ಬಿಗ್‌ ಬಾಸ್ ಫಿನಾಲೆಯಲ್ಲಿ ಮತ್ತೊಬ್ಬರ ಎಂಟ್ರಿ ಕನ್ಫರ್ಮ್‌! ಫೈನಲ್‌ನಲ್ಲಿ ತುಟಿ ಬಿಚ್ತಾರಾ ಸುದೀಪ್?

Published : Jan 17, 2026, 03:09 PM IST
Bigg Boss Kiccha Sudeep

ಸಾರಾಂಶ

ಬಿಗ್ ಬಾಸ್ ಶೋನಲ್ಲಿ ನಟ ಸುದೀಪ್ ರಣಹದ್ದುಗಳ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕೆ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದ್ದು, ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ಜಾರಿ ಮಾಡಿದೆ. 

ಇತ್ತೀಚಿಗೆ ಬಿಗ್ ಬಾಸ್ ಶೋನಲ್ಲಿ ಸುದೀಪ್ ರಣಹದ್ದಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅಂತ ರಣಹದ್ದು ಸಂರಕ್ಷಣಾ ಟ್ರಸ್ಟ್, ಅರಣ್ಯ ಇಲಾಖೆಗೆ ದೂರು ನೀಡಿತ್ತು. ಅದು ಅಲ್ಲಿಗೆ ಮುಗಿಬಹುದು ಅಂತ ಎಲ್ಲರೂ ಅಂದಾಜು ಮಾಡಿದ್ರು. ಆದ್ರೆ ಇದು ಅಷ್ಟಕ್ಕೆ ಮುಗಿದಿಲ್ಲ. ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ಈ ಬಗ್ಗೆ ನೊಟೀಸ್ ನೀಡಿದೆ. ಈ ವಿವಾದ ಫಿನಾಲೆ ತಲುಪಿದೆ.

ಕಿಚ್ಚನ ಬೆನ್ನುಬಿಡದ ವಿವಾದ. ಫಿನಾಲೆಗೆ ರಣಹದ್ದು?

ಯೆಸ್ ಬಿಗ್ ಬಾಸ್ ಫಿನಾಲೆಗೆ 6 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ. ಕೊನೆಯ ದಿನ ಕಿಚ್ಚನಿಗೆ ಮುಖಾಮುಖಿ ಆಗಲಿರೋದು ಈ 6 ಸ್ಪರ್ಧಿಗಳು. ಆದ್ರೆ ಅಚ್ಚರಿಯ ಸನ್ನಿವೇಶದಲ್ಲಿ ಫಿನಾಲೆಗೆ ಮತ್ತೊಬ್ಬರ ಎಂಟ್ರಿ ಖಚಿತವಾಗಿದೆ. ಅದು ಬೇರ್ಯಾರೂ ಅಲ್ಲ ರಣಹದ್ದು.

ರಣಹದ್ದಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಸುದೀಪ್!

ಹೌದು ಈ ಸಾರಿ ಬಿಗ್ ಬಾಸ್ ವೀಕೆಂಡ್ ಸಂಚಿಕೆವೊಂದರಲ್ಲಿ ಸುದೀಪ್, ಬೇರೆ ಬೇರೆ ಪ್ರಾಣಿ ಪಕ್ಷಗಳ ಫೋಟೋವನ್ನ ಸ್ಪರ್ಧಿಗಳಿಗೆ ಕೊಟ್ಟಿದ್ರು. ಅದನ್ನ ಇನ್ನೊಬ್ಬ ಸ್ಪರ್ಧಿ ಕೊರಳಿಗೆ ಹಾಕಿ ಆ ಜೀವಿಯ ಸ್ವಭಾವದವರು ಅಂತ ಹೇಳುವ ಟಾಸ್ಕ್ ಅದಾಗಿತ್ತು.

ಗಿಲ್ಲಿ ನಟನ ಕೊರಳಿಗೆ ಬಿದ್ದಿತ್ತು ರಣಹದ್ದಿನ ಚಿತ್ರ!

