ಪೋಲಿಗಳಿಂದ ಸೇಫ್‌ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್‌ ಕೊಟ್ಟರಂತೆ ಲೀಲಾವತಿ!

Published : Mar 11, 2025, 05:43 PM ISTUpdated : Mar 11, 2025, 05:49 PM IST
ಪೋಲಿಗಳಿಂದ ಸೇಫ್‌ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್‌ ಕೊಟ್ಟರಂತೆ ಲೀಲಾವತಿ!

ಸಾರಾಂಶ

ಮಾಜಾ ಟಾಕೀಸ್ ಕಾರ್ಯಕ್ರಮದಲ್ಲಿ ಗಿರಿಜಾ ಲೋಕೇಶ್, ಜಯಮಾಲಾ, ವಿನಯ್ ಪ್ರಸಾದ್ 80-90ರ ದಶಕದ ಸಿನಿಮಾ ಅನುಭವ ಹಂಚಿಕೊಂಡರು. ರವಿಚಂದ್ರನ್ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಜಯಮಾಲಾ ವಿವರಿಸಿದರು. ಅಂದಿನ ಕಾಲದಲ್ಲಿ ಮೇಕಪ್ ಮ್ಯಾನ್, ಡ್ರೈವರ್ ರಕ್ಷಣೆಗೆ ಇರುತ್ತಿದ್ದರು ಎಂದು ನೆನಪಿಸಿಕೊಂಡರು. ಲೀಲಾವತಿ ನೀಡಿದ ಹೇರ್‌ಪಿನ್ ರಕ್ಷಣೆಯ ಸಲಹೆಯನ್ನು ಜಯಮಾಲಾ ಹಂಚಿಕೊಂಡರು.

ಸೃಜನ್ ಲೋಕೇಶ್ ನಡೆಸಿಕೊಡುವ ಮಾಜಾ ಟಾಕೀಸ್ ಕಾರ್ಯಕ್ರಮದಲ್ಲಿ ಈ ವೀಕೆಂಡ್ ಗಿರಿಜಾ ಲೋಕೇಶ್, ಜಯಮಾಲಾ ಮತ್ತು ವಿನಯ್ ಪ್ರಸಾದ್ ಭಾಗಿಯಾಗಿದ್ದರು. 80-90ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿ ಹೇಗಿತ್ತು? ಹಾಡುಗಳು ಹೇಗಿತ್ತು ಹಾಗೂ ಮರೆಯಲಾಗದ ಚಿತ್ರೀಕರಣದ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಜೀವನದಲ್ಲಿ ಮರೆಯಲಾಗದ ಘಟನೆ ಹಾಗೂ ಒಂದು ಸೇಫ್‌ ರೂಲ್‌ನ ಜಯಮಲಾ ಹಂಚಿಕೊಂಡಿದ್ದಾರೆ. 

'ರವಿಚಂದ್ರನ್ ಅವರ ಖದೀಮ ಕಳ್ಳರು ಸಿನಿಮಾ ಸಮಯದಲ್ಲಿ. ಹೊಗನೇಕಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಂಬಿ ನೀನು ಜಯಮಾಲಾ ಕರ್ಕೊಂಡು ಬೇಗ ಬಾ ಅಂತ ಹೇಳಿ ಹೊರಟರು. ಸ್ಟೇಜ್ ಹತ್ತಿರ ಹೋಗಬೇಕು ಅಷ್ಟರಲ್ಲಿ ಯಾವುದೋ ಒಂದು ಗುಂಪು ನನ್ನನ್ನು ಸಂಪೂರ್ಣವಾಗಿ ಎತ್ತಿಕೊಂಡರು. ಎತ್ತಿಕೊಂಡು ಸಾಗರದ ರೀತಿಯಲ್ಲಿ ದೂರ ಕರ್ಕೊಂಡು ಹೋಗಿಬಿಟ್ಟರು. ಆಗ ಒಂದು ವಾಯ್ಸ್‌ ಬಂತು ಅಂತ ಮಕ್ಕಳ ನನ್ನ ಹೀರೋಯಿನ್‌ನ ಮರ್ಯಾದೆಯಿಂದ ಇಲ್ಲಿ ಕೂರಿಸಿ ನೀವು ಬದುಕುತ್ತೀರಿ ಇಲ್ಲ ಅಂದ್ರೆ ಏನ್ ಮಾಡ್ತೀನಿ ನಿಮಗೆ ಮಕ್ಕಳ ಅಂದ್ರು. ನನ್ನನ್ನು ಹಾಗೆ ಕರ್ಕೊಂಡು ಬಂದು ಸ್ಟೇಜ್‌ ಮೇಲೆ ಎತ್ತು ಬಿಸಾಡಿದರು. ಅಂಬರೀಶ್ ಅವರು ಚೆನ್ನಾಗಿ ಬೈದರು.

ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ

'ನಮ್ಮ ಕಾಲದಲ್ಲಿ ನಮ್ಮನ್ನು ಕಾಪಾಡುತ್ತಿದ್ದವರು ಮೇಕಪ್ ಮ್ಯಾನ್, ಕಾರು ಡ್ರೈವರ್ ಮತ್ತು ಕಾಸ್ಟ್ಯೂಮ್ ಹುಡುಗರು ಆಗ ಯಾವ ಬೌಸರ್‌ಗಳು ಇರುತ್ತಿರಲಿಲ್ಲ. ನಾವು ಗುಬ್ಬಚ್ಚಿ ರೀತಿ ಆಗುತ್ತೀವಿ ಆಗ ಹೀರೋಗಳು ಜಾಗಬಿಡಿ ಜಾಗಬಿಡಿ ಎಂದು ಕಾಪಾಡುತ್ತಿದ್ದರು.  ಆದರೆ ಲೀಲಾವತಿ ಅಮ್ಮನವರು ಒಂದು ಸಲಹೆ ಕೊಟ್ಟರು. ನಾವು ತಲೆ ಕೂದಲಿಗೆ ಬಳಸುತ್ತಿದ್ದ ಹೇರ್‌ಪಿನ್‌ನ ನಮ್ಮ ಸೇಫ್ಟಿ ಯಂತ್ರವಾಗಿ ಬಳಸಬೇಕು. ಗುಂಪಿನಲ್ಲಿ ಓಡಾಡುತ್ತಿರುವಾಗ ಕೈಯಲ್ಲಿ ಒಂದು ಪಿನ್‌ ಇಟ್ಟುಕೊಳ್ಳಬೇಕ ಯಾರೇ ಬಂದು ಅಸಭ್ಯವಾಗಿ ಮುಟ್ಟಿದರೆ ಅವರಿಗೆ ಚುಚ್ಚಬೇಕು. ತಕ್ಷಣವೇ ಕೂಗಿಕೊಂಡು ದೂರ ಓಡುತ್ತಾರೆ ಆಗ ನಾವು ಮುಂದೆ ಆರಾಮ್ ಆಗಿ ನಡೆದುಕೊಂಡು ಹೋಗಬಹುದು. ಇದು ನಿಜಕ್ಕೂ ನಮಗೆ ಸಹಾಯ ಮಾಡುತ್ತದೆ' ಎಂದು ನಟಿ ಜಯಮಾಲಾ ಹೇಳಿದ್ದಾರೆ.

ಅಯ್ಯಯ್ಯೋ...ಸಲ್ಮಾನ್ ಖಾನ್‌ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!