
ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಧನುಶ್ರೀ ಅವರು ಭರತ್ ಎನ್ನುವವರಿಗೆ ಪ್ರಪೋಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೀಕ್ಷಕರ ಕೋಪಕ್ಕೆ ಗುರಿಯಾಗಿದ್ದಾರೆ. ಹಾಗಾದರೆ ನಡೆದಿದ್ದೇನು?
ಈ ಫ್ರಾಂಕ್ ಯಾಕೆ?
“ಕಳೆದ ಬಾರಿ ಭರತ್ ನನಗೆ ಫ್ರಾಂಕ್ ಮಾಡಿದ್ದರು. ನಾನು ಯಾವ ರೀತಿಯ ಫ್ರಾಂಕ್ ಮಾಡಬೇಕು ಅಂತ ಇನ್‌ಸ್ಟಾಗ್ರಾಮ್‌ನಲ್ಲಿ ಕೇಳಿದಾಗ, ಸಾಕಷ್ಟು ಜನರು ಭರತ್‌ಗೆ ಪ್ರಪೋಸ್ ಮಾಡಿ ಅಂತ ಹೇಳಿದ್ದರು. ಹೀಗಾಗಿ ನಾನು ಭರತ್‌ಗೆ ಫ್ರಾಂಕ್ ಮಾಡ್ತೀನಿ. ಭರತ್ ಅವರು ಆಫೀಸ್‌ಗೆ ಹೋಗಿದ್ದು, ಅವರನ್ನು ಮನೆಗೆ ಕರೆಸಿ ಪ್ರಪೋಸಲ್ ಮಾಡ್ತೀನಿ” ಎಂದು ಧನುಶ್ರೀ ಅವರು ಹೇಳಿದ್ದಾರೆ.
ಅದ್ಭುತ ಡೆಕೋರೇಶನ್!
ಪ್ರಪೋಸಲ್ ಮಾಡೋದಿಕ್ಕೆ ಧನುಶ್ರೀ ಅವರು ಕೆಂಪು ಗುಲಾಬಿ, ಬಲೂನ್‌ಗಳಲ್ಲಿ ಭರ್ಜರಿಯಾಗಿ ಡೆಕೋರೇಟ್ ಮಾಡಿಸಿದ್ದಾರೆ. ನಿಜವಾಗಿಯೂ ಪ್ರಪೋಸಲ್ ಮಾಡೋದಿಕ್ಕೆ ಈ ರೀತಿ ಖರ್ಚು ಮಾಡೋದಿಲ್ಲ. ಈಗ ಫ್ರಾಂಕ್ ಮಾಡೋಕೆ ಈ ರೀತಿ ಮಾಡ್ತಾರೆ ಅಂದರೆ ಯಾರೂ ನಂಬೋದಿಲ್ಲ. ಕೆಂಪು ಚುಡಿದಾರ್‌ದಲ್ಲಿ ಧನುಶ್ರೀ ಅವರು ಮಿಂಚಿದ್ದಾರೆ. ಭರತ್‌ಗೆ ಇಷ್ಟ ಎಂದು ಗೋಬಿ ಮಾಡಿಸಿಕೊಂಡು ಬಂದಿದ್ದರು. ಗ್ರ್ಯಾಂಡ್ ಎಂಟ್ರಿ ಇರಬೇಕು ಅಂತ ಕೂಲ್ ಫಯರ್ ಕೂಡ ಬಳಸಿದ್ದಾರೆ.
ನಾನು ಕೆಲಸ ಮಾಡ್ತೀನಿ!
ಆಫೀಸ್‌ನಿಂದ ಭರತ್ ಮನೆಗೆ ಬಂದಾಗ ಧನುಶ್ರೀ ಅವರು ಫ್ರಾಂಕ್ ಮಾಡಿದ್ದಾರೆ. ನನಗೆ ಜನರು ಒಂದಷ್ಟು ಕಾಮೆಂಟ್ಸ್ ಮಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡುವ ಹಾಗೆ ವಿಡಿಯೋ ಮಾಡಬೇಕು ಎಂದು ಧನುಶ್ರೀ ಹೇಳಿದ್ದರು. ಆಗ ಭರತ್ ಅವರು “ಕಾಮೆಂಟ್ಸ್ ಮಾಡೋರು ಮಾಡುತ್ತಿರುತ್ತಾರೆ. ನಾನು ಕೆಲಸ ಮಾಡಲ್ಲ ಅಂತ ಜನರು ಹೇಳುತ್ತಾರೆ. ಆದರೆ ನಾನು ಕೆಲಸ ಮಾಡದೆ ಇರೋಕಾಗತ್ತಾ?” ಎಂದು ಭರತ್ ಹೇಳಿದ್ದಾರೆ.
