Bigg Boss ಮನೆಯಿರುವ 'ಜಾಲಿವುಡ್ ಸ್ಟುಡಿಯೋ' ಅಕ್ರಮ ಮರುಪ್ರಾರಂಭಕ್ಕೆ ಡಿಸಿ ಕುಮ್ಮಕ್ಕು? ಮತ್ತೆ ಬೀಗ ಜಡಿಯಲು ದೂರು!

Published : Oct 23, 2025, 03:17 PM IST
Bigg Boss Kannada 12 house

ಸಾರಾಂಶ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮುಚ್ಚಲ್ಪಟ್ಟಿದ್ದ 'ಬಿಗ್ ಬಾಸ್' ಖ್ಯಾತಿಯ ಜಾಲಿವುಡ್ ಸ್ಟುಡಿಯೋ, ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇಲೆ ಅಕ್ರಮವಾಗಿ ಪುನರಾರಂಭಗೊಂಡಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಈ ಕ್ರಮವು ಕಾನೂನುಬಾಹಿರವಾಗಿದ್ದು, ಪರಿಸರಕ್ಕೆ ಹಾನಿ ಮಾಡುತ್ತಿದೆ ಎಂದಿದ್ದಾರೆ.

ಬೆಂಗಳೂರು/ರಾಮನಗರ (ಅ.23): 'ಬಿಗ್ ಬಾಸ್' ಶೂಟಿಂಗ್ ನಡೆಯುತ್ತಿದ್ದ ಮೆಸ್ಸರ್ಸ್ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (ಜಾಲಿವುಡ್ ಸ್ಟುಡಿಯೋ) ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಮದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB)ಯ ಜಾಲಿವುಡ್ ಸ್ಟೂಡಿಯೋವನ್ನು ಮುಚ್ಚಿತ್ತು. ಆದರೆ, ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಚ್ಚುವ ಆದೇಶವನ್ನು (Closure Directions) ಉಲ್ಲಂಘಿಸಿ, ಅಕ್ರಮವಾಗಿ ಮರುಪ್ರಾರಂಭಗೊಂಡಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಅವರು, ಇ-ಮೇಲ್ ಮೂಲಕ ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನೀಡಿದ ದೂರಿನ ಪ್ರಕಾರ, ಮಾಲಿನ್ಯ ನಿಯಂತ್ರಣ ಮಂಡಳಿಯು 2025ರ ಅಕ್ಟೋಬರ್ 6 ರಂದು ಮುಚ್ಚುವ ಆದೇಶವನ್ನು ಜಾರಿಗೊಳಿಸಿದ್ದರೂ, ರಾಮನಗರ ಜಿಲ್ಲಾಧಿಕಾರಿಯವರು ಯಾವುದೇ ಲಿಖಿತ ಆದೇಶವಿಲ್ಲದೆ ಮೌಖಿಕ ನಿರ್ದೇಶನದ ಮೂಲಕ ಘಟಕವನ್ನು ಅಕ್ರಮವಾಗಿ ಮರುಪ್ರಾರಂಭ ಮಾಡಲು ಅನುಮತಿ ನೀಡಿದ್ದಾರೆ. ಇದು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) ಆದೇಶಗಳಿಗೆ ಹಾಗೂ ಪರಿಸರ ನ್ಯಾಯ ತತ್ವಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪರಿಸರ ಮತ್ತು ಕಾನೂನು ಉಲ್ಲಂಘನೆ ಆರೋಪಗಳು:

ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಈ ಘಟಕವು, ಶುದ್ಧೀಕರಣ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿ ಸಂಸ್ಕರಣೆ ಮಾಡದ ತ್ಯಾಜ್ಯ ನೀರನ್ನು ಭೂಗತ ಜಲಮಾರ್ಗಗಳಿಗೆ ಬಿಡುವು ಮೂಲಕ ಪರಿಸರಕ್ಕೆ ಅಪಾರ ಹಾನಿ ಉಂಟುಮಾಡುತ್ತಿದೆ. ಇದರಿಂದ ಸಾರ್ವಜನಿಕರ ಜೀವಿಸುವ ಹಕ್ಕು (Right to Life and Clean Environment - Article 21) ಉಲ್ಲಂಘನೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಮುಚ್ಚುವ ಆದೇಶವು ಬಾಧ್ಯತೆಯುಳ್ಳ ಮತ್ತು ಅಂತಿಮ ಆದೇಶವಾಗಿದ್ದು, ಅದನ್ನು ಜಿಲ್ಲಾಧಿಕಾರಿ ಅಥವಾ ಯಾವುದೇ ಆಡಳಿತಾಧಿಕಾರಿಗಳು ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ.

