ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್​.

ಆಪ್ತಮಿತ್ರದ ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​ ಚೈತ್ರಾ ಕುಂದಾಪುರ ಮಿಂಚಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಏನಂದ್ರು ನೋಡಿ.
 

Bigg Boss fame Chaitra Kundapura shines as Aptamitras Nagavalli for boys vs girls reality show suc

ಫೈರ್​ ಬ್ರ್ಯಾಂಡ್​ ಭಾಷಣಗಾರ್ತಿ ಚೈತ್ರಾ  ಕುಂದಾಪುರ, ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ.  ಬಿಗ್​ಬಾಸ್​ನಿಂದ ದಿನದಿಂದ ದಿನಕ್ಕೆ ಇನ್ನಷ್ಟು ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.   ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ  ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಚೈತ್ರಾ . ಇವರ ಬಟ್ಟೆಯ ಬಗ್ಗೆಯೂ ಬಿಗ್​ಬಾಸ್​ನಲ್ಲಿ ಇದಾಗಲೇ ಸಾಕಷ್ಟು ಚರ್ಚೆಯಾಗಿದೆ. ಇಂತಿಪ್ಪ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಮೊದಲಿಗಿಂತಲೂ ಹೆಚ್ಚು ಸುದ್ದಿಯಾಗುತ್ತಾರೆ. 

ಇದಾಗಲೇ ಕೆಲವು ಜಾಹೀರಾತುಗಳಲ್ಲಿ ಇವರಿಗೆ ಆಫರ್​ ಸಿಕ್ಕಿದೆ. ಜೊತೆಗೆನೇ ರಿಯಾಲಿಟಿ ಷೋಗಳಲ್ಲಿ ಡಿಮಾಂಡ್​ ಬರ್ತದೆ. ಇದೀಗ, ಚೈತ್ರಾ ಕುಂದಾಪುರ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ವಿನೂತನ ಕಲ್ಪನೆಯೊಂದಿಗೆ ತಂದಿರುವ ಈ ಷೋ , ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ಕಿತ್ತಾಡಿಕೊಳ್ಳುವುದು. ಈ ಮೂಲಕ ನೋಡುಗರಿಗೆ ಮಜಾ ನೀಡುವ  ಹಾಗೂ ಥ್ರಿಲ್ ನೀಡುವ ಷೋ. ಇದರಲ್ಲಿ ಇದಾಗಲೇ ವಿವಿಧ ರೀತಿಯ ಟಾಸ್ಕ್​ಗಳಲ್ಲಿ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಇದೀಗ ಚೈತ್ರಾ ಕುಂದಾಪುರ ಅವರು ನಾಗವಲ್ಲಿಯಾಗಿ ಮಿಂಚಿದ್ದಾರೆ. 

Latest Videos

ಚೈತ್ರಾ ಕುಂದಾಪುರ ಕೈಯಲ್ಲಿ ಇದೇನಿದು? ಪೊಟ್ಟಣ ಬಿಚ್ಚಿದಾಗ ಕಂಡದ್ದು...! ಇದಕ್ಕೆ ನೀವೇನ್​ ಹೇಳ್ತೀರಿ?

ಬಾಲಿಗಿನಿಂದ ಹೊರಕ್ಕೆ ಬರುತ್ತಿರುವಾಗ ವೇಷಭೂಷಣ ನಾಗವಲ್ಲಿ ರೂಪದಲ್ಲಿ ಸ್ವಲ್ಪ ಭಯಾನಕವಾಗಿ ಕಂಡರೂ ಕೊನೆಯಲ್ಲಿ ನಗುತ್ತಲೇ ಪೋಸ್ ಕೊಟ್ಟಿದ್ದಾರೆ. ಆಪ್ತಮಿತ್ರದಲ್ಲಿ ನಟಿ ಸೌಂದರ್ಯ ಅವರನ್ನು ಹೋಲುವಂತೆ ಮೇಕಪ್​ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಅಬ್ಬಬ್ಬಾ ಈ ರೂಪ ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಕೆಲವರು ನಾಗವಲ್ಲಿ ರೂಪದಲ್ಲಿಯೇ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಚೈತ್ರಾರ ಕಾಲೆಳೆಯುತ್ತಿದ್ದಾರೆ. ನೀವು ಮಾಡುವ ಭಾಷಣ ನಾಗವಲ್ಲಿ ರೂಪದ್ದಾಗಿತ್ತು, ಈಗ ವೇಷಭೂಷಣವೂ ಹಾಗೆಯೇ  ಮಾಡಿಕೊಂಡಿದ್ದೀರಿ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಜ್ಯೂನಿಯರ್​ ಸೌಂದರ್ಯ ಎಂದಿದ್ದಾರೆ. ಚೈತ್ರಾ ಫ್ಯಾನ್ಸ್​ ಕ್ಯೂಟ್​ ನಾಗವಲ್ಲಿ ಎಂದು ಕಮೆಂಟ್​  ಹಾಕಿದ್ದಾರೆ.

ಅಷ್ಟಕ್ಕೂ ಈ ವೇಷವನ್ನು ಅವರು ಬಾಯ್ಸ್ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋಗಾಗಿ ಹಾಕಿಕೊಂಡಿರುವುದು. ಇನ್ನು ಈ ಷೋ ಕುರಿತು ಹೇಳುವುದಾದರೆ, ಇದರಲ್ಲಿ ಈವೆರೆಗಿನ ಬಿಗ್​ಬಾಸ್​​ನ ಹಲವು ಸ್ಪರ್ಧಿಗಳು ಹಾಗೂ ವಿವಿಧ ರಿಯಾಲಿಟಿ ಷೋಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಗರ್ಲ್ಸ್ ತಂಡವನ್ನು ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾ ಮುನ್ನಡೆಸುತ್ತಿದ್ದಾರೆ. ಇದರಲ್ಲಿ  ಬಿಗ್ ಬಾಸ್​ನ ಹಿಂದಿನ ಸೀಸನ್​ಗಳ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ, ನಿವೇದಿತಾ ಗೌಡ, ನಟಿ ಚಂದನಾ, ಕೋಳಿ ರಮ್ಯಾ, ಪ್ರಿಯಾ ಸವದಿ,  ಸ್ಪಂದನಾ ಸೋಮಣ್ಣ ಹಾಗೂ ಐಶ್ವರ್ಯಾ ವಿನಯ್ ಇದ್ದಾರೆ. ಇನ್ನು ಬಾಯ್ಸ್​ ತಂಡವನ್ನು ವಿನಯ್‌ ಗೌಡ ನೇತೃತ್ವ ವಹಿಸಿದ್ದು, ಇದರಲ್ಲಿ  ಹನುಮಂತ ಲಮಾಣಿ,  ಧನರಾಜ್‌ ಆಚಾರ್‌, ರಜತ್‌,  ಪ್ರಶಾಂತ್‌,  ಮಂಜು ಪಾವಗಡ,  ಸೂರಜ್‌, ನಟ ವಿಶ್ವಾಸ್‌, ಸ್ನೇಹಿತ್‌, ವಿವೇಕ್ ಸಿಂಹ,  ರಕ್ಷಿತ್‌ ಇದ್ದಾರೆ. 

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ

vuukle one pixel image
click me!