Bhagyalakshmi Serial: ವೀಕ್ಷಕರ ಖುಷಿಗೆ ಕೊಳ್ಳಿ ಇಟ್ಟ ಭಾಗ್ಯ! ಛೇ ಇದೆಲ್ಲ ಬೇಕಿತ್ತ ಭಾಗ್ಯಕ್ಕ?

Published : May 02, 2025, 10:34 AM ISTUpdated : May 02, 2025, 10:59 AM IST
Bhagyalakshmi Serial: ವೀಕ್ಷಕರ ಖುಷಿಗೆ ಕೊಳ್ಳಿ ಇಟ್ಟ ಭಾಗ್ಯ! ಛೇ ಇದೆಲ್ಲ ಬೇಕಿತ್ತ ಭಾಗ್ಯಕ್ಕ?

ಸಾರಾಂಶ

ದುರಹಂಕಾರಿಗಳಾದ ತಾಂಡವ್ ಮತ್ತು ಶ್ರೇಷ್ಠ ಕೆಲಸ ಕಳೆದುಕೊಂಡು ಅವಮಾನಿತರಾಗಿದ್ದರು. ಭಾಗ್ಯಳ ಮಕ್ಕಳಿಗೋಸ್ಕರ ಅವರಿಗೆ ಮರುನೇಮಕ ದೊರಕಿದೆ. ವೀಕ್ಷಕರು ಮೊದಲು ಸಂತೋಷಪಟ್ಟರೂ, ಈಗ ಭಾಗ್ಯಳ ಮರುಕದಿಂದ ಬೇಸರಗೊಂಡಿದ್ದಾರೆ. ತಾಂಡವ್ ಮತ್ತೆ ಭಾಗ್ಯಳಿಗೆ ತೊಂದರೆ ಕೊಡುವ ಸೂಚನೆ ಇದೆ.

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ತಾಂಡವ್‌, ಶ್ರೇಷ್ಠ ದುರಹಂಕಾರ, ಸೊಕ್ಕಿಗೆ ತಕ್ಕ ಶಾಸ್ತಿ ಆಗಿದೆ. ಇವರಿಬ್ಬರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ತಾಂಡವ್‌ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕ್ಯಾಂಟೀನ್‌ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿತ್ತು. ಈಗ ಈ ಜಾಗದಿಂದ ತಾಂಡವ್‌, ಶ್ರೇಷ್ಠಗೆ ಗೇಟ್‌ಪಾಸ್‌ ಸಿಕ್ಕಿದ್ದರೂ ಕೂಡ, ಮತ್ತೆ ರೀ ಜಾಯಿನ್‌ ಮಾಡಿಸಿಕೊಳ್ಳಲಾಗಿದೆ.

ತಾಂಡವ್‌ ಕಂಪೆನಿಯಲ್ಲಿ ಭಾಗ್ಯಗೆ ಉದ್ಯೋಗ! 
ಹೌದು, ತಾಂಡವ್‌, ಶ್ರೇಷ್ಠ ಸಿಕ್ಕಾಪಟ್ಟೆ ಮೆರೆಯುತ್ತಿದ್ದರು, ಭಾಗ್ಯಳಿಗೆ ಅವಳ ಪಾಡಿಗೆ ಅವಳನ್ನು ಇರಲು ಕೂಡ ಬಿಡುತ್ತಿರಲಿಲ್ಲ, ನಿಂದಿಸುತ್ತಿದ್ದರು, ಅಷ್ಟೇ ಅಲ್ಲದೆ ಅವಳ ಕೆಲಸವನ್ನು ಕೂಡ ಹಾಳು ಮಾಡುತ್ತಿದ್ದರು. ಈಗ ಅವರ ಕಂಪೆನಿಯಲ್ಲಿ ಕ್ಯಾಂಟೀನ್‌ ನಡೆಸಲು ಸರಿಯಾದ ಅವಕಾಶ ಸಿಕ್ಕಿದೆ. 

