
ಸಿಹಿ ಈಗ ಸುಬ್ಬಿ ಆಗಿ, ಆ ಸುಬ್ಬಿ ಮತ್ತೆ ಸಿಹಿ ಆಗಿದ್ದಾಳೆ. ಇಲ್ಲಿಯವರೆಗೆ ಸಿಹಿ ಸಿಹಿ ಎಂದು ಎಲ್ಲರ ಬಾಯಲ್ಲಿಯೂ ನಲಿದಾಡುತ್ತಿದ್ದ ಮುದ್ದು ರಿತು ಸಿಂಗ್ ಈಗ ಸುಬ್ಬಿ ಆಗಿ ವಿಭಿನ್ನ ರೀತಿಯ ಗೆಟಪ್ ಜೊತೆ, ಹಳ್ಳಿ ಭಾಷೆಯಲ್ಲಿಯೂ ಮಿಂಚಿದ್ದರೆ, ಮತ್ತೆ ಸುಬ್ಬಿಯೊಳಗೆ ಸಿಹಿ ಹೊಕ್ಕು ಎರಡೂ ಭಾಷೆಗಳಲ್ಲಿ ಮಾತನಾಡುತ್ತಿದ್ದಾಳೆ. ಸೀತಾಳಿಗೆ ಇನ್ನೂ ಈಕೆ ಸಿಹಿಯಲ್ಲ ಎನ್ನುವ ವಿಷಯ ಗೊತ್ತೇ ಆಗಿಲ್ಲ ಎನ್ನುವುದು ಮಾತ್ರ ವಿಚಿತ್ರವಾದರೂ, ಸೀರಿಯಲ್ ಆಗಿರುವ ಕಾರಣ ಅದನ್ನು ನೋಡಬೇಕಷ್ಟೇ. ಅದೇನೇ ಇರಲಿ. ಸುಬ್ಬಿ ಮತ್ತು ಸಿಹಿ ಎರಡು ವಿಭಿನ್ನ ಕ್ಯಾರೆಕ್ಟರ್ಗಳಲ್ಲಿ ಭಿನ್ನ ರೀತಿಯದ್ದೇ ನಟನೆಯ ಅಗತ್ಯವಿದ್ದು, ಅವೆರಡನ್ನೂ ಜಾಣ್ಮೆಯಿಂದ ನಿಭಾಯಿಸುತ್ತಿದ್ದಾಳೆ ಪುಟಾಣಿ ರಿತು ಸಿಂಗ್. ಇದಾಗಲೇ ಸುಬ್ಬಿಯಾಗಿ ಹಳ್ಳಿಯ ಭಾಷೆಯಲ್ಲಿ ಡೈಲಾಗ್ ಹೇಳ್ತಿದ್ದ ರಿತು ಸಿಂಗ್, ಇದೀಗ ತಾನೇ ಸಿಹಿ ಎಂದು ತೋರಿಸಲು ಹೋಗಿ, ಅತ್ತ ಹಳ್ಳಿಯೂ ಅಲ್ಲದೇ ಇತ್ತ ಪೇಟೆ ಭಾಷೆಯೂ ಅಲ್ಲದೇ ತೊಳಲಾಡುತ್ತಿದ್ದು, ಆ ಪಾತ್ರವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ.
