ನೇರಪ್ರಸಾರದಲ್ಲಿ ಬಂದ ಬಿಗ್​ಬಾಸ್​ ಚೈತ್ರಾ ಕುಂದಾಪುರ ಕೊಟ್ರು ಬಿಗ್​ ಅಪ್​ಡೇಟ್​: ಏನದು?

Published : Feb 17, 2025, 12:45 PM ISTUpdated : Feb 17, 2025, 12:52 PM IST
ನೇರಪ್ರಸಾರದಲ್ಲಿ ಬಂದ ಬಿಗ್​ಬಾಸ್​ ಚೈತ್ರಾ ಕುಂದಾಪುರ ಕೊಟ್ರು ಬಿಗ್​ ಅಪ್​ಡೇಟ್​: ಏನದು?

ಸಾರಾಂಶ

ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ, ಹೊಸ ರಿಯಾಲಿಟಿ ಶೋ 'ಬಾಯ್ಸ್‌ ವರ್ಸಸ್‌ ಗರ್ಲ್ಸ್‌'ನಲ್ಲಿ ಭಾಗವಹಿಸಿದ್ದಾರೆ. ಶುಭಾ ಪೂಂಜಾ ನೇತೃತ್ವದ ಹೆಣ್ಣುಮಕ್ಕಳ ತಂಡದಲ್ಲಿ ಚೈತ್ರಾ ಕೂಡ ಇದ್ದಾರೆ. ಈ ಶೋನಲ್ಲಿ ತಮ್ಮ ನೃತ್ಯ ಮತ್ತು ಗಾಯನ ಪ್ರತಿಭೆಯನ್ನು ಪ್ರದರ್ಶಿಸಿರುವುದಾಗಿ ಚೈತ್ರಾ ತಿಳಿಸಿದ್ದಾರೆ. ನೇರಪ್ರಸಾರದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

ಫೈರ್​ ಬ್ರ್ಯಾಂಡ್​ ಭಾಷಣಗಾರ್ತಿ ಚೈತ್ರಾ  ಕುಂದಾಪುರ, ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಒಟ್ಟಿನಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ನಿಂದ ದಿನದಿಂದ ದಿನಕ್ಕೆ ಇನ್ನಷ್ಟು ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಕಲರ್ಸ್​ ಕನ್ನಡ ಚಾನೆಲ್​ನ ನೇರಪ್ರಸಾರದಲ್ಲಿ ಬಂದು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ರಿಯಾಲಿಟಿ ಷೋ ಒಂದರ ಕುರಿತು ಅಪ್​ಡೇಟ್​ ಕೊಟ್ಟಿದ್ದಾರೆ. ಅಷ್ಟಕ್ಕೂ ಇವರು ಹೇಳುತ್ತಿರುವುದು ಇದಾಗಲೇ ಆರಂಭವಾಗಿರುವ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋ ಕುರಿತು. ಇದಾಗಲೇ ಈ ರಿಯಾಲಿಟಿ ಷೋ ನೋಡುವವರಿಗೆ ಇದೇನು ಎನ್ನುವುದು ತಿಳಿದಿದೆ. ಬಿಗ್​ಬಾಸ್​ ಮುಗಿದ ಬೆನ್ನಲ್ಲೇ ಅದಕ್ಕೆ ಸೆಡ್ಡು ಹೊಡೆಯುವಂತೆ ಒಂದು ಷೋ ಮಾಡುವುದಾಗಿ ಹೇಳಲಾಗಿತ್ತು. ಅದೇ ಈ ರಿಯಾಲಿಟಿ ಷೋ.

