ಡಾ.ಬ್ರೋ ಖ್ಯಾತಿಯ ಗಗನ್ ಅವರು ಇದೀಗ 100 ವರ್ಷಗಳಷ್ಟು ಹಳೆಯದಾಗಿರುವ ಕ್ಯಾಮೆರಾದ ಬಗ್ಗೆ ಪರಿಚಯಿಸಿದ್ದಾರೆ. ಅವರು ಹೇಳಿದ್ದೇನು?
ಕಳೆದೊಂದು ತಿಂಗಳಿನಿಂದ ಯಾವುದೇ ವಿಡಿಯೋ ಅಪ್ಲೋಡ್ ಮಾಡದೇ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದ ಹಾಗೂ ಅಭಿಮಾನಿಗಳ ಚಿಂತೆಗೂ ಕಾರಣರಾಗಿದ್ದ ಡಾ.ಬ್ರೋ ಅರ್ಥಾತ್ ಗಗನ್ ಅವರು ಹೊಸ ವರ್ಷದಂದು ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದರು. ಅಯೋಧ್ಯೆಯ ಜೊತೆಗೆ ರಾಮಾಯಣಕ್ಕೆ ನಂಟಿರುವ ನೇಪಾಳಕ್ಕೂ ಭೇಟಿ ಕೊಟ್ಟು ಹಲವಾರು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಮೂಲಕ ಡಾ.ಬ್ರೋ ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್ ನೀಡಿದ್ದು, ಅಭಿಮಾನಿಗಳ ಮನಸ್ಸನ್ನು ತಣಿಸಿದ್ದರು. ಒಂದು ತಿಂಗಳಿಂದ ವಿಡಿಯೋಗಾಗಿ ಕಾಯುತ್ತಿದ್ದ ಡಾ.ಬ್ರೋ ಫ್ಯಾನ್ಸ್ ಖುಷಿಯಿಂದ ನಲಿದಾಡಿದರು. ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಅವರ ವಿಡಿಯೋ ವೀಕ್ಷಿಸಿದರು. ಅಯೋಧ್ಯೆಯ ಶ್ರೀರಾಮನೆಂದರೆ ಒಂದು ರಾಜಕೀಯ ಪಕ್ಷಕ್ಕಷ್ಟೇ ಸೀಮಿತ ಎಂದುಕೊಂಡವರು ಕೆಲವರು ಡಾ.ಬ್ರೋ ಅನ್ನು ಟೀಕಿಸಿದ್ದೂ ಆಯ್ತು. ವಿದೇಶಗಳಲ್ಲಿ ಸುತ್ತಾಡುತ್ತಾ ಅಲ್ಲಿಯ ವಿಷಯವನ್ನು ಕಲೆ ಹಾಕಿ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಹಾಡಿ ಹೊಗಳಿದ ಕೆಲವರು ನಮ್ಮದೇ ಭೂಮಿಯಲ್ಲಿನ ಶ್ರೀರಾಮನ ಕುರಿತು ಹೇಳಿದಾಗ ಗಗನ್ ವಿರುದ್ಧವೇ ಸಮರ ಸಾರುವುದೂ ನಡೆಯುತ್ತಿದೆ.
ಇದರ ಮಧ್ಯೆಯೇ, ಡಾ.ಬ್ರೋ ತಮ್ಮ ಹಳೆಯ ಕೆಲವು ವಿಡಿಯೋಗಳ ತುಣುಕುಗಳನ್ನು ಪುನಃ ಶೇರ್ ಮಾಡುತ್ತಿರುತ್ತಾರೆ. ಇದೀಗ ಅವರು 100 ವರ್ಷಗಳಷ್ಟು ಹಳೆಯದಾಗಿರುವ ಕ್ಯಾಮೆರಾ ಪರಿಚಯ ಮಾಡಿಸಿದ್ದಾರೆ. ಇದು ಅಫ್ಗಾನಿಸ್ತಾನದಲ್ಲಿರುವ ಕಾಬುಲ್ಗೆ ಭೇಟಿ ಕೊಟ್ಟ ವಿಡಿಯೋ ಆಗಿದೆ. ಕೆಲ ತಿಂಗಳ ಹಿಂದೆ ಗಗನ್ ಅವರು ಇಲ್ಲಿಗೆ ಭೇಟಿ ಕೊಟ್ಟು ಇದರ ಮಾಹಿತಿ ನೀಡಿದ್ದರು. ಈಗ ಮತ್ತೆ ಆ ವಿಡಿಯೋದ ತುಣುಕೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 100 ವರ್ಷಗಳಷ್ಟು ಹಳೆಯದಾಗಿರುವ ಕ್ಯಾಮೆರಾದ ಎದುರು ಕುಳಿತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಒಂದು ಫೋಟೋ ತೆಗೆಯಲು 10-15 ನಿಮಿಷ ಬೇಕಾಯಿತು, ನಂತರ ಅಲ್ಲಿಯೇ ರಾಸಾಯನಿಕ ಹಾಕಿ ಫೋಟೋ ತೆಗೆದು ಕೊಡಲಾಯಿತು. ಕಂಪ್ಯೂಟರ್ ಮೂಲಕ ಅದಕ್ಕೆ ಫೈನಲ್ ಟಚ್ ನೀಡಲಾಯಿತು.
ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
ಇದರ ಫುಲ್ ವಿಡಿಯೋ ಕೂಡ ಡಾ.ಬ್ರೋ ಹಾಕಿದ್ದಾರೆ ಅದರಲ್ಲಿ ಪಾಕಿಸ್ತಾನದ ಗಡಿ ಭಾಗದಲ್ಲಿರುವ ಮಣ್ಣಿನ ಮನೆಗಳ ದರ್ಶನ ಮಾಡಿಸಿದ್ದಾರೆ. ಇದೇ ವಿಡಿಯೋದಲ್ಲಿ ತಾಲಿಬಾನಿಗಳನ್ನೂ ಮಾತನಾಡಿಸಿದ್ದಾರೆ. ಈಗ ಹಾಕಿರುವ ವಿಡಿಯೋ ತುಣುಕುಗಳಿಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದು, ಡಾ.ಬ್ರೊ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ಗಗನ್ ಸಾಕ್ಷಿಯಾಗಿದ್ದಾರೆ. ನಮಸ್ಕಾರ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro) ಎನ್ನುವಷ್ಟರ ಮಟ್ಟಿಗೆ ಇವರು ಕನ್ನಡಿಗರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.
ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಉಗಾಂಡಾಕ್ಕೆ ಹೋಗಿ ಅಭಿಮಾನಿಗಳಿಗೆ ಆತಂಕವನ್ನೂ ಮೂಡಿಸಿದ್ದಾರೆ. ತಾಲೀಬಾನಿಗಳನ್ನೂ ಮಾತನಾಡಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ . ಆದರೂ ಧೈರ್ಯದಿಂದ ಗಗನ್ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.
ಬಿಹಾರದ ಎಮ್ಮೆ, ಮೇಕೆ ಜೊತೆ ಕಾಣಿಸಿಕೊಂಡ ಡಾ.ಬ್ರೋ: ಫೋಟೋ ನೋಡಿ ಕುಣಿದಾಡಿದ ಫ್ಯಾನ್ಸ್