ಅದೇ ಇನ್ನೊಂದೆಡೆ ಅಕ್ಷರವೇ ಬರದ ಸುಬ್ಬಿ ಸಿಹಿಯಾಗಿ ಶಾಲೆಗೆ ಹೋಗಿದ್ದಾರೆ. ಶಾಲೆಯ ಸಮವಸ್ತ್ರದಲ್ಲಿ ಮಿಂಚುವ ಆಸೆ ಕಂಡಿದ್ದ ಸುಬ್ಬಿಯ ಕನಸು ನನಸಾಗಿದೆ. ಶಾಲೆಯಲ್ಲಿ ಬಣ್ಣದ ಡ್ರೆಸ್ ಇದ್ದ ದಿನವೂ ತನಗೆ ಸಮವಸ್ತ್ರವೇ ಬೇಕು ಎಂದು ಪಟ್ಟು ಹಿಡಿದು ತೊಟ್ಟು ಹೋಗಿದ್ದಾಳೆ. ಆದರೆ ಹೇಳಿಕೇಳಿ ಆಕೆ ಸುಬ್ಬಿ. ಶಾಲೆಯಲ್ಲಿಯೂ ತರ್ಲೆ ಮಾಡಿದ್ದಾಳೆ. ಶಿಕ್ಷಕಿ ಇಂಗ್ಲಿಷ್ನಲ್ಲಿ ಪದ್ಯ ಹೇಳುವಂತೆ, ಬರೆಯುವಂತೆ ಹೇಳಿದ್ದಾಳೆ. ಆದರೆ ಅದು ಗೊತ್ತಾಗದೇ ತರ್ಲೆ ಮಾಡಿದ್ದಾಳೆ ಸುಬ್ಬಿ. ಶಾಲೆಯಲ್ಲಿ ನಿಲ್ಲುವ ಶಿಕ್ಷೆ ಕೊಟ್ಟಿದ್ದಾರೆ ಟೀಚರ್. ಇದರಿಂದ ಸುಸ್ತಾದ ಸುಬ್ಬಿ, ಶಾಲೆಯೂ ಬೇಡ, ಓದೋದು ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾಳೆ.
ಭಾಗ್ಯಳ ಸಹಾಯಕ್ಕೆ ಕಿರುತೆರೆ ನಟಿಯರ ದಂಡೇ ಬಂದಾಗ ಶೂಟಿಂಗ್ನಲ್ಲಿ ಏನೇನಾಯ್ತು ನೋಡಿ!
ಅವಳು ಎಲ್ಲೋ ಓಡಿ ಹೋಗಿದ್ದಾಳೆ. ರಾಮ್ ಶಾಲೆಗೆ ಬಂದಾಗ ಸುಬ್ಬಿ ಬ್ಯಾಗ್ ಬಿಟ್ಟು ಓಡಿ ಹೋಗಿರುವ ವಿಷಯವನ್ನು ಟೀಚರ್ ತಿಳಿಸಿದ್ದಾರೆ. ರಾಮ್ಗೆ ಶಿಕ್ಷಕಿ ಬಳಿ ಸತ್ಯ ಹೇಳುವಂತೆಯೂ ಇಲ್ಲ, ಹೇಳದಂತೆಯೂ ಇಲ್ಲದ ಸ್ಥಿತಿ. ಅದೇ ಇನ್ನೊಂದೆಡೆ, ಸುಬ್ಬಿಯನ್ನು ಸಾಕಿದ್ದ ಕಾಕಾ ತನಗೆ ಸುಬ್ಬಿಯನ್ನು ನೋಡಬೇಕು ಎಂದು ರಾತ್ರಿಯೆಲ್ಲಾ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಎಷ್ಟೆಂದರೂ ಆತ ಸಾಕಿದ ಕೂಸು ಇವಳು. ಅಪ್ಪನ ಪ್ರೀತಿ ಇಲ್ಲದೇ ಇರುತ್ತಾ? ಅಶೋಕ್ ದುಡ್ಡು ಕೊಡಲು ಹೋದರೂ ನನಗೆ ದುಡ್ಡು ಬೇಡ, ಸುಬ್ಬಿ ಬೇಕು ಅಂದಿದ್ದ.
ಈಗ ಓಡಿ ಹೋದ ಸುಬ್ಬಿ ಮತ್ತೆ ಸ್ಲಂಗೆ ಹೋಗಿಬಿಟ್ಟರೆ ಎನ್ನ್ಉವ ಭಯ ರಾಮ್ಗೆ ಕಾಡುತ್ತಿದೆ.ಸುಬ್ಬಿ ಮಾಯ ಆಗ್ತಾಳಾ? ಇವಳು ಸಿಹಿಯಲ್ಲ, ಸುಬ್ಬಿ ಎಂದು ಅವಳ ಬೆನ್ನ ಹಿಂದೆ ಬಿದ್ದಿರೋ ಭಾರ್ಗವಿ ಚಿಕ್ಕಿಗೆ ಅಸಲಿಯತ್ತು ಗೊತ್ತಾಗತ್ತಾ? ರಾಮ್ ಮುಂದಿನ ನಡೆ ಏನು ಎನ್ನುವ ಕುತೂಹಲ ಸದ್ಯದ್ದು.
ಮದ್ವೆ ಸೀನ್ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್ ಸೆಟ್ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.