
ಬಿಗ್ ಬಾಸ್ ಸೀಸನ್ 11 ಮುಕ್ತಾಯಕ್ಕೆ ಕೆಲವೇ ದಿನಗಳಿವೆ. ಕೊನೆಯ ಕ್ಷಣದಲ್ಲಿ ನಾಮಿನೇಟ್ ಆಗುವುದು ಎಂದರೆ ಸ್ಪರ್ಧಿಗಳ ಜೊತೆಗೆ ಅವರ ಅಭಿಮಾನಿಗಳಿಗೂ ನೋವಿನ ಸಂಗತಿಯೇ. ಆದರೆ ಯಾರಾದರೂ ಎಲಿಮಿನೇಟ್ ಆಗಲೇ ಬೇಕು. ಅದು ಮೊದಲೇ ಫಿಕ್ಸ್ ಆಗಿರುತ್ತದೋ, ಆಮೇಲೆ ಫಿಕ್ಸ್ ಮಾಡಲಾಗುತ್ತದೆಯೋ ಎನ್ನುವುದು ಬೇರೆಯ ಮಾತು. ಆದರೆ ಸ್ಪರ್ಧೆ ಎಂದ ಮೇಲೆ ವಿಜೇತರು ಒಬ್ಬರೇ ಆಗಿರಬೇಕು ಎನ್ನುವ ಕಾರಣಕ್ಕೆ, ಎಲಿಮಿನೇಷನ್ ಪ್ರಕ್ರಿಯೆ ಸರ್ವೇ ಸಾಮಾನ್ಯ. ಅದೇ ರೀತಿ, ಟಫ್ ಕಾಂಪಿಟೇಟರ್ ಎಂದೇ ಅಂದುಕೊಂಡಿದ್ದ ಧನರಾಜ್ ಎಲಿಮಿನೇಟ್ ಆಗಿದ್ದಾರೆ. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಅವರು ಸೆಲೆಬ್ರಿಟಿಗಳೇ. ಅವರು ವಿನ್ ಆಗಲಿ, ಬಿಡಲಿ ಮುಂದಿನ ಬಿಗ್‌ಬಾಸ್ ಬರುವವರೆಗೆ ಅವರದ್ದೇ ಹವಾ ಜೋರಾಗಿ ಇರುತ್ತದೆ.
ಅದೇ ರೀತಿ ಇದೀಗ ಧನರಾಜ್ ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ತಮ್ಮ ಪಯಣದ ಕುರಿತು ಹೇಳಿಕೊಂಡಿದ್ದಾರೆ. ಖಾಸಗಿ ವಾಹನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಧನರಾಜ್, ಹನುಮಂತುವಿನ ಹೂಸಿನ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅಷ್ಟಕ್ಕೂ ಬಿಗ್‌ಬಾಸ್ 11ರಲ್ಲಿ ಹನುಮಂತುವಿನ ಹೂಸಿನ ವಿಷ್ಯ ಕಿಚ್ಚಿನ ಪಂಚಾಯಿತಿವರೆಗೆ ಬಂದಿದ್ದು ಬಿಗ್‌ಬಾಸ್ ವೀಕ್ಷಕರಿಗೆ ತಿಳಿದೇ ಇದೆ. ಹನುಮಂತನ ಹೂಸಿನ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದರು. ಅವರು ಧನರಾಜ್ ಅವರಿಗೆ ಹನುಮಂತನಲ್ಲಿ ಏನು ಲೆಕ್ಕ ಇಡುತ್ತಿದ್ದೀರಾ ಎಂದು ಕೇಳಿದಾಗ ಧನರಾಜ್ ಹೂಸು ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದರು. ಈ ವೇದಿಕೆ ಮೇಲೆ ಹೋಸ್ಟ್ ಆಗಿ, 11 ಸೀಸನ್‌ಗೆ ಒಬ್ಬವ್ಯಕ್ತಿಯ ಹೂಸಿನ ಬಗ್ಗೆ ಮಾತನಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಸುದೀಪ್ ತಮಾಷೆ ಮಾಡಿದ್ದರು. ಆ ಸಮಯದಲ್ಲಿ ಸ್ಪರ್ಧಿ ಭವ್ಯಾ, ಹನುಮಂತು 25ನೇ ಹೂಸಿಗೆ ಉದ್ಘಾಟನೆ ಬೇರೆ ಮಾಡಿಸಿದ್ದಾರೆ ಎಂದು ತಮಾಷೆ ಮಾಡಿದ್ದರು.
