ಒಳಗೆ ಸೇರಿತು ಗುಂಡು... ಮತ್ತಿನ ಗತ್ತಲ್ಲಿ ಪತಿಗೆ ಮುತ್ತು ಕೊಟ್ಟ ಭೂಮಿಕಾ! ಗೌತಮ್​ ಸುಸ್ತು

Published : Feb 16, 2024, 12:23 PM IST
ಒಳಗೆ ಸೇರಿತು ಗುಂಡು... ಮತ್ತಿನ ಗತ್ತಲ್ಲಿ ಪತಿಗೆ ಮುತ್ತು ಕೊಟ್ಟ ಭೂಮಿಕಾ! ಗೌತಮ್​ ಸುಸ್ತು

ಸಾರಾಂಶ

ಮದ್ಯ ಸೇವನೆ ಮಾಡಿದ ಮತ್ತಿನಲ್ಲಿ ಗಂಡ ಗೌತಮ್​ಗೆ ಮುತ್ತು ಕೊಟ್ಟು ಪ್ರೀತಿ ನಿವೇದಿಸಿಕೊಂಡಿದ್ದಾಳೆ ಭೂಮಿಕಾ. ಈ ಅಚಾನಕ್​ ಬೆಳವಣಿಗೆಯಿಂದ ಗೌತಮ್​  ಮಾಡಿದ್ದೇನು?  

ಪ್ರೇಮಿಗಳ ದಿನ ಮುಗಿದು ಎರಡು ದಿನ ಕಳೆದರೂ ಸೀರಿಯಲ್​ಗಳಲ್ಲಿ ಇನ್ನೂ ಅದರ ಗಮ್ಮತ್ತು ಮುಗಿದಿಲ್ಲ. ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಳು ಪ್ರಸಾರ ಆಗುತ್ತಲೇ ಇದೆ. ಅದೇ ರೀತಿ ಇದೀಗ, ಮದುವೆಯಾದರೂ ಇನ್ನೂ ಒಂದಾಗದ ಅಮೃತಧಾರೆ ಸೀರಿಯಲ್​ನ ಪತಿ-ಪತ್ನಿ ನಡುವೆ ಪ್ರೇಮಿಗಳ ದಿನದಂದು ಪ್ರೀತಿ ಶುರುವಾಗಿದೆ. ಭೂಮಿಕಾ ಮತ್ತು ಗೌತಮ್​ ನಡುವೆ ಪ್ರೀತಿ ಹುಟ್ಟಿಸಲು ಗೌತಮ್​ ಗೆಳೆಯ ಆನಂದ್​ ಮತ್ತು ಆತನ ಪತ್ನಿ ಮೊದಲಿನಿಂದಲೂ ಒಂದಲ್ಲಾ ಒಂದು ಪ್ಲ್ಯಾನ್​ ಮಾಡುತ್ತಲೇ ಬಂದಿದ್ದಾರೆ. ಭೂಮಿಗೋ ಇದಾಗಲೇ ಪತಿಯ ಮೇಲೆ ಲವ್​ ಶುರುವಾಗಿದೆ. ಆದರೆ ಅದನ್ನು ಗಂಡನ ಬಳಿ ಹೇಳಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾಳೆ. ಅಷ್ಟಕ್ಕೂ ಗೌತಮ್​ಗೆ ಈ ಪ್ರೀತಿ, ಪ್ರೇಮ ಎಲ್ಲಾ ಸುಲಭದಲ್ಲಿ ಅರ್ಥವಾಗದ ವಿಷಯ. ಹೆಂಡತಿ ಭೂಮಿ ತಾವು ಲವ್​ನಲ್ಲಿ ಬಿದ್ದಿದ್ದೇನೆ ಎಂದು ಅದೆಷ್ಟು ಬಾರಿ ಪರೋಕ್ಷವಾಗಿ ಹೇಳಿದರೂ ಗೌತಮ್​ಗೆ ಅದರ ಅರಿವೇ ಆಗುತ್ತಿಲ್ಲ.

