ಅಯ್ಯೋ ಭಾಗ್ಯ ಸ್ಕೂಲಿಗೆ ಹೋಗ್ತಿದ್ದಾಳೆ ಅನ್ನೋವಾಗ್ಲೋ ಕನ್ನಿಕಾ ಕಾಟ ಶುರುವಾಯ್ತು!

By Suvarna News  |  First Published Aug 15, 2023, 11:24 AM IST

ಅಬ್ಬಾ, ಗಂಡ, ಮಗಳು ಅಡ್ಡಗಾಲು ಹಾಕಿದರೂ ಎಲ್ಲರನ್ನೂ, ಎಲ್ಲವನ್ನೂ ಎದುರಿಸಿ, ಭಾಗ್ಯಾ ಸ್ಕೂಲಿಗೆ ಹೋಗಲು ಶುರು ಮಾಡಿದ್ಲು ಎಂದು ಕೊಂಡರೆ? 


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಸೀರಿಯಲ್‌ ದಿನದಿಂದ ದಿನಕ್ಕೆ ವೀಕ್ಷಕರನ್ನು ಸೆರೆ ಹಿಡಿದಿಡಿಯುವಲ್ಲಿ ಯಶಸ್ವಿಯಾಗುತ್ತಿದೆ. ಅದರಲ್ಲಿಯೂ ಹೆಣ್ಣು ಮಕ್ಕಳಿಗಂತೂ ಒಂದು ಉತ್ಸಾಹ ಬರುವಂತೆ ಮಾಡಿ, ಪ್ರೋತ್ಸಾಹಿಸುತ್ತಿದೆ. ಅಯ್ಯೋ ಈ ಭಾಗ್ಯಳ ಸಮಸ್ಯೆಯೇ ನನ್ನದೂ ಎಂದು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಯೋಚಿಸುತ್ತಿರುವಾಗಲೇ, ಅವಳು ಶಾಲೆಗೆ ಹೋಗುವ ನಿರ್ಧಾರ ಎಷ್ಟೋ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಯೋಚಿಸುವಂತೆ ಪ್ರೇರೇಪಿಸಿದ್ದು ಸುಳ್ಳಲ್ಲ. 

ಗಂಡನಿಗೆ Extra Marital Affair. ಯಾರನ್ನೋ ಮದುವೆಯಾಗಲು ಹೋಗುತ್ತಿದ್ದಾನೆ. ಮಗಳೋ ಅಪ್ಪ ಹೇಳಿದ ಹಾಗೆ ಕೇಳುವವಳು. ಯಾವ ಜನ್ಮದ ಪುಣ್ಯವೋ ಅನ್ನುವಂತೆ ಸಿಕ್ಕಿದ ಅತ್ತೆ. ಬಾಯಿ ಜೋರಾದರೂ, ಮೃದು ಹೃದಯಿ. ಸೊಸೆ ಪರ ನಿಲ್ಲೋಳು. ಅವಳ ಬಲದಿಂದ ಶಾಲೆಗೆ ಹೋಗಲು ಶುರು ಮಾಡಿದ್ದಳು ಭಾಗ್ಯಲಕ್ಷ್ಮಿ. ಮ್ಯಾನೇಜ್‌ಮೆಂಟ್ ಸಹಾಯದಿಂದ ಅಡ್ಮಿಷನ್ ಪ್ರೊಸೆಸ್ ಅಂದು ಕೊಂಡಿದ್ದಕ್ಕಿಂತ ಸುಲಭವಾಗಿಯೇ ಮುಗಿದಿತ್ತು. ಆದರೆ, ಅದೇನೋ ಆಯಿತೋ ಏನೋ? ಇದೀಗ ಹೊಸ ಎಂಡಿ ಬಂದಿದ್ದಾಳೆ. ಕನ್ನಿಕಾ ಕಾಮತ್, ಎಂಡಿ ಅಂತ ಬೋರ್ಡ್ ತೋರಿಸಿ ಭಾಗ್ಯಾಳನ್ನು ಹಾಗೂ ಅವಳ ಭಾಷೆಯನ್ನು ಹೀಯಾಳಿಸುವುದು ಮಾತ್ರವಲ್ಲ, ಅಡ್ಮಿಷನ್ ಕ್ಯಾನ್ಸಲ್ ಆಗೋ ಹಾಗೆ ಮಾಡಿದ್ದಾಳೆ. ವಿಚಾರಿಸಲು ಬಂದ್ರೆ ನಿಮ್ಮಂಥೋರಿಗೆ ಸೀಟ್ ಕೊಟ್ಟರೆ ನಮ್ಮ ಸ್ಕೂಲಿಗೇ ಅವಮಾನ ಅನ್ನೋ ರೀತಿ ಮಾತನಾಡುತ್ತಿದ್ದಾಳೆ. 

Bhagyalakshmi: ತಾಂಡವ್‌ಗೆ ನಕಲಿ ಅಪ್ಪನಾಗಿ ಬಿಗ್‌ಬಾಸ್ ಮಂಜಣ್ಣ!

