ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾಳೆ. ಈ ಉದ್ಯಮಕ್ಕೆ ಯಾರಿಂದ ಸಮಸ್ಯೆ ಆಗಬಹುದು?
ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯಗೆ ಹೊಸ ಐಡಿಯಾ ಸಿಕ್ಕಿದೆ. ತಾಂಡವ್ ನಿಂದಿಸುವಾಗ ಅವಳಿಗೆ ಹೊಸ ದಾರಿ ಸಿಕ್ಕಿದೆ. ಅಡುಗೆ ಮನೆ, ಸೌಟು ಅಂತ ತಾಂಡವ್ ಮೂದಲಿಸುತ್ತಿದ್ದ, ಅದಕ್ಕೀಗ ಅವಳು ಸಖತ್ ಠಕ್ಕರ್ ಕೊಟ್ಟಿದ್ದಾಳೆ.
‘ಕೈ ತುತ್ತು’ ಆರಂಭ!
ಭಾಗ್ಯ ಹೊಸ ಉದ್ಯಮ ಆರಂಭಿಸಲಿದ್ದಾಳೆ. ಅದಕ್ಕೆ ಅವಳು ಚೆಂದದ ಹೆಸರು ಇಡಬೇಕಿತ್ತು. ಹೆಸರಿಡೋಕೆ ಸಹಾಯ ಮಾಡಿ ಅಂತ ಗುಂಡಣ್ಣ ಕೇಳಿದಾಗ, ಅವನು ʼಕೈ ತುತ್ತುʼ ಅಂತ ಹೇಳಿದ್ದಾನೆ. ಈಗ ಭಾಗ್ಯ ತನ್ನ ಹೊಸ ಸಾಹಸಕ್ಕೆ ʼಕೈತುತ್ತುʼ ಎಂದು ಹೆಸರಿಡಲಿದ್ದಾಳೆ. ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡ್ತಾಳೆ. ಇದರ ಜೊತೆಗೆ ಇನ್ನೂ ಏನೇನು ಮಾಡ್ತಾಳೆ ಅಂತ ಕಾದು ನೋಡಬೇಕಿದೆ.
ಕನ್ನಡ ಕಿರುತೆರೆ ಜೋಡಿ ಸುನೇತ್ರಾ -ರಮೇಶ್ ಪಂಡಿತ್ ದಾಂಪತ್ಯ ಜೀವನಕ್ಕೆ 30 ವರ್ಷ!
ಬೀಗುತ್ತಿರುವ ತಾಂಡವ್!
ಭಾಗ್ಯ ಹೊಸ ಉದ್ಯಮ ನೋಡಿ ಅವಳ ತಾಯಿಗೆ ಅಷ್ಟೊಂದು ಇಷ್ಟ ಆಗ್ತಿಲ್ಲ. ಗಂಡ-ಹೆಂಡತಿ ಒಟ್ಟಿಗೆ ಜೀವನ ಮಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅವಳು ಅಂದುಕೊಳ್ಳುತ್ತಿದ್ದಾರೆ. ಆದರೆ ತಾಂಡವ್, ಶ್ರೇಷ್ಠಳನ್ನು ಮದುವೆ ಆಗಿ ಜೀವನ ಮಾಡುತ್ತಿದ್ದಾನೆ. ತನ್ನ ಕಾಲು ಹಿಡಿದುಕೊಂಡು ಕ್ಷಮೆ ಕೇಳಿದರೆ ನಾನು ಸೋತಂತೆ ಅಂತ ತಾಂಡವ್ ಬೀಗುತ್ತಿದ್ದಾನೆ. ಆದರೆ ಪ್ರತಿ ಬಾರಿಯೂ ತಾಂಡವ್‌ಗೆ ಭಾಗ್ಯ ಸೆಡ್ಡು ಹೊಡೆಯುತ್ತಿದ್ದಾಳೆ.
ಮುಂದೆ ಏನಾಗಬಹುದು?
ಭಾಗ್ಯ ಉದ್ಯಮದಲ್ಲಿ ಯಶಸ್ವಿಯಾದರೆ ತಾಂಡವ್ ಅವಳನ್ನು ಕ್ಷಮಿಸೋದಿಲ್ಲ, ಇನ್ನೊಂದಿಷ್ಟು ದೂರ ಆಗ್ತಾನೆ ಅಂತ ಸುನಂದಾ ಈ ಕೆಲಸಕ್ಕೆ ಕಲ್ಲು ಹಾಕಿದರೂ ಆಶ್ಚರ್ಯ ಇಲ್ಲ. ಇನ್ನೊಂದು ಕಡೆ ಈ ಬಾರಿ ಭಾಗ್ಯ ಯಶಸ್ಸು ಹೊಂದುವ ಸಾಧ್ಯತೆ ಕೂಡ ಇದೆ.
Bhagyalakshmi Serial: ತಾಂಡವ್‌ಗೆ ಹೊಸ ಅಸ್ತ್ರ ಸಿಕ್ಕಾಯ್ತು; ಭಾಗ್ಯ ಬಚಾವ್ ಆಗೋದು ಕಷ್ಟ ಇದೆ!
ವೀಕ್ಷಕರು ಏನು ಹೇಳಿದರು?