ಬಿಗ್ ಬಾಸ್ ಖ್ಯಾತಿಯ ಧನರಾಜ್ ಆಚಾರ್ ಮಗಳ ಮುಂದೆ ಮೊಬೈಲ್ ನೋಡಿದ್ದಕ್ಕೆ ಹೆಂಡತಿಯಿಂದ ಕ್ಲಾಸ್ ತಿಂದಿದ್ದಾರೆ. ನಂತರ ಮಗುವನ್ನು ಕ್ಯಾರಿ ಬ್ಯಾಗ್‌ನಲ್ಲಿ ಕೂರಿಸಿ ಮೊಬೈಲ್ ನೋಡುವ ಪ್ರಯತ್ನ ಮಾಡಿದ್ದು, ಈ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು (ಮಾ.24): ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಟ್ರೋಫಿ ವಿನ್ನರ್ ಗಾಯಕ ಹನುಮಂತ ಲಮಾಣಿ ಅವರ ಪರಮಾಪ್ತ ಸ್ನೇಹಿತ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಮಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಧನರಾಜ್ ಆಚಾರ್ ಇದೀಗ ಮನೆಯಲ್ಲಿ ಮಗಳ ಮುಂದೆ ಮೊಬೈಲ್ ನೋಡಿದ್ದಾರೆ. ಇದಕ್ಕೆ ಹೆಂಡತಿ ಕ್ಲಾಸ್ ತೆಗೆದುಕೊಂಡಿದ್ದು, ಮುಂದೇನಾಯ್ತು ನೀವೇ ನೋಡಿ..
ಬಿಗ್ ಬಾಸ್ ರಿಯಾಲಿಟಿ ಶೋ ಮುಕ್ತಾಯದ ಬೆನ್ನಲ್ಲಿಯೇ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಸ್ಪರ್ಧಿಯಾಗಿರುವ ಧನರಾಜ್ ಆಚಾರ್ ಬೆಂಗಳೂರಿನಲ್ಲಿಯೇ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸವಾಗಿದ್ದಾರೆ. ಇದೀಗ ಅವರು ಮೊದಲಿನಂತೆಯೇ ಹೆಂಡತಿ ಜೊತೆಗೆ ಹಾಸ್ಯಭರಿತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ಬಿಟ್ಟಿಲ್ಲ. ಇದೀಗ ಮಗಳೊಂದಿಗೆ ಮೊಬೈಲ್ ನೋಡುತ್ತಾ ವಿಡಿಯೋ ಮಾಡಿದ್ದಾರೆ. ಆದರೆ, ಮಗಳನ್ನು ಎತ್ತಿಕೊಂಡ ಮೊಬೈಲ್ ನೋಡುತ್ತಿದ್ದ ಧನರಾಜ್‌ಗೆ ಅವರ ಹೆಂಡತಿ ಪ್ರಜ್ಞಾ ಅವರು ಚಿಕ್ಕ ಮಕ್ಕಳ ಮುಂದೆ ಮೊಬೈಲ್ ನೋಡಬಾರದು ಎಂದು ಹೇಳುತ್ತಾರೆ. ಆಗ ಧನರಾಜ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಒಳಗೆ ಹೋಗುತ್ತಾರೆ.
ಇದರಿಂದ ಬೇಸರಗೊಂಡ ಧನರಾಜ್ ಮನೆಯೊಳಗೆ ಹೋಗಿ ಮಕ್ಕಳ ಕ್ಯಾರಿ ಬ್ಯಾಗ್ ಅನ್ನು ಬೆನ್ನಿಗೆ ಹಾಕಿಕೊಂಡು ಅದರಲ್ಲಿ ಮಗವನ್ನು ಕೂರಿಸಿ ಮಗುವಿಗೆ ಕಾಣದಂತೆ ಮೊಬೈಲ್ ನೋಡುತ್ತಿರುತ್ತಾರೆ. ಇದನ್ನು ನೋಡಿದ ಅವರ ಹೆಂಡತಿ ಬಂದು ಗಂಡನ ಅವತಾರವನ್ನು ನೋಡಿ ತಲೆ ಚಚ್ಚಿಕೊಳ್ಳುತ್ತಾರೆ. ಆದರೆ, ಈ ದೃಶ್ಯದಲ್ಲಿ ಧನರಾಜ್ ಅವರ ಮಗಳು ಕಿರಿಕಿರಿ ಮಾಡದೇ ಸುಮ್ಮನೇ ನಗುತ್ತಿರುವುದು ನೋಡಿ ಅಪ್ಪ, ಅಮ್ಮನ ವಿಡಿಯೋಗೆ ತುಂಬಾ ಸಪೋರ್ಟ್ ಮಾಡುವಂತೆ ಭಾಸವಾಗುತ್ತಿದೆ. ಧನರಾಜ್ ಮಗಳು ಕ್ಯೂಟ್ ಆಗಿ ಸ್ಮೈಲ್ ಮಾಡಿರುವುದು ನೆಟ್ಟಿಗರ ಖುಷಿಯನ್ನು ಡಬಲ್ ಮಾಡುತ್ತಿದೆ. ಇದರ ಮೂಲಕ 'ಮಕ್ಕಳ ಮುಂದೆ ಮೊಬೈಲ್ ನೋಡಬೇಡಿ' ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ: ಪೋಸ್ ಕೊಟ್ಟಿದ್ದು ಸಾಕು ತಂಗಿ ಜಿಂಕೆಗೆ ಒಂದು ಮದ್ವೆ ಮಾಡೋ ಮಾರಾಯ; ಧನರಾಜ್ ಕಾಲೆಳೆದ ನೆಟ್ಟಿಗರು
