ಬಿಗ್​ಬಾಸ್​​ ಐಶ್ವರ್ಯ ಸಿಂಧೋಗಿ ಲವರ್​ ಹೆಸ್ರು ಬಾಯಿ ಬಿಟ್ರಾ? ನಾಚಿ ನಾಚಿ ನೀರಾದ ನಟಿ ಹೇಳಿದ್ದೇನು?

Published : Feb 09, 2025, 07:29 PM ISTUpdated : Feb 10, 2025, 10:08 AM IST
ಬಿಗ್​ಬಾಸ್​​ ಐಶ್ವರ್ಯ ಸಿಂಧೋಗಿ ಲವರ್​ ಹೆಸ್ರು ಬಾಯಿ ಬಿಟ್ರಾ? ನಾಚಿ ನಾಚಿ ನೀರಾದ ನಟಿ ಹೇಳಿದ್ದೇನು?

ಸಾರಾಂಶ

ಬಿಗ್‌ಬಾಸ್‌ನಿಂದ ಹೊರಬಂದ ಐಶ್ವರ್ಯಾ ಸಿಂಧೋಗಿ, ಮಿಸ್ಟರ್ ನಿರಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಿಯಕರನ ಬಗ್ಗೆ ರಿವೀಲ್​ ಮಾಡಿದ್ದಾರೆ. ಭಾವುಕ ವಿದಾಯದ ಬಗ್ಗೆಯೂ ಮಾತನಾಡಿದ ಅವರು, ಬಿಗ್‌ಬಾಸ್‌ನಿಂದ ವಿಶಿಷ್ಟ ಗಿಫ್ಟ್ ಪಡೆದ ಸಂತಸ ವ್ಯಕ್ತಪಡಿಸಿದ್ದಾರೆ. ಮದುವೆ ಬಗ್ಗೆಯೂ ಸುಳಿವು ನೀಡಿದ್ದಾರೆ.

ಸಹಜವಾಗಿ ಮದುವೆಯಾಗದ  ನಟ-ನಟಿಯರಿಗೆ ಮೊದಲು ಎದುರಾಗುವ ಪ್ರಶ್ನೆಯೇ ಹುಡುಗ-ಹುಡುಗಿ ಹೇಗಿರಬೇಕು, ಈಗಾಗಲೇ ಯಾರಾದರೂ ಇದ್ದಾರಾ ಅಥವಾ ಮದುವೆ ಯಾವಾಗ ಎನ್ನುವ ಪ್ರಶ್ನೆ. ಅದೇ ರೀತೀ ಬಿಗ್​ಬಾಸ್​ನ ಬ್ಯೂಟಿ, ಐಶ್ವರ್ಯಾ ಸಿಂಧೋಗಿ ಅವರಿಗೂ ಪದೇ ಪದೇ ಇದೇ ಪ್ರಶ್ನೆ ಎದುರಾಗುತ್ತಿದೆ. ಅಷ್ಟಕ್ಕೂ, ಬಿಗ್​ಬಾಸ್​ ಕನ್ನಡ 11ನೇ ಸೀಸನ್​ನಲ್ಲಿ, ಉತ್ತಮ ರೀತಿಯಲ್ಲಿ ಭಾವಪೂರ್ಣವಾಗಿ ಅಷ್ಟೇ ಭಾವುಕ ಎನ್ನಿಸುವಂತೆ ಮನೆಯಿಂದ ಹೊರಕ್ಕೆ ಬಂದವರು  ಐಶ್ವರ್ಯಾ ಸಿಂಧೋಗಿ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಗುಡ್​ಬೈ ಹೇಳಿದ್ದ ದೃಶ್ಯ ಕೆಲ ಕಾಲ ಮನೆಯಲ್ಲಿ ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು.  ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. 'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು. 


ಇದೀಗ ಮಿಸ್ಟರ್​ ನಿರಿಕ್​ (ಕಿರಿಕ್​ ಕೀರ್ತಿ ಮತ್ತು ನಿರಂಜನ್​ ದೇಶಪಾಂಡೆ) ಯೂಟ್ಯೂಬ್​ ಚಾನೆಲ್​ಗೆ ಐಶ್ವರ್ಯಾ ಸಂದರ್ಶನ ಕೊಟ್ಟಿದ್ದು, ಅದರ ಪ್ರೊಮೋ ರಿಲೀಸ್​ ಆಗಿದೆ. ಇದರಲ್ಲಿ ಪ್ರಿಯಕರನ ಹೆಸರು ಹೇಳಿದ ಐಶ್ವರ್ಯಾ, ನಮ್ಮಲ್ಲೇ ಮೊದಲು ಎಂದು ಕೀರ್ತಿ ಹೇಳುವ ಮೂಲಕ, ಕುತೂಹಲದ ಕೆರಳಿಸಿದ್ದಾರೆ. ಇದೇ ವೇಳೆ ಐಶ್ವರ್ಯಾ ಅವರು, ಇವರು ಹೇಳಿದ್ದೆಲ್ಲಾ ಕೇಳಬೇಡಿ ಎನ್ನುತ್ತಲೇ ಪರಿಪರಿಯಾಗಿ ನಾಚಿ ನೀರಾಗಿದ್ದಾರೆ. ಶೀಘ್ರದಲ್ಲಿಯೇ ಇದರ ಸಂದರ್ಶನ ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಬಿಗ್​ಬಾಸ್​ ಐಶ್ವರ್ಯಾ ಸಿಂಧೋಗಿ: ಹುಡುಗನ ಡಿಟೇಲ್ಸ್​ ಹೇಳಿದ್ದು ಹೀಗೆ... 

