಪೋರ್ಟ್!
ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಧನರಾಜ್ ಪತ್ನಿ ಪ್ರಜ್ಞಾ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಪ್ರಜ್ಞಾ ಮಾತನಾಡುವ ಶೈಲಿ ವೀಕ್ಷಕರಿಗೆ ಇಷ್ಟವಾದ ಕಾರಣ ಕೆಲವ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು.
Image credits: our own
ಮಗಳು ಲಕ್ಕಿ ಚಾರ್ಮ್!
ಧನರಾಜ್ ಆಚಾರ್ ಪತ್ನಿ ಕೆಲವು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ ದಿನವೇ ಬಿಗ್ ಬಾಸ್ ತಂಡದಿಂದ ಆಫರ್ ಕರೆ ಬಂದಿತ್ತು. ಹೋಗುವುದೋ ಬೇಡ್ವೋ ಅನ್ನೋ ಆಲೋಚನೆಯಲ್ಲಿ ಇದ್ದರಂತೆ.
Image credits: our own
ಪತ್ನಿ ಪ್ರಜ್ಞಾ ಸಪೋರ್ಟ್!
ಧನರಾಜ್ ಬಿಗ್ ಬಾಸ್ ಮನೆಗೆ ಹೋಗಲೇ ಬೇಕು ಎಂದು ಸಪೋರ್ಟ್ ಮಾಡಿದ್ದು ಪತ್ನಿ ಪ್ರಜ್ಞಾ. ಒಂದು ತಿಂಗಳ ಮಗಳು ಮತ್ತು ಇಡೀ ಸಂಸಾರವನ್ನು ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತೀನಿ ಎಂದು ಧೈರ್ಯ ಹೇಳಿದ್ದಾರೆ.
Image credits: our own
ಕನ್ನಡ ಚಿತ್ರದಲ್ಲೂ ಅಬ್ಬರ!
ಇತ್ತೀಚಿಗೆ ಬಿಡುಗಡೆಯಾದ ಅಬ್ಬಬ್ಬಾ ಸಿನಿಮಾದಲ್ಲಿ ಧನರಾಜ್ ಆಚಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಲ್ಸ್‌ನಿಂದ ಬಿಗ್ ಸ್ಕ್ರೀನ್‌ವರೆಗೂ ಬೆಳೆದಿದ್ದಾರೆ ಎಂದು ಜನರು ಹೆಮ್ಮೆ ಪಡುತ್ತಿದ್ದಾರೆ.
Image credits: our own
ಅಡ್ಡ ಹೆಸರು ಜಿಂಕೆ!
ಬಿಗ್ ಬಾಸ್ ಮನೆಯೊಳಗೆ ಧನರಾಜ್ ಎಂಟ್ರಿ ಕೊಡುವ ದಿನ ಕಿಚ್ಚ ಸುದೀಪ್ ಜಿಂಕೆ ಅನ್ನೋ ಹೆಸರನ್ನು ನೀಡಿದ್ದಾರೆ. ಹೀಗಾಗಿ ಮೊದಲ ದಿನವೇ ಜಿಂಕೆ ರೀತಿಯಲ್ಲಿ ವರ್ತಿಸಬೇಕು ಎಂದು ಬಾಸ್ ಟಾಕ್ಸ್ ನೀಡಿದ್ದರು.