ವಿನಯ್-ಅವಿನಾಶ್ ಕಾಳಗ, ವಿನಯ್ ಕೈ ಬೆರಳು ಮುರಿತ; ಕಾರ್ತಿಕ್ ಆಸ್ಪತ್ರೆಗೆ ದಾಖಲು!

By Shriram Bhat  |  First Published Dec 20, 2023, 1:21 PM IST

ಬಿಗ್ ಬಾಸ್ ಮನೆ ಈಗ 12ನೇ ವಾರದ ಜರ್ನಿ ಪೂರೈಸುತ್ತಿದೆ. ಈಗಿರುವ ಸ್ಪರ್ಧಿಗಳಲ್ಲಿ ಎಲ್ಲರೂ ಗೆಲ್ಲಲು ಪಣ ತೊಟ್ಟಂತಿದೆ. ಬರೋಬ್ಬರಿ 12 ವಾರದವರೆಗೂ ಬಂದಿದ್ದಾರೆ ಎಂದರೆ ಅವರೆಲ್ಲರಲ್ಲಿ ಏನೂ ಪ್ಲಸ್ ಪಾಯಿಂಟ್ ಇದೆ ಎಂದೇ ಅರ್ಥ.


ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಇತ್ತೀಚೆಗೆ ಸಂಭ್ರಮಕ್ಕಿಂತ ಕಾಳಗವೇ ಜಾಸ್ತಿ ಆಗಿದೆ. ಇಂದು ವಿಭಿನ್ನ ಟಾಸ್ಕ್ ನೀಡಲಾಗಿತ್ತು. ಎದುರಾಳಿ ತಂಡದ ಸದಸ್ಯರ ದಾಳಿಗಳಿಂದ ತಮ್ಮ ಬಟ್ಟೆಗಳನ್ನು ಸೇಫ್ ಮಾಡಿಟ್ಟುಕೊಳ್ಳಬೇಕು ಎಂಬುದು ಟಾಸ್ಕ್. ಈ ಟಾಸ್ಕ್ ವೇಳೆ ಭಾರೀ ಕಾಳಗವೇ ನಡೆದಿದೆ. ವಿನಯ್ ಗೌಡ ಮತ್ತು ಅವಿನಾಶ್ ಶೆಟ್ಟಿ ನಡುವೆ ತೀವ್ರ ಮಾತಿನ ಚಟುವಟಿಕೆ ನಡೆದಿದ್ದು ಕೊನೆಗೆ ಅದು ಹೊಡೆದಾಟದ ಹಂತ ತಲುಪಿದೆ. ಮನೆಯ ಸದಸ್ಯರೆಲ್ಲರೂ ಭಯ ಪಡುವ ಹಂತಕ್ಕೆ ಈ ಕಾಳಗ ಹೋಗಿದ್ದು, ಆಗ ಬಿದ್ದ ಕಾರ್ತಿಕ್‌ಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಬಿಗ್ ಬಾಸ್ ಮನೆ ಈಗ 12ನೇ ವಾರದ ಜರ್ನಿ ಪೂರೈಸುತ್ತಿದೆ. ಈಗಿರುವ ಸ್ಪರ್ಧಿಗಳಲ್ಲಿ ಎಲ್ಲರೂ ಗೆಲ್ಲಲು ಪಣ ತೊಟ್ಟಂತಿದೆ. ಬರೋಬ್ಬರಿ 12 ವಾರದವರೆಗೂ ಬಂದಿದ್ದಾರೆ ಎಂದರೆ ಅವರೆಲ್ಲರಲ್ಲಿ ಏನೂ ಪ್ಲಸ್ ಪಾಯಿಂಟ್ ಇದೆ ಎಂದೇ ಅರ್ಥ. ಹೀಗಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಅವರು ಗೆಲ್ಲುತ್ತಾರೆ, ಇವರು ಗೆಲ್ಲುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವರು ಸಂಗೀತಾ ಹೆಸರು ಹೇಳುತ್ತಿದ್ದರೆ ಹಲವರು ಕಾರ್ತಿಕ್ ಹೆಸರು ಹೇಳುತ್ತಿದ್ದಾರೆ. ಇನ್ನೂ ಕೆಲವರು ತನಿಷಾ ಗೆಲ್ಲುತ್ತಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಸದ್ಯ ಪ್ರತಾಪ್ ಹೆಸರು ಹೇಳುವುದು ನಿಂತು ಹೋಗಿದೆ. 

Tap to resize

Latest Videos

ನಾನು ಪಾತ್ರಗಳನ್ನಲ್ಲ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ; ಆಲಿಯಾ ಭಟ್

ಈ ವಾರದ ಟಾಸ್ಕ್‌ನಲ್ಲಿ ಯಾವ ಸ್ಪರ್ಧಿಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತಾರೆ, ಯಾವ ಟೀಮ್ ಗೆಲ್ಲುತ್ತದೆ. ಯಾರು ಅತ್ಯಂತ ಬುದ್ದಿವಂತಿಕೆಯ ಆಟ ಆಡುತ್ತಾರೆ ಎಲ್ಲ ಅಂಶಗಳ ಮೇಲೆ ಫೈನಲ್ ಗೆಲುವು ನಿರ್ಧಾರವಾಗಲಿದೆ. ಫೈನಲ್‌ನಲ್ಲಿ ಗೆಲ್ಲಬೇಕು ಎಂದರೆ ಕೊನೆಯವರೆಗೆ ಹೋರಾಡಬೇಕು. ಅದನ್ನು ಯಾರು ಮಾಡುತ್ತಾರೆ, ಯಾರಿಗೆ ಆ ಸಾಮರ್ಥ್ಯವಿದೆ ಎಂಬುದನ್ನು ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿರುವ ಹೆಸರುಗಳು ಕಾರ್ತಿಕ್, ಸಂಗೀತಾ ಮತ್ತು ತನಿಷಾ. 

.ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ: ಹೋರಾಟಕ್ಕೆ ಬೆಂಬಲ ಸೂಚಿಸಿ ಸುದೀಪ್​, ಧನಂಜಯ್​ ಹೇಳಿದ್ದೇನು?

ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

 

 

click me!