ಈ ಹಿಂದೆ ಐಶ್ವರ್ಯಾಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿತ್ತು. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಐಶ್ವರ್ಯ ಅವರು ಮದುವೆಯ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, ನನಗೆ ಇನ್ನೂ ಮಾಡಬೇಕಾದದ್ದಷ್ಟು ಬಹಳ ಇದೆ. ಕರಿಯರ್​ನಲ್ಲಿ ಮುಂದೆ ಹೋಗಬೇಕು ಎಂದು ಇದೆ. ಸದ್ಯ ಮದುವೆ ಇಲ್ಲ. ಆದರೆ ಮದುವೆ ಮತ್ತು ಲವ್​ ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದನ್ನು ನಾವಾಗಿಯೇ ಮಾಡಿಕೊಂಡು ಹೋಗುವುದಲ್ಲ, ತಂತಾನೆಯಾಗಿಯೇ ಆಗಿಬಿಡುತ್ತದೆ. ಅದಕ್ಕಾಗಿ ಇಷ್ಟು ವರ್ಷ ಅಂತೆಲ್ಲಾ ನಾನು ಹೇಳುವುದಿಲ್ಲ. ಆದರೆ ಒಳ್ಳೆಯ ಹುಡುಗ, ತುಂಬಾ ಕೇರಿಂಗ್​ ಮಾಡುವವ ಇದ್ದರೆ ಮದುವೆಯಾಗುವೆ. ಅದಕ್ಕಿಂತ ಮುಖ್ಯವಾಗಿ ಗೌರವ ಕೊಡುವುದು ಆತನಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದರು. ಒಟ್ಟಿನಲ್ಲಿ ಐಶ್ವರ್ಯ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ ಅವರ ಅಭಿಮಾನಿಗಳು. 
 
ಕೆಲ ದಿನಗಳ ಹಿಂದೆ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಾಗ ಅವರು ಬಿಗ್​ಬಾಸ್​ನ ಬಗ್ಗೆ ತಿಳಿಸಿದ್ದರು. ಮನೆಯ ಒಳಗೆ ಇದ್ದಾ ಹೊರಗಡೆ ಏನು ನಡೆಯುತ್ತೆ ಎನ್ನುವುದು ಗೊತ್ತಿರುವುದಿಲ್ಲ. ಆದರೆ ಹೊರಗಡೆ ಬಂದು ನನ್ನ ಬಗೆಗಿನ ಕಮೆಂಟ್ಸ್​ ನೋಡಿ ಭಾವುಕಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ತುಂಬಾ ಪ್ರೀತಿ ಕೊಟ್ಟಿದ್ದೀರಿ ಎಂದು ಹೇಳಿದ್ದರು. ಇದರ ಜೊತೆಗೆ ಬಿಗ್​ಬಾಸ್​ ಅನ್ನು ತುಂಬಾ ಮಿಸ್​ ಮಾಡಿಕೊಳ್ತಿದ್ದೇನೆ. ಆದರೆ ಬಿಗ್​ಬಾಸ್​​ ಇತಿಹಾಸದಲ್ಲಿ ಯಾರಿಗೂ ಸಿಗದ ಗಿಫ್ಟ್​ ನನಗೆ ಸಿಕ್ಕಿದೆ ಎನ್ನುತ್ತಲೇ ಅದರ ಬಗ್ಗೆ ಐಶ್ವರ್ಯ ಮಾತನಾಡಿದ್ದರು. ಅದು ನನಗೆ ಸಿಕ್ಕಿರುವ ಭಾವುಕ ವಿದಾಯ.  ಬಿಗ್​ಬಾಸ್​ ಸ್ವತಃ ಮಾತನಾಡಿ  ತವರಿನಿಂದ ಹೋಗುವ ರೀತಿಯಲ್ಲಿ ಮನೆಮಗಳಿಗೆ ಹೇಳುವಂತೆ ಹೋಗಿ ಬಾ ಮಗಳೇ ಎಂದಿದ್ದಾರೆ. ಇದು ಯಾರಿಗೂ ಸಿಗದ ಗಿಫ್ಟ್​. ಇದು ನನಗೆ  ಖುಷಿ ಕೊಟ್ಟಿದೆ. ಬಿಗ್​ಬಾಸ್​ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲುವುದಿಲ್ಲ ಎಂದಿದ್ದರು. 

ಬಿಗ್​ಬಾಸ್​ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್​ ನನಗೆ ಸಿಕ್ಕಿದೆ: ಲೈವ್​ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!