BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!

Published : Oct 24, 2019, 02:04 PM IST
BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!

ಸಾರಾಂಶ

  ಬಿಗ್ ಬಾಸ್ ಕೊಟ್ಟ 'ಕ್ಷಮೆ' ಟಾಸ್ಕ್‌ನಲ್ಲಿ ತಂದೆ ಹಾಗೂ ಹಳೇ ಪ್ರೇಯಸಿ ಬಳಿ ಕ್ಷಮೆಯಾಚಿಸಿದ್ದಾರೆ 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಶೈನ್ ಶೆಟ್ಟಿ. ಅಷ್ಟಕ್ಕೂ ಹಳೇ ಪ್ರೇಯಸಿಯಲ್ಲಿ ಕ್ಷಮೆ ಕೇಳುವಂಥ ತಪ್ಪೇನು ಮಾಡಿದ್ದು ಈ ಸ್ಪರ್ಧಿ?

 

ಪ್ರತಿ ದಿನವೂ ವಿಭಿನ್ನ ಟಾಸ್ಕ್ ಮೂಲಕ ಪ್ರೇಕ್ಷಕರನ್ನು ರಂಚಿಸುತ್ತಿರುವ ಬಿಗ್‌‌ಬಾಸ್‌ 'ಮನಸ್ಸಿಗೆ ಹತ್ತಿರವಾದ ವ್ಯಕ್ತಿಗೆ ಕ್ಷಮೆ ಕೇಳಿ' ಎಂಬ ಆ್ಯಕ್ಟಿವಿಟಿ ಮಾಡಲು ಹೇಳಿತ್ತು. ಈ ವೇಳೆ ಮಂಗಳೂರು ಹುಡುಗ ಶೈನ್ ಶೆಟ್ಟಿ ತಂದೆ ಹಾಗೂ ಹಳೆ ಪ್ರೇಯಸಿ ಬಳಿ ಕ್ಷಮೆಯಾಚಿಸಿದ್ದಾರೆ.

ಬಿಗ್ ಬಾಸ್ ಪ್ರಿಯಾಂಕಾ ರಿಯಲ್ ಲೈಫ್‌ ಬ್ಯಾಕ್‌ಗ್ರೌಂಡ್ ಗೊತ್ತಾ? ಇಲ್ಲಿದೆ ನೋಡಿ

 

ಹೌದು, ಶೈನ್ ಕುಡಿತದ ದಾಸನಾಗಿದ್ದು ಕುಟುಂಬದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅದರಲ್ಲೂ ಕುಡಿತದ ಚಟ ತನ್ನ ಮಗನಿಗೆ ಅಂಟಬಾರದೆಂದು ಪಾರ್ಟಿ ನಡೆಯುತ್ತಿದ್ದರೂ ಮಗನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದರು ಶೈನ್ ಶೆಟ್ಟಿ ತಂದೆ. 'ಅಪ್ಪ ನನಗೆ ಗೊತ್ತು, ಇದು ನಿಮಗೆ ಇಷ್ಟವಿಲ್ಲವೆಂದು. ಆದರೆ ಕೆಲವೊಮ್ಮೆ ಸ್ನೇಹಿತರೊಂದಿಗೆ ಕೂತು ನಾನು ಸ್ವಲ್ಪ ಕುಡಿದಿದ್ದೇನೆ. ನನ್ನನ್ನು ಕ್ಷಮಿಸಿ...' ಎಂದು ಕೇಳಿದ ನಂತರ ಮತ್ತೊಂದು ವ್ಯಕ್ತಿಗೆ ಸಾರಿ ಕೇಳಬೇಕಿದೆ ಎಂದು ಹಳೆ ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದರು ಈ ನಟ.

ಬಿಗ್ ಬಾಸ್‌ ಮನೆಯ ಮೇಕಪ್‌ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!

 

