
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಟಿಆರ್ಪಿಯಲ್ಲಿಯೂ ಸದಾ ಟಾಪೆಸ್ಟ್ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದ್ದು ಟಿಆರ್ಪಿಯಲ್ಲಿಯೂ ಮುಂದಿದೆ. ಇದೀಗ ಧಾರಾವಾಹಿ ಕುತೂಹಲ ಹಂತಕ್ಕೆ ತಲುಪಿದ್ದು, ಎರಡನೆಯ ಮಗಳು ಸ್ನೇಹಾ ಎಂಬ ಗಟ್ಟಿಗಿತ್ತಿ ಮದುವೆಯಾಗಿ ಗಂಡನ ಮನೆಗೆ ಸೇರಿದ್ದಾಳೆ. ಮುಂದೇನಾಗುತ್ತದೆ ಎನ್ನುವ ಕುತೂಹಲದ ತಿರುವು ಈ ಧಾರಾವಾಹಿ ಪಡೆದಿದೆ.
ಈ ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರಧಾರಿ, ನಟಿ ಉಮಾಶ್ರಿ (Umashree) ಅವರಷ್ಟೇ ಸಕತ್ ಫೇಮಸ್ ಆಗಿರೋ ನಟಿಯೆಂದರೆ ಪುಟ್ಟಕ್ಕನ ಸವತಿ ಅರ್ಥಾತ್ ಪತಿಯ ಎರಡನೆಯ ಪತ್ನಿಯ ಪಾತ್ರದಲ್ಲಿ ನಟಿಸ್ತಿರೋ ರಾಜೇಶ್ವರಿ. ಹೌದು. ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ ಈ ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ ರಾಜೇಶ್ವರಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್ ವಿಲನ್ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್ (Hamsa Pratap)
ಹೊಸ ಲುಕ್ನಲ್ಲಿ 'ಪುಟ್ಟಕ್ಕನ ಮಕ್ಕಳು' ವಿಲನ್ ರಾಜೇಶ್ವರಿ: ಸೋ ಸ್ವೀಟ್, ನಮ್ ಕ್ರಷ್ ಎಂದ ಫ್ಯಾನ್ಸ್
ಇನ್ನೋರ್ವ ವಿಲನ್ ನಂಜಮ್ಮ (Nanjamma). ಇವರ ನಿಜವಾದ ಹೆಸರು ಸಾರಿಕಾ ರಾಜ್. ನಂಜಮ್ಮ ಅವರು ಈ ಧಾರಾವಾಹಿಯಲ್ಲಿ ತಮ್ಮ ಡೈಲಾಗ್ಗಳಿಂದಲೇ ಸಕತ್ ಫೇಮಸ್. ಧಾರಾವಾಹಿಯ ನಾಯಕ ಕಂಠಿಯ ಸಹೋದರಿಯ ಅತ್ತೆಯ ಪಾತ್ರದಲ್ಲಿ ವಿಲನ್ ರೂಪದಲ್ಲಿ ಮಿಂಚುತ್ತಿದ್ದಾರೆ ಸಾರಿಕಾ. ಈ ಧಾರಾವಾಹಿಯಲ್ಲಿನ ಹೆಸರಿಗೆ ತಕ್ಕಂತೆ ನಂಜೇ ಆಗಿದ್ದಾರೆ. ಇವರ ಮತ್ತು ಕಂಠಿ ತಾಯಿಯ ಡೈಲಾಗ್ ಕೇಳುವುದೆಂದರೆ ಧಾರಾವಾಹಿ ಪ್ರಿಯರಿಗೆ ಏನೋ ಒಂದು ರೀತಿಯ ಹಿತ. ಈಗ ಈ ಧಾರಾವಾಹಿಯ ಮೂವರು ವಿಲನ್ಗಳು ಸೇರಿ ರೀಲ್ಸ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ನಂಜಮ್ಮ ಮತ್ತು ಬಂಗಾರಮ್ಮ ಅವರ ಡೈಲಾಗ್ಗಳ ಬಗ್ಗೆಯೇ ಕಮೆಂಟ್ಗಳ ಸುರಿಮಳೆಯಾಗಿದೆ. ನೀವು ಮೂವರೂ ಸೂಪರ್ ಲೇಡಿಸ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ನಮ್ದೂ ಒಂದಿರಲಿ ಅಂತ ಝಲಕ್ ತೋರಿದ ಲೇಡಿ ವಿಲನ್ಸ್ (Lady Villians) ಎಂಬ ಶೀರ್ಷಿಕೆಯೊಂದಿಗೆ ಈ ಇನ್ಸ್ಟಾಗ್ರಾಮ್ ವಿಡಿಯೋ ವೈರಲ್ ಆಗಿದ್ದು, ಮೂವರೂ ತಮ್ಮ ವಿಲನ್ ಗೆಟಪ್ನಲ್ಲಿ ಸಕತ್ ಪೋಸ್ ಕೊಟ್ಟಿದ್ದಾರೆ. ಎಲ್ಲರೂ ನಾಯಕಿಯರನ್ನೇ ಮೆಚ್ಚಿಕೊಳ್ಳುವ ಈ ದಿನಗಳಲ್ಲಿ ವಿಲನ್ಗಳೂ ಹೇಗೆ ಗತ್ತು ತೋರಿಸಬಹುದು ಎಂದು ನಿಮ್ಮ ಈ ರೀಲ್ಸ್ ತೋರಿಸಿಕೊಡುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ.
ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್ನಲ್ಲಿ ಭರ್ಜರಿ ಸ್ಟೆಪ್: ಉಫ್ ಎಂದ ಫ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.