ಇದೆಲ್ಲಾ ಅರಿತಿರೋ ಆನಂದ್​ ಇದೀಗ ಗುಂಡಿನ ಮೊರೆ ಹೋಗಿದ್ದಾನೆ. ಈ ಹಿಂದೆ ಕೂಡ ಭೂಮಿಕಾಗೆ ಕೂಲ್​ ಡ್ರಿಂಕ್ಸ್​ನಲ್ಲಿ ಮದ್ಯ ಸೇರಿಸಿ ಕುಡಿಸಿದ್ದ ಆನಂದ್​. ಆಗ ಭೂಮಿಕಾ ಗೌತಮ್​ ಜೊತೆ ಪ್ರೀತಿ ಹೇಳಿಕೊಂಡಿದ್ದಳು. ಆದರೂ ಗೌತಮ್​ಗೆ ಅದೆಲ್ಲಾ ಅರ್ಥ ಆಗಿರಲಿಲ್ಲ. ಇದೀಗ ಮತ್ತೊಮ್ಮೆ ಮದ್ಯದ ಮೊರೆ ಹೋಗಿ ಪತಿ-ಪತ್ನಿಯನ್ನು ಒಂದು ಮಾಡಲು ನೋಡಿದ್ದಾರೆ ಆನಂದ್​ ದಂಪತಿ. ಪುನಃ ಭೂಮಿಕಾಳ ಪಾನೀಯರಿಂದ ಮದ್ಯ ಸೇವಿಸಿ ಕೊಟ್ಟಿದ್ದಾನೆ ಆನಂದ್​. ಅದನ್ನು ಕುಡಿದ ಭೂಮಿಕಾ ಮದ್ಯದ ಮತ್ತಿನಲ್ಲಿ ಮುತ್ತು ಕೊಟ್ಟಿದ್ದಾಳೆ. ಗೌತಮ್​ ಶಾಕ್​ ಆಗಿದ್ದಾನೆ. ಇದಕ್ಕೂ ಮುನ್ನ ಕಷ್ಟಪಟ್ಟು ಭೂಮಿಕಾ ಪ್ರೇಮಿಗಳ ದಿನದಂದು ಗುಲಾಬಿ ಹೂವು ಹಿಡಿದು ತನ್ನ ಪ್ರೀತಿಯನ್ನು ಪತಿಯ ಎದುರು ತೋಡಿಕೊಂಡಿದ್ದಳು. ಇದನ್ನು ನೋಡಿ ಮೊದಲೇ ಶಾಕ್​ ಆಗಿದ್ದ ಗೌತಮ್​ಗೆ ಈಗ ಮತ್ತಷ್ಟು ಶಾಕ್​ ಆಗಿದೆ. 

ಹೆಂಡ್ತಿಯನ್ನು ಖುರ್ಚಿ ಮೇಲೆ ಕುಳ್ಳರಿಸುವಷ್ಟರಲ್ಲಿ ಈ ಗಂಡಂದಿರು ಸುಸ್ತೋ ಸುಸ್ತು! ಪತ್ನಿ ಅಂದ್ರೆ ಸುಮ್ನೆನಾ?
 

ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದೆ. ಇದನ್ನು ನೋಡಿ ಅಭಿಮಾನಿಗಳು ಈ ಎಪಿಸೋಡ್​ಗಾಗಿ ಎದುರು ನೋಡುತ್ತಿರುವುದಾಗಿ ಹೇಳುತ್ತಿದ್ದಾರೆ. ಭೂಮಿಕಾ  ಮತ್ತು ಗೌತಮ್​ ನಟನೆ ಸೂಪರ್ ಎಂದಿರುವ ಅಭಿಮಾನಿಗಳು, ಇನ್ನಾದರೂ ಭೂಮಿಕಾಳ ಪ್ರೀತಿ ಅರ್ಥ ಮಾಡಿಕೊಳ್ಳಪ್ಪಾ ಎಂದು ಗೌತಮ್​ಗೆ ಕಿವಿ ಮಾತು ಹೇಳುತ್ತಿದ್ದಾರೆ.

ಅದೇ ಇನ್ನೊಂದೆಡೆ, ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾ ತಂಗಿ ಅಪೇಕ್ಷಾ ಮತ್ತು ಕುತಂತ್ರಿ ಜೈದೇವ್​ ಮದುವೆ ಸಂಭ್ರಮ ಜೋರಾಗಿದೆ. ತನ್ನ ಮದುವೆ ತನ್ನ ಗೆಳೆಯ ಜೈದೇವನ ತಮ್ಮ ಪಾರ್ಥನ ಜೊತೆ ಎಂದು ತಿಳಿದಿದ್ದ ಅಪೇಕ್ಷಾ ಈಗ ಏನೂ ಹೇಳದೇ ಕಣ್ಣೀರು ಹಾಕುತ್ತಿದ್ದಾಳೆ. ತನ್ನ ತಮ್ಮದಿಂದ ಆತನ ಪ್ರೇಯಸಿಯನ್ನು ಕಸಿದುಕೊಂಡ ಖುಷಿಯಲ್ಲಿ ಜೈದೇವ್​ ಇದ್ದಾನೆ. ಇದಾಗಲೇ ಮನೆಯ ಕೆಲಸದಾಕೆಯನ್ನು ಆತ ಗರ್ಭಿಣಿ ಮಾಡಿರುವ ವಿಷಯ ಬಹಿರಂಗಗೊಂಡಿಲ್ಲ. ಆದರೆ ಆಕೆ ಗರ್ಭಿಣಿ ಎನ್ನುವುದು ಭೂಮಿಕಾಗೆ ತಿಳಿದಿದೆ. ಆದರೆ ಇದಕ್ಕೆ ಕಾರಣ ಯಾರು ಎನ್ನುವುದನ್ನು ಕೆಲಸದಾಕೆ ಇನ್ನೂ ಬಾಯಿ ಬಿಟ್ಟಿಲ್ಲ. ಇದು ಭೂಮಿಕಾಗೆ ಮದುವೆಯ ಮೊದಲೇ ತಿಳಿದು ತಂಗಿಯ ಬಾಳು ಹಾಳಾಗುವುದನ್ನು ತಪ್ಪಿಸುತ್ತಾಳೆಯೇ ಎನ್ನುವುದು ಈಗಿರುವ ಪ್ರಶ್ನೆ. 

ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳಿ ಸೀತಮ್ಮನನ್ನು ಮಲಗಿಸಿದ ಸಿಹಿ: ಸೋ ಕ್ಯೂಟ್​ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?