ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ.
ಬೆಂಗಳೂರು (ಮಾ.25): ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಕಾಟೇರ ಸಿನಿಮಾದ ಮಚ್ಚು ಹಿಡಿದು ಸಾರ್ವಜನಿಕರ ಸ್ಥಳದಲ್ಲಿ ರೀಲ್ಸ್ ಮಾಡಿದ್ದ ಕೇಸಿನಲ್ಲಿ ಪೊಲೀಸರು ಬಂಧಿಸಿ ಮಚ್ಚು ತಂದು ಒಪ್ಪಿಸುವಂತೆ ತಾಕೀತು ಮಾಡಿದ್ದರು. ಇದರ ಬೆನ್ನಲ್ಲಿಯೇ ರಾತ್ರೋ ರಾತ್ರಿ ರಜತ್ ಕಡೆಯವರು ನಕಲಿ ಫೈಬರ್ ಮಚ್ಚನ್ನು ಪೊಲೀಸರಿಗೆ ತಂದುಕೊಟ್ಟು ಪೊಲೀಸ್ ಠಾಣೆಯಿಂದ ಬಿಡುಗಡೆ ಆಗಿದ್ದರು. ಆದರೆ, ರೀಲ್ಸ್ ಮಾಡಿದ್ದ ಆಯುಧವನ್ನು ಬದಲಿಸಿ ತಂದಿದ್ದಾರೆ ಎಂಬುದು ತಿಳಿದುಬಂದಲ್ಲಿ ಸಾಕ್ಷ್ಯ ನಾಶದ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಂಧನವಾದ ಬೆನ್ನಲ್ಲಿಯೇ ಪೊಲೀಸರಿಗೆ ಒಪ್ಪಿಸಿದ ಮಚ್ಚು ನಕಲಿ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದೀಗ ಪೊಲೀಸರಿಗೆ ಕೊಟ್ಟಿರುವ ಮಚ್ಚು ಹಾಗೂ ರೀಲ್ಸ್‌ನಲ್ಲಿ ಬಳಕೆ ಮಾಡಿದ ಮಚ್ಚು ತಾಳೆಯಾಗುತ್ತಿಲ್ಲ ಎಂಬುದು ಪೊಲೀಸರಿಗೂ ಅನುಮಾನ ಬಂದಿದೆ. ಇದೀಗ ರಜತ್ ಹಾಗೂ ವಿನಯ್ ಅವರ ಮೇಲೆ ಸಾಕ್ಷ್ಯ ನಾಶದ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ ರಜತ್, ವಿನಯ್ ರಕ್ಷಣೆಗೆ ಮುಂದಾದರೇ ಪೊಲೀಸರು! ನಕಲಿ ಮಚ್ಚು ಒಪ್ಪಿಕೊಂಡ ಖಾಕಿಪಡೆ!
ರಜತ್ ಹಾಗೂ ವಿನಯ್ ವಿಡಿಯೋದಲ್ಲಿ ಬಳಸಿರುವ ಮಚ್ಚು, ಜಪ್ತಿ ಮಾಡಿರುವ ಮಚ್ಚು ತಾಳೆಯಾಗುತ್ತಿಲ್ಲ. ಹೀಗಾಗಿ, ಪೊಲೀಸರಿಂದ ರಜತ್, ವಿನಯ್ ಮೇಲೆ ಸಾಕ್ಷ್ಯ ನಾಶ ಕೇಸ್ ಹಾಕುವ ಸಾಧ್ಯತೆಯಿದೆ. ಒಂದು ವೇಳೆ ಬೇರೆ ಮಚ್ಚನ್ನು ನೀಡಿದ್ದರೆ ಸಾಕ್ಷ್ಯ ನಾಶ ಕೇಸ್ ಹಾಕಿ ಬಂಧನ ಮಾಡುವ ಸಾಧ್ಯತೆಯಿದೆ.
ಬಂಧನದ ಭೀತಿಯಿಂದ ವಿಚಾರಣೆಗೆ ಹಾಜರಾಗದ ರಜತ್, ವಿನಯ್. ವಿಚಾರಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ರಜತ್ ಇದೀಗ ಇಬ್ಬರ ಫೋನ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಠಾಣೆ ಬಳಿ ರಜತ್, ವಿನಯ್ ಬಂದಿಲ್ಲ. ಬಂಧನದ ಭೀತಿಯಿಂದ ಠಾಣೆಗೆ ಹಾಜರಾಗದೆ ಬಿಗ್ ಬಾಸ್ ಸ್ಪರ್ಧಿಗಳು ಎಸ್ಕೇಪ್ ಆಗಿದ್ದಾರಾ? ಎಂಬ ಅನುಮಾನ ವ್ಯಕ್ತವಾಗುತ್ತಿವೆ. ಜೊತೆಗೆ, ಕಾನೂನು ಸಲಹೆ ಪಡೆಯಲು ವಕೀಲರ ಸಂಪರ್ಕಿಸುವ ಸಾಧ್ಯತೆಯೂ ಇದೆ. ಇಬ್ಬರೂ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದರೆ ಪುನಃ ಬಂಧನ ಆಗುವುದು ಖಚಿತವಾಗಿದ್ದರಿಮದ ವಿಚಾರಣೆಗೆ ಹೆದರಿ ಇದುವರೆಗೂ ಠಾಣೆಗೆ ಬರದೇ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಾಟೇರನ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ರಜತ್, ವಿನಯ್‌ಗೆ ಬಾಂಬೆ ಕಟ್ ಹಾಕಿ ಕೂರಿಸಿದ ಪೊಲೀಸ್!
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, ಕಿರುತೆರೆ ನಟರಾದ ರಜತ್ , ವಿನಯ್ ರೀಲ್ಸ್ ಪ್ರಕರಣದಲ್ಲಿ ಬಳಕೆ ಮಾಡಿದ್ದು, ನಕಲಿ ಮಚ್ಚು ಅಥವಾ ಅಸಲಿ ಮಚ್ಚು ಎಂಬುದರ ಬಗ್ಗೆ ತಾಂತ್ರಿಕವಾಗಿ ಪರಿಶೀಲನೆ ನಡೆಸುತ್ತೇವೆ. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಅದು ನಿಜವಾದ ಮಚ್ಚು ಆಗಿದ್ದರೆ, ಸಾಕ್ಷ್ಯ ನಾಶದ ಬಗ್ಗೆ ಕೇಸ್ ಹಾಕುತ್ತೇವೆ ಎಂದು ತಿಳಿಸಿದರು.