ಎರಡು ಜಡೆ ಸೇರಿದ್ರೆ ಜಗಳ ಆಗಲ್ಲ, ಬಹುತೇಕ ಗಂಡಸರು ಇದಕ್ಕೆ ಕಾರಣ : ಭಾಗ್ಯಲಕ್ಷ್ಮಿ ಅತ್ತೆ ಕುಸುಮಾ

Published : Dec 06, 2024, 11:06 AM ISTUpdated : Dec 07, 2024, 09:31 AM IST
ಎರಡು ಜಡೆ ಸೇರಿದ್ರೆ ಜಗಳ ಆಗಲ್ಲ, ಬಹುತೇಕ ಗಂಡಸರು ಇದಕ್ಕೆ ಕಾರಣ : ಭಾಗ್ಯಲಕ್ಷ್ಮಿ ಅತ್ತೆ ಕುಸುಮಾ

ಸಾರಾಂಶ

ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ಪದ್ಮಜಾ ರಾವ್ ಅಲಿಯಾಸ್ ಕುಸುಮಾ ವೀಕ್ಷಕರ ಮುಂದೆ ಬಂದಿದ್ದಾರೆ. ಸೀರಿಯಲ್ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಕುಸುಮಾ, ನೊಂದ ಹೆಣ್ಮಕ್ಕಳಿಗೆ ಧೈರ್ಯ ಹೇಳಿದ್ದಾರೆ.   

ಕಲರ್ಸ್ ಕನ್ನಡ (Colors Kannada) ದಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (BhagyaLakshmi )ಸೀರಿಯಲ್ನ ಹೊಸ ಅಧ್ಯಾಯ ಶುರುವಾಗ್ತಿದೆ. ತಾಂಡವ್ ಮನೆಯಿಂದ ಹೊರಗೆ ಬಂದಿರುವ ಭಾಗ್ಯಾ ತಲೆ ಮೇಲೆ ಸಾಕಷ್ಟು ಹೊರೆ ಇದೆ. ಅತ್ತೆ- ಮಾವ, ಇಬ್ಬರು ಮಕ್ಕಳನ್ನು ಭಾಗ್ಯಾ ನೋಡಿಕೊಳ್ಬೇಕಿದೆ. ತವರು ಸೇರಿರುವ ಭಾಗ್ಯಾಗೆ  ಒಂದೊಂದೇ ಸವಾಲು ಎದುರಾಗಲಿದೆ. ಈಗಾಗಲೇ ತನ್ವಿ, ಶಾಲೆಯಲ್ಲಿ ಹಾಕಿ ಸ್ಟಿಕ್ ನಿಂದ ಸಹಪಾಠಿಗೆ ಹೊಡೆದು ರಾದ್ಧಾಂತ ಮಾಡ್ಕೊಂಡಿದ್ದಾಳೆ. ಪತಿಯಿಂದ ದೂರವಾಗಿರುವ ಭಾಗ್ಯಾ, ಎಲ್ಲ ಮಹಿಳೆಯರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದು, ಸೀರಿಯಲ್ ವೀಕ್ಷಣೆ ಮಾಡುವಂತೆ ಭಾಗ್ಯಾ ಅತ್ತೆ ಕುಸುಮಾ ವಿನಂತಿ ಮಾಡ್ಕೊಂಡಿದ್ದಾರೆ.

ಕಲರ್ಸ್ ಕನ್ನಡ  ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಬಂದ ಕುಸುಮಾ, ನನಗೆ ಎಲ್ಲವೂ ಬರುತ್ತೆ. ಆದ್ರೆ ಈ ಇನ್ಸ್ಟಾಗ್ರಾಮ್, ಲೈವ್, ಕಂಪ್ಯೂಟರ್ನಲ್ಲಿ ಸ್ವಲ್ಪ ಹಿಂದೆ. ಅದನ್ನೂ ಕಲಿತೀನಿ ಎನ್ನುತ್ತಲೇ ವೀಕ್ಷಕರ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಭಾಗ್ಯಲಕ್ಷ್ಮಿ ಪಾಸಿಟಿವ್ ತಿರುವಿಗೋಸ್ಕರ ಎಲ್ಲರೂ ಕಾಯ್ತಾ ಇದ್ರು, ಕುಸುಮಾ ಆಗಿ, ಪದ್ಮಜಾ ರಾವ್ ಆಗಿ, ಅಮ್ಮನಾಗಿ, ಅತ್ತೆಯಾಗಿ ನಾನೂ ಭಾಗ್ಯಾ ಸ್ಟ್ರಾಂಗ್ ಆಗೋದನ್ನು ಕಾಯ್ತಿದ್ದೆ. ಈಗ ನಿಮ್ಮಷ್ಟೆ ನನಗೂ ಖುಷಿಯಾಗಿದೆ ಎಂದು ಕುಸುಮಾ ಕೇಳಿದ್ದಾರೆ. ಭಾಗ್ಯಲಕ್ಷ್ಮಿಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಕುಸುಮಾ, ಒಂದು ಹೆಣ್ಣು ಮಗಳು, ನಿಜ ಜೀವನದಲ್ಲಿ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು. ಸಂಬಂಧಕ್ಕಿಂತ ಮೊದಲು ಆಕೆ ಹೆಣ್ಣಾಗಿರಬೇಕು. ಹೆಣ್ಣಾಗಿ ಏನೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಬೇಕೋ ಅದನ್ನೆಲ್ಲ ತೆಗೆದುಕೊಳ್ಬೇಕು ಎಂದಿದ್ದಾರೆ. ಭಾಗ್ಯಾಕೆ ನನ್ನ ಮಗನೇ ನೋವು, ಹಿಂಸೆಯನ್ನು ನೀಡಿದ್ದಾನೆ. ಅದೊಂದು ದುರಂತ. ನನ್ನ ಮಗ ಎನ್ನುವ ಮಮತೆಯಲ್ಲಿ ನಾನು ಅವನಿಗೆ ಬೆಂಬಲ ನೀಡಿ, ಸೊಸೆಯನ್ನು ದೂರ ಮಾಡಿ ಒಂದು ಹೆಣ್ತನಕ್ಕೆ ಮೋಸ ಮಾಡೋದು ಎಷ್ಟು ಸರಿ ಎಂದು ಕುಸುಮಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನೋವಾಗ್ತಿರೋ ಹೆಣ್ಣಿಗೆ ಬೆಂಬಲ ನೀಡೋದು ನನ್ನ ಕರ್ತವ್ಯ. ಹಾಗಾಗಿಯೇ ನಾನು ಸೊಸೆ ಪರ ನಿಂತಿದ್ದೇನೆ. ಸದಾ ಆಕೆ ಜೊತೆಗಿರುತ್ತೇನೆ ಎಂದಿದ್ದಾರೆ. ಈ ಮೂಲಕ ತಾಂಡವ್ ಬಂದು ಕರೆದ್ರೂ ಕುಸುಮಾ ಹೋಗೋದಿಲ್ಲ ಎಂಬುದು ಸ್ಪಷ್ಟವಾಯ್ತು.  

