
ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಮತ್ತು ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಗೌಡ ಸಂಬಂಧಿಕರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇವರಿಬ್ಬರು ಅಕ್ಕ- ತಂಗಿನಾ? ಹೇಗೆ ಅನ್ನೋ ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿತ್ತು. ಅಲ್ಲದೆ ಭವ್ಯಾ ಫಿನಾಲೆ ವಾರಕ್ಕೆ ಕಾಲಿಟ್ಟಾಗ ಜಗದೀಶ್ ಮತ್ತು ಅಮೂಲ್ಯ ವಿಡಿಯೋ ಮೂಲಕ ಜನರಿಗೆ ವೋಟ್ ಹಾಕಲು ಮನವಿ ಮಾಡಿದ್ದರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಗೆ ಅಮೂಲ್ಯ ಪರಿಚಯ ಮತ್ತು ಅವರ ಫ್ಯಾಮಿಲಿಯಿಂದ ಸಿಗುತ್ತಿರುವ ಸಪೋರ್ಟ್ ಬಗ್ಗೆ ಭವ್ಯಾ ಹಂಚಿಕೊಂಡಿದ್ದಾರೆ.
ಜಗದೀಶ್ ಅಣ್ಣ ನನಗೆ ದೊಡ್ಡಪ್ಪನ ಮಗ ಆಗಬೇಕು ಅವರಿಗೆ ಅಮೂಲ್ಯ ಅವರನ್ನು ಕೊಟ್ಟಿರುವುದು. ಅಮೂಲ್ಯ ಅವರು ನನಗೆ ಅತ್ತಿಗೆ ಆಗಬೇಕು. ಅಮೂಲ್ಯ ಅಕ್ಕ ತುಂಬಾ ಸಪೋರ್ಟಿವ್. ಏನೇ ಡೌಟ್ ಇದ್ದರೂ ಕರೆ ಮಾಡಿದಾಗ ಒಂದು ನಿಮಿಷವೂ ಕಡ ಮಾಡದೆ ಪ್ರತಿಕ್ರಿಯೆ ನೀಡುತ್ತಾರೆ. ಯಾವ ರೀತಿ ಮಾಡಬೇಕು ಯಾವ ರೀತಿ ಮಾಡಿದರೆ ಒಳ್ಳೆಯದು ಎಂದು ನನಗೆ ಸಲಹೆ ನೀಡುತ್ತಾರೆ. ಆರಂಭದಲ್ಲಿ ನನಗೆ ತುಂಬಾನೇ ಭಯ ಇತ್ತು ಹೇಗ್ ಮಾತನಾಡುತ್ತಾರೆ ಹೇಗ್ ಮಾತನಾಡಿಸಬೇಕು ಎಂದು ಆದರೆ ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಮೊದಲ ಸಲ ಮಾತನಾಡಿದಾಗಲೇ ಅಭಿಪ್ರಾಯ ಬದಲಾಗಿತ್ತು. ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಅಂತ ಖುಷಿ ಕೂಡ ಆಯ್ತು.ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ಸಲ ಮನೆಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಅಣ್ಣ ಮತ್ತು ಅತ್ತೆಗೆ ನನಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ. ನಿಮ್ಮ ಮನೆಗೆ ನೀವೇ ಗಂಡು ಮಕ್ಕಳು ಎಂದು ಹೇಳುತ್ತಿರುತ್ತಾರೆ ಎಂದು ಖಾಸಗಿ ಟಿವಿ ಸಂದರ್ಶನಲ್ಲಿ ಭವ್ಯಾ ಗೌಡ ಮಾತನಾಡಿದ್ದಾರೆ.
ದೂರ ಆಗಿರೋದು ಕೂಡ ಒಂದು ಕಾರಣಕ್ಕೆ; ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಅನುಪಮಾ ಗೌಡ ಹೇಳಿಕೆ
ಅಮೂಲ್ಯ ಅಕ್ಕ ಅವರ ಗಂಡು ಮಕ್ಕಳು ಅಥರ್ವ್ ಮತ್ತು ಆಧವ್ ತುಂಬಾನೇ ಕ್ಯೂಟ್. ಹಲವು ಸಲ ಅವರ ಮನೆಗೆ ಹೋಗಿದ್ದೀನಿ. ಹೋಗಿ ಅವರೊಟ್ಟಿಗೆ ಮಾತನಾಡಿಸಿಕೊಂಡು ಆಟವಾಡಿಕೊಂಡು ಬರುತ್ತೀನಿ....ಅಡ್ಜಸ್ಟ್ ಆಗಲು ಸಮಯ ತೆಗೆದುಕೊಳ್ಳುತ್ತಾರೆ ಆಮೇಲೆ ಚೆನ್ನಾಗಿ ಆಟವಾಡಿಸಿಕೊಂಡು ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನೇ ಕಾಲ್ ಮಾಡಿ ಮಾತನಾಡಬೇಕು ಅಂದುಕೊಂಡಿರುವೆ. ಈಗ ಇಂಟರ್ವ್ಯೂಗಳಲ್ಲಿ ಬ್ಯುಸಿಯಾಗಿರುವುದಕ್ಕೆ ಆಗುತ್ತಿಲ್ಲ....ಫ್ರೀ ಆಗುತ್ತಿದ್ದಂತೆ ಕಾಲ್ ಮಾಡುತ್ತೀನಿ ಎಂದು ಭವ್ಯಾ ಗೌಡ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.