ಧನರಾಜ್ ಆಚಾರ್ ಅವರು ಸೋಶಿಯಲ್ ಮೀಡಿಯಾ ವಿಡಿಯೋಗಳನ್ನು ಮಾಡುತ್ತಲೇ ಗಿಚ್ಚಿ ಗಿಲಿಗಿಲಿ ವೇದಿಕೆಗೆ ಬಂದರು. ಇದಾದ ನಂತರ ಬಿಗ್ ಬಾಸ್ ರಿಯಾಲಿಟಿ ಶೋಗೆ ಅವರನ್ನು ಸ್ಪರ್ಧಿಯನ್ನಾಗಿ ಮನೆಯೊಳಗೆ ಕಳುಹಿಸಲಾಯಿತು. ಬಿಗ್ ಬಾಸ್ ಮನೆಯಲ್ಲಿ ಕಿರುತೆರೆಯ ಹಿನ್ನೆಲೆಯುಳ್ಳವರ ನಡುವೆ ತುಂಬಾ ಪಾಪದವನಂತೆ ಕಾಣುತ್ತಿದ್ದ ಧನರಾಜ್ ಆಚಾರ್ ಹಾಸ್ಯದ ಹಿನ್ನೆಲೆಯುಳ್ಳವರಾಗಿದ್ದರೂ ಅವರಿಂದ ಉತ್ತಮ ಆಟ ಬಂದಿರಲಿಲ್ಲ. ಆದರೆ, ಮೂರ್ನಾಲ್ಕು ವಾರದಲ್ಲಿ ರಂಜಿತ್ ಸೂರ್ಯ ಹಾಗೂ ವಕೀಲ ಜಗದೀಶ್ ಜಗಳ ಮಾಡಿಕೊಂಡು ಹೊರಗೆ ಹೋದ ಬೆನ್ನಲ್ಲಿಯೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಪ್ರವೇಶ ಮಾಡಿದ ಹಳ್ಳಿ ಹೈದ ಗಾಯಕ ಹನುಮಂತನ ಜೊತೆಗೆ ಉತ್ತಮ ಸ್ನೇಹ ಬೆಳೆಸಿಕೊಂಡರು. ಇದಾದ ನಂತರ ಇವರಿಬ್ಬರ ದೋಸ್ತಿ ಫಿನಾಲೆವರೆಗೂ ಮುಂದುವರೆಯಿತು.
ಇನ್ನೇನು ಫಿನಾಲೆಗೆ ಆಯ್ಕೆಯಾಗುವ 5 ಫೈನಲಿಸ್ಟ್‌ಗಳ ಪಟ್ಟಿಗೆ ಹೋಗುವಲ್ಲಿ ಒಂದು ಧನರಾಜ್ ಆಚಾರ್ ಆಟದಲ್ಲಿ ಮೋಸ ಮಾಡಿದ್ದಾರೆಂದು ಆ ಆಟದ ತೀರ್ಪು ರದ್ದುಗೊಳಿಸಲಾಯಿತು. ಇದಾದ ನಂತರ ಫಿನಾಲೆಗೆ ಒಂದು ಹೆಜ್ಜೆ ಇರುವಾಗ ಮನೆಯಿಂದ ಹೊರಗೆ ಬಂದರು. ಆದರೆ, ಧನರಾಜನ ದೋಸ್ತ ಹನುಮಂತ ಟ್ರೋಫಿ ವಿಜೇತರಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮುಕ್ತಾಯದ ಬೆನ್ನಲ್ಲಿಯೇ ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಧನರಾಜ್ ಆಚಾರ್ ಮತ್ತು ಹನುಮಂತ ಇಬ್ಬರೂ ಸ್ಪರ್ಧಿಗಳಾಗಿದ್ದಾರೆ. ಇದರಲ್ಲಿಯೂ ದೋಸ್ತಿ ಮುಂದುವೆಸುತ್ತಾ ಉತ್ತಮ ಮನರಂಜನೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಸ್ಪರ್ಧಿಗಳ ಜಗಳ ನಿಲ್ಸೋಕೆ ಹನುಮಂತನ 'ಪುರುಕ್ ಪುರುಕ್' ಅಸ್ತ್ರ! 72 ಹೂಸಿನ ಕಥೆ ಹೇಳಿದ ಧನರಾಜ್
ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವಾಗ ಧನರಾಜ್ ಆಚಾರ್ ಅವರಿಗೆ ಮಗಳು ಹುಟ್ಟಿ ಕೇವಲ ಒಂದೆರಡು ತಿಂಗಳಾಗಿತ್ತು. ಆದರೆ, ಬಿಗ್ ಬಾಸ್ ಮನೆಯಲ್ಲಿರುವಾಗ ಪುಟ್ಟ ಮಗಳ ನಗು, ಅಳುವಿನ ಧ್ವನಿ ಹಾಗೂ ಮುದ್ಧು ಮುಖವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಒಮ್ಮೆ ಬಿಗ್ ಬಾಸ್ ಮನೆಯಲ್ಲಿ ಮಗು ಅಳುವ ಧ್ವನಿ ಹಾಕಿದ್ದನ್ನು ಕೇಳಿ ತುಂಬಾ ಭಾವುಕರಾಗಿದ್ದರು. ನಂತರ ಫ್ಯಾಮಿಲಿ ಸುತ್ತಿನಲ್ಲಿ ಅವರ ಹೆಂಡತಿ-ಮಗಳು ಬಿಗ್ ಬಾಸ್ ಮನೆಯೊಳಗೆ ಬಂದಿದ್ದರು. ಆಗ ತುಂಬಾ ಖುಷಿಪಟ್ಟಿದ್ದರು.