ಬಿಗ್ ಬಾಸ್ ಮನೆಯಲ್ಲಿ ಎಡವಿದವರು; ಲಿಸ್ಟ್ ಸೇರಕೊಂಡವರ ಪಾಡು ಏನಾಗಬಹುದು!?

Published : Jan 04, 2024, 06:51 PM ISTUpdated : Jan 04, 2024, 06:54 PM IST
ಬಿಗ್ ಬಾಸ್ ಮನೆಯಲ್ಲಿ ಎಡವಿದವರು; ಲಿಸ್ಟ್ ಸೇರಕೊಂಡವರ ಪಾಡು ಏನಾಗಬಹುದು!?

ಸಾರಾಂಶ

ವರ್ತೂರು ಸಂತೋಷ್, ಮೈಕೇಲ್ ಹಾಗೂ ತನಿಷಾ ಬಗ್ಗೆ ನಡೆದಿರುವ ಚರ್ಚೆ ಮಾತ್ರ ಪ್ರೊಮೋದಲ್ಲಿ ಹೈಲೈಟ್ ಆಗಿದ್ದು, ಮೈಕೇಲ್ ತಾವು ಕ್ಯಾಪ್ಟನ್ ಆದಾಗ ಹಾಗೂ ಬೇರೆಯವರು ಕ್ಯಾಪ್ಟನ್ ಆದಾಗ ಯಾರ ಮಾತನ್ನೂ ಕೇಳುತ್ತಿರಲಿಲ್ಲ ಎಂಬ ಆರೋಪ ಬಂದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಸ್ಪರ್ಧಿಗಳು 15ನೇ ವಾರದಲ್ಲಿ ಗೇಮ್ ಆಡುತ್ತಿದ್ದಾರೆ. ಸದ್ಯಕ್ಕೆ ಡ್ರೋನ್ ಪ್ರತಾಪ್ ಅಸ್ವಸ್ಥನಾಗಿರುವುದು, ಅಸ್ಪತ್ರೆಗೆ ಹೋಗಿ ಬಂದಿರುವುದು, ಸ್ವಾಮೀಜಿಯ ಭವಿಷ್ಯ ಕೇಳಿದ್ದೇ ಆತ ಅಸ್ವಸ್ಥನಾಗುವುದಕ್ಕೆ ಕಾರಣ ಹೊರತೂ ಸಂಗೀತಾ-ನಮ್ರತಾ 'ಪ್ಯಾನಿಕ್ ಪಟ್ಟ'ಕಟ್ಟಿರುವುದು ಅಲ್ಲ ಎಂಬ ಸಂಗತಿ ಬಹಿರಂಗವಾಗಿರುವುದು ಎಲ್ಲವೂ ಸದ್ಯದಲ್ಲಿ ನಡೆದ ಘಟನೆಗಳು. ಆದರೆ, ಇದೀಗ ಹೊಸ ಟಾಸ್ಕ್ ನಡೆದಿದ್ದು- ಯಾರು, ಎಲ್ಲಿ, ಹೇಗೆ ಎಡವಿದರು ಎಂಬ ಬಗ್ಗೆ ಚರ್ಚೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಒಬ್ಬರನ್ನು ಹೊರಗಿಡುವುದು ಎಂದರೆ ಯಾರನ್ನು ಎಂದು ಸೂಚಿಸಿ ಎಂಬುದು ಬಿಗ್ ಬಾಸ್ ಕೊಟ್ಟಿರುವ ಹೊಸ ಟಾಸ್ಕ್. 

ಖುಷಿ ಮಾತಾಡುವುದು ಕಡಿಮೆ, ಕ್ಯಾಮೆರಾ ಎದುರು ಹೀಗ್ಮಾಡೋದಾ ಅಂದೇಬಿಟ್ರು ಜಾಹ್ನವಿ ಕಪೂರ್!

