
ಗಂಡು ಮಕ್ಕಳಿಲ್ಲದಿದ್ದಾಗ ಕೆಲ ಹೆಣ್ಣು ಮಕ್ಕಳು ತಂದೆ-ತಾಯಿಯ ಅಂತ್ಯಸಂಸ್ಕಾರ ಮಾಡಿದ ಉದಾಹರಣಗಳು ಸಾಕಷ್ಟಿವೆ. ಅಂತೆಯೇ ತಂದೆ ತೀರಿಕೊಂಡಾಗ ಸುಕೃತಾ ನಾಗ್ ಅಕ್ಕ ಕಾರ್ಯ ನೆರವೇರಿಸಿದರೆ, ಸುಕೃತಾ ಗುಂಡು ಹೊಡೆಸಿಕೊಂಡಿದ್ದರಂತೆ. ʼಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ಸುಕೃತಾ ನಾಗ್ ಅವರು ಮೆಂಟರ್ ಆಗಿದ್ದು, ತಂದೆಯ ಬಗ್ಗೆ ಮಾತನಾಡಿದ್ದಾರೆ.
ಸಹಾಯ ಮಾಡುವ ಮನೋಭಾವ
ಸುಕೃತಾ ನಾಗ್ ಅವರು ಐದನೇ ವಯಸ್ಸಿನಲ್ಲಿದ್ದಾಗ ತಂದೆ ತೀರಿಕೊಂಡರು. ನಾಗರಾಜ್ ಅವರು ಸಹಾಯ ಮಾಡುವ ಮನೋಭಾವನೆ ಹೊಂದಿದ್ದರು. ಅದರಂತೆ ಸುಕೃತಾ ಕೂಡ ಸಹಾಯ ಮನೋಭಾವ ಹೊಂದಿದ್ದಾರೆ ಎಂದು ʼಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಸ್ಪರ್ಧಿ ಪ್ರವೀಣ್ ಜೈನ್ ಹೇಳಿದ್ದಾರೆ.
ಪೋಲಿಗಳಿಂದ ಸೇಫ್ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್ ಕೊಟ್ಟರಂತೆ ಲೀಲಾವತಿ!
ತಂದೆ ಕಾರ್ಯ ಮಾಡಿದ್ದ ಅಕ್ಕ!
“ಯಾರ ಬೆಂಬಲವೂ ಇಲ್ಲದೆ ನನ್ನ ತಾಯಿ ನಮ್ಮನ್ನು ಬೆಳೆಸಿದ್ದಾರೆ. ಏನೇ ಬಂದರೂ ನಾವು ಮೂರು ಜನ ಎದುರಿಸ್ತೀವಿ. ನನ್ನ ತಂದೆ ತೀರಿಕೊಂಡು 22 ವರ್ಷ ಆಗಿದೆ. ಇವರೆಲ್ಲರನ್ನು ನೋಡಿದಾಗ ನಾನ್ಯಾಕೆ ದುರದೃಷ್ಟವಂತ ಅಂತ ಅನಿಸುತ್ತದೆ. ಅಪ್ಪ-ಅಮ್ಮ ಇರೋರು ಎಲ್ಲರೂ ಪುಣ್ಯವಂತರು. ನನ್ನ ತಂದೆ ಬಾಡಿ ಮುಂದೆ ನಾನು ಆಟ ಆಡುತ್ತಿದ್ದೆ. ನನ್ನ ತಂದೆ ತೀರಿಕೊಂಡಾಗ ಅಪ್ಪನ ಬಿಟ್ಟು ಹೇಗೆ ಇರುತ್ತೀಯಾ ಅಂತ ಕೇಳಿದರು. ನನ್ನ ಅಕ್ಕ ತಂದೆಯ ಕಾರ್ಯ ಮಾಡಿದರೆ, ನಾನು ಮುಡಿ ಕೊಟ್ಟಿದ್ದೆ. ಸಂಬಂಧಿಕರು ಆಸ್ತಿ ತಗೊಳೋಕೆ ಬಂದಿದ್ದಕ್ಕೆ ನಾವೇ ಅಪ್ಪನ ಕಾರ್ಯ ಮಾಡಿದೆವು” ಎಂದು ಸುಕೃತಾ ನಾಗ್ ಹೇಳಿದ್ದಾರೆ.
ತಂದೆಯ ಹನ್ನೊಂದನೇ ದಿನದ ಕಾರ್ಯದಂದೇ ಸುಕೃತಾ ಜನ್ಮದಿನ!
