ಚೈತ್ರಾ ಕುಂದಾಪುರ ಕೈಯಲ್ಲಿ ಇದೇನಿದು? ಪೊಟ್ಟಣ ಬಿಚ್ಚಿದಾಗ ಕಂಡದ್ದು...! ಇದಕ್ಕೆ ನೀವೇನ್​ ಹೇಳ್ತೀರಿ?

Published : Feb 13, 2025, 12:10 PM ISTUpdated : Feb 13, 2025, 01:30 PM IST
ಚೈತ್ರಾ ಕುಂದಾಪುರ ಕೈಯಲ್ಲಿ ಇದೇನಿದು? ಪೊಟ್ಟಣ ಬಿಚ್ಚಿದಾಗ ಕಂಡದ್ದು...! ಇದಕ್ಕೆ ನೀವೇನ್​ ಹೇಳ್ತೀರಿ?

ಸಾರಾಂಶ

ಬಿಗ್‌ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ, ತಮ್ಮ ವಿಶಿಷ್ಟ ಉಡುಗೆ ತೊಡುಗೆ ಮತ್ತು ಭಾಷಣದಿಂದಾಗಿ ಸುದ್ದಿಯಲ್ಲಿದ್ದಾರೆ. ಮೈತುಂಬಾ ಬಟ್ಟೆ ತೊಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವ ಚೈತ್ರಾ, ಮಂಗಳೂರು ಗೋಳಿಬಜೆಯ ವಿಡಿಯೋದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಭಾವಿ ಪತಿಯ ಸ್ವರೂಪವನ್ನೂ ವಿವರಿಸಿದ್ದಾರೆ.

ಫೈರ್​ ಬ್ರ್ಯಾಂಡ್​ ಭಾಷಣಗಾರ್ತಿ ಚೈತ್ರಾ  ಕುಂದಾಪುರ, ಬಿಗ್​ಬಾಸ್​​ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ  ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಚೈತ್ರಾ . ಇವರ ಬಟ್ಟೆಯ ಬಗ್ಗೆಯೂ ಬಿಗ್​ಬಾಸ್​ನಲ್ಲಿ ಇದಾಗಲೇ ಸಾಕಷ್ಟು ಚರ್ಚೆಯಾಗಿದೆ. ಇಂತಿಪ್ಪ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಮೊದಲಿಗಿಂತಲೂ ಹೆಚ್ಚು ಸುದ್ದಿಯಾಗುತ್ತಾರೆ. 

ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾದಲ್ಲಿಯೂ ಚೈತ್ರಾ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ತಮ್ಮ ಕೈಯಲ್ಲಿ ಪೊಟ್ಟಣವೊಂದನ್ನು ಹಿಡಿದು ಬಂದು ವಿಡಿಯೋ ಮಾಡಿದ್ದಾರೆ. ಇದು ನನ್ನ ತುಂಬಾ ಫೆವರೆಟ್​. ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸುತ್ತಲೇ, ಮಂಗಳೂರು ಕಡೆಯ ಪ್ರಸಿದ್ಧ ಗೋಳಿಬಜೆಯನ್ನು ತೋರಿಸಿದ್ದಾರೆ. ನಿಧಾನವಾಗಿ ಪೊಟ್ಟಣ ಬಿಚ್ಚುತ್ತ ಅದನ್ನು ತೋರಿಸುತ್ತಲೇ ಎಲ್ಲರಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿರುವ ಚೈತ್ರಾ ಅವರು, ಕೊನೆಗೆ ಗೋಳಿಬಚ್ಚಿಯನ್ನು ತೋರಿಸಿದ್ದಾರೆ. ಇದಕ್ಕೆ ನಿಮ್ಮ ಕಡೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದು, ಹಲವರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಕೆಲವರು ತಮಾಷೆಗೆ ಚಿಕನ್​ ಕಬಾಬ್​ ಎಂದೆಲ್ಲಾ ಹೇಳಿದ್ದಾರೆ.