ಸೂರಜ್ ರಣಹದ್ದಿನ ಚಿತ್ರವನ್ನ ಗಿಲ್ಲಿ ನಟನ ಕೊರಳಿಗೆ ಹಾಕಿದ್ರು. ಅದಕ್ಕೂ ಮುನ್ನ ಸುದೀಪ್ ರಣಹದ್ದಿನ ಸ್ವಭಾವ ವಿವರಿಸಿದ್ರು. ʻಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂನಲ್ಲಿ ಲಬಕ್ ಅಂತ ರಣಹದ್ದು ಬೇಟೆ ಹಿಡಿಯುತ್ತೆ ಅಂದಿದ್ರು ಸುದೀಪ್. ಆದ್ರೆ ರಣಹದ್ದು ಯಾವತ್ತೂ ಜೀವಂತ ಪ್ರಾಣಿಗಳನ್ನ ಬೇಟೆಯಾಡುವುದಿಲ್ಲ. ರಣಹದ್ದುಗಳು ಪರಿಸರ ಸ್ನೇಹಿಗಳು. ಅವು ಸತ್ತ ಪ್ರಾಣಿಯ ಮಾಂಸವನ್ನ ತಿಂದು ಪರಿಸರ ಸ್ವಚ್ಚ ಮಾಡುವ ಕೆಲಸ ಮಾಡುತ್ವೆ.

ಅಳಿವಿನಂಚಿನಲ್ಲಿರೋ ರಣಹದ್ದುಗಳ ಬಗ್ಗೆ ತಪ್ಪಾದ ಮಾಹಿತಿ ಹರಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ನಟ ಸುದೀಪ್ ಅವರಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಅವರಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿತ್ತು. ಇಷ್ಟು ದೊಡ್ಡ ಕಾರ್ಯಕ್ರಮದಿಂದ ವೀಕ್ಷರಿಗೆ ತಪ್ಪು ಮಾಹಿತಿ ಹೋಗಬಾರದು. ಈ ಬಗ್ಗೆ ಸ್ಪಷ್ಟನೆ ಕೊಡಿಸಿ ಅಂತ ಮನವಿ ಮಾಡಲಾಗಿತ್ತು. ಇದೀಗ ಅರಣ್ಯ ಇಲಾಖೆ ಬಿಗ್ ಬಾಸ್ ಆಯೋಜಕರಿಗೆ ನೊಟೀಸ್ ಕೊಟ್ಟಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿ ಅಂತ ಕೇಳಿದೆ.

ಫಿನಾಲೆಯಲ್ಲಿ ಸ್ಪಷ್ಟನೆ ಕೊಡ್ತಾರಾ ಕಿಚ್ಚ ಸುದೀಪ್?

ಬಿಗ್ ಬಾಸ್ ಉಳಿದಿರೋದೇ ಇನ್ನೆರಡು ದಿನ. ಇನ್ನೂ ಸುದೀಪ್ ಬರೋದು ಫಿನಾಲೆಗೇನೆ. ಸೋ ಸುದೀಪ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಅಂದ್ರೆ ಖಂಡಿತ ಫಿನಾಲೆ ವೇದಿಕೆಯಲ್ಲೇ ಕೊಡಬೇಕು. ಸೋ ರಣಹದ್ದಿನ ಬಗ್ಗೆ ಆಡಿರೋ ತಪ್ಪು ಮಾತನ್ನ ಸರಿಪಡಿಸಿ ರಣಹದ್ದುಗಳ ಅಸಲಿ ಗುಣವನ್ನ ವಿವರಿಸೋಕೆ ಫಿನಾಲೆಯಲ್ಲಿ ಮಾತ್ರ ಅವಕಾಶ ಇದೆ.

ಅಲ್ಲಿಗೆ ಈ ಸಾರಿ ಫಿನಾಲೆಯಲ್ಲಿ ಯಾರು ಗೆಲ್ತಾರೆ ಅನ್ನೋವಷ್ಟೇ ಕುತೂಹಲ, ಕಿಚ್ಚ ರಣಹದ್ದುಗಳ ಬಗ್ಗೆ ಮಾತನಾಡ್ತಾರಾ ಅನ್ನೋದರ ಬಗ್ಗೆ ಮೂಡಿದೆ. ಸೋ ರಣಹದ್ದು ಫಿನಾಲೆಗೋಸ್ಕರ ಕಾದಿದೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಸ್ಪತ್ರೆ ದಾಖಲಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್
ಅಶ್ವಿನಿ ಗೌಡ ಇಲ್ಲ ಅಂದಿದ್ರೆ 4 ವಾರಕ್ಕೆ Bigg Boss ಮುಚ್ಚಬೇಕಿತ್ತು, ಮುಖ್ಯಸ್ಥರು ಹೇಳಿದ್ರು: ನಾರಾಯಣಗೌಡ್ರು!