“ನನ್ನ ತಂದೆ ಹನ್ನೊಂದನೇ ದಿನದ ಕಾರ್ಯದಂದು ನನ್ನ ಜನ್ಮದಿನ ಇತ್ತು. ಅತ್ತ ಗಂಡನ ಸಾವು, ಇತ್ತ ಮಗಳ ಜನ್ಮದಿನ ಇದ್ದಿದ್ದರಿಂದ ನನ್ನ ತಾಯಿಗೆ ಯಾವುದನ್ನು ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ. ನನ್ನ ತಂದೆ ಇದ್ದಿದ್ರೆ ಎಷ್ಟು ಚೆನ್ನಾಗಿ ನೋಡಿಕೊಳ್ತಿದ್ರು ಅಂತ ಗೊತ್ತಿಲ್ಲ, ಅದಕ್ಕಿಂತ ಜಾಸ್ತಿ ನನ್ನ ತಾಯಿ ಬೆಳೆಸಿದ್ದಾರೆ ಅಂತ ಹೇಳ್ತೀನಿ” ಎಂದು ಸುಕೃತಾ ನಾಗ್ ಹೇಳಿದ್ದಾರೆ.
ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಚಾಲನೆ; ಕಾರ್ಮಿಕ ಇಲಾಖೆಯಿಂದ ಕಾರ್ಯಕ್ರಮ । Suvarna News
ತಂದೆ ಜೊತೆಗಿನ ಫೋಟೋ!
ಸುಕೃತಾ ನಾಗ್‌ಗೆ ತಂದೆಯ ಜೊತೆಗಿನ ಫೋಟೋ ಇಲ್ಲವಂತೆ. ಹೀಗಾಗಿ ಪ್ರವೀಣ್ ಜೈನ್ ಅವರು ತಂದೆಯ ಜೊತೆಗಿನ ಸುಕೃತಾ ನಾಗ್ ಫೋಟೋವನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ನೀಡಿ ಸುಕೃತಾ ನಾಗ್ ಭಾವುಕರಾಗಿದ್ದಾರೆ.
ರಚಿತಾ ರಾಮ್ ಏನಂದ್ರು?
ಈ ಶೋ ಜಡ್ಜ್ ಆಗಿರುವ ರಚಿತಾ ರಾಮ್ ಅವರು “ತುಂಬ ಚೆನ್ನಾಗಿ ನಗುತ್ತಿರುವವರು ಈ ರೀತಿ ಅಳೋದು, ಭಾವುಕರನ್ನಾಗಿ ನೋಡೋದು ತುಂಬ ಕಷ್ಟ ಆಗತ್ತೆ. ಸುಕೃತಾ ನಾಗ್ ಅವರು ಅಳಬಾರದು” ಎಂದು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ರಚಿತಾ ರಾಮ್ ಮೇಲೆ ಕಣ್ಣು ಹಾಕಿದ್ದಾನೆ, ನನ್ನನ್ನು ಪೆದ್ದನಾಗಿ ಮಾಡ್ಬಿಟ್ಟ: ರವಿಚಂದ್ರನ್
ನಟ ವಿ ರವಿಚಂದ್ರನ್ ಏನಂದ್ರು?
“ತಂದೆ-ತಾಯಿ ಹೋದ್ಮೇಲೆ ಅವರ ಬೆಲೆ ಗೊತ್ತಾಗತ್ತೆ ಅಂತಾರೆ. ನೀನು ಮಾಡುವ ದಾನದಲ್ಲಿ ನಿನ್ನ ತಂದೆ ಕಾಣಿಸ್ತಾ ಹೋಗ್ತಾರೆ. ಒಂದು ರೂಪಾಯಿ ದಾನ ಮಾಡಿದರೂ ಅದರಲ್ಲಿ ನಿನ್ನ ತಂದೆ ಕಾಣಿಸ್ತಾರೆ. ಬೇರೆಯವರಿಗೆ ಪಾಲಕರಿದ್ದಾರೆ ಅಂತ ಹೊಟ್ಟೆಕಿಚ್ಚು ಪಡಬೇಡಿ. ಉಳಿದವರಿಗೆ ತಂದೆ ಹೊರಗಡೆ ಇದ್ದರೆ, ನಿನಗೆ ನಿನ್ನೊಳಗಡೆ ಇದ್ದಾರೆ. ನೀನು ತಂದೆಯನ್ನು ಎಷ್ಟು ಮಿಸ್ ಮಾಡಿಕೊಳ್ತೀಯಾ ಅಂತ ನನಗೆ ಗೊತ್ತಿದೆ. ನಾನು ಕೂಡ ಅಪ್ಪ-ಅಮ್ಮನನ್ನು ಮಿಸ್ ಮಾಡಿಕೊಳ್ತೀನಿ. ನಾನು ಮಾಡುವ ಎಲ್ಲ ಕಾರ್ಯಗಳಲ್ಲಿಯೂ ನನ್ನ ತಂದೆ-ತಾಯಿಯನ್ನು ಉಳಿಸಿಕೊಳ್ತೀನಿ” ಎಂದು ನಟ ವಿ ರವಿಚಂದ್ರನ್ ಅವರು ಹೇಳಿದ್ದಾರೆ.
ಅಂದಹಾಗೆ ಈ ಶೋನಲ್ಲಿ ನಿರಂಜನ್ ದೇಶಪಾಂಡೆ ಅವರು ನಿರೂಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.