Doresaan ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ : ಸತ್ಯವತಿ ಮಗನೇ ಆನಂದ್!

Published : Jul 28, 2022, 01:34 PM IST
Doresaan ಸೀರಿಯಲ್‌ನಲ್ಲಿ ದೊಡ್ಡ ಟ್ವಿಸ್ಟ್ : ಸತ್ಯವತಿ ಮಗನೇ ಆನಂದ್!

ಸಾರಾಂಶ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ದೊರೆಸಾನಿ' ಸೀರಿಯಲ್ ಅದರ ಕಥೆಯ ಕಾರಣಕ್ಕೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈವರೆಗೆ ಆನಂದ್ ದೀಪಿಕಾ ಪ್ರೇಮ, ವಿರಹ, ವರಸ ಇತ್ಯಾದಿಗಳಷ್ಟೇ ಕಾಣುತ್ತಿದ್ದ ಸೀರಿಯಲ್‌ನಲ್ಲೀಗ ಮೇಜರ್ ಅನಿಸೋ ತಿರುವು ಎದುರಾಗಿದೆ. ಕೋಟ್ಯಧಿಪತಿ ಆನಂದ್ ಸತ್ಯವತಿಯ ಮಗ ಅನ್ನೋ ವಿಚಾರ ರಿವೀಲ್ ಆಗೋದರಲ್ಲಿದೆ. 

ದೊರೆಸಾನಿ ಸೀರಿಯಲ್ (doresaani serial) ಅಂದಾಗ ಹೆಚ್ಚಿನವರು ಇದು ಆನಂದ್ ದೀಪಿಕಾ ಪ್ರೇಮಕಥೆ (love story) ಅಂತಲೇ ತಿಳ್ಕೊಳ್ತಾರೆ. ಆದರೆ ಈ ಕಥೆಗೆ ಪೂರಕವಾಗಿ ಈ ಸೀರಿಯಲ್‌ನಲ್ಲಿ ಇನ್ನೊಂದು ಮೇಜರ್ ಭಾಗವಿದೆ ಅನ್ನೋದು ಈಗ ರಿವೀಲ್ ಆಗ್ತಾ ಇದೆ. ಅದು ಸತ್ಯವತಿಯ (satyavathi) ಮಗ ಯಾರು ಅನ್ನೋ ರಹಸ್ಯ. ಈವರೆಗೆ ತಾನು ಅನಾಥ ಅಂತಲೇ ಹೇಳ್ಕೊಂಡು ಬಂದಿದ್ದ ವಿಶ್ವನಾಥ್ ಆನಂದ್ ಇದೀಗ ನಿಜ ತಾಯಿಯ ಮಡಿಲು ಸೇರುವ ಸೂಚನೆ ಸಿಗುತ್ತಿದೆ. ಈ ಒಂದು ಕಥೆಯ ಎಳೆಯಿಂದ ಇಡೀ ಸೀರಿಯಲ್‌ನ ರೂಪವೇ ಬದಲಾಗಲಿಕ್ಕಿದೆ. ತಾನು ತನ್ನ ಕುಯುಕ್ತಿಯಿಂದ ತಪ್ಪಿಸಿದ್ದು ಸ್ವಂತ ಮಗನ ಎಂಗೇಜ್‌ಮೆಂಟ್, ಮಗನ ಪ್ರೀತಿಗೆ ಕಲ್ಲಾದವಳು ತಾನು ಅನ್ನೋದು ಗೊತ್ತಾದ ಮೇಲೂ ಸತ್ಯವತಿಯ ಮನಸ್ಸು ಬದಲಾಗಬಹುದು. ಆಕೆಯ ಹುಡುಕಾಟ ತನ್ನ ಮಗನಿಗಾಗಿ. ಅದಕ್ಕಾಗಿ ಆಕೆ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಈಗ ಆ ಮಗ ಕೋಟ್ಯಾಧಿಪತಿಯಾಗಿ ಕಣ್ಣಮುಂದೆ ಬಂದರೆ ಸ್ಥಿತಿ ಹೇಗಿರಬಹುದು ಅನ್ನೋ ಪ್ರಶ್ನೆ ಇದೆ. ಜೊತೆಗೆ ಇಷ್ಟು ದಿನ ಅಪ್ಪ ಮಗಳ ಕಥೆಯಾಗಿ ಬೆಳೆದಿದ್ದ ಸೀರಿಯಲ್ ಇನ್ನುಮುಂದೆ ಅಮ್ಮ ಮಗನ ಕತೆಯೂ ಆಗಿ ಬೆಳೆಯುತ್ತಾ ಅನ್ನೋ ಅನುಮಾನ ಬಂದಿದೆ. ಒಂದು ವೇಳೆ ಹಾಗಾದರೆ ತಮ್ಮ ಸ್ವಾರ್ಥಕ್ಕಾಗಿ ಈ ಅಪ್ಪ ಅಮ್ಮ ಮಕ್ಕಳ ಮನಸ್ಸಿಗೆ ಬೆಲೆಯೇ ಕೊಡೋದಿಲ್ವಾ ಅನ್ನೋದೂ ಮುಖ್ಯವಾಗುತ್ತೆ. 

