ವಿವಾಹ ವಾರ್ಷಿಕೋತ್ಸವಕ್ಕೆ ರೆಡಿಯಾಗಿರುವ ಭಾಗ್ಯ, ಶ್ರೇಷ್ಠಾಳನ್ನು ಗೆಸ್ಟ್ ಆಗಿ ಕರೆದಿದ್ದಾಳೆ. ಅವಳ ಪ್ಲ್ಯಾನ್ ಏನು?
ಭಾಗ್ಯ ಈಗ ಮತ್ತೊಂದು ಅವತಾರ ಎತ್ತಿದ್ದಾರೆ. ಇದಾಗಲೇ ಅವಳು ಗಂಡನ ಪ್ರೀತಿಗಾಗಿ ಬದಲಾಗಿದ್ದಳು. ತನ್ನ ತನವನ್ನೇ ಪಣಕ್ಕಿಟ್ಟು, ಎಸ್‌ಎಸ್‌ಎಲ್‌ಸಿಪರೀಕ್ಷೆ ಬರೆದಳು, ಇಂಗ್ಲಿಷ್, ಡ್ರೈವಿಂಗ್ ಕಲಿತಳು. ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಳು. ಆದರೆ ಅದ್ಯಾವುದೂ ಗಂಡನ ಒಲಿಸಿಕೊಳ್ಳಲು ಉಪಯೋಗ ಆಗಲಿಲ್ಲ, ಈಗ ನಗುಮುಖದಿಂದಲೇ, ಗಂಡನನ್ನು ಹೇಗೆ ಸರಿದಾರಿಗೆ ತರುವುದು ಎನ್ನುವುದು ಭಾಗ್ಯಳಿಗೆ ತಿಳಿದಿದೆ. ತಾಂಡವ್‌ನ ನಿಜವಾದ ಬಣ್ಣ ಎಲ್ಲರ ಎದುರೂ ಬಯಲಾಗಿರುವ ಕಾರಣ, ಅವನೂ ಕಮ್ ಕಿಮ್ ಎನ್ನುವಂತಿಲ್ಲ. ಭಾಗ್ಯಳ ವರ್ತನೆ ಸಂಪೂರ್ಣ ಬದಲಾಗಿದೆ. ಭಾಗ್ಯ ಮತ್ತು ಶ್ರೇಷ್ಠಾ ಮದುವೆಯಾಗ್ತಿರೋ ವಿಷಯ ತನಗೆ ಗೊತ್ತಿದೆ ಎಂದು ಯಾರಿಗೂ ಇದುವರೆಗೆ ಹೇಳಲಿಲ್ಲ ಭಾಗ್ಯ. ಎಲ್ಲರೂ ಆಕೆಗೆ ಈ ವಿಷಯ ತಿಳಿದಿಲ್ಲ ಎಂದೇ ಅಂದುಕೊಡಿದ್ದಾರೆ.
ಈಗ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಮಂಟಪ ಹಾಕಿರೋ ಭಾಗ್ಯ, ಶ್ರೇಷ್ಠಾಳನ್ನು ಗೆಸ್ಟ್ ಆಗಿ ಕರೆದಿದ್ದಾಳೆ. ಶ್ರೇಷ್ಠಾ ಬಂದಿರುವುದನ್ನು ನೋಡಿದ ಎಲ್ಲರಿಗೂ ಶಾಕ್ ಆಗಿದೆ. ಆದರೆ ಭಾಗ್ಯ ಮಾತ್ರ ನಮ್ ಯಜಮಾನರ ಕ್ಲೋಸ್ ಫ್ರೆಂಡ್ ಅಂದ ಮೇಲೆ ಕರೆಯದೇ ಇರೋಕೆ ಆಗತ್ತಾ ಎಂದುಪ್ರಶ್ನಿಸಿದ್ದಾಳೆ. ಇಂದು ಮದುವೆ, ನೀನು ಇರಲೇಬೇಕು ಎಂದಿದ್ದಾಳೆ. ಇದನ್ನು ಕೇಳಿ ಶ್ರೇಷ್ಠಾಳೂ ಗಾಬರಿಗೊಂಡಿದ್ದರೆ, ಕುಸುಮಾ, ಸುಂದರಿ, ಪೂಜಾಗೂ ಶಾಕ್ ಆಗಿದೆ. ಶ್ರೇಷ್ಠಾ ಮತ್ತು ತಾಂಡವ್ ವಿಷಯ ಭಾಗ್ಯಳಿಗೆ ತಿಳಿದಿದೆ ಎಂದು ಪೂಜಾಳಿಗೆ ಅನುಮಾನ ಶುರುವಾಗಿದೆ. ಆದರೆ ಅವಳಲ್ಲಿ ಅದೇನೂ ಬದಲಾವಣೆ ಆಗಿರಲಿಲ್ಲವಲ್ಲ, ಅಂದ್ರೆ ಭಾಗ್ಯ ಅಳುವಷ್ಟು ಅತ್ತು ಸೋತು, ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು ಬಂದಿದ್ದಾಳಲ್ಲ, ಆದ್ದರಿಂದ ಅವಳಿಗೆ ಈ ವಿಷಯ ಗೊತ್ತಿಲ್ಲ ಎನ್ನುವುದು ಕುಸುಮಾ ವಾದ.
