ಬಿಗ್‌ ಬಾಸ್‌ನಲ್ಲಿ ಪ್ರೀತಿಸಿದ್ದ ಈ ಜೋಡಿ ಈಗ ಡಿವೋರ್ಸ್‌ ತಗೋಳ್ತಿದ್ಯಾ? ಮೌನ ಮುರಿದ ʼಗೋಲ್ಡನ್‌ ಸ್ಟಾರ್‌ʼ ಗಣೇಶ್‌ ನಾಯಕಿ!

Published : Mar 07, 2025, 09:34 PM ISTUpdated : Mar 07, 2025, 09:57 PM IST
ಬಿಗ್‌ ಬಾಸ್‌ನಲ್ಲಿ ಪ್ರೀತಿಸಿದ್ದ ಈ ಜೋಡಿ ಈಗ ಡಿವೋರ್ಸ್‌ ತಗೋಳ್ತಿದ್ಯಾ? ಮೌನ ಮುರಿದ ʼಗೋಲ್ಡನ್‌ ಸ್ಟಾರ್‌ʼ ಗಣೇಶ್‌ ನಾಯಕಿ!

ಸಾರಾಂಶ

Bigg Boss 9 yuvika chaudhary and prince narula : ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ ಸ್ಪರ್ಧಿಗಳಲ್ಲಿ ಕೆಲವರಿಗೆ ಅಲ್ಲೇ ಲವ್‌ ಆಗುವುದು, ಅಲ್ಲೇ ಬ್ರೇಕಪ್‌ ಆಗುವುದು, ಇನ್ನೂ ಕೆಲವು ಮದುವೆವರೆಗೂ ಹೋಗಿ ಮುರಿಯುವುದು. ಈಗ ಈ ಶೋನಲ್ಲಿ ಭಾಗವಹಿಸಿ ಮದುವೆಯಾಗಿ ಏಳು ವರ್ಷಗಳ ಬಳಿಕ ಜೋಡಿಯೊಂದು ಡಿವೋರ್ಸ್‌ ಪಡೆಯಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಆ ʼಬಿಗ್‌ ಬಾಸ್‌ʼ ಸ್ಪರ್ಧಿಯೇ ಉತ್ತರ ನೀಡಿದ್ದಾರೆ. 

ಕನ್ನಡ ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಈಗಾಗಲೇ ಡಿವೋರ್ಸ್‌ ಪಡೆದುಕೊಂಡಿದೆ. ಹಿಂದಿಯಲ್ಲಂತೂ ಸಾಕಷ್ಟು ಜೋಡಿಗಳು ಶೋವೊಳಗಡೆ ಪ್ರೀತಿ ಮಾಡಿ, ಆಮೇಲೆ ದೂರ ಆದ ಉದಾಹರಣೆಯೂ ಇದೆ. ಈಗ ಇನ್ನೊಂದು ಜೋಡಿ ಬಿಗ್‌ ಬಾಸ್‌ ಮನೆಯಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸಿ ಈಗ ಡಿವೋರ್ಸ್‌ ಪಡೆಯಲಿದೆಯಾ ಎಂಬ ಅನುಮಾನ ಶುರು ಆಗಿತ್ತು. ಅದಕ್ಕೀಗ ನಟಿ, ಬಿಗ್‌ ಬಾಸ್‌ ಸ್ಪರ್ಧಿ ಉತ್ತರ ನೀಡಿದ್ದಾರೆ. 

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ! 
ʼಗೋಲ್ಡನ್‌ ಸ್ಟಾರ್‌ʼ ಗಣೇಶ್‌ ನಟನೆಯ ʼಮದುವೆ ಮನೆʼ ಸಿನಿಮಾದ ನಾಯಕಿ ಯುವಿಕಾ ಚೌಧರಿ ಅವರು ʼಬಿಗ್‌ ಬಾಸ್‌ 9ʼ ಶೋನಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ಪ್ರಿನ್ಸ್‌ ನರೂಲಾ ಕೂಡ ಭಾಗವಹಿಸಿದ್ದರು. ಈ ಜೋಡಿ ಮಧ್ಯೆ ಸ್ನೇಹ ಶುರು ಆಗಿ, ಪ್ರೀತಿ ಉಂಟಾಗಿತ್ತು. ಆ ನಂತರ ಇವರಿಬ್ಬರು 2018ರಲ್ಲಿ ಕುಟುಂಬದ ಸಾಕ್ಷಿಯಾಗಿ ಮದುವೆಯಾದರು. ಮದುವೆಯಾಗಿ ಆರು ವರ್ಷಗಳ ನಂತರದಲ್ಲಿ ಇವರಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಹೇಳಿಕೊಂಡಿದ್ದರು. ಕಳೆದ ವರ್ಷ ಯುವಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಅಂಬಾನಿ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಛಾಯಾಗ್ರಾಹಕ ಇವರೇ, ಸಂಭಾವನೆ ಪಡೆದಿದ್ದೆಷ್ಟು?