ವಿನೂತನ ಕಲ್ಪನೆಯೊಂದಿಗೆ ತಂದಿರುವ ಈ ಷೋ , ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ಕಿತ್ತಾಡಿಕೊಳ್ಳುವುದು. ಈ ಮೂಲಕ ನೋಡುಗರಿಗೆ ಮಜಾ ನೀಡುವ  ಹಾಗೂ ಥ್ರಿಲ್ ನೀಡುವ ಷೋ. ಇದರಲ್ಲಿ ಈವೆರೆಗಿನ ಬಿಗ್​ಬಾಸ್​​ನ ಹಲವು ಸ್ಪರ್ಧಿಗಳು ಹಾಗೂ ವಿವಿಧ ರಿಯಾಲಿಟಿ ಷೋಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಗರ್ಲ್ಸ್ ತಂಡವನ್ನು ಸ್ಯಾಂಡಲ್​ವುಡ್​ ನಟಿ ಶುಭಾ ಪೂಂಜಾ ಮುನ್ನಡೆಸುತ್ತಿದ್ದಾರೆ. ಇದರಲ್ಲಿ  ಬಿಗ್ ಬಾಸ್​ನ ಹಿಂದಿನ ಸೀಸನ್​ಗಳ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ, ನಿವೇದಿತಾ ಗೌಡ, ನಟಿ ಚಂದನಾ, ಕೋಳಿ ರಮ್ಯಾ, ಪ್ರಿಯಾ ಸವದಿ,  ಸ್ಪಂದನಾ ಸೋಮಣ್ಣ ಹಾಗೂ ಐಶ್ವರ್ಯಾ ವಿನಯ್ ಇದ್ದಾರೆ. ಇನ್ನು ಬಾಯ್ಸ್​ ತಂಡವನ್ನು ವಿನಯ್‌ ಗೌಡ ನೇತೃತ್ವ ವಹಿಸಿದ್ದು, ಇದರಲ್ಲಿ  ಹನುಮಂತ ಲಮಾಣಿ,  ಧನರಾಜ್‌ ಆಚಾರ್‌, ರಜತ್‌,  ಪ್ರಶಾಂತ್‌,  ಮಂಜು ಪಾವಗಡ,  ಸೂರಜ್‌, ನಟ ವಿಶ್ವಾಸ್‌, ಸ್ನೇಹಿತ್‌, ವಿವೇಕ್ ಸಿಂಹ,  ರಕ್ಷಿತ್‌ ಇದ್ದಾರೆ. 

ಚೈತ್ರಾ ಕುಂದಾಪುರ ಕೈಯಲ್ಲಿ ಇದೇನಿದು? ಪೊಟ್ಟಣ ಬಿಚ್ಚಿದಾಗ ಕಂಡದ್ದು...! ಇದಕ್ಕೆ ನೀವೇನ್​ ಹೇಳ್ತೀರಿ?

ಇದರ ಬಗ್ಗೆ ಹೇಳಲು ಚೈತ್ರಾ ಕುಂದಾಪುರ ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ವಿಭಿನ್ನ ರೀತಿಯ ಷೋ ಆಗಿದ್ದು, ಇದನ್ನು ಎಲ್ಲರೂ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಷೋನಲ್ಲಿ ಹೈಲೈಟ್​ ಆಗಿದ್ದು, ಚೈತ್ರಾ ಅವರ ಡಾನ್ಸ್​ ಮತ್ತು ಹಾಡು. ಇದುವರೆಗೆ ನಾನು ಎಲ್ಲಿಯೂ ಡಾನ್ಸ್​ ಮಾಡಿಲ್ಲ, ಹಾಡಿಲ್ಲ. ಇದೇ ಮೊದಲ ಬಾರಿಗೆ ಈ ವೇದಿಕೆಯ ಮೇಲೆ ಹೀಗೆ ಮಾಡಿದ್ದೇನೆ ಎಂದಿರುವ ಚೈತ್ರಾ, ನೇರಪ್ರಸಾರದಲ್ಲಿ ಅಭಿಮಾನಿಗಳು ಕೇಳಿರುವ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಅಂದಹಾಗೆ ಚೈತ್ರಾ,  ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ  ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಚೈತ್ರಾ . ಇವರ ಬಟ್ಟೆಯ ಬಗ್ಗೆಯೂ ಬಿಗ್​ಬಾಸ್​ನಲ್ಲಿ ಇದಾಗಲೇ ಸಾಕಷ್ಟು ಚರ್ಚೆಯಾಗಿದೆ. ಇಂತಿಪ್ಪ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಮೊದಲಿಗಿಂತಲೂ ಹೆಚ್ಚು ಸುದ್ದಿಯಾಗುತ್ತಾರೆ. 

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?