Tap to resize

Latest Videos

undefined

ಮುಂದೇನೋ ಎಂದು ವೀಕ್ಷಕರು ಆತಂಕ ಪಟ್ಟರೂ, ಇಲ್ಲ ಭಾಗ್ಯಳಿಗೆ ಏನೂ ಕಷ್ಟಪಡಬಾರದು. ಅವಳು ಓದಿ ದೊಡ್ಡ ಆಫೀಸರ್ ಆಗಿ, ಪತಿ ಮಹಾಶಯ ತಾಂಡವ್, ಶ್ರೇಷ್ಠಾ, ಮಗಳು ತನ್ವಿಗೆ ಪಾಠ ಕಲಿಸಬೇಕೆಂದು ಬಯಸುತ್ತಿದ್ದ ವೀಕ್ಷಕರು ಇದೀಗ ಈ ಹೊಸ ಎಂಡಿಗೆ ಪಾಠ ಕಲಿಸಲೇ ಬೇಕು ಎಂದು ಬಯಸುತ್ತಿದ್ದಾರೆ. ಕನ್ನಿಕಾ ಮೇಲೆ ಸಿಟ್ಟಾದರೆ ಆಕೆಯ ಆ್ಯಕ್ಟಿಂಗ್‌ಗೆ ಮಾತ್ರ ಬೋಲ್ಡ್ ಆಗಿದ್ದಾರೆ ವೀಕ್ಷಕರು. 

 

ಕೆಳ ಮಧ್ಯಮ ವರ್ಗದ ಹೆಣ್ಣು ಮಗಳು ಭಾಗ್ಯ ಸ್ವಭಾವಕ್ಕೆ ಮನಸೋತ ಕುಸುಮಾ, ತನ್ನ ಮಗ ದೊಡ್ಡ ಆಫೀಸರ್ ಆದ ತಾಂಡವ್‌ಗೆ ಮದುವೆ ಮಾಡಿಸುತ್ತಾಳೆ. ಎರಡು ಮಕ್ಕಳೂ ಆಗುತ್ತೆ. ಆದೆ, ಅವನಿಗೋ ಇವಳು ಓದಿಲ್ಲ ಅನ್ನೋ ಅಸಡ್ಡೆ. ಪೆದ್ದು ಅಂತ ಅಸಹನೆ. ಇದೀಗ ಎಲ್ಲವನ್ನೂ ಮೆಟ್ಟಿ ನಿಲ್ಲುವುದಾಗಿ ಗಟ್ಟಿ ಮನಸ್ಸು ಮಾಡಿ, ಮುನ್ನುಗ್ಗುತ್ತಿರುವ ಭಾಗ್ಯಾಗೆ ಅತ್ತೆ ಸಹಕಾರ ಸಿಕ್ಕಿದೆ. ಒಂಬತ್ತನೇ ಕ್ಲಾಸ್ ಪಾಸಾದ ಭಾಗ್ಯಾ ಮಗಳೊಂದಿಗೆ ಓದಲು ಶಾಲೆಗೆ ಸೇರಿದ್ದಾಳೆ. ಅಷ್ಟರಲ್ಲಿಯೇ ಗಂಡನ ನಾಟಕವೂ ಮನವರಿಕೆಯಾಗಿದೆ. ಅದರಿಂದ ಮತ್ತೂ ಕುಗ್ಗದೇ, ಆತ್ಮವಿಶ್ವಾಸ (Confidence) ಹೆಚ್ಚಿಸಿಕೊಂಡ ಭಾಗ್ಯಾ ಓದಿ ನಾನು ಯಾವುದಕ್ಕೆ ಅರ್ಹಳೋ ಅದನ್ನೇ ಪಡೆದೇ ತೀರುತ್ತೇನೆಂದು ಸಂಕಲ್ಪ ಮಾಡಿದ್ದಾಳೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶಾಲೆಗೆ ಸೇರಿದರೂ ಇದೀಗ ಮತ್ತೊಂದು ತಡೆಯಾಗಿ, ಮುಂದೇನು ಎಂಬ ಕುತೂಹಲ ವೀಕ್ಷಕರಿಗೆ ಹೆಚ್ಚಾಗಿದೆ. ಈಗಾಗಲೇ ಓದಲು ಗಟ್ಟಿ ನಿರ್ಧಾರ ಮಾಡಿರುವ ಭಾಗ್ಯಾ ಈ ಸಂಕಷ್ಟವನ್ನು ಸುಭವಾಗಿ ಎದುರಿಸುತ್ತಾಳೆಂಬ ಭರವಸೆ ವೀಕ್ಷಕರಿಗಿದೆ. 

ಅಮ್ಮನಿಗೆ ಇಂಗ್ಲಿಷ್ ಬರಲ್ಲಾಂದ್ರೆ ನಾಚಿಕೆ ವಿಷ್ಯಾನ? 'ಭಾಗ್ಯಲಕ್ಷ್ಮಿ'ಯಲ್ಲಿ ತನ್ವಿಯ ವರ್ತನೆ ಹೀಗ್ಯಾಕೆ?

click me!