ಕನ್ನಡದ ಮದುವೆ ಮನೆ, ಡಬಲ್ ಡೆಕ್ಕರ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕುಂಡಲಿ ಭಾಗ್ಯ ಖ್ಯಾತಿಯ ನಟಿ ಶ್ರದ್ಧಾ ಆರ್ಯ ಅವರೀಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ.
ಕನ್ನಡದಲ್ಲಿ ಗಣೇಶ್ ಅವರ ಜೊತೆ ಮದುವೆ ಮನೆ ಸಿನಿಮಾ, ಜಗ್ಗೇಶ್ ಅವರ ಡಬಲ್ ಡೆಕ್ಕರ್ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ, ಹಿಂದಿ ಕಿರುತೆರೆಯ ಫೇಮಸ್ ನಟಿ ಶ್ರದ್ಧಾ ಆರ್ಯ ಈಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಝೀ ಟಿವಿಯ ಹಿಂದಿ ಸೀರಿಯಲ್ ಕುಂಡಲಿ ಭಾಗ್ಯ ಎಂಬ ಖ್ಯಾತಿಯ ನಟಿ ಈಕೆ. ಈ ಧಾರವಾಹಿಯಲ್ಲಿ ಈಕೆ ಹತ್ತು ಬಾರಿ ಮದುವೆಯಾಗುವ ದೃಶ್ಯವಿದೆ. ಇದರಿಂದ ನಟಿ ಸಾಕಷ್ಟು ಟ್ರೋಲ್‌ಗೂ ಒಳಗಾಗಿದ್ದು ಇದೆ. ಆದರೆ ಈ ಸೀರಿಯಲ್ ಕಥೆಯೇ ರೋಚಕವಾಗಿದ್ದು, ಯಾವ್ಯಾವುದೋ ಕಾರಣಗಳಿಂದ ನಟಿ ಹತ್ತು ಬಾರಿ ಮದುವೆಯಾಗುವ ದೃಶ್ಯವಿದೆ. ಸೀರಿಯಲ್ ಕಥೆ ಏನೇ ಆಗಿದ್ದರೂ, ನಟಿ ನಿಜ ಜೀವನದಲ್ಲಿ ಕೈ ಹಿಡಿದದ್ದು, ರಾಹುಲ್ ನಾಗಲ್ ಎಂಬುವವರ ಜೊತೆ. 2021ರಲ್ಲಿ ಈ ಜೋಡಿ ಮದುವೆಯಾಗಿತ್ತು. ಇದೀಗ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ ಈ ದಂಪತಿ.
ಈ ಕುರಿತು ನಟಿ, ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಮದುವೆಯ ಕಥೆಯೂ ರೋಚಕವಾಗಿದೆ. ನಟ-ನಟಿಯರು ಸೇರಿದಂತೆ ಸೆಲೆಬ್ರಿಟಿಗಳ ಮದುವೆ ಎಂದರೆ ಹಲವು ತಿಂಗಳುಗಳಿಂದಲೇ ಸದ್ದು ಮಾಡುತ್ತಿರುತ್ತದೆ. ಅದರೆ ಶ್ರದ್ಧಾ ಮಾತ್ರ ಮದುವೆಯ ಕೊನೆಯ ದಿನಗಳ ವರೆಗೂ ಅದನ್ನು ಶೇರ್ ಮಾಡಿಕೊಂಡಿರಲಿಲ್ಲ. ಕೊನೆಗೆ ಕುಟುಂಬಸ್ಥರು, ಆತ್ಮೀಯರಷ್ಟನ್ನೇ ಕರೆದು ಮದುವೆಯಾಗಿ ಎಲ್ಲರಿಗೂ ಸರ್‍ಪ್ರೈಸ್ ಕೊಟ್ಟಿದ್ದರು. ಕೊನೆಯವರೆಗೂ ಮದುವೆಯಾಗುವ ಹುಡುಗ ಯಾರು ಎಂದು ಕೂಡ ಶ್ರದ್ಧಾ ತಿಳಿಸಿಲ್ಲ. 'ಕುಂಡಲಿ ಭಾಗ್ಯ' ಧಾರಾವಾಹಿಯ ಸಂದರ್ಭದಲ್ಲಿ 2 ವಾರಗಳ ರಜೆ ಹಾಕಿದಾಗಲೇ ಹಲವರಿಗೆ ಅನುಮಾನ ಹುಟ್ಟಿದ್ದರೂ, ನಟಿ ಆ ಬಗ್ಗೆ ಹೇಳಿರಲಿಲ್ಲ.
