
ಒಂದು ಧಾರಾವಾಹಿ ವರ್ಷಗಳು ಕಳೆದಂತೆ ಪಾತ್ರಧಾರಿಗಳು ಬದಲಾಗುತ್ತಾ ಹೋಗುತ್ತಾರೆ. ಕೆಲವೊಂದು ಧಾರಾವಾಹಿಗಳು ನಾಲ್ಕರಿಂದ ಐದು ವರ್ಷಗಳ ಕಾಲ ಪ್ರಸಾರವಾದ್ರೆ ಕೊನೆಯ ಸಂಚಿಕೆ ವೇಳೆಗೆ ಎಲ್ಲಾ ಪಾತ್ರಧಾರಿಗಳು ಬದಲಾಗುತ್ತಿರುತ್ತಾರೆ. ಹೊಸ ಸಿನಿಮಾ ಅವಕಾಶಗಳು, ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರ ಬರುತ್ತಾರೆ. ಜನರು ತಮ್ಮ ಪಾತ್ರ ತುಂಬಾನೇ ಮೆಚ್ಚಿಕೊಂಡಿರುವ ವಿಷಯ ಗೊತ್ತಿದ್ರೂ ಧಾರಾವಾಹಿಯಿಂದ ಹೊರ ಬಂದಿರುತ್ತಾರೆ. ಇದೀಗ ಕನ್ನಡದ ನಂಬರ್ 1 ಧಾರಾವಾಹಿ ಆಗಿರುವ ಲಕ್ಷ್ಮೀ ನಿವಾಸದ ಪಾತ್ರಧಾರಿಗಳು ಬದಲಾಗುತ್ತಿದ್ದಾರೆ. ಧಾರಾವಾಹಿ ಆರಂಭವಾದ ಕೆಲವೇ ಸಮಯದಲ್ಲಿ ಸಿಂಚನಾ ಪಾತ್ರಧಾರಿ ಬದಲಾಗಿದ್ದರು. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಜವರೇಗೌಡನ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯೂ ಬದಲಾಗಿದ್ದರು. ಖುಷಿ ಪಾತ್ರದಲ್ಲಿ ನಟಿಸುತ್ತಿದ್ದ ಬಾಲಕಿಯೂ ಬದಲಾಗಿದ್ದಾಳೆ.
ಲಕ್ಷ್ಮೀ ನಿವಾಸ ಮನ್ನಣೆ ಕಂಡು ಈ ಧಾರಾವಾಹಿಯನ್ನು ತಮಿಳಿನಲ್ಲಿಯೂ ರಿಮೇಕ್ ಮಾಡಲಾಗಿದೆ. ತಮಿಳಿನಲ್ಲಿಯೂ ಮೊದಲ ದಿನದಿಂದಲೇ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ತಂಡದಿಂದ ಮತ್ತೋರ್ವ ನಟ ಹೊರಗೆ ಬಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗ್ತಿದೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್ ಮತ್ತು ಲಕ್ಷ್ಮೀ ದಂಪತಿಯ ಐವರು ಮಕ್ಕಳಲ್ಲಿ ಮಂಗಳಾ ಸಹ ಒಬ್ಬಳು. ಮದುವೆಯಾಗಿ ಮಕ್ಕಳಾಗಿದ್ದರೂ ತವರಿಗೆ ಬಂದು ಹಣ ಕೇಳುವ ಮಗಳ ಪಾತ್ರವೇ ಮಂಗಳಾ. ಧಾರಾವಾಹಿಯಲ್ಲಿ ಮಂಗಳಾ ಪಾತ್ರ ಚಿಕ್ಕದಾದ್ರೂ ಜನರಿಗೆ ಇಷ್ಟವಾಗಿತ್ತು. ಈ ಮಂಗಳಾ ಗಂಡನ ಪಾತ್ರದಲ್ಲಿ ನಟ ವಿಶ್ವಾಸ್ ಭಾರಧ್ವಜ್ ನಟಿಸಿದ್ದಾರೆ. ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿಶ್ವಾಸ್ ಭಾರಧ್ವಜ್ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಧಾರಾವಾಹಿ ತಂಡದಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ಕನ್ನಡದ ಜನಪ್ರಿಯ ಕಾದಂಬರಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ವಿಶ್ವಾಸ್ ಭಾರಧ್ವಜ್ ನಟಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರಾವಾಹಿಯಲ್ಲಿ ಶ್ವೇತಾ ಚಂಗಪ್ಪ, ರಾಧಿಕಾ ಪಂಡಿತ್, ಮಾಲತಿ ಸರ್‌ದೇಶಪಾಂಡೆ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ವಿಶ್ವಾಸ್ ಭಾರಧ್ವಜ್ ಸಿನಿಮಾಗಳಲ್ಲಿಯೂ ಪೋಷಕ ನಟನಾಗಿ ನಟಿಸಿದ್ದಾರೆ.