ಬಿಗ್‌ಬಾಸ್ 11ರ ವಿನ್ನರ್ ಘೋಷಿಸಿದ ವಿಕಿಪಿಡಿಯಾ: ಅಭಿಮಾನಿಗಳ ಸಂಭ್ರಮಾಚರಣೆ- ಆದದ್ದೇನು?
ಇದೀಗ ಅದೇ ವಿಷಯವನ್ನು ಧನರಾಜ್ ಹೇಳಿದ್ದಾರೆ. ಹನುಮಂತು ಸುಮಾರು 72 ಬಾರಿ ಹೂಸು ಬಿಟ್ಟಿದ್ದಾರೆ. ಯಾರಾದರೂ ಅಕ್ಕಪಕ್ಕದಲ್ಲಿ ಇದ್ದರೂ ಅವರು ಕೇರೇ ಮಾಡ್ತಿರಲಿಲ್ಲ. ಅದರಲ್ಲಿಯೂ ಯಾರಾದ್ರೂ ಜಗಳ ಮಾಡ್ತಿದ್ರೆ ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುತ್ತಲೇ ಹೂಸು ಬಿಟ್ಟುಬಿಡುತ್ತಿದ್ದರು. ಅಲ್ಲಿಗೆ ಅವರ ಜಗಳ ನಿಂತು ಹೋಗುತ್ತಿತ್ತು ಎಂದಿದ್ದಾರೆ. ಅದ್ಯಾವ ಕ್ಷಣದಲ್ಲಿ ಹೂಸು ಬರುತ್ತದೆಯೋ ಗೊತ್ತಿಲ್ಲ. ಅದ್ಯಾವುದೋ ಗ್ಯಾಪ್ನಲ್ಲಿ ಹೂಸು ಬಿಟ್ಟುಬಿಡ್ತಿದ್ರು. ಆದರೆ ಈ ವಿಷಯ ಕಿಚ್ಚನ ಪಂಚಾಯಿತಿವರೆಗೆ ಬರುತ್ತದೆ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
ಇಂಥ ಟ್ಯಾಲೆಂಟ್ ಅಂದ್ರೆ ಅವ್ರು ಸಕತ್ ಮಜಾ ಕೊಡ್ತಾ ಇದ್ರು ಎನ್ನುತ್ತಲೇ ಹನುಮಂತು ಹೀಗೆ ಮಾಡುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಹನುಮಂತ ಅವರಿಗೆ ಪಾಪ ಅಲ್ಲಿಯ ಊಟ ಸರಿಯಾಗಿ ಸೇರುತ್ತಾ ಇರಲಿಲ್ಲ. ತಿಂಡಿ ಇಲ್ಲದೆ ಗ್ಯಾಸ್ಟ್ರಿಕ್ ಆಗ್ತಿತ್ತು. ಅದಕ್ಕಾಗಿಯೇ ಹಾಗೆ ಆಗ್ತಿತ್ತು. ಆದರೆ ನಮಗೆಲ್ಲಾ ಸಿಕ್ಕಾಪಟ್ಟೆ ಎಂಟರ್ಟೇನ್ಮೆಂಟ್ ಸಿಕ್ತಿತ್ತು ಎಂದಿದ್ದಾರೆ.
ಎಲಿಮಿನೇಟಾಗಿ ಹೊರಬರ್ತಿದ್ದಂತೆಯೇ ನೇರಪ್ರಸಾರದಲ್ಲಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಬಗ್ಗೆ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.