
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಹಾಗೂ ಮೌನಾ ಗುಡ್ಡೇಮನೆ ಅವರು ನಟಿಸುತ್ತಿರುವ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೋಶಿಯಲ್ ಮೀಡಿಯಾ ಖ್ಯಾತಿಯ ಕಿಪಿ ಕೀರ್ತಿ ಅವರು ಆಂಕರ್ ಅನುಶ್ರೀ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಸಿನಿಮಾ ಆಡಿಯೋ ಬಿಡುಗಡೆ ಮಾತನಾಡುತ್ತಾ, ಅನುಶ್ರೀ ಕ್ಯಾರೆಕ್ಟರ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ನಾನು ಸಿನಿಮಾ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದರೂ ಈ ಸಂದರ್ಭದಲ್ಲಿ ಒಬ್ಬ ಆಂಕರ್ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಅವರೇ ನಮ್ಮ ಆಂಕರ್ ಅನುಶ್ರೀ ಅವರು. ಅನುಶ್ರೀ ಅವರು ನನ್ನನ್ನು ಇಷ್ಟಪಟ್ಟಿರಲಿಲ್ಲ ಎಂದರೆ ನನಗೆ ಕಾಮಿಡಿ ಕಿಲಾಡಿಯಂತಹ ದೊಡ್ಡ ವೇದಿಕೆ ಸಿಗುವುದಕ್ಕೆ ಆಗುತ್ತಿರಲಿಲ್ಲ. ಆದ್ದರಿಂದ ಅನುಶ್ರೀ ಮೇಡಂ ನನಗೆ ತುಂಬಾ ಇಷ್ಟ. ಏಕೆಂದರೆ ಅವರು ಕೂಡ ಅಪ್ಪು ಸರ್ ಅಭಿಮಾನಿ ಅಂತ ಮಾತ್ರವಲ್ಲ, ಅವರ ಕ್ಯಾರೆಕ್ಟರ್ ಕೂಡ ತುಂಬಾ ಚೆನ್ನಾಗಿದೆ. ಅನುಶ್ರೀ ಒಬ್ಬ ಹಂಬಲ್ ಪರ್ಸನ್ ಆಗಿದ್ದಾರೆ. ಅವರು ಕೂಡ ಅಪ್ಪು ಸರ್ ಥರಾನೇ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಹಾಗಾಗಿ, ಒಂದು ಸಿನಿಮಾ ಸಾಂಗ್ಸ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದರೂ ನಾನು ಅನುಶ್ರೀ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಸಿನಿಮಾದ ಹೀರೋ ಮಡೆನೂರು ಮನು ಅಣ್ಣನ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಕೊಡಗುನಿಂದ ಬೆಂಗಳೂರಿಗೆ ಬಂದಿದ್ದೀನಿ. ಆ ಸಾಂಗ್ಸ್‌ಗೆ ನಾನು ಕೂಡ ರೀಲ್ಸ್ ಮಾಡ್ತೀನಿ, ನೀವೂ ಕೂಡ ರೀಲ್ಸ್ ಮಾಡಿ. ಎಲ್ಲರೂ ಕನ್ನಡ ಸಿನಿಮಾವನ್ನು ನೋಡಿ. ನನಗೆ ಸರಿಯಾಗಿ ಕನ್ನಡ ಓದಲು ಬರೆಯಲು ಬರಲ್ಲ ಎಂದು ನೀವು ಹೇಳಿದರೂ, ನನಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆ ಮಾತನಾಡಲೂ ಬರುವುದಿಲ್ಲ. ಎಲ್ಲರೂ ಕನ್ನಡ ಸಿನಿಮಾವನ್ನು ನೋಡಿ ಹೊಸಬರನ್ನು ಬೆಳೆಸಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮನೆಯಲ್ಲಿ ತುಂಬಾ ಹಿಂಸೆ ಕೊಟ್ಟು ನನಗೆ ಹುಚ್ಚಿ ಪಟ್ಟ ಕೊಟ್ಟಿದ್ದಾರೆ: ಕಣ್ಣೀರಿಟ್ಟ ರೀಲ್ಸ್ ಕ್ವೀನ್ ಕಿಪಿ ಕೀರ್ತಿ
