ಬಿಗ್ ಬಾಸ್ 11 ಮುಗಿದ ಮೇಲೆ ಯುವನ್ ಎಂಬ ಬಾಲಕ ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾನೆ. ಅದಕ್ಕೆ ಕಾರಣ, ಕಿಚ್ಚ ಸುದೀಪ್ ಅವರಿಗೆ ನೀಡಿರುವ ಗಿಫ್ಟ್ ಹಾಗೂ ಮೆಚ್ಚುಗೆ. ಅಭಿನಯ ಚಕ್ರವರ್ತಿಯಿಂದ ಉಡುಗೊರೆಪಡೆದು ಖುಷಿಯಾಗಿರುವ ಬಾಲಕ ಏನು ಹೇಳ್ತಾನೆ ಗೊತ್ತಾ?
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಮುಕ್ತಾಯಗೊಂಡಿದೆ. ಹನುಮಂತು ವಿನ್ನರ್ ಆಗಿ ಹೊರಬಂದಿದ್ದಾರೆ. ಬಿಗ್ ಬಾಸ್ ಮುಗಿದ್ರೂ ಬಿಗ್ ಬಾಸ್ ಬಗ್ಗೆ ಚರ್ಚೆ ನಡೀತಾನೆ ಇದೆ. ಒಂದ್ಕಡೆ ವಿನ್ನರ್ ಹನುಮಂತು (Winner Hanumantu) ಹಾಗೂ ಇತರ ಸ್ಪರ್ಧಿಗಳ ಬಗ್ಗೆ ಚರ್ಚೆಯಾಗ್ತಿದ್ದರೆ ಇನ್ನೊಂದು ಕಡೆ ಬಾಲಕ ಯುವಾನ್ ಸುದ್ದಿಯಲ್ಲಿದ್ದಾನೆ. ಯುವಾನ್ ಡಾನ್ಸ್ ಮೆಚ್ಚಿಕೊಂಡು ಕಿಚ್ಚ ಸುದೀಪ್ (Kiccha Sudeep) ನೀಡಿದ ಉಡುಗೊರೆ ನೋಡಿ ವೀಕ್ಷಕರು ನೀನೇ ಅದೃಷ್ಟವಂತ ಎನ್ನುತ್ತಿದ್ದಾರೆ. ಯುವನ್ ಕೂಡ ಸುದೀಪ್ ನೀಡಿದ ಬ್ರೇಸ್ ಲೇಟ್ (Brace Late) ಏನು ಮಾಡ್ತೇನೆ ಎಂಬುದನ್ನು ಹೇಳಿದ್ದಾರೆ.
ಬಿಗ್ ಬಾಸ್ಶೋವನ್ನು ಅತ್ಯದ್ಭುತವಾಗಿ ನಡೆಸಿಕೊಂಡು ಬರ್ತಿರುವ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಉಡುಗೊರೆ ನೀಡಿತ್ತು. ಅವರ ಅಮ್ಮನನ್ನು ವೇದಿಕೆ ಮೇಲೆ ತಂದಿತ್ತು ಇಡೀ ತಂಡ. ಸುದೀಪ್ ಬಾಲ್ಯವನ್ನು ನೆನಪಿಸಿ, ಯೋಗರಾಜ್ ಭಟ್ ಬರೆದಿರುವ ಹಾಗೂ ವಾಸುಕಿ ವೈಭವ್ಯ ಹಾಡಿರುವ, ಸುದೀಪ್ ಮಗಳು ಸಾನ್ವಿ ದ್ವನಿ ನೀಡಿರುವ ಹಾಡಿಗೆ ಪುಟ್ಟ ಬಾಲಕ ಯುವನ್ ನೃತ್ಯ ಮಾಡಿದ್ದ. ಇದನ್ನು ನೋಡಿ ಕಿಚ್ಚ ಸುದೀಪ್ ಸೇರಿದಂತೆ ಎಲ್ಲರೂ ಭಾವುಕರಾಗಿದ್ರು. ಯುವನ್ ಡಾನ್ಸ್ ಮೆಚ್ಚಿಕೊಂಡಿದ್ದ ಸುದೀಪ್ ಅವರನ್ನು ಎತ್ತಿಕೊಂಡು ಮುತ್ತಿಟ್ಟಿದ್ದರು. ಅವರಿಗೆ ಹರಸಿ, ತಮ್ಮ ಕೈನಲ್ಲಿದ್ದ ಬ್ರೇಸ್ ಲೇಟ್ ತೆಗೆದುಕೊಟ್ಟಿದ್ದರು. ವೇದಿಕೆ ಮೇಲೆ ಅಧ್ಬುತವಾಗಿ ಡಾನ್ಸ್ ಮಾಡಿದ್ದ ಬಾಲಕ ಯುವನ್ ಈಗ ಎಲ್ಲರ ಅಚ್ಚುಮೆಚ್ಚು.
