ಬಿಗ್​ಬಾಸ್​ ವಿನಯ್​ ಪರ ಮಾತನಾಡಿ ಟ್ರೋಲ್​ ಆದ ನಟಿ ಅನು ಪೂವಮ್ಮ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?

By Suvarna News  |  First Published Dec 19, 2023, 6:44 PM IST

ಬಿಗ್​ಬಾಸ್​ ಸ್ಪರ್ಧಿ ವಿನಯ್​ ಪರ ಸೀರಿಯಲ್​ ನಟಿ ಅನು ಪೂವಮ್ಮ ಬ್ಯಾಟಿಂಗ್​ ಮಾಡಿದ್ದು, ಇದು ಹಲವರು ಸಿಟ್ಟಿಗೆ ಕಾರಣವಾಗಿದೆ. ನಟಿಗೆ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಮಾಡುತ್ತಿದ್ದಾರೆ.
 


ಬಿಗ್​ಬಾಸ್​ನಲ್ಲಿ ಇದಾಗಲೇ ಹಲವು ಸ್ಪರ್ಧಿಗಳು ನಾಮಿನೇಟ್​ ಆಗಿದ್ದು, ಕೆಲವೇ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಈಗ ಎಲ್ಲರಿಗೂ ಗೆಲ್ಲುವ ಛಲ. ಇದೇ ಕಾರಣಕ್ಕೆ ಸ್ನೇಹಿತರಾಗಿದ್ದವರು ವೈರಿಗಳಾಗಿದ್ದಾರೆ. ಜಗಳ, ಕಾದಾಟ, ಹಾರಾಟ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ. ಅದೇ ಇನ್ನೊಂದೆಡೆ ತಮ್ಮ ಪರವಾಗಿರುವ ಸ್ಪರ್ಧಿಗಳಿಗೆ ಮತ ಚಲಾಯಿಸುವಂತೆ ಸ್ಪರ್ಧಿಗಳ ಫ್ಯಾನ್ಸ್​ ಸೋಷಿಯಲ್​  ಮೀಡಿಯಾದಲ್ಲಿ ಕೋರಿಕೊಳ್ಳುತ್ತಲೇ ಇದ್ದಾರೆ. ಬಿಗ್​ಬಾಸ್​ ಮನೆಗೆ ಹೋಗುವ ಮುನ್ನ ಸ್ಪರ್ಧಿಗಳು ತಮ್ಮ ನಂಬಿಗಸ್ಥರಿಗೆ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ಮಾಡಲು ಕೊಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸೋಷಿಯಲ್​  ಮೀಡಿಯಾಗಳಿಂದಲೇ ಮತ ಕೇಳಲಾಗುತ್ತಿದೆ. ಅದೇ ಇನ್ನೊಂದೆಡೆ, ಬಿಗ್​ಬಾಸ್ ಪ್ರೊಮೋ ಇನ್​ಸ್ಟಾಗ್ರಾಮ್​, ಫೇಸ್​ಬುಕ್​ನಲ್ಲಿ ಕಲರ್ಸ್​ ವಾಹಿನಿ ಶೇರ್​ ಮಾಡುತ್ತಲೇ, ಅಲ್ಲಿಯೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಬ್ಯಾಟಿಂಗ್​ ಮಾಡುತ್ತಲೇ ಇರುತ್ತಾರೆ. 

ಇದೀಗ ಕಿರುತೆರೆಯ ಖ್ಯಾತ ನಟಿ, 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯ ವಿಲನ್​ ಪಾತ್ರದ ಮೂಲಕ ಫೇಮಸ್​ ಆಗಿರುವ ಅನು ಪೂವಮ್ಮ ಅವರು ವಿನಯ್​ ಪರವಾಗಿ ವಿಡಿಯೋ ಮಾಡಿದ್ದಾರೆ. ವಿನಯ್​ ಅವರನ್ನು ಗೆಲ್ಲಿಸುವಂತೆ ಅವರು ಕೋರಿಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಮಾಡಿದ್ದು, ಅದರಲ್ಲಿ ವಿಜಯ್​ ಅವರ ಗೆಲುವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ತಮ್ಮ ಈ ವಿಡಿಯೋ ಅನ್ನು ವಿನಯ್​ ಅವರ ಇನ್​ಸ್ಟಾಗ್ರಾಮ್​ ಖಾತೆಗೆ ಟ್ಯಾಗ್​ ಮಾಡಿದ್ದಾರೆ. ವಿಡಿಯೋದಲ್ಲಿ ನಟಿ,  ಹಾಯ್ ಎಲ್ಲರೂ ಹೇಗಿದ್ದೀರಾ..? ವಿನಯ್ ಬಿಗ್ ಬಾಸ್‌ನಲ್ಲಿ ಚೆನ್ನಾಗಿಯೇ ಆಡುತ್ತಾ ಇದ್ದೀಯಾ. ನಾನು ಪ್ರತಿ ದಿನ ಬಿಗ್ ಬಾಸ್ ನೋಡುತ್ತೇನೆ. ನಿನ್ನ ಎಪಿಸೋಎಡ್‌ ನೋಡುತ್ತೇನೆ. ನಿಜಕ್ಕೂ ಖುಷಿ ಆಗುತ್ತಿದೆ. ಫಿನಾಲೆಯಲ್ಲಿ ನಿನ್ನ ನೋಡುತ್ತೀನಿ, ಗಾಡ್​ ಬ್ಲೆಸ್​ ಯೂ ಎಂದಿದ್ದಾರೆ ಎಂದು ಹೇಳಿದ್ದಾರೆ.