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ

ಒಟ್ಟಿನಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್​ಬಾಸ್​ನಿಂದ ದಿನದಿಂದ ದಿನಕ್ಕೆ ಇನ್ನಷ್ಟು ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ಬಟ್ಟೆಗಳ ಆಯ್ಕೆಗಳ ಬಗ್ಗೆ ಸೂಕ್ಷ್ಮವಾಗಿ ಮಾತನಾಡಿದ್ದರು. ನೋಡಿ, ಯಾರು, ಯಾವುದೇ ರೀತಿಯ ಬಟ್ಟೆ ಹಾಕಬಹುದು. ಅದು ಅವರ ವೈಯಕ್ತಿಯ ವಿಷಯ. ಆದರೆ ನಾನು ಹೇಳುವುದು ಏನೆಂದರೆ, ನೀವು ಹಾಕುವ ಬಟ್ಟೆ ನಿಮಗೆ ಹಾಕಿದ ಮೇಲೆ ಕನ್​ಫರ್ಟ್​ ಎನ್ನಿಸಬೇಕು ಅಷ್ಟೆ. ನನಗೆ  ಮೈತುಂಬಾ ಬಟ್ಟೆ ಇದ್ದರೆ ಕನ್​ಫರ್ಟ್​ ಎನ್ನಿಸುತ್ತದೆ, ಎಲ್ಲಿಯೂ ಮುಜುಗರ ಎನ್ನಿಸುವುದಿಲ್ಲ. ಆದರೆ ನಾನು ಹಲವರನ್ನು  ನೋಡಿದ್ದೇನೆ. ಅರೆಬರೆ ಡ್ರೆಸ್ ಹಾಕಿಕೊಳ್ತಾರೆ, ಅದು ಅನ್​ಕಫರ್ಟ್​ ಎನಿಸಿ ಮುಚ್ಚಿಕೊಳ್ಳಲು ಏನೇನೋ ಸರ್ಕಸ್​  ಮಾಡ್ತಾರೆ. ಮಿಡಿ, ಮಿನಿ ಹಾಕಿಕೊಳ್ತಾರೆ, ಹಾಕಿಕೊಂಡ  ಮೇಲೆ ದಿಂಬಿನಿಂದ ಮುಚ್ಚಿಕೊಳ್ತಾರೆ. ಅದೆಲ್ಲಾ ಯಾಕೆ, ನಿಮಗೆ ಯಾವ ಡ್ರೆಸ್​ ಮುಜುಗರ ಎನ್ನಿಸ್ತದೆಯೋ ಅದನ್ನು ಹಾಕಿಕೊಳ್ಳಬೇಡಿ ಎನ್ನುವುದು ನನ್ನ ಅನಿಸಿಕೆ. ಯಾವುದೇ ಡ್ರೆಸ್​ ಹಾಕಿ, ಅದು ಹಾಕಿದ ಮೇಲೆ ನಿಮಗೇ ಮುಜುಗರ ಅನ್ನಿಸಬಾರದು ಎಂದಿದ್ದರು. 

ಇನ್ನು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಚೈತ್ರಾ ಅವರು, ಈ  ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದರು. ತಲೆ ಕೂದಲಿನಿಂದ ಶುರು ಮಾಡಿ, ಎಐನಲ್ಲಿ ನಾನು ಚಿತ್ರ  ರಚಿಸುತ್ತೇನೆ ಎಂದು ನಿರಂಜನ್​ ಹೇಳಿದ್ದರಿಂದ ಚೈತ್ರಾ ಅವರು, ತಮ್ಮ ಭಾವಿ ಪತಿಯ ಮುಖಚೆಹರೆ ಹೇಗಿರಬೇಕು ಎಂದು ಹೇಳಿದ್ದರು. ಅದರಲ್ಲಿ ಅವರು ಹೇಳಿದ್ದು ಇಷ್ಟು: ಸಿಲ್ಕಿ ಹೇರ್​ ಇರಬೇಕು,   ಉದ್ದ ಕೂದಲು ಬೇಕು, ಅಷ್ಟು  ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್​ ಆಗಿರಬೇಕು ಎಂದಿದ್ದಾರೆ.  ಇನ್ನು ಹಣೆ ಅಗಲ ಬೇಕು, ಹಣೆಯಲ್ಲಿ ವಿಭೂತಿ, ಕುಂಕುಮ ಇಟ್ಟಿರಬೇಕು.  ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದಾರೆ. ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ ಇರಬೇಕು,  ಹುಬ್ಬು ದಪ್ಪ ಇರಬೇಕು ಎಂದಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಚೈತ್ರಾ ಅವರು, ನಾನು ಯಾವಾಗಲೂ ದೊಡ್ಡ ಕಣ್ಣು ಬಿಡ್ತೇನಲ್ಲ, ಅದಕ್ಕೇ ಅವರ ಕಣ್ಣು ಚಿಕ್ಕದು ಇರಬೇಕು ಎಂದಿದ್ದರು. 

ಸಿನಿಮಾಕ್ಕೆ ಚೈತ್ರಾ ಕುಂದಾಪುರ ಎಂಟ್ರಿ? ಶಿವಣ್ಣ ಜೊತೆ ಫಿಲ್ಮ್​ ಹೆಸರೂ ಘೋಷಣೆ! ಇಲ್ಲಿದೆ ನೋಡಿ ಡಿಟೇಲ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?
Bigg Boss ಗಿಲ್ಲಿ ನಟನಿಗೆ ಶಾಕ್​: ಒಂದ್​ ಸಲ ನೋಡ್ತೀನಿ, 2 ಸಲ ನೋಡ್ತೀನಿ ಆಮೇಲೆ ನನ್​ ಭಾಷೆ ಬರತ್ತೆ!