ಶೈನ್ ಬಿಗ್‌‌ಬಾಸ್ ಮನೆಗೆ ಬರುವ ಮುನ್ನ ಪ್ರೀತಿಯಲ್ಲಿದ್ದರು. ಆಕೆಯೊಂದಿಗೆ ನಾಲ್ಕು ವರ್ಷ ಕಳೆದರೂ ಕೋಪ-ಮನಸ್ತಾಪ ಮುಂದುವರಿದಿತ್ತು. ಒಂದು ದಿನ ಜಗಳ ದೊಡ್ಡದಾದ ಕಾರಣ ಅವಳೊಂದಿಗೆ ಮಾತನಾಡಬಾರದೆಂದು ಗಟ್ಟಿ ಮನಸ್ಸು ಮಾಡಿ, ಸಂಪರ್ಕವನ್ನೇ ಮುರಿದುಕೊಂಡರು. ಈ ವೇಳೆ ಶೈನ್ ತನ್ನ ಸ್ನೇಹಿತರೊಂದಿಗೆ ಸಕಲೇಶಪುರದಿಂದ ಬರುವಾಗ ಕಾರು ಆ್ಯಕ್ಸಿಡೆಂಟ್ ಆಗಿತ್ತು, ಶೈನ್ ತನ್ನ ಎಡಗೈ ಪೆಟ್ಟು ಮಾಡಿಕೊಂಡರು. ಪ್ರೇಯಸಿಯೊಂದಿಗೆ ಆಗಲೂ ಅವರು ಮಾತನಾಡಲಿಲ್ಲ. ಆದರೆ, ಅದೇ ಸಮಯದಲ್ಲಿ ಆಕೆ ಇವರನ್ನು ಸಂಪರ್ಕಿಸಲು ಶತಾಯಗತಾಯ ಯತ್ನಿಸಿದ್ದಾರೆ. ಹತಾಶೆ, ಅಪಘಾತದಲ್ಲಿ ಕೈಗಾದ ನೋವಿನಿಂದ ಆಕೆಯ ಫೋನನ್ನೂ ಎತ್ತಲಿಲ್ಲ. ಸಿಟ್ಟು ತಣ್ಣಗಾಗಿರಲಿಲ್ಲ.

 

ಸಿಟ್ಟಿನಲ್ಲಿ ದ್ವೇಷವೇ ಜಯ ಸಾಧಿಸಿತು. ಪ್ರೀತಿಗೆ ಸೋಲಾಯಿತು. ಇದೀಗ ಇದನ್ನು ನೆನಪಿಸಿಕೊಂಡು ಶೈನ್ ಆಕೆಯಲ್ಲಿ ಮನಸಾರೇ ಕ್ಷಮೆಯಾಚಿಸಿದ್ದಾರೆ. ಜಗಳವೇ ಮುಂದಾಗಿರುವ ನೋವು ಶೈನ್ ಮನಸ್ಸಿನಲ್ಲಿ ಮಾಸದೇ ಉಳಿದಿದೆ. ಇದಕ್ಕೆ ಆಕೆಯಲ್ಲಿ ಕ್ಷಮೆ ಕೇಳಿದ್ದಾರೆ ಶೈನ್. ಇದಕ್ಕೆ ವೇದಿಕೆ ಕಲ್ಪಿಸಿತ್ತು ಬಿಗ್‌ಬಾಸ್ ಮನೆ.

BB7: ಜೈ ಜಗದೀಶ್‌ 'ನಾನ್‌ಸೆನ್ಸ್‌ ಅಲ್ಲ': ಅಪ್ಪನ ಬಗ್ಗೆ ಮಗಳ ಬ್ಯಾಟಿಂಗ್!

 

ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ವ್ಯಕ್ತಿತ್ವವೇ ವಿಭಿನ್ನ. ಸೌಮ್ಯ ಸ್ವಭಾವದವರು ಕಟುಕರಾಗುತ್ತಾರೆ ಇಲ್ಲಿ. ಕಟುಕರಿಗೆ ಬುದ್ಧಿ ಕಲಿಸುತ್ತೆ ಅರಮನೆಯಂಥ ಸೆರೆಮನೆ. ಒಟ್ಟಿನಲ್ಲಿ ಮನಸ್ಸಿನಾಳದ ದುಗುಡ, ದುಮ್ಮಾನ, ಅಹಂಕಾರ ಎಲ್ಲವೂ ಅನಾವರಣಗೊಳ್ಳಲೇ ಬೇಕು. ಹಾಗೆ ಇಲ್ಲಿಯೂ ಒಂದೊಂದೋ ಹೊರ ಬರುತ್ತಿದೆ.

 

ಕಿರುತೆರೆಯಲ್ಲಿದ್ದು ಜನಪ್ರಿಯರಾಗುತ್ತಿದ್ದಂತೆ, ಬೆಳ್ಳಿ ಪರದೆ ಬಾಗಿಲು ತಟ್ಟಿದವರು ಶೈನ್. ಆದರೆ, ಅದೇನೂ ಅವರ ಕೈ ಹಿಡೀಲಿಲ್ಲ. ಬದುಕಿಗೆ ಒಂದು ದಾರಿ ಬೇಕಿತ್ತು. ಅದಕ್ಕೆ ದೋಸೆ ಕ್ಯಾಂಪ್ ಹಾಕಿ ಕೊಂಡಿದ್ದೇನೆ ಎಂದು ಆರಂಭದಲ್ಲಿಯೇ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ರಿವೀಲ್ ಮಾಡಿದ್ದರು ಶೈನ್.

 

ನೋಡೋಣ ಇನ್ನು ಮುಗಿದಿದ್ದು 12 ದಿನಗಳು. ಯಾರು ಯಾರು ಹೇಗೆ ಆಡುತ್ತಾರೋ ಕಾಲವೇ ಉತ್ತರಿಸುತ್ತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?