Tap to resize

Latest Videos

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ಹರಾಜು! ಕಾರ್ತಿಕ್​ಗೆ ಭಾರಿ ಡಿಮಾಂಡ್​- ಕೊನೆಗೂ ಯಾರ ಕೈ ಸೇರಿದ್ರು?

ಹೀಗೆ ಮಾತನಾಡಿದ್ದಕ್ಕೆ ಹಲವರು ನಟಿಗೆ ಸಾಕಷ್ಟು ಟ್ರೋಲ್​ ಮಾಡುತ್ತಿದ್ದಾರೆ. ವಿನಯ್​ ಅವರ ಬೆಂಬಲಿಗರು ಸಾಕಷ್ಟು ಮಂದಿ ಇದ್ದರೂ ಹಾಗೂ ವಿನಯ್​ ಪರವಾಗಿ ಅವರ ಫ್ಯಾನ್ಸ್​ ಇದಾಗಲೇ ತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದರೂ ಅನು ಅವರ ವಿಡಿಯೋದಲ್ಲಿ ಮಾತ್ರ ಸಕತ್​ ನೆಗೆಟಿವ್​ ಕಮೆಂಟ್​ಗಳೇ ತುಂಬಿ ಹೋಗಿವೆ. ವಿನಯ್ ಬೆಂಕಿ, ವಿನಯ್ ಗೆದ್ದೇ ಗೆಲ್ಲುತ್ತಾರೆ ಎಂದು ವಿನಯ್​ ಫ್ಯಾನ್ಸ್​ ಈ ವಿಡಿಯೋಗೆ ರಿಪ್ಲೈ ಮಾಡುತ್ತಿದ್ದರೂ, ಹಲವರು ನಟಿಗೆ ದುಡ್ಡು ತೆಗೆದುಕೊಂಡು ವಿಡಿಯೋ ಮಾಡಿದ್ದೀರಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.  "ಈ ರೀತಿ ಹೇಳುವುದಕ್ಕೆ ಎಷ್ಟು ಹಣ ತೆಗೆದುಕೊಂಡಿದ್ದೀರಿ..?, ಯಾವ ಬಾಯಿಂದ ಹೇಳುತ್ತಿದ್ದೀಯಾ ತಾಯಿ. ನಿನ್ನ ಕಣ್ಣಿಗೆ ಅವನು ಚೆನ್ನಾಗಿ ಆಡುತ್ತಿದ್ದಾನೆ ಅನ್ಸುತ್ತಾ, ನಾವೇನು ಬಿಗ್‌ಬಾಸ್ ನೋಡೋದಿಲ್ವಾ" ಎಂದು ಬಿಗ್​ಬಾಸ್​ ಎನ್ನುವ ಹೆಸರಿನಲ್ಲಿಯೇ ಇರುವ ಇನ್​ಸ್ಟಾಗ್ರಾಮ್​ ಖಾತೆದಾರರೊಬ್ಬರು ಕೇಳಿದ್ದಾರೆ. ವಿನಯ್​ ಹೆಂಡ್ತಿ ಬಂದು ನಿಮ್ಮ ಬಳಿ ರಿಕ್ವೆಸ್ಟ್​ ಮಾಡಿಕೊಂಡಿದ್ದಾರಾ ಎಂದು ಇನ್ನು ಕೆಲವರು ನಟಿಗೆ ಪ್ರಶ್ನೆ ಮಾಡುತ್ತಿದ್ದರೆ, ಮೇಡಂ ಹೀಗೆ ವಿನಯ್​ಗೆ ಹೇಳುವ ಬದಲು ನೇರವಾಗಿ ವೀಕ್ಷಕರ ಬಳಿಯೇ ಹೇಳ್ಬೋದಲ್ಲಾ, ಈ ಡ್ರಾಮಾ ಎಲ್ಲಾ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. 

ಅಷ್ಟಕ್ಕೂ ವಿನಯ್​ ಪರವಾಗಿಯೂ ಕೆಲವರು ಕಮೆಂಟ್​ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ವಿನಯ್ ಕಾಲಿಟ್ಟಾಗಿನಿಂದ ಒಂದು ಗತ್ತನ್ನು ಕಾಪಾಡಿಕೊಂಡೆ ಬಂದಿದ್ದಾರೆ.  ಅವರೇ ಗೆಲ್ಲುವುದು ಎಂದಿದ್ದಾರೆ. ಅವರು ಬೆಂಕಿ ಇದ್ದಂಗೆ, ಯಾರು ಏನೇ ಹೇಳಿದ್ರೂ ನಮ್ಮ ಸಪೋರ್ಟ್​ ಅವರಿಗೆ ಎಂದಿದ್ದಾರೆ. ಒಟ್ಟಿನಲ್ಲಿ ಬಿಗ್​ಬಾಸ್​ ವಿನ್ನರ್​ ಯಾರು ಎನ್ನುವ ಕುತೂಹಲಕ್ಕೆ ಇನ್ನೂ ಹಲವು ದಿನಗಳು ಕಾಯಬೇಕಿದೆ. 

'ಬೀಗ್​ ಬಾಸ್'​ ಮನೆಯಲ್ಲಿ ಲೂಸ್​-ಟೈಟ್​ ಮಾಡಲು ಎಂಟ್ರಿ ಕೊಟ್ಟ ಪ್ಲಂಬರ್! ಸ್ಪರ್ಧಿಗಳು ಶಾಕ್​...

click me!