
ಉತ್ತರ ಕರ್ನಾಟದ ಸೊಗಡಿರುವ ಜೇನುಗೂಡು ಸೀರಿಯಲ್ ನಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಈ ಸೀರಿಯಲ್‌ನ ನಾಯಕ ಶಶಾಂಕ್ ಮತ್ತು ನಾಯಕಿ ದಿಯಾಳ ಮದುವೆ ಶಾಸ್ತ್ರಗಳೆಲ್ಲ ಒಂದೊಂದಾಗಿ ಶುರುವಾಗ್ತಿವೆ. ಅದರೆ ತನ್ನ ಸೀನಿಯರ್ ಶಶಾಂಕ್ ಮೇಲೆ ಮೊದಲಿಂದಲೂ ವ್ಯಾಮೋಹ ಬೆಳಸಿಕೊಂಡಿರುವ ಮಾಯಾಗೆ ಇದು ನುಂಗಲಾರದ ತುತ್ತು. ಹೇಗಾದರೂ ಮಾಡಿ ಈ ಮದುವೆ ನಿಲ್ಲಿಸಿ ತಾನು ಶಶಾಂಕ್ ಮಡದಿ ಆಗಬೇಕು ಅಂತ ಅವಳು ಹಠ ಸಾಧಿಸಲು ಹೊರಟು ಮದುವೆ ನಿಲ್ಲಿಸುವ ಹೊಂಚು ಹಾಕಿದ್ದಾಳೆ. ಇನ್ನೊಂದೆಡೆ ಆರಂಭದಲ್ಲಿ ತಾನು ದ್ವೇಷಿಸುತ್ತಿದ್ದ ದಿಯಾಗೆ ಶಶಾಂಕ್ ಮೇಲೆ ಪ್ರೀತಿ ಹುಟ್ಟಿದೆ. ಮದುವೆ ಅವರಿಬ್ಬರನ್ನು ಮಾನಸಿಕವಾಗಿಯೂ ಒಂದು ಮಾಡುತ್ತಿದೆ. ಆದರೆ ತನ್ನ ಪ್ರೀತಿ ಪಡೆಯಲು ಏನಕ್ಕೂ ಹೇಸದ ಮಾಯಾ ಮಧ್ಯೆ ಪ್ರವೇಶಿಸಿದ್ದಾಳೆ. ಇದು ಯಾವೆಲ್ಲ ಅನಾಹುತಗಳಿಗೆ ಕಾರಣ ಆಗಬಹುದು ಅನ್ನೋದು ಶಶಾಂಕ್ ಮಾತ್ರ ಅಲ್ಲ ಈ ಸೀರಿಯಲ್ ನೋಡುತ್ತಿರುವ ವೀಕ್ಷಕರಲ್ಲೂ ಪ್ರಶ್ನೆ ಹುಟ್ಟು ಹಾಕಿದೆ. ಜೊತೆಗೆ ಮದುವೆಯೊಂದು ಸಾಂಗವಾಗಿ ನಡೆಯಲಿ ಅಂತ ಅವರೆಲ್ಲ ಹಾರೈಸುತ್ತಿದ್ದಾರೆ.
ನಡುಕೋಟಿ ಅನ್ನೋ ಕುಟುಂಬದಲ್ಲಿ ಮೂವರು ಅಣ್ಣತಮ್ಮಂದಿರು. ಏನೇ ಸಮಸ್ಯೆ ಬಂದರೂ ಒಗ್ಗಟ್ಟಾಗಿರುವುದೇ ಅವರ ಶಕ್ತಿ. ಇವರ ಕುಟುಂಬ ಜೇನುಗೂಡಿನ ಹಾಗೆ ಎಲ್ಲರಿಗೂ ಮಾದರಿಯಾಗುವಂತಿದೆ. ಈ ಕುಟುಂಬದ ಶಶಾಂಕ್ ಈ ಸೀರಿಯಲ್ ಹೀರೋ(Hero). ಅಮೆರಿಕಾದಲ್ಲಿ ವಿಜ್ಞಾನಿಯಾಗುವ ಅವಕಾಶವನ್ನೂ ಕುಟುಂಬಕ್ಕೋಸ್ಕರ ತ್ಯಾಗ ಮಾಡಿದವನು. ಈ ಸೀರಿಯಲ್ ನ ಇನ್ನೊಂದು ಕುಟುಂಬ ಶ್ರೀಮಂತ ಡಾ ಶ್ರೀಧರ್ ಅವರದು. ಅವರ ಪತ್ನಿ ಕೆಲಸದ ಕಾರಣಕ್ಕೆ ಕುಟುಂಬ ತೊರೆದಿದ್ದಾರೆ. ಅವರ ಮಗಳು ದಿಯಾಗೆ ಕುಟುಂಬದ ಮೌಲ್ಯ(Values)ಗಳ ಅರಿವಿಲ್ಲ. ಆದರೆ ಈಗ ಆಕೆ ಕುಟುಂಬವನ್ನೇ ಜೀವದಷ್ಟು ಪ್ರೀತಿಸುವ ಶಶಾಂಕ್‌ನನ್ನು ಮದುವೆ(Wedding) ಆಗುತ್ತಿದ್ದಾಳೆ. ಶಶಾಂಕ್ ಮತ್ತು ದಿಯಾಳ ಮದುವೆಯ ಸಂಭ್ರಮಕ್ಕೆ ನಡುಕೋಟೆ ಮತ್ತು ಶ್ರೀಧರ್ ಮನೆ ಸಜ್ಜಾಗಿದೆ. ಮುಹೂರ್ತಕ್ಕೂ ಮುನ್ನ ನೆರವೇರಿಸಬೇಕಾದ ಎಲ್ಲಾ ಶಾಸ್ತ್ರಗಳು ಮುಗಿಯುತ್ತಾ ಬರುತ್ತಿವೆ. ಈ ಶಾಸ್ತ್ರಗಳ ನಡುವೆ ದಿಯಾ ಮತ್ತು ಶಶಾಂಕ್ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರೀತಿ ಚಿಗುರೊಡೆಯುವುದಕ್ಕೆ ಶುರುವಾಗಿದೆ.