ಬೆಂಗಳೂರು ದಕ್ಷಿಣ ಜಿಲ್ಲೆ (ಹಿಂದಿನ ರಾಮನಗರ) ಜಿಲ್ಲಾಧಿಕಾರಿಯವರ ಈ ಕ್ರಮ 'ಅಧಿಕಾರ ದುರುಪಯೋಗ' (abuse of official position) ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾದ ನ್ಯಾಯಾಂಗ ನಿಂದನೆ (Contempt of Court) ಆಗಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಜಿಲ್ಲಾಧಿಕಾರಿ, BESCOM ಅಧಿಕಾರಿಗಳು ಮತ್ತು ಪರಿಸರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಹೊಣೆಗಾರಿಕೆ ಅನ್ವಯವಾಗುತ್ತದೆ.

ದೂರುದಾರ ದಿನೇಶ್ ಕಲ್ಲಹಳ್ಳಿ ಅವರು, Closure Direction ಅನ್ನು ತಕ್ಷಣ ಮರುಸ್ಥಾಪಿಸಿ ಘಟಕಕ್ಕೆ ಮತ್ತೆ ಬೀಗ ಹಾಕುವಂತೆ ಮತ್ತು ಸ್ಟುಡಿಯೋದಿಂದ ಉಂಟಾದ ಪರಿಸರ ಮಾಲಿನ್ಯಕ್ಕಾಗಿ 'ಪರಿಸರ ಪರಿಹಾರ ಶುಲ್ಕ' (Environmental Compensation) ವಸೂಲು ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತುರ್ತು ಮನವಿ ಮಾಡಿದ್ದಾರೆ.

ಸಚಿವ ಈಶ್ವರ್ ಖಂಡ್ರೆಯವರ ಸ್ಪಷ್ಟೀಕರಣ:

ಈ ಕುರಿತು ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, 'ಜಾಲಿವುಡ್ ಸ್ಟುಡಿಯೋ ಈಗಲೂ ಕ್ಲೋಸ್ (ಮುಚ್ಚಿದೆ) ಆಗಿದೆ. ಕ್ಲೋಸರ್ ಆದೇಶದ ಪ್ರಕಾರವೇ ಅದು ಮುಚ್ಚಿಸಲಾಗಿದ್ದು ಕಾರ್ಯನಿರ್ವಹಿಸದಂತೆ ನಿಗಾವಹಿಸಲಾಗಿದೆ. ಕೆಲವು ವಿಷಯಗಳಲ್ಲಿ ಜಿಲ್ಲಾಡಳಿತವೇ ತೀರ್ಮಾನ ತೆಗೆದುಕೊಂಡಿದೆ. ಜಿಲ್ಲಾಡಳಿತಲಕ್ಕೆ ಜಾಲಿವುಡ್ ಸ್ಟೂಡಿಯೋ ನಿರ್ವಾಹಕರು ಮತ್ತೆ ಅರ್ಜಿ ಹಾಕಿದ್ದಾರೋ ಇಲ್ಲವೋ ಎಂಬ ಮಾಹಿತಿ ನನಗೆ ಈಗ ಲಭ್ಯವಿಲ್ಲ ಎಂದರು.

ಒಟ್ಟಾರೆಯಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶವನ್ನು ಜಿಲ್ಲಾಡಳಿತವು ಲೆಕ್ಕಿಸದೆ ಅನುಮತಿ ನೀಡಿದೆಯೇ ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ಸ್ಪಷ್ಟೀಕರಣ ನೀಡಿ, ಅಗತ್ಯವಿದ್ದರೆ ಮತ್ತೆ ಕ್ರಮ ಕೈಗೊಳ್ಳಬೇಕಿದೆ ಎಂದಿ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