
ಬ್ರಹ್ಮಗಂಟು ಸೀರಿಯಲ್ (Brahmagantu) ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಒಂದೆಡೆ, ದಿಶಾ ಮತ್ತು ಚಿರುನ್ನ ಒಂದು ಮಾಡಿ ದೀಪಾಳ ಮೇಲೆ ಹಗೆ ಸಾಧಿಸಲು ಹೊರಟಿದ್ದಾಳೆ ಸೌಂದರ್ಯ. ಹೇಗಾದರೂ ಮಾಡಿ ಇವರಿಬ್ಬರನ್ನೂ ಒಂದು ಮಾಡಬೇಕು, ಅವರಿಬ್ಬರ ನಡುವೆ ಲವ್ ಆಗುವಂತೆ ಮಾಡಬೇಕು ಎಂದು ಇನ್ನಿಲ್ಲದಂತೆ ಕಸರತ್ತು ಮಾಡುತ್ತಿದ್ದಾಳೆ. ಆದರೆ ಅಹಂಕಾರದಿಂದ ಕೊಬ್ಬಿರೋ ಸೌಂದರ್ಯಳಿಗೆ ಸವಾ ಸೇರು ಎನ್ನುವಂತೆ ದಿಶಾ ರೂಪದಲ್ಲಿ ದೀಪಾ ಚಮಕ್ ಕೊಡುತ್ತಲೇ ಬಂದಿದ್ದಾಳೆ. ದಿಶಾಳ ಅಹಂಕಾರ ಮತ್ತು ಪದೇ ಪದೇ ತನಗೆ ಇನ್ಸಲ್ಟ್ ಮಾಡುವುದನ್ನು ತಡೆದುಕೊಳ್ಳಲು ಸೌಂದರ್ಯಳಿಗೆ ಆಗ್ತಿಲ್ಲ. ಆದರೆ ಏನೂ ಮಾಡದ ಸ್ಥಿತಿಯಲ್ಲಿ ಅವಳಿದ್ದಾಳೆ.
ಇದೀಗ ಡಿಸೈನ್ನಲ್ಲಿ ಕೂಡ ಸೌಂದರ್ಯಳನ್ನು ಮೀರಿಸಿ ಸ್ವಂತ ಡಿಸೈನ್ ಮಾಡಿ ಚಿರುವನ್ನು ಒಪ್ಪಿಸಿದ್ದಾಳೆ ದಿಶಾ. ಇಲ್ಲಿಯವರೆಗೆ ಅತ್ತಿಗೆ ಸೌಂದರ್ಯ ಹೇಳಿದಂತೆ ಕೇಳ್ತಿದ್ದ ಚಿರು ಕೂಡ ದಿಶಾಳ ಈ ಹೊಸ ಡಿಸೈನ್ಗೆ ಮಾರು ಹೋಗಿದ್ದಾನೆ. ಇದಕ್ಕೆ ದಿಶಾ ವಸ್ತ್ರದೀಪ ಎನ್ನುವ ಹೆಸರು ಕೊಟ್ಟಿದ್ದಾಳೆ. ಆದರೆ ದೀಪಾ ಎನ್ನುವ ಹೆಸರು ಇರೋದನ್ನು ನೋಡಿ ಸೌಂದರ್ಯಗೆ ಉರಿದು ಹೋಗಿದೆ. ಅಷ್ಟಕ್ಕೂ ಹೀಗೆ ಉರಿಯಲಿ ಎಂದೇ ದೀಪಾ ಆ ಹೆಸರನ್ನು ಕೊಟ್ಟಿರುವುದು. ದೀಪಾವಳಿಯ ಸಮಯವಾಗಿರುವ ಕಾರಣ ದೀಪಾ ಎನ್ನೋದು ಇರಲಿ ಎಂದಿದ್ದಾಳೆ ಆಕೆ. ಆದ್ದರಿಂದ ಇದನ್ನು ರಿಜೆಕ್ಟ್ ಮಾಡಲು ಚಿರುಗೂ ಆಗಲಿಲ್ಲ. ಅಲ್ಲಿಯೂ ಸೌಂದರ್ಯಳಿಗೆ ಇನ್ಸಲ್ಟ್ ಆಗಿದೆ.
ಈ ಸಿಟ್ಟನ್ನು ರೂಪಾ ಮೇಲೆ ತೋರಿಸ್ತಿದ್ದಾಳೆ ಸೌಂದರ್ಯ. ಅವಳು ಕುಡಿಯಲು ತಂದುಕೊಟ್ಟ ನೀರನ್ನು ಮುಖದ ಮೇಲೆ ಚೆಲ್ಲಿದ್ದಾಳೆ. ಅಕ್ಕಂಗೆ ಈ ರೀತಿ ಆಗ್ತಿರೋದನ್ನು ನೋಡಿ ಕೆಂಡಾಮಂಡಲವಾದ ದೀಪಾ, ಸೌಂದರ್ಯಳಿಗೆ ವಾರ್ನ್ ಕೊಟ್ಟು ಹೋಗಿದ್ದಾರೆ. ಸ್ಟಾಫ್ ಅನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ. ದಿಶಾಳ ಈ ವರ್ತನೆಯಿಂದ ಸೌಂದರ್ಯ ರೇಗಿ ಹೋಗಿದ್ದಾಳೆ. ಆದರೂ ಚಿರು ಮತ್ತು ದಿಶಾಳನ್ನು ಒಂದು ಮಾಡಬೇಕು, ದೀಪಾ ಮೇಲೆ ಸೇಡು ತೀರಿಸಿಕೊಳ್ಳಬೇಕು ಎನ್ನೋ ಏಕೈಕ ಕಾರಣದಿಂದ ದಿಶಾಳ ಈ ಎಲ್ಲಾ ವರ್ತನೆಗಳನ್ನೂ ಸಹಿಸಿಕೊಳ್ತಿದ್ದಾಳೆ.
ಇದನ್ನು ನೋಡಿ ಇದೇ ಮೊದಲ ಬಾರಿಗೆ ಕಮೆಂಟಿಗರೆಲ್ಲಾ ಸೌಂದರ್ಯಳನ್ನು ನೋಡಿ ಅಯ್ಯೋ ಎನ್ನುತ್ತಿದ್ದಾರೆ. ಪಾಪ, ದಿಶಾನೇ ದೀಪಾ ಎನ್ನೋದು ತಿಳಿಯದೇ ಹೀಗೆಲ್ಲಾ ಮಾಡ್ತಾ ಇದ್ದಾಳಲ್ಲ. ಒಟ್ಟಿನಲ್ಲಿ ದೀಪಾ ಮತ್ತು ಚಿರುನ್ನು ಒಂದು ಮಾಡಲು ಏನು ಬೇಕೋ ಎಲ್ಲಾ ಮಾಡ್ತಾ ಇದ್ದಾಳೆ, ಮಾಡಲಿ ಮಾಡಲಿ ಎನ್ನುತ್ತಿದ್ದಾರೆ. ಇದೇ ವೇಳೆ ಸೌಂದರ್ಯ ಉರಿದುಕೊಳ್ಳೋದನ್ನು ನೋಡಿ ಮಜಾ ಕೂಡ ತೆಗೆದುಕೊಳ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.