ಸೇಡು ತೀರಿಸಿಕೊಳ್ಳುವೆ ಎಂದ ಭರತ್!
“ನಿಮಗೆ ನನ್ನ ಕಂಡ್ರೆ ಇಷ್ಟ ಅಲ್ವಾ?” ಎಂದು ಧನುಶ್ರೀ ಅವರು ಭರತ್‌ಗೆ ಕೇಳಿದಾಗ, “ಇದು ಫ್ರಾಂಕ್” ಎಂದಿದ್ದಾರೆ. “ನಾನು, ನೀವು ಭೇಟಿಯಾಗಿ ಮೂರು ತಿಂಗಳಾಗಿದೆ. ನಾನು ಎಷ್ಟೇ ಹುಡುಕಿದರೂ ಕೂಡ ನಿಮ್ಮಂತ ಒಳ್ಳೆ ಹುಡುಗ ಸಿಗೋದಿಲ್ಲ. ನೀವು ನನ್ನ ಮದುವೆ ಆಗ್ತೀರಾ?” ಅಂತ ಧನುಶ್ರೀ ಅವರು ಭರತ್‌ಗೆ ಪ್ರಶ್ನೆ ಕೇಳಿದ್ದಾರೆ. ಆಗ ಭರತ್‌ಗೆ ಡೌಟ್ ಬಂದಿದ್ದರೂ ಕೂಡ, “ಆಗ್ತೀನಿ, ಎರಡು ವರ್ಷ ಕಾಯಿರಿ” ಎಂದಿದ್ದಾರೆ. ಆಮೇಲ ಧನುಶ್ರೀ ಅವರು ಭರತ್‌ಗೆ ಲೆಟರ್ ಕೊಟ್ಟಿದ್ದು, ಅದರಲ್ಲಿ ಫ್ರಾಂಕ್ ಎಂದು ಬರೆದಿತ್ತು. ಆಗ ಭರತ್ ಅವರು, “ಇದು ನನಗೆ ಗೊತ್ತಿತ್ತು” ಎಂದು ಹೇಳಿದ್ದಾರೆ. “ನಾನು ಬಕ್ರಾ ಆದೆ, ಇದಕ್ಕೆ ಸೇಡು ತೀರಿಸಿಕೊಳ್ತೀನಿ” ಎಂದು ಭರತ್ ಹೇಳಿದ್ದಾರೆ.
ನಾವು ಫ್ರೆಂಡ್ಸ್ ಅಷ್ಟೇ!
“ನಾವಿಬ್ಬರೂ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ” ಎಂದು ಈ ಜೋಡಿ ಹೇಳಿಕೊಂಡಿದೆ. ಈ ವಿಡಿಯೋ ನೋಡಿ ಅನೇಕರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಇನ್ನು ಥಂಬ್‌ನೈಲ್, ವಿಡಿಯೋ ಹಾಗೂ ಫೋಟೋಗಳನ್ನು ಅಪ್‌ಲೋಡ್ ಮಾಡಿರೋದು ನೋಡಿದರೆ ಧನುಶ್ರೀ ಅವರು ಪಕ್ಕಾ ಭರತ್‌ಗೆ ಪ್ರಪೋಸ್ ಮಾಡುತ್ತಾರೆ ಎನ್ನುವ ಹಾಗೆ ಇತ್ತು. ಈ ರೀತಿ ಮಾಡಿ ನಮಗೆ ಬೇಸರ ಆಗುವ ಹಾಗೆ ಮಾಡಿದ್ರಿ, ಯಾಕೆ ಈ ರೀತಿ ಮಾಡ್ತೀರಿ ಎಂದು ವೀಕ್ಷಕರು ಧನುಶ್ರೀ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದಹಾಗೆ ರೀಲ್ಸ್, ಟಿಕ್ ಟಾಕ್ ಮಾಡುತ್ತಿದ್ದ ಧನುಶ್ರೀ ಅವರು ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಸದ್ಯ ಯುಟ್ಯೂಬ್ ಚಾನೆಲ್‌ನ್ನು ನಡೆಸಿಕೊಂಡು ಹೋಗ್ತಿದ್ದಾರೆ. ನಿತ್ಯವೂ ವ್ಲಾಗ್ ಮಾಡಿ ಜೀವನದಲ್ಲಿ ಏನಾಗ್ತಿದೆ ಎಂದು ಮಾಹಿತಿ ನೀಡುತ್ತಾರೆ. ಅಷ್ಟೇ ಅಲ್ಲದೆ 12kg ತೂಕ ಕಡಿಮೆ ಮಾಡಿಕೊಂಡು ಸಖತ್ ಫಿಟ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.