ಭಾಗ್ಯಳಿಂದಲೇ ತಾಂಡವ್‌ಗೆ ಮತ್ತೆ ಕೆಲಸ! 
ಕೆಲಸ ಕಳೆದುಕೊಂಡ ತಾಂಡವ್‌ ತನಗೆ ಮತ್ತೆ ಕೆಲಸ ಸಿಗತ್ತೆ ಎನ್ನುವ ಭ್ರಮೆಯಲ್ಲಿದ್ದನು. ಶ್ರೇಷ್ಠ ಕೂಡ ಹಾಗೆ ಅಂದುಕೊಂಡಿದ್ದಳು. ಆದರೆ ಇದೆಲ್ಲ ಈಗ ನುಚ್ಚು ನೂರಾಗಿದೆ. ತಾಂಡವ್‌ಗೆ ಎಲ್ಲರೂ ಅವಮಾನ ಮಾಡಿಸಿ ಕಳಿಸಿದ್ದಾರೆ ಬಿಟ್ರೆ ಎಲ್ಲೂ ಕೆಲಸವೇ ಸಿಗಲಿಲ್ಲ. ಈ ಎಪಿಸೋಡ್‌ ನೋಡಿ ವೀಕ್ಷಕರು ತುಂಬ ಖುಷಿಪಟ್ಟಿದ್ದರು. ಇನ್ನು ಭಾಗ್ಯ ಬಿಟ್ಟು ಉಳಿದವರೂ ಕೂಡ ಸರಿಯಾಗಿದೆ ಆಗ್ತಿದೆ ಎಂದು ಅಂದುಕೊಂಡಿದ್ದರು. ಆದರೆ ಭಾಗ್ಯ ಮಾತ್ರ ಬೇಸರ ಮಾಡಿಕೊಂಡಿದ್ದಳು.
ನನ್ನ ಮಕ್ಕಳಾದ ತನ್ವಿ, ತನ್ಮಯ್‌ ಎದುರಿಗೆ ಅವರ ತಂದೆಗೆ ಅವಮಾನ ಆಗಬಾರದು, ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಪಾಲಕರಿಗೆ ಅವಮಾನ ಆಗಬಾರದು ಎಂದು ಭಾಗ್ಯ ಹೇಳಿದ್ದಳು. ಈಗ ಅವಳಿಂದಲೇ ಮತ್ತೆ ತಾಂಡವ್‌, ಭಾಗ್ಯಗೆ ಕೆಲಸ ಸಿಕ್ಕಿದೆ ಎಂದು ಕಾಣುತ್ತದೆ. 

ವೀಕ್ಷಕರಿಗೆ ಬೇಸರ ಬಂದಿದೆ! 
ತಾಂಡವ್‌, ಶ್ರೇಷ್ಠ ಕಂಡರೆ ಅವರ ಬಾಸ್‌ಗೆ ಆಗೋದಿಲ್ಲ. ಭಾಗ್ಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರೋ ಅವರು ಈಗ ಅವಳ ಮನವಿ ಮೇರೆಗೆ ಈ ದುಷ್ಟರನ್ನು ಮತ್ತೆ ಕಂಪೆನಿಗೆ ಸೇರಿಸಿಕೊಳ್ಳಬಹುದು. ನನ್ನಂಥ ಒಳ್ಳೆಯ ಉದ್ಯೋಗಿ ಸಿಗೋದಿಲ್ಲ, ಹಾಗಾಗಿ ಮತ್ತೆ ಕಂಪೆನಿಗೆ ಸೇರಿಸಿಕೊಂಡ್ರಿ ಅಂತ ತಾಂಡವ್‌‌, ಬಾಸ್ ಎದುರು ಬಡಾಯಿ ಕೊಚ್ಚಿಕೊಂಡಿದ್ದಾನೆ. ಆದರೆ ಅವನಿಗೆ ಭಾಗ್ಯಳೇ ಈ ಕೆಲಸ ಸಿಗುವಂತೆ ಮಾಡಿರೋದು ಎನ್ನೋದು ಗೊತ್ತಿಲ್ಲ. ಮತ್ತೆ ಭಾಗ್ಯಗೆ ತೊಂದರೆ ಕೊಡಬೇಕು, ಸೊಕ್ಕು ಅಡಗಿಸಬೇಕು ಅಂತ ತಾಂಡವ್‌, ಶ್ರೇಷ್ಠ ಅಂದುಕೊಂಡಿದ್ದಾರೆ. ಮತ್ತೆ ಏನಾಗುವುದೋ ಏನೋ! ಯಾವಾಗಲೂ ಕಷ್ಟಪಡುತ್ತಿದ್ದ ಭಾಗ್ಯ ಈಗ ಖುಷಿಯಲ್ಲಿದ್ದಳು, ಇನ್ನು ತಾಂಡವ್‌ ಸೊಕ್ಕು ಕರಗಿಸುವ ಟೈಮ್‌ ಬಂದಿತ್ತು. ಇದನ್ನು ನೋಡಿ ವೀಕ್ಷಕರು ಖುಷಿಪಡುತ್ತಿರುವಾಗಲೇ ಮತ್ತೆ ವೀಕ್ಷಕರಿಗೆ ಬೇಸರ ಬಂದಿದೆ. 