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಡಾನ್ಸ್ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಯುವನ್ ಖುಷಿಯಾಗಿದ್ದಾನೆ. ಬ್ರೇಸ್ ಲೇಟ್ ಕೊಟ್ಟಿದ್ದಕ್ಕೆ ಸುದೀಪ್ ಅವರಿಗೆ ಧನ್ಯವಾದ ಹೇಳಿರುವ ಯುವನ್, ಅದನ್ನು ಫ್ರೇಮ್ ಕಟ್ಟಿಸಿ ಜೀವನಪೂರ್ತಿ ಜೊತೆಗೆ ಇಟ್ಟುಕೊಳ್ಳೋದಾಗಿ ಹೇಳಿದ್ದಾನೆ. ಅವರ ಮುಂದೆ ಡಾನ್ಸ್ ಮಾಡಿದ್ದು ನನಗೆ ಸಂತೋಷ ತಂದಿದೆ. ಅವರು ಮುತ್ತು ಕೊಟ್ಟಿದ್ದು, ಬ್ರೇಸ್ ಲೇಟ್ ನೀಡಿದ್ದು ಮತ್ತಷ್ಟು ಖುಷಿ ನೀಡಿದೆ ಎಂದು ಯುವನ್ ಹೇಳಿದ್ದಾನೆ. ಯುವನ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಸುದೀಪ್ ಸರ್ ಬಾಲ್ಯ ನೆನೆಪಿಸಿ ಡಾನ್ಸ್ ಮಾಡೋದೇ ಅದೃಷ್ಟ. ಅದೂ ಸುದೀಪ್ ಮುಂದೆ ಯುವನ್ ಡಾನ್ಸ್ ಮಾಡಿದ್ದಾನೆ. ಇದಾದ್ಮೇಲೆ ಸುದೀಪ್ ಯುವನ್ ಹೊಗಳಿದ್ದಲ್ಲದೆ, ಎತ್ತಿಕೊಂಡು ತಮ್ಮ ಕೈನಲ್ಲಿದ್ದ ಬ್ರೇಸ್ ಲೇಟ್ ನೀಡಿದ್ದಾರೆ. ಸುದೀಪ್ ರಿಂದ ಈ ಗಿಫ್ಟ್ ಪಡೆಯಲು ಯುವಾನ್ ಅದೃಷ್ಟ ಮಾಡಿದ್ದ. ಎಲ್ಲರಿಗೂ ಈ ಭಾಗ್ಯ ಸಿಗೋದಿಲ್ಲ. ಗುಡ್ ಲಕ್ ಯುವನ್ ಅಂತ ಜನರು, ಯುವನ್ ಹರಸಿದ್ದಾರೆ. ಯುವಾನ್ ಡಾನ್ಸ್ ಮೆಚ್ಚಿರುವ ವೀಕ್ಷಕರು, ಹೀಗೆ ಡಾನ್ಸ್ ಮುಂದುವರೆಸುವಂತೆ ಸಲಹೆ ನೀಡಿದ್ದಾರೆ.
ನಟ ದರ್ಶನ್-ಕಿಚ್ಚ ಸುದೀಪ್ ವಿಷಯ; ʼತಿರುಪತಿಯಲ್ಲಿ ಗುಂಡು ಹೊಡೆಸ್ಕೊಳ್ತೀನಿʼ ಎಂದ Bigg Boss ರಜತ್
ಯುವಾನ್ ಡಾನ್ಸ್ ಕರ್ನಾಟಕ ಡಾನ್ಸ್ 7ರಲ್ಲಿ ಮೊದಲು ಕಾಣಿಸಿಕೊಂಡಿದ್ದ. ಅವನು ತುಮಕೂರು ಜಿಲ್ಲೆಯ ಬಾಲ ಪ್ರತಿಭೆ. ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ನಟ ಶಿವರಾಜ್ ಕುಮಾರ್ ಮೆಚ್ಚುಗೆ ಗಳಿಸಿದ್ದ ಯುವನ್ ಗೆ ಈಗ ಸುದೀಪ್ ಮೆಚ್ಚುಗೆ ಸಿಕ್ಕಿದೆ. ಬಿಗ್ ಬಾಸ್ ಶೋ ನಂತ್ರ ಯುವನ್ ಹೆಚ್ಚು ಪ್ರಸಿದ್ಧಿಗೆ ಬಂದಿದ್ದಾನೆ. ಸೋಶಿಯಲ್ ಮೀಡಿಯಾಗಳು ಹಾಗೂ ಮಾಧ್ಯಮಗಳು ಯುವನ್ ಮನೆ ಬಾಗಿಲಿಗೆ ಹೋಗ್ತಿವೆ. ಸೂಪರ್ ಡಾನ್ಸರ್ ಹಾಗೂ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಗೆ ಯುವನ್ ಆಡಿಷನ್ ನೀಡಿದ್ದು, ರಿಸಲ್ಟ್ ಗಾಗಿ ಕಾಯ್ತಿದ್ದಾನೆ. ಮುಂದೆ ನಟ ಹಾಗೂ ಡಿಸಿ ಆಗ್ಬೇಕು ಎನ್ನುವ ಆಸೆ ಆತನಿಗಿದೆ. ಸುದೀಪ್, ಯುವನ್ ಗೆ ನೀಡಿರುವ ಪ್ಲಾಟಿನಂ ಬ್ರೇಸ್ ಲೇಟ್ 30 ಲಕ್ಷದ್ದು ಎನ್ನಲಾಗಿದೆ.