Kannadathi : ಚಿತ್ಕಳಾ ನಿಜ ಹೆಸರು ಊರ್ಮಿಳಾ, ಅದ್ಯಾಕೆ ಹೆಸರು ಬದಲಿಸಿದ್ರು?
ಇದರ ನಡುವೆ ಮಾಯಾ ಬಿರುಗಾಳಿಯಂತೆ ಬಂದಿದ್ದಾಳೆ. ಆ ಹೊತ್ತಿಗೆ ಬೇರೆ ಶಾಸ್ತ್ರಗಳೆಲ್ಲಾ ಮುಗಿದಿದ್ದು, ಸಂಗೀತ ಕಾರ್ಯಕ್ರಮ ಶುರುವಾಗಿದೆ. ಬಳಿಕ ಮೆಹಂದಿ, ಅರಿಶಿನ, ಮುಹೂರ್ತ ಬಂದೇ ಬಿಡುತ್ತದೆ. ಆದರೆ ಮಾಯಾ ಈಗ ಎಲ್ಲವನ್ನು ಹಾಳು ಮಾಡಲು ಹೊರಟಿದ್ದಾಳೆ. ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಹೊಸದಾಗಿ ಮದುವೆಯಾಗುತ್ತಿರುವ ದಿಯಾ-ಶಶಾಂಕ್ ಕೂಡ ಈ ಕ್ಷಣವನ್ನು ಆನಂದಿಸುತ್ತಿದ್ದಾರೆ. ಆದರೆ ಇದೇ ವೇಳೆ ಮಾಯಾ ಬಂದು ಶಶಾಂಕ್‌ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಶಶಾಂಕ್ ಒಂದು ಕ್ಷಣ ಗಾಬರಿಯಾಗಿದ್ದಾನೆ. ಶಶಾಂಕ್ ವಿಷಯದಲ್ಲಿ ಸಖತ್ ಪೊಸೆಸ್ಸಿವ್(Posessive) ಆಗಿರುವ ದಿಯಾಗೆ ಈ ವಿಚಾರ ತಿಳಿದರೆ ಮದುವೆ ಮುಂದುವರಿಯುವುದು ಸಾಧ್ಯವೇ? ದಿಯಾ ಈ ಮದುವೆಗೆ ಒಪ್ಪುತ್ತಾಳಾ ಇಲ್ವಾ ಅನ್ನೋದು ಸದ್ಯದ ಪ್ರಶ್ನೆ.
ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಜೀ ಕನ್ನಡ ವಾಹಿನಿ
ಕೆಲಸದಲ್ಲಿ ಮುಂದಿರುವ ಮಾಯಾ ಮಹಾ ಸ್ವಾರ್ಥಿಯೂ ಹೌದು. ತನ್ನ ಪ್ರೀತಿಗಾಗಿ ಹೆತ್ತತಾಯಿಯನ್ನೇ ಬಲಿಪಶು ಮಾಡಲು ಹಿಂದೆ ಮುಂದೆ ನೋಡಿದವಳಲ್ಲ. ಮಗಳ ಪ್ರೀತಿಗಾಗಿ ಹಂಬಲಿಸುವ ಸಾರಿಕಾ ಒಳ್ಳೆಯ ಗುಣದವಳು. ಆದರೆ ಮಗಳು ಮಾಯಾಗೆ ಮಾತ್ರ ಅವಳನ್ನು ಕಂಡರಾಗೋದಿಲ್ಲ. ದಿಯಾ ಶಶಾಂಕ್ ಮದುವೆ ಮುರಿದರೆ ತಾನು ಅಮ್ಮನನ್ನು ಪ್ರೀತಿಸುವೆ ಅನ್ನೋ ಮಾತನ್ನು ಸಾರಿಕಾ ಹಿಂದೆ ಆಡಿದ್ದಳು. ಆದರೆ ಸಾರಿಕಾ ಯಾವ ಕಾರಣಕ್ಕೂ ದಿಯಾ ಶಶಾಂಕ ಸಂಬಂಧ ಮುರಿಯಬೇಡ ಅಂತ ಮಗಳಿಗೆ ಬುದ್ಧಿವಾದ ಹೇಳಿದ್ದಳು. ಇದಕ್ಕೆ ಕಿವಿಗೊಡದ ಮಾಯಾ ಇದೀಗ ದಿಯಾ ಶಶಾಂಕ್ ಮದುವೆಗೆ ಅಡ್ಡಿ ಮಾಡ್ತಿದ್ದಾಳೆ. ಈ ಮದುವೆ ನಡೆಯುತ್ತಾ ಅನ್ನೋ ಪ್ರಶ್ನೆ ವೀಕ್ಷಕರ ಮುಂದಿದೆ.
ಶಶಾಂಕ್ ಪಾತ್ರದಲ್ಲಿ ಆರವ್, ದಿಯಾ ಪಾತ್ರದಲ್ಲಿ ನಿತ್ಯಾ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.