ಅಪ್ಪ ನಮ್ಮನ್ನು ಸುಟ್ಟುಹಾಕಲು ನೋಡಿದ್ದ, ಈಗೇನಾದ್ರೂ ವಾಪಸ್ ಬಂದ್ರೆ... ತಂದೆ ಬಗ್ಗೆ ರಿತು ಸಿಂಗ್ ಕಿಡಿಯ ನುಡಿ
ತಾಂಡವ್ ಸದ್ಯ ಕಾಣುತ್ತಿಲ್ಲ. ಮದುವೆ ಮಂಟಪ ಅಂತೂ ರೆಡಿಯಾಗಿದೆ. ಇದು ನಮ್ಮ ವಿಶೇಷ ಮದುವೆ ವಾರ್ಷಿಕೋತ್ಸವ ಅಂದಿದ್ದಾಳೆ ಭಾಗ್ಯ. ಪದೇ ಪದೇ ಮದುವೆ ಮದುವೆ ಎನ್ನುವ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಹಾಗಿದ್ರೆ ಲವರ್ ಜೊತೆ ಪತಿಯ ಮದ್ವೆಯನ್ನು ಭಾಗ್ಯ ಮಾಡಿಸಿಯೇ ಬಿಡ್ತಾಳೆ ಎನ್ನುವುದು ಬಹುತೇಕ ನೆಟ್ಟಿಗರ ಮಾತಾದರೆ, ಅದಲ್ಲ, ಶ್ರೇಷ್ಠಾಳ ಎದುರು ಮತ್ತೊಮ್ಮೆ ತಾಂಡವ್‌ನಿಂದ ತಾಳಿ ಕಟ್ಟಿಸಿಕೊಂಡು ಅವಳ ಮುಖಕ್ಕೆ ಮಂಗಳಾರತಿ ಮಾಡುತ್ತಾಳೆ ಎಂದು ಮತ್ತೆ ಕೆಲವರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈಗ ಸೀರಿಯಲ್ ಕುತೂಹಲ ತಾಳಿದ್ದು, ಭಾಗ್ಯಳ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.
ಅಷ್ಟಕ್ಕೂ ಭಾಗ್ಯಳಿಗೆ ಗಂಡನ ಎಲ್ಲವೂ ಸತ್ಯ ತಿಳಿಯುತ್ತಿದ್ದಂತೆಯೇ, ಅವಳಿಗೆ ಭೂಮಿಯೇ ಕುಸಿದ ಅನುಭವವಾಗಿತ್ತು. ಕುಟುಂಬ, ಗಂಡ ಮಕ್ಕಳು ಎಂದು ತನ್ನ ಜೀವನ ಸವೆಸಿ, ಗಂಡನೇ ಸರ್ವಸ್ವ ಎಂದುಕೊಂಡ ತನ್ನ ಬಾಳು ಹೀಗಾಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅತ್ತೆ ಮತ್ತು ತಂಗಿ ಪೂಜಾ ವಿಷಯ ಮುಚ್ಚಿಟ್ಟಿರುವುದು ತಿಳಿದು ನೊಂದುಕೊಂಡಿದ್ದಳು. ಅದೇ ನೋವಿನಿಂದ ಮನೆಗೆ ಬಂದಿದ್ದಳು. ಆಗ ತಾಂಡವ್ ಕರೆ ಮಾಡಿದ್ದ, ಮನೆಯಲ್ಲಿ ಪತ್ನಿ ಇದ್ದು, ಲವರ್ ಜೊತೆ ಬಂದುದಕ್ಕೆ ಪೊಲೀಸರು ಅವನನ್ನು ಹಿಡಿದುಕೊಂಡಿದ್ದರಿಂದ ತಪ್ಪಿಸಿಕೊಳ್ಳಲು ಭಾಗ್ಯಳನ್ನು ಕರೆದಿದ್ದ. ಭಾಗ್ಯ ಹೋಗಿ ಶ್ರೇಷ್ಠಾಳ ಬಳಿಯಿಂದ ತಾಂಡವ್‌ನನ್ನು ಕರೆದುಕೊಂಡು ಬಂದಿದ್ದು, ಸಿಕ್ಕಾಪಟ್ಟೆ ಪ್ಲ್ಯಾನ್ ಮಾಡಿದ್ದಾಳೆ. ಈಗ ವಿವಾಹ ವಾರ್ಷಿಕೋತ್ಸವದ ನೆಪದಲ್ಲಿ ಏನೋ ಸ್ಕೆಚ್ ಹಾಕಿದ್ದಾಳೆ.
ಬ್ರೇಕಪ್ ಬಳಿಕವೂ ಮಧ್ಯರಾತ್ರಿ 3 ಗಂಟೆಗೆ... ಎನ್ನುತ್ತಲೇ ಮಿಡ್‌ನೈಟ್ ರಹಸ್ಯ ಬಿಚ್ಚಿಟ್ಟ ಅರ್ಜುನ್ ಕಪೂರ್!