ಮಲ್ಕೊಂಡಿದ್ರು ಲಿಪ್‌ಸ್ಟಿಕ್ ಬೇಕು, ಮಾತಾಡೋಕೆ ಹುಡುಗನೂ ಇಲ್ಲ: ವಿಚಿತ್ರ ಫ್ಯಾಕ್ಟ್‌ ಬಿಚ್ಚಿಟ್ಟ ನಮ್ರತಾ ಗೌಡ

Published : Aug 14, 2023, 12:56 PM ISTUpdated : Aug 14, 2023, 12:57 PM IST
ಮಲ್ಕೊಂಡಿದ್ರು ಲಿಪ್‌ಸ್ಟಿಕ್ ಬೇಕು, ಮಾತಾಡೋಕೆ ಹುಡುಗನೂ ಇಲ್ಲ: ವಿಚಿತ್ರ ಫ್ಯಾಕ್ಟ್‌ ಬಿಚ್ಚಿಟ್ಟ ನಮ್ರತಾ ಗೌಡ

ಸಾರಾಂಶ

ನೆಟ್ಟಿಗರು ಹುಡುಕುವ ವಿಚಿತ್ರ ಪ್ರಶ್ನೆಗಳಿಗೆ ಉತ್ತರ ಕೊಟ್ಟ ನಟಿ ನಮ್ರತಾ ಗೌಡ. ಯುಟ್ಯೂಬ್ ವಿಡಿಯೋ ವೈರಲ್....  

ಕಿರುತೆರೆ ನಟಿ ನಮ್ರತಾ ಗೌಡ ಸದ್ಯ ಯಾವ ಧಾರಾವಾಹಿಗೂ ಸಹಿ ಮಾಡಿಲ್ಲ ಆದರೆ ಯುಟ್ಯೂಬ್ ಚಾನೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಫೋಟೋಶೂಟ್ ಮಾಡಿಸುವಾಗ ನೆಟ್ಟಿಗರು ಪದೇ ಪದೇ ಕೇಳುವ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಹುಡುಗ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಮ್ರತಾ ಹೇಳಿರುವ ವಿಚಿತ್ರ ಫ್ಯಾಕ್ಟ್‌ಗಳು ಇಲ್ಲಿದೆ...

- ನಾನು ಹುಟ್ಟಿದಾಗ ನನಗೆ ಎರಡು ಹೆಸರು ಇಟ್ಟಿದ್ದರು. ನನ್ನ ತಾಯಿ ಕಡೆ ನನ್ನನ್ನು ವರ್ಷಿತಾ ಎಂದು ಕರೆಯುವರು ನನ್ನ ತಂದೆ ನಮ್ರತಾ ಎಂದು ಹೆಸರು ಇಡಬೇಕು ಎಂದು. ಕಾರಣ ಇಷ್ಟೆ, ನಮ್ರತಾ ಶಿರೋಡ್ಕರ್ ಆಗ ಮಿಸ್ ಇಂಡಿಯಾ ಗೆದಿದ್ದರು ತಂದೆ ಆಕೆ ಬಿಗ್ ಫ್ಯಾನ್ ಆಗಿದ್ದರು ಹೀಗಾಗಿ ಈ ಹೆಸರು ಆಯ್ಕೆ ಮಾಡಿಕೊಂಡರು. ಈಗಲೂ ಕುಟುಂಬದಲ್ಲಿ ಅನೇಕರು ವರ್ಷಿತಾ ಎಂದು ಕರೆಯುತ್ತಾರೆ.

- ಇಂಡಷ್ಟ್ರಿಗೆ ಕಾಲಿಟ್ಟು 20 ವರ್ಷ ಕಳೆದಿದೆ. 7ನೇ ವಯಸ್ಸಿಗೆ ಬಾಲನಟಿಯಾಗಿ ಕಾಲಿಟ್ಟ. ನನ್ನ ಬಗ್ಗೆ ವಿಚಿತ್ರ ಫ್ಯಾಕ್ಟ್‌ ಏನೆಂದರೆ ನನಗೆ ಮೇಕಪ್ ಮಾಡಿಕೊಳ್ಳಲು ಬರುವುದಿಲ್ಲ. ಕಣ್ಣು ಮೇಕಪ್ ಮ್ಯಾನೇಜ್ ಮಾಡಬಹುದು ಆದರೆ ಬೇಸ್‌ ಬರೋಲ್ಲ. ಇಷ್ಟು ವರ್ಷ ಇದ್ರೂ ಪ್ರಯತ್ನ ಪಟ್ಟರೂ ಬರಲ್ಲ.

ನೋಡ್ರೋ...ಎರಡು ಕಣ್ಣು ಸಾಲದು; ಹುಡುಗರ ನಿದ್ದೆಗೆಡಿಸಿತ್ತು ನಟಿ ನಮ್ರತಾ ಗೌಡ ಹಾಟ್‌ ಲುಕ್‌ !

- ನಾನು ಕ್ಯಾಮೆರಾ ಎದುರು ತುಂಬಾ ಕಂಫರ್ಟ್ ಅಗಿರುತ್ತೀನಿ. ಧೈರ್ಯ ಹೆಚ್ಚಿರುತ್ತದೆ. ಕ್ಯಾಮೆರಾ ಮುಂದೆ ಸುಲಭವಾಗಿ ಮಾತನಾಡುವಷ್ಟು ಕ್ಯಾಮೆರಾ ಆಫ್‌ ಅಥವಾ ಕ್ಯಾಮೆರಾ ಹಿಂದೆ ಮಾತನಾಡುