ಡ್ರೋನ್ ಪ್ರತಾಪ್ ಆಸ್ಪತ್ರೆಯಿಂದ ಡಿಶ್ಚಾರ್ಜ್‌: ಅಸಲಿ ಸತ್ಯವನ್ನು ಬಹಿರಂಗಪಡಿಸಿದ ಕುಂಬಳಗೋಡು ಪೊಲೀಸರು!

By Sathish Kumar KH  |  First Published Jan 4, 2024, 4:27 PM IST

ಬಿಗ್‌ಬಾಸ್‌ ಮನೆಯಲ್ಲಿದ್ದ ಡ್ರೋನ್‌ ಪ್ರತಾಪ್‌ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆ ಡಿಶ್ಚಾರ್ಜ್‌ ಆಗಿದ್ದಾರೆ. ಕುಂಬಳಗೋಡು ಪೊಲೀಸರು ಡ್ರೋನ್ ಪ್ರತಾಪ್‌ಗೆ ಏನಾಗಿತ್ತು ಎಂಬ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.


ಬೆಂಗಳೂರು (ಜ.04): ಬಿಗ್‌ಬಾಸ್‌ ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಬಂದು ಭವಿಷ್ಯವನ್ನು ನುಡಿದಾಕ್ಷಣ ಕುಟುಂಬದ ಚಿಂತೆಯಲ್ಲಿಯೇ ಡ್ರೋನ್‌ ಪ್ರತಾಪ್‌ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್ ಪ್ರತಾಪ್‌ ಕಾಣದ ಹಿನ್ನೆಲೆಯಲ್ಲಿ ಕೆಲವು ಜನರು ಬೇರೆಯದೇ ಬಣ್ಣವನ್ನು ಬಳಿದಿದ್ದರು. ಆದರೆ, ಈಗ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿದ್ದಾರೆ. ಈ ವೇಳೆ ಕುಂಬಳಗೋಡು ಪೊಲೀಸರು ಆಸ್ಪತ್ರೆಗೆ ಹೋಗಿ ವಿಚಾರಣೆ ಮಾಡಿದಾಗ ಅನಾರೋಗ್ಯ ಏನೆಂಬುದು ಪತ್ತೆಯಾಗಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್ 10ರ ಸ್ಟ್ರಾಂಗ್‌ ಕಂಟೆಸ್ಟಂಟ್‌ಗಳಲ್ಲಿ ಒಬ್ಬರಾಗಿರುವ ಡ್ರೋನ್‌ ಪ್ರತಾಪ್‌ ಅವರು ಇದ್ದಕ್ಕಿದ್ದಂತೆ ಬಿಗ್‌ಬಾಸ್‌ ಮನೆಯಿಂದ ಕಾಣೆಯಾಗಿದ್ದರು. ಬಿಗ್‌ಬಾಸ್‌ ಮನೆಗೆ  ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಬಂದು ಎಲ್ಲರಿಗೂ ಭವಿಷ್ಯವನ್ನು ಹೇಳಿದ್ದರು. ಆಗ ಡ್ರೋನ್‌ ಪ್ರತಾಪ್‌ ಅವರಿಗೆ ನೀವು ಕುಟುಂಬದೊಂದಿಗೆ ಇರುವುದು ಬೇಡ. ಅಲ್ಲಿ ನಿಮ್ಮನ್ನು ಹೇಸಿಗೆಯಂತೆ ನಡೆಸಿಕೊಳ್ಳಲಾಗುತ್ತದೆ, ದೂರವಿದ್ದು ದೂಪವಾಗುವಿರೋ ಇಲ್ಲವೇ, ಕುಟುಂಬದೊಂದಿಗೆ ಇದ್ದು ಹೇಸಿಗೆ ಆಗುವಿರೋ ಎಂದು ಹೇಳಿದ್ದರು. ಇದೇ ಚಿಂತೆಯಲ್ಲಿ ಡ್ರೋನ್‌ ಪ್ರತಾಪ್‌ ಅವರು ತಮಗೆ ಆಪತ್ತು ತಂದುಕೊಂಡಿದ್ದಾರೆ ಎಂದು ಊಹೆ ಮಾಡಿದ್ದರು. ಆದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದಲೇ ಬಿಗ್‌ಬಾಸ್‌ ಮನೆಯಿಂದ ಡ್ರೋನ್‌ ಪ್ರತಾಪ್ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿತ್ತು.

Tap to resize

Latest Videos

undefined

Breaking: ಬಿಗ್‌ ಬಾಸ್‌ ಮನೆಯಲ್ಲಿ ಡ್ರೋನ್‌ ಪ್ರತಾಪ್‌ ಅಸ್ವಸ್ಥ!

ಆದರೆ, ಈ ಬಗ್ಗೆ ಬಿಗ್‌ಬಾಸ್‌ ಮನೆಯ ಸಿಬ್ಬಂದಿ ಮಾತನಾಡಿ, ಬಿಗ್ ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ಅಸ್ವಸ್ಥಗೊಂಡಿದ್ದು ಅವರನ್ನು ಹತ್ತಿರದ ರಾಜರಾಜೇಶ್ವರಿ ನಗರ ಬಳಿಯ ರಾಮೋಹಳ್ಳಿ ಸಂಜೀವಿನಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ, ಈಗ ಡ್ರೋಣ್ ಪ್ರತಾಪ್ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದು, ವಾಂತಿ, ಭೇಧಿ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು ಎಂದಿದ್ದಾರೆ. 2ನೇ ತಾರೀಖು ತಡ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಾಪ್ ಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಎಲ್ಲಾ ರೀತಿಯ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕ ಡಿಶ್ಚಾರ್ಜ್ ಮಾಡಲಾಯ್ತು ಎಂದು ಹೇಳಲಾಗುತ್ತಿದೆ.

ನಿಖರ ಮಾಹಿತಿ ನೀಡಿದ ವೈದ್ಯರು: ಮೊನ್ನೆ ಮಧ್ಯರಾತ್ರಿ 2.30ಕ್ಕೆ ಡ್ರೋನ್‌ ಪ್ರತಾಪ್ ಅವರನ್ನು ಬಿಗ್‌ಬಾಸ್‌ ಸಿಬ್ಬಂದಿ ಕರೆದುಕೊಂಡು ಬಂದಾಗ ಡ್ರೋನ್‌ ಪ್ರತಾಪ್‌ ಅವರೇ ತಮಗೆ ಏನಾಗಿದೆ ಎಂದು ಸಂಪೂರ್ಣ ಮಾಹಿತಿ ನಿಡಿದ್ದಾರೆ. ಬಿಪಿ ಕಡಿಮೆಯಿತ್ತು, ಅವರಿಗೆ ಏಳೆಂಟುಬಾರಿ ಲೂಸ್‌ ಮೋಷನ್ ಆಗಿತ್ತು. ಒಂದರಡು ಬಾರಿ ವಾಂತಿ ಆಗಿತ್ತು. ಒಂದು ದಿನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಇಂದು ಮಧ್ಯಾಹ್ನ 1 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಮಾಡಲಾಗಿದೆ. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಯಾವುದೇ ಸುಳಿವಿಲ್ಲ. ಅವರು ವಾಂತಿ ಮಾಡಿದಾಗ ಯಾವುದೇ ರೀತಿಯ ಮೆಡಿಸಿನ್ ತೆಗೆದುಕೊಂಡಿದ್ದ ಬಗ್ಗೆ ಲಕ್ಷಣಗಳು ಇರಲಿಲ್ಲ. ಆತ್ಮಹತ್ಯೆಗೆ ಯತ್ನ, ಟ್ಯಾಬ್ಲೆಟ್ ನುಂಗಿರುವ ಬಗ್ಗೆ ಯಾವುದೇ ಪ್ರಯತ್ನವೂ ಆಗಿಲ್ಲ, ಅವರಿಗೆ ಗ್ಯಾಸ್ಟ್ರರೈಟಿಸ್‌ ಹಾಗೂ ಡಿಹೈಡ್ರೇಷನ್‌ನಿಂದ ಈ ರೀತಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಸಂಜೀವಿನಿ ಆಸ್ಪತ್ರೆ ವೈದ್ಯ ಪ್ರತಾಪ್ ಹಾಗೂ ಡಾ.ಪೂರ್ವಜ್‌ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಪ್ರತಾಪ್‌ಗೆ ಪ್ಯಾನಿಕ್ ಪಟ್ಟ ಕಟ್ಟಿದ ಸಂಗೀತಾ-ನಮ್ರತಾ; ಒಪ್ಪಿಕೊಂಡ ಪ್ರತಾಪ್ ರಿಯಾಕ್ಷನ್ ನೋಡಿ!

ಪೊಲೀಸ್‌ ವಿಚಾರಣೆ ವೇಳೆ ವೈದ್ಯರು ಹೇಳಿದ್ದೇನು? ಇನ್ನು ರಾಮೋಹಳ್ಳಿಯ ಸಂಜೀವಿನಿ ಆಸ್ಪತ್ರೆಗೆ ಕುಂಬಳಗೋಡು ಪೊಲೀಸ್‌ ಠಾಣೆಯ ಇನ್ಸ್ ಪೆಕ್ಟರ್ ಭೇಟಿ ನೀಡಿ ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆಗ ಆಸ್ಪತ್ರೆ ಸಿಬ್ಬಂದಿ ಪ್ರತಾಪ್ ಡಿಶ್ಚಾರ್ಜ್ ಆಗಿರುವ ಬಗ್ಗೆ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡ್ರೋನ್ ಪ್ರತಾಪ್ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ, ಆಸ್ಪತ್ರೆ ಸಿಬ್ಬಂದಿ ಸಂಪೂರ್ಣ ಮಾಹಿತಿ ನೀಡಿದರು. ಡ್ರೋನ್ ಪ್ರತಾಪ್ ಅವರು ಡಿಹೈಡ್ರೇಷನ್, ಗ್ಯಾಸ್ಟ್ರಿಕ್ ನಿಂದಾಗಿ ವಾಂತಿ ಹಾಗೂ ನಿಶ್ಚಕ್ತಿ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.

click me!