ಅವ್ರ ಹೆಸರನ್ನೇನಾದ್ರೂ ಹೇಳಿದ್ದಿದ್ರೆ, ಕಟ್ಕೊಂಡಾಕೆ ಜೀವ ಕಳ್ಕೋತಿದ್ರು: ಲೀಲಾವತಿ ಹಳೇ ವಿಡಿಯೋ ವೈರಲ್
ಇನ್ನು ನಟಿಯ ಸಂಬಂಧದ ಬಗ್ಗೆ ಹೇಳುವುದಾದರೆ, 2015ರಲ್ಲಿ ಅನಿವಾಸಿ ಭಾರತೀಯ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು, ಆದರೆ ಕೆಲ ಕಾರಣಗಳಿಂದ ಮದುವೆಯಾಗಿರಲಿಲ್ಲ. ಬಳಿಕ 2019ರಲ್ಲಿ 'ನಚ್ ಬಲಿಯೇ' ಶೋನಲ್ಲಿ ಅಲಮ್ ಮಕ್ಕರ್ ಜೊತೆ ಶ್ರದ್ಧಾ ಭಾಗವಹಿಸಿದ್ದು, ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೂ ಅದು ಮುಂದುವರೆದಿರಲಿಲ್ಲ. ನೌಕಾಪಡೆಯಲ್ಲಿ ಕೆಲಸ ಮಾಡುವ ರಾಹುಲ್ ಜೊತೆ ಮದುವೆ ಫಿಕ್ಸ್ ಆಗಿದ್ದರೂ ಕೊನೆಯವರೆಗೂ ಈ ವಿಷಯವನ್ನು ತಿಳಿಸದೇ ಇರುವುದಕ್ಕೆ ಇದೇ ಕಾರಣ ಎಂದೂ ಹೇಳಲಾಗುತ್ತಿದೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, 1987ರ ಆಗಸ್ಟ್ 17ರಂದು ಜನಿಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2005 ರಿಂದ ನಟನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಮುಂಬೈಗೆ ಶಿಫ್ಟ್ ಆಗಿದ್ದರು. ಹಿಂದಿ, ತೆಲುಗು, ತಮಿಳಿನ ಅನೇಕ ಚಿತ್ರಗಳಲ್ಲಿ ಶ್ರದ್ಧಾ ಆರ್ಯ ಅಭಿನಯಿಸಿದ್ದಾರೆ. ಗಣೇಶ್ ಅವರ ಜೊತೆ 'ಉಲ್ಲಾಸ ಉತ್ಸಾಹ' ಚಿತ್ರದಲ್ಲಿ ನಟಿ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆ ಜಾಗಕ್ಕೆ ಯಾಮಿ ಗೌತಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಕೊನೆಗೆ ಗಣೇಶ್ ಜೊತೆಯಲ್ಲಿಯೇ 'ಮದುವೆ ಮನೆ'ಯಲ್ಲಿ ನಟಿಸು ಅವಕಾಶ ಸಿಕ್ಕಿತು.
ಕಳೆದ ವಾರ ಗಂಡ-ಹೆಂಡ್ತಿ ಗೋವಾಕ್ಕೆ ಹೋಗಿದ್ರು: ನಟಿ ಶೋಭಿತಾ ಸಾವಿಗೆ ನಟ ಹರ್ಷ ಹೇಳಿದ್ದೇನು?