ತಾಯಿಯಾಗ್ತಿದ್ದಂತೆ ಡಿವೋರ್ಸ್‌ ತಗೊಂಡ್ರಾ? 
ಮಗು ಹುಟ್ಟಿದ ಬಳಿಕ ಯುವಿಕಾ ಅವರು ತಾಯಿ ಮನೆಯಲ್ಲಿ ನೆಲೆಸಿದ್ದಾರೆ, ಇವರಿಬ್ಬರು ಡಿವೋರ್ಸ್‌ ತಗೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಆರಂಭದಲ್ಲಿ ಯುವಿಕಾ ಉತ್ತರ ಕೊಟ್ಟಿರಲಿಲ್ಲ. ಈಗ ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಯುವಿಕಾ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹೀರೋಯಿನ್‌!

ಡಿವೋರ್ಸ್‌ ಗಾಸಿಪ್‌ ಬಗ್ಗೆ ಏನಂದ್ರು? 
“ಪಾಲಕರಾಗಿರೋದು ನನಗೂ, ಪ್ರಿನ್ಸ್‌ಗೂ ತುಂಬ ಹೊಸತು. ನಾನು ಈ ಗಾಸಿಪ್‌ಗಳಿಗೆ ಬೇಕು ಅಂತಲೇ ರಿಯಾಕ್ಟ್‌ ಮಾಡಿರಲಿಲ್ಲ. ಪ್ರಿನ್ಸ್‌ ತುಂಬ ಎಮೋಶನಲ್‌ ವ್ಯಕ್ತಿ. ಈ ಥರದ ಗಾಸಿಪ್‌ ಅವನ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೊಮ್ಮೆ ಇಂಥ ವಿಷಯಗಳಿಗೆ ಪ್ರತಿಕ್ರಿಯೆ ಕೊಡೋದು ಬೇಡ ಅಂತಲೇ ಅನಿಸುತ್ತದೆ. ಪ್ರಿನ್ಸ್ ಬ್ಯುಸಿ‌ ಇದ್ದಾನೆ ಅಂದರೆ ಅವನಿಗೆ ಕೆಲಸ ಇರುತ್ತದೆ ಎಂದರ್ಥ. ಆಮೇಲೆ ಕೆಲವರು ನಾನು ತಾಯಿ ಮನೆಯಲ್ಲಿ ಇರೋದಿಕ್ಕೆ ಬೇರೆ ಬೇರೆ ಆದೆವು ಅಂತ ಭಾವಿಸಿದರು. ನಮ್ಮ ಮನೆಯಲ್ಲಿ ಕನ್‌ಸ್ಟ್ರಕ್ಷನ್‌ ಕೆಲಸ ನಡೆಯುತ್ತಿರೋದಿಕ್ಕೆ ನಾನು ತಾಯಿ ಮನೆಯಲ್ಲಿದ್ದೆ ಅಷ್ಟೇ. ನನಗೆ ಎಲ್ಲದಕ್ಕೂ ರಿಯಾಕ್ಟ್‌ ಮಾಡಬೇಕು ಅಂತ ಅನಿಸೋದಿಲ್ಲ” ಎಂದು ಯುವಿಕಾ ಚೌಧರಿ ಹೇಳಿದ್ದಾರೆ. 

ಪರಿಸ್ಥಿತಿ ಇನ್ನಷ್ಟು ಹತ್ತಿರ ಮಾಡುವುದು! 
“ಜೀವನದಲ್ಲಿ ಪ್ರತಿ ಹಂತವೂ ಡಿಫರೆಂಟ್‌ ಆಗಿರುವುದು. ಸ್ನೇಹಿತರಾಗಿದ್ದಾಗ ಡೇಟ್‌ ಮಾಡುವುದು, ಮದುವೆಯಾಗುವುದು, ಈಗ ಪಾಲಕರಾಗಿರುವುದು ಕೂಡ ತುಂಬ ಡಿಫರೆಂಟ್. ‌ನಾವು ಫನ್‌ ದಿನಗಳನ್ನು ನೋಡಿದ್ದೇವೆ, ಕಷ್ಟದ ದಿನಗಳನ್ನು ಎದುರಿಸಿದ್ದೇವೆ. ಈ ಎರಡೂ ಸಂದರ್ಭಗಳು ನಮ್ಮನ್ನು ಇನ್ನಷ್ಟು ಹತ್ತಿರ ಮಾಡುತ್ತದೆ ಎಂದು ಹೇಳುವೆ” ಎಂದಿದ್ದಾರೆ ಯುವಿಕಾ ಚೌಧರಿ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