
ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಮಾಡುವ ಮೂಲಕ ಎಲ್ಲರ ಭಕ್ತಿ ಭಾವಕ್ಕೆ ಪಾತ್ರರಾಗಿದ್ದ, ಸಾಕ್ಷಾತ್ ಕೃಷ್ಣನಂತೆಯೇ ಹಲವರಿಂದ ಪೂಜೆಗೂ ಒಳಗಾಗಿದ್ದ ನಿತೀಶ್ ಭಾರಧ್ವಾಜ್ ಅವರು ತಮ್ಮ ಪತ್ನಿಯ ವಿರುದ್ಧ ಮಾನಸಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ! ಪತ್ನಿ ಸ್ಮಿತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಅಂದಹಾಗೆ, ಸ್ಮಿತಾ ಅವರು ಐಎಎಸ್ ಅಧಿಕಾರಿಯಾಗಿದ್ದು, ಇವರ ವಿರುದ್ಧ ಮಾನಸಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ ಮಹಾಭಾರತದ ಕೃಷ್ಣ. ಭೋಪಾಲದ ಪೊಲೀಸ್ ಆಯುಕ್ತರಿಗೆ ಪತ್ನಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಅಂದಹಾಗೆ ನಿತೀಶ್ ಅವರಿಗೆ ಸ್ಮಿತಾ ಎರಡನೆಯ ಪತ್ನಿ. 1991ರಲ್ಲಿ ಮೊದಲು ಅವರು ಮೊನಿಶಾ ಪಾಟೀಲ್ ಎನ್ನುವವರ ಜೊತೆ ಮದ್ವೆಯಾಗಿದ್ದರು. ಆದರೆ 2005ರಲ್ಲಿ ಡಿವೋರ್ಸ್ ಪಡೆದುಕೊಂಡರು. ಇದಾದ ನಂತರ ಐಎಎಸ್ ಅಧಿಕಾರಿಯಾಗಿರುವ ನಿತೀಶ್ ಸ್ಮಿತಾ ಅವರನ್ನು ವಿವಾಹವಾದರು. ಈ ಮದುವೆಯೂ ಮುರಿದು ಬಿದ್ದಿದೆ. ಇವರ ಡಿವೋರ್ಸ್ ಕೇಸ್, 2019ರಿಂದ ಮುಂಬೈ ಕೌಟುಂಬಿಕ ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ ಎನ್ನಲಾಗಿದೆ. ಇದೀಗ ನಿತೀಶ್ ಅವರು ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ ನಿತೀಶ್ ಭಾರದ್ವಾಜ್ ಅವರು ಪತ್ನಿ ಸ್ಮಿತಾ ಅವರಿಂದ ಇದಾಗಲೇ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಇವರು ಅವಳಿ-ಜವಳಿ ಮಕ್ಕಳು. ಮಕ್ಕಳಿಗೆ ಈಗ ಹನ್ನೊಂದು ವರ್ಷ. ಈ ಹಂತದಲ್ಲಿ, ಪತ್ನಿ ವಿರುದ್ಧ ದೂರು ದಾಖಲಿಸಲು ಕಾರಣ ಏನೆಂದರೆ, ಹೆಣ್ಣು ಮಕ್ಕಳನ್ನು ಭೇಟಿ ಮಾಡಲು ಕೊಡುತ್ತಿಲ್ಲ ಎನ್ನುವುದು ಅವರ ಆರೋಪ. ಇದರ ಜೊತೆಗೆ, ಪತ್ನಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ದೂರಿನಲ್ಲಿ ನಿತೀಶ್ ಆರೋಪಿಸಿದ್ದಾರೆ.
ಬಾಲಿವುಡ್ ಕ್ವೀನ್ ಜಯಪ್ರದಾಗೆ ಭಾರಿ ಸಂಕಷ್ಟ! ಕೂಡಲೇ ಅರೆಸ್ಟ್ ಮಾಡಲು ಕೋರ್ಟ್ ಆದೇಶ
ಈ ದೂರನ್ನು ಭೋಪಾಲ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ಸ್ವೀಕರಿಸಿದ್ದಾರೆ. ತಾವು ಈ ದೂರನ್ನು ಸ್ವೀಕರಿಸಿದ್ದು, ತನಿಖೆಗೆ ಆದೇಶಿಸಲಾಗಿದೆ. ಇದರ ವಿಚಾರಣೆಯನ್ನು ಎಡಿಸಿಪಿ ಶಾಲಿನಿ ದೀಕ್ಷಿತ್ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ಮಾಹಿತಿ ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಅಂದಹಾಗೆ, ನಿತೀಶ್ ಹಾಗೂ ಐಎಎಸ್ ಅಧಿಕಾರಿ ಸ್ಮಿತಾ ಪರಸ್ಪರ ಪ್ರೀತಿಸಿ 2009 ರಲ್ಲಿ ಮಧ್ಯ ಪ್ರದೇಶದಲ್ಲಿ ವಿವಾಹವಾಗಿದ್ದರು. 12 ವರ್ಷಗಳ ದಾಂಪತ್ಯದ ಬಳಿಕ 2019ರಲ್ಲಿ ಈ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, 2022ರಲ್ಲಿ ಇವರಿಗೆ ವಿಚ್ಛೇದನ ದೊರಕಿತು. ಡಿವೋರ್ಸ್ ಬಳಿಕ ತಮ್ಮ ಮಕ್ಕಳ ಜೊತೆ ಸ್ಮಿತಾ ಅವರು ಇಂದೋರ್‌ನಲ್ಲಿ ನೆಲೆಸಿದ್ದಾರೆ. ಇದೀಗ ನಿತೀಶ್ ಭಾರಧ್ವಜ್ರ ದೂರಿನ ಪ್ರಕಾರ, ತಮ್ಮ ಪತ್ನಿ ಸ್ಮಿತಾ ತಮ್ಮ ಮಕ್ಕಳನ್ನು ಭೇಟಿ ಆಗಲು ಅವಕಾಶ ನೀಡುತ್ತಿಲ್ಲವಂತೆ.
ಮಾಜಿ ಪತ್ನಿಯನ್ನು ತಬ್ಬಿಕೊಂಡ ಬೆನ್ನಲ್ಲೇ ಹೃತಿಕ್ಗೆ ಇದೇನಾಯ್ತು? ಊರುಗೋಲು ಹಿಡಿದ ಫೋಟೋ ವೈರಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.