ವರ್ತೂರು ಸಂತೋಷ್, ಮೈಕೇಲ್ ಹಾಗೂ ತನಿಷಾ ಬಗ್ಗೆ ನಡೆದಿರುವ ಚರ್ಚೆ ಮಾತ್ರ ಪ್ರೊಮೋದಲ್ಲಿ ಹೈಲೈಟ್ ಆಗಿದ್ದು, ಮೈಕೇಲ್ ತಾವು ಕ್ಯಾಪ್ಟನ್ ಆದಾಗ ಹಾಗೂ ಬೇರೆಯವರು ಕ್ಯಾಪ್ಟನ್ ಆದಾಗ ಯಾರ ಮಾತನ್ನೂ ಕೇಳುತ್ತಿರಲಿಲ್ಲ ಎಂಬ ಆರೋಪ ಬಂದಿದ್ದರೆ, ತನಿಷಾ ಬಗ್ಗೆ 'ರೂಡ್‌ ಆಗಿ ಬಿಹೇವ್ ಮಾಡ್ತಿದ್ರು, ಬರೀ ಶಿಕ್ಷೆ ಕೊಡೋ ಬಗ್ಗೆಯಷ್ಟೇ ಯೋಚನೆ ಮಾಡ್ತಿದ್ರು' ಹೀಗೆ ಆರೋಪ ಪಟ್ಟಿ ಬಂತು. ಆದರೆ ಕಾರ್ತಿಕ್ ಕೆಲವು ತಪ್ಪುಗಳ ಬಗ್ಗೆ ಮಾತನಾಡಿದ್ದು, ಅದು ಯಾರ ಬಗ್ಗೆ ಎಂಬುದಾಗಲೀ ಅಥವಾ ತನಿಷಾ ಹೇಳಿದ ಡೈಲಾಗ್ ಯಾರ ಬಗ್ಗೆ ಎಂಬುದಾಗಲೀ ಸ್ಪಷ್ಟವಾಗಿ ತಿಳಿಯಲಿಲ್ಲ. 

ಒರಿ-ಪಾಲಕ್ ಚಾಟ್ ಜಗಳದ ಮಧ್ಯೆ ಸಾರಾ ಖಾನ್ ಬಂದಿದ್ದು ಯಾಕೆ; ತಪ್ಪಿದ್ದಾಗಲೇ ಕ್ಷಮೆ ಕೇಳುವುದು!

ಎನೇ ಆದರೂ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಅಂತ ಬಂದಾಗ ಎಲ್ಲರಿಗೂ ತಾವು ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ಮನೆಯ ಕ್ಯಾಪ್ಟನ್ ಆದಾಗ, ಆಗಿ ಮುಗಿದ ಮೇಲೆ ಬರುವ ಆರೋಪಗಳು, ಅನುಭವಿಸುವ ಮಾನಸಿಕ ಯಾತನೆಗಳು ಲೆಕ್ಕವಿಲ್ಲದಷ್ಟು. ಪ್ರತಿಯೊಬ್ಬರೂ ಮತ್ತೊಬ್ಬರು ಕ್ಯಾಪ್ಟನ್ ಆದಾಗ ಅವರು ಮಾಡಿದ ತಪ್ಪುಗಳನ್ನು ಲೆಕ್ಕಹಾಕಿ ಹೇಳಿದ್ದಾರೆ. ಆದರೆ ಈಗ ಬಿಗ್ ಬಾಸ್ ಟಾಸ್ಕ್ ನೀಡಿದ್ದರಿಂದ ಮತ್ತೆ ಎಲ್ಲರ ತಪ್ಪುಗಳನ್ನು ಪಟ್ಟಿ ಮಾಡಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಈಗ ಹೊಸ ಹೊಸ ಟಾಸ್ಕ್‌ಗಳ ಮೂಲಕ ಯಾರೋ ಒಬ್ಬರನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಬೇಕಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Gowri Kannada Serial: ಗೌರಿ ಧಾರಾವಾಹಿಯಲ್ಲಿ ಸಡನ್ ಟ್ವಿಸ್ಟ್... ಬೆಚ್ಚಿ ಬಿದ್ದ ವೀಕ್ಷಕರು… ಅಂತದೇನಾಯ್ತು?
BBK 12 ಮನೆಯಲ್ಲಿ ಕಾವ್ಯ ಶೈವ ಪಾಲಕರು; ಆ ಕಾರಣಕ್ಕೆ ಭಯ ಬಿದ್ದು ಕಾಲ್ಕೀಳಲಿರೋ ಗಿಲ್ಲಿ ನಟ