‌ಕೆಲಸಕ್ಕಾಗಿ ತಾಂಡವ್ ಅಲೆದಾಡುತ್ತಿರೋದನ್ನು ನೋಡಿ ವೀಕ್ಷಕರು ಕಲರ್ಸ್‌ ಕನ್ನಡ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ

  • ನಿನ್ನ ಲೈಫ್‌ನಲ್ಲಿ ಇಷ್ಟೆಲ್ಲ ಆಗ್ತಿರೋದು ಭಾಗ್ಯ ಇಂದ ಅಲ್ಲ. ನಿನ್ನ ಜೊತೆ ಇದೆ ಅಲ್ವಾ ಇನ್ನೊಂದು ಎಮ್ಮೆ ಅದ್ರಿಂದ 
  • ಈಗ ತಾಂಡವ್ ನೋಡೋಕೆ ಮಜ ಬರ್ತಿದೆ
  • ಇನ್ ಈ ಸೀರಿಯಲ್ ನೋಡೋಕ್ ಮಜಾ ಬರುತ್ತೆ. ತಾಂಡಾವ್ ನೋಡೋಕೆ ಖುಷಿ ಆಗ್ತಾ ಇದೆ 
  • ಇವಾಗ ಮಜಾ ಬಂತು, ಕೆಲಸ ಕೊಡಲ್ಲ ಏನಿವಾಗ
  • ತಾಂಡಾವ್ ಅಷ್ಟೇ ನಿನ್ನ ಕಥೆ ಮುಗೀತು 
  • ತಾಂಡಾವ್ ಮುಖಕ್ಕೆ ಯಾರ್ ಕೆಲಸ ಕೊಡ್ತಾರೆ 
  • ಎಲ್ಲೂ ಕೆಲಸ ಸಿಗದೇ ಭಾಗ್ಯ ಕ್ಯಾಂಟೀನ್ ನಲ್ಲಿ ಮುಸುರೆ ತಿಕ್ಕೋಕೆ ಸೇರ್ಕೋಬೇಕು ಇಬ್ಬರೂ
  • ಇನ್ನು ಭಿಕ್ಷೆ ಬಿಡಬೇಕು ನೀನು

ಧಾರಾವಾಹಿ ಕಥೆ ಏನು?
ಭಾಗ್ಯ-ತಾಂಡವ್‌ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಾಂಡವ್‌ ಮಾತ್ರ ಭಾಗ್ಯಗೆ ಡಿವೋರ್ಸ್‌ ಕೊಡದೆ ಶ್ರೇಷ್ಠ ಎನ್ನುವವಳನ್ನು ಮದುವೆ ಆಗಿದ್ದಾನೆ. ಭಾಗ್ಯ ನನ್ನ ಮುಂದೆ ಸೋತು, ಕ್ಷಮೆ ಕೇಳಬೇಕು ಎಂದು ತಾಂಡವ್‌ ಬಯಸುತ್ತಿದ್ದಾನೆ. ತಾಂಡವ್‌ ವಿರುದ್ಧ ಭಾಗ್ಯ ಸವಾಲು ಹಾಕಿ ಮುನ್ನಡೆಯುತ್ತಿದ್ದಾಳೆ.

ಪಾತ್ರಧಾರಿಗಳು
ಭಾಗ್ಯ- ಸುಷ್ಮಾ ಕೆ ರಾವ್‌
ತಾಂಡವ್-‌ ಸುದರ್ಶನ್‌ ರಂಗಪ್ರಸಾದ್‌
ಶ್ರೇಷ್ಠ- ಕಾವ್ಯಾ ಗೌಡ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