ಸಿಹಿ ಅಂತ್ಯಸಂಸ್ಕಾರ ಸೀನ್‌ಗೆ ವೀಕ್ಷಕರ ವಿರೋಧ, ರಿಯಲ್ ಅಮ್ಮನನ್ನು ತರಾಟೆಗೆ ತೆಗೆದುಕೊಂಡ

ಎರಡು ಜಡೆ  ಒಂದಾಗಲ್ಲ, ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತನ್ನು ನಾನು ಒಪ್ಪೋದಿಲ್ಲ ಎಂದು ಕುಸುಮಾ ಪಾತ್ರಧಾರಿ ಪದ್ಮಜಾ ರಾವ್ (Padmaja Rao) ಇದೇ ಸಮಯದಲ್ಲಿ ಹೇಳಿದ್ದಾರೆ. ಹೆಣ್ಣಿಗೆ ಹೆಣ್ಣು ಶತ್ರುವಲ್ಲ. ನಾವೆಲ್ಲ ಚೆನ್ನಾಗಿಯೇ ಇರ್ತೇವೆ. ನಮಗೆ ನೋವು ಮಾಡೋದು, ಅವಮಾನ ಮಾಡೋದು ಗಂಡಸರು. ಎಲ್ಲ ಗಂಡಸರು ಹಾಗಲ್ಲ. ಆದ್ರೆ ಬಹುತೇಕರು ಗಂಡಸರು ಹುಂಬುತನ, ಜೋರಿನಿಂದ ಹಾಗೆ ಮಾಡ್ತಾರೆ ಎಂದು ಕುಸುಮಾ ಹೇಳಿದ್ದಾರೆ. 

ಸೀರಿಯಲ್ ಬರೀ ಮನರಂಜನೆ ನೀಡ್ತಿಲ್ಲ, ಕಲಿಕೆ ಇದೆ, ಧೈರ್ಯ ನೀಡ್ತಿದೆ, ಅತ್ತೆ – ಸೊಸೆ ಬಾಂಧವ್ಯವನ್ನು ಭಾಗ್ಯಲಕ್ಷ್ಮಿ ತಿಳಿಸ್ತಿದೆ. ಭಾಗ್ಯಾಳಂತ ಸಮಸ್ಯೆಯನ್ನು ಅನೇಕ ಮಹಿಳೆಯರು ಎದುರಿಸ್ತಿದ್ದಾರೆ. ಇದು ಹೊಸ ಸಮಸ್ಯೆಯಲ್ಲ. ಆದ್ರೆ ಅದನ್ನೆಲ್ಲ ಹೇಗೆ ಎದುರಿಸಬೇಕು ಎಂಬುದನ್ನು ಸೀರಿಯಲ್ ನಿಮಗೆ ತಿಳಿಸ್ತಿದೆ ಎಂದು ಕುಸುಮಾ ಹೇಳಿದ್ದಾರೆ. ಕಷ್ಟಕ್ಕೆ ಹೆದರದೆ ಪ್ರತಿ ಕೆಲಸವನ್ನು ಧೈರ್ಯದಿಂದ ಮಾಡಿ ಎಂದು ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿರುವ ಕುಸುಮಾ, ಕೊನೆಯಲ್ಲಿ ಭಾಗ್ಯಲಕ್ಷ್ಮಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

ಹೆರಿಗೆಯಾದ ನಾಲ್ಕೇ ತಿಂಗಳಿಗೆ ಇಷ್ಟೊಂದು ಕುಣಿದ ನಟಿ, ಹುಷಾರಿ ಎಂದ ಫ್ಯಾನ್ಸ್

ಭಾಗ್ಯಲಕ್ಷ್ಮಿಯಲ್ಲಿ ಭಾಗ್ಯಾಗೆ ಅತ್ತೆ ಕುಸುಮಾ ನೀಡ್ತಿರುವ ಸಪೋರ್ಟ್ ವೀಕ್ಷಕರಿಗೆ ಮೊದಲಿನಿಂದಲೂ ಇಷ್ಟವಾಗಿದೆ. ನಮ್ಮ ಮನೆಯಲ್ಲೂ ಇಂಥ ಅತ್ತೆ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಕೆಲವರು ಕಮೆಂಟ್ ಮೂಲಕ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ
BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