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಚಿತ್ರತಂಡದ ಮನು ಅಣ್ಣ ನನಗೆ ಕಾಮಿಡಿ ಕಿಲಾಡಿಗಳು ಶೋನಿಂದ ಪರಿಚಯ ಆಗಿದ್ದಾರೆ. ಅವರು ನನಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಕ್ಕೆ ಕೇಳಿದರು. ಜೊತೆಗೆ, ರಾಜ್ಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ಗಳ ರೀತಿ ಗುರುತಿಸಿಕೊಂಡಿರುವ ಎಲ್ಲರನ್ನೂ ಕರೆದು ನಟನೆಗೆ ಅವಕಾಶ ಕೊಟ್ಟಿದ್ದಾರೆ. ಆದರೆ, ನಾನು ಈ ಸಿನಿಮಾದಲ್ಲಿ ನಟನೆಗೆ ಬರಲು ಆಗಲಿಲ್ಲ. ನಾನು ನಟನೆಗೆ ಬರದಿದ್ದರೂ ಅವರು ನನ್ನನ್ನು ಮರೆಯದೇ ನೆನಪಿಟ್ಟುಕೊಂಡು ಸಿನಿಮಾದ ಸಾಂಗ್ಸ್ ರಿಲೀಸ್‌ಗೆ ಕರೆದಿದ್ದಾರೆ. ಕಾಮಿಡಿ ಕಿಲಾಡಿಯಿಂದ ರಾಜ್ಯಾದ್ಯಂತ ಜನರು ನನ್ನನ್ನು ಗುರುತಿಸಿದ್ದಾರೆ. ಒಂದು ಸಿನಿಮಾದಲ್ಲಿ ನನಗೆ ನಟನೆಗೆ ಕರೆಯುವಷ್ಟು ಪ್ರಸಿದ್ಧಿ ಸಿಕ್ಕಿದೆ ಎಂದರೆ ಅದು ಕಾಮಿಡಿ ಕಿಲಾಡಿಗಳು ವೇದಿಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ನನಗೆ ಅಪ್ಪು ಸರ್ ಅವರ ಆಶೀರ್ವಾದವೂ ಇದೆ ಎಂದು ಹೇಳುತ್ತೇನೆ.
ಇದನ್ನೂ ಓದಿ: ಬಿಗ್ ಬಾಸ್‌ಗೆ ಹೋಗ್ತಾರೆಂದ ವೈರಲ್ ಸ್ಟಾರ್‌ಗಳೆಲ್ಲಾ ಜೀ ಕನ್ನಡ ಕಾಮಿಡಿ ಕಿಲಾಡಿ ವೇದಿಕೆಗೆ ಬಂದ್ರು!
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ನಾಯಕ ಹಾಗೂ ಮೌನ ಗುಡ್ಡೆಮನೆ ಚಿತ್ರದ ನಾಯಕಿ ಆಗಿದ್ದಾರೆ. ಸಂತೋಷ್‌ಕುಮಾರ್ ಮತ್ತು ವಿದ್ಯಾ ನಿರ್ಮಾಣದ ಈ ಚಿತ್ರವನ್ನು ಕೆ. ರಾಮ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಯೋಗರಾಜ್ ಭಟ್ ಅವರು ಈ ಚಿತ್ರದ ಕಥೆ ಬರೆದಿದ್ದಾರೆ ಎನ್ನುವುದು ವಿಶೇಷವಾಗುದೆ. ಕುಲದಲ್ಲಿ ಕೀಳ್ಯಾವುದೋ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಇದೀಗ ಸಾಂಗ್ಸ್ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.