ಇದನ್ನೂ ಓದಿ: ಎಲ್ಲರಿಗೂ ಅಚ್ಚುಮೆಚ್ಚಿನ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಮನೇಲಿ ಹೇಗಿರ್ತಾರೆ, ಇವರ ರಿಯಲ್ ಅತ್ತೆ ಇವರ ಬಗ್ಗೆ ಏನಂತಾರೆ?
ಲಕ್ಷ್ಮೀ ನಿವಾಸದ ಕಥೆ ಏನು?
ಮಕ್ಕಳಿಬ್ಬರು ಮನೆಯನ್ನು ಇಬ್ಭಾಗ ಮಾಡಿರೋದರಿಂದ ನೊಂದಿರುವ ಶ್ರೀನಿವಾಸ್ ಮತ್ತು ಲಕ್ಷ್ಮೀ ಪತ್ರ ಬರೆದಿಟ್ಟು ಕುಂಭಮೇಳ ಯಾತ್ರೆಗೆ ಹೋಗಿದ್ದಾರೆ. ಇತ್ತ ಮನೆಯಲ್ಲಿ ಸಂತೋಷ್, ವೆಂಕಿ ಮತ್ತು ಹರೀಶ್ ನಡುವೆ ದೊಡ್ಡ ಜಗಳವೇ ನಡೆದಿದೆ. ಮತ್ತೊಂದೆಡೆ ಜಾಹ್ನವಿ ಮನೆಯಲ್ಲಿರೋ ಎಲ್ಲಾ ಕ್ಯಾಮೆರಾಗಳನ್ನು ಪತ್ತೆ ಮಾಡಿದ್ದಾಳೆ.
ಊಟದ ತಟ್ಟೆ ಕಸಿಕೊಂಡ ನೀಚ ಸಂತೋಷ್
ಲಕ್ಷ್ಮೀ ನಿವಾಸ ಎರಡು ಭಾಗ ಆಗಿದ್ದರಿಂದ ಎಲ್ಲಿ ಊಟ ಮಾಡಬೇಕು ಅನ್ನೋದು ಚೆಲುವಿಗೆ ಗೊತ್ತಾಗುತ್ತಿಲ್ಲ. ಗಂಡನಿಗೆ ಹಸಿವು ಆಗಿದೆ, ಊಟ ನೀಡು ಎಂದು ಸಿಂಚನಾ ಬಳಿ ಕೇಳಿಕೊಂಡಿದ್ದಾಳೆ. ಆದ್ರೆ ಸಿಂಚನಾ ಊಟ ಕೊಡಲು ಒಪ್ಪಿಲ್ಲ. ಹಾಗಾಗಿ ವೀಣಾ ಮಾಡಿರುವ ಅಡುಗೆಯನ್ನೇ ಚೆಲುವಿ ಹಾಕಿಕೊಂಡಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಂತೋಷ್, ಇಲ್ಲಿ ಬಿಟ್ಟಿ ಹಾಕಲ್ಲ ಎಂದು ಚೆಲುವಿಯ ಕೈಯಲ್ಲಿದ್ದ ತಟ್ಟೆಯನ್ನು ಸಂತೋಷ್ ಕಸಿದುಕೊಂಡಿದ್ದಾನೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿಯ ಬಾಲ್ಯದ ಫೋಟೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.