ಹಾಗೆ ನೋಡಿದರೆ ಸತ್ಯವತಿಯ ಓರ್ವ ಪುತ್ರ ಕಾಣೆಯಾಗುವುದಕ್ಕೆ ಪುರುಷೋತ್ತಮ ಹಡಗಲಿ ಕಾರಣ ಅಂತ ಅವಳು ಅಂದುಕೊಂಡಿದ್ದಾಳೆ. ಮದುವೆಗೂ ಮುನ್ನವೇ ಗಂಡು ಮಗುವಿಗೆ ಸತ್ಯವತಿ ಜನ್ಮ ನೀಡಿದ್ದರು. ಸಮಾಜಕ್ಕೆ ಹೆದರಿ ಆಗಷ್ಟೇ ಹುಟ್ಟಿದ ತಮ್ಮ ಮಗುವನ್ನು ದೇವಸ್ಥಾನವೊಂದರಲ್ಲಿ ಸತ್ಯವತಿ ಬಿಟ್ಟು ಬಂದಿದ್ದರು. ಈ ಸತ್ಯ ಪುರುಷೋತ್ತಮ್ ಹಡಗಲಿಗೆ ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ. ದೇವಸ್ಥಾನದಲ್ಲಿ ಸತ್ಯವತಿ ಬಿಟ್ಟಿದ್ದ ಹಸುಗೂಸು ಬೆಳೆದಿದ್ದು ಅನಾಥಾಶ್ರಮದಲ್ಲಿ. ಸತ್ಯವತಿಗೆ ಆ ಅನಾಥಾಶ್ರಮದ ಸುಳಿವು ಸಿಕ್ಕಿದ್ದು, ಮೇಷ್ಟ್ರ ಬಳಿ ಮಾತೂ ಆಡಿದ್ದಾರೆ. ಅನಾಥಾಶ್ರಮದ ಮೇಷ್ಟ್ರಿಗೆ ದೇವಸ್ಥಾನದಲ್ಲಿ ಸಿಕ್ಕಿದ್ದ ಎಳೆ ಮಗು ಆನಂದ್ ಎಂದು ಗೊತ್ತಾಗಿದೆ. ಆದರೆ, ಆ ವಿಷಯವನ್ನು ಸತ್ಯವತಿಗೆ ಹೇಳುವ ಮೊದಲು ಆನಂದ್‌ಗೆ ತಿಳಿಸಲು ಮೇಷ್ಟ್ರು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಆನಂದ್ ಹೇಗೆ ತಗೊಳ್ಳಬಹುದು, ಸತ್ಯವತಿ ತಾಯಿಯೇ ಆಗಿದ್ದರೂ ಆಕೆ ಮಾಡುತ್ತಿರುವ ದ್ವೇಷದ ಕೆಲಸಕ್ಕೆ ಆತನ ಸ್ಪಂದನೆ ಹೇಗಿರಬಹುದು, ಆದರೆ ಆನಂದ್‌ಗೆ ಮೊದಲಿಂದಲೂ ತಾನು ಅನಾಥ, ತನಗೆ ಯಾರೂ ಇಲ್ಲ ಅನ್ನುವ ನೋವು ಇದೆ. ಸತ್ಯವತಿ ತನ್ನ ತಾಯಿ ಅನ್ನೋ ವಿಚಾರ ಗೊತ್ತಾದರೆ ಆತ ಖುಷಿ ಪಡಬಹುದಾ ಅಥವಾ ಇಂಥವಳು ತನ್ನ ತಾಯಿ ಅನ್ನೋದು ಗೊತ್ತಾದರೆ ಆತನಿಗೆ ಅದರಿಂದ ನೋವಾಗಬಹುದಾ ಗೊತ್ತಿಲ್ಲ. 

Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!

ಸದ್ಯ ಈ ಸೀರಿಯಲ್ ವೀಕ್ಷಿಸುತ್ತಿರುವ ಪ್ರೇಕ್ಷಕರ (audience) ಮುಂದೆ ಹಲವಾರು ಪ್ರಶ್ನೆಗಳಿವೆ. ದೀಪಿಕಾಳನ್ನ ಆನಂದ್ ಮನಸಾರೆ ಪ್ರೀತಿಸುತ್ತಿದ್ದಾನೆ. ಇನ್ನೇನು ದೀಪಿಕಾ ಮತ್ತು ಆನಂದ್ ನಿಶ್ಚಿತಾರ್ಥ ನಡೆಯಬೇಕಿತ್ತು. ಆದರೆ, ಸತ್ಯವತಿ ಹಾಗೂ ಸಿಂಚನಾ ಕಿತಾಪತಿಯಿಂದ ದೀಪಿಕಾ ಮತ್ತು ಆನಂದ್ ಮದುವೆ ರದ್ದಾಯಿತು. ದೀಪಿಕಾ ಚೆನ್ನಾಗಿರಬೇಕು ಎಂದುಕೊಂಡಿರುವ ಆನಂದ್‌ ತಾನೇ ಆಕೆಗೆ ಗಂಡು ಹುಡುಕಿದ್ದಾನೆ. ತಮ್ಮ ಸ್ನೇಹಿತ ಚಿನ್ಮಯ್ ಹಾಗೂ ದೀಪಿಕಾ ಮದುವೆಗೆ ಆನಂದ್ ಮುನ್ನುಡಿ ಬರೆದಿದ್ದಾನೆ. ಚಿನ್ಮಯ್ ಹಾಗೂ ದೀಪಿಕಾ ಅವರ ನಿಶ್ಚಿತಾರ್ಥ ನಡೆಯಬೇಕಿದೆ. ದೀಪಿಕಾ ಮತ್ತು ಆನಂದ್ ನಡುವಿನ ಆತ್ಮೀಯತೆಯನ್ನ ಚಿನ್ಮಯ್ ಸಹಿಸಿಕೊಳ್ಳುತ್ತಿಲ್ಲ. ಅತ್ತ ದೀಪಿಕಾ ಮತ್ತು ಆನಂದ್ ನಡುವಿನ ಫ್ರೆಂಡ್‌ಶಿಪ್ ಡೀಪೀಗೆ ಕಿರಿಕಿರಿ ಆಗುತ್ತಿದೆ. ಇಷ್ಟೆಲ್ಲಾ ಇರುವಾಗ, ದೀಪಿಕಾ - ಚಿನ್ಮಯ್ ಮದುವೆ ನಡೆಯುತ್ತಾ? ಅತ್ತ ಡೀಪೀ ಮತ್ತು ಆನಂದ್‌ ವಿವಾಹ ಜರುಗುತ್ತಾ? ಎಂಬುದೇ ವೀಕ್ಷಕರಿಗೆ ದೊಡ್ಡ ಪ್ರಶ್ನೆಯಾಗಿದೆ. ಕೊನೆಗೂ ದೀಪಿಕಾ ಮತ್ತು ಆನಂದ್ ಗೆ ಮದುವೆ ಆಗಲೇ ಬೇಕು ಅದರ ನಡುವೆ ಏನೇನೆಲ್ಲ ಡ್ರಾಮ (drama) ನಡೆಯುತ್ತೆ ಅನ್ನೋದು ಸದ್ಯದ ಪ್ರಶ್ನೆ.

ಈ ದೊರೆಸಾನಿ’ ಸೀರಿಯಲ್ ನಲ್ಲಿ ದೀಪಿಕಾ ಪಾತ್ರದಲ್ಲಿ ರೂಪಿಕಾ, ವಿಶ್ವನಾಥ್ ಆನಂದ್ ಆಗಿ ಪೃಥ್ವಿರಾಜ್, ಸತ್ಯವತಿ ಆಗಿ ಭವಾನಿ ಪ್ರಕಾಶ್, ಪುರುಷೋತ್ತಮ್ ಹಡಗಲಿ ಆಗಿ ಜೈದೇವ್ ಮೋಹನ್ ಅಭಿನಯಿಸುತ್ತಿದ್ದಾರೆ.

Kannadathi : ಚಿತ್ಕಳಾ ನಿಜ ಹೆಸರು ಊರ್ಮಿಳಾ, ಅದ್ಯಾಕೆ ಹೆಸರು ಬದಲಿಸಿದ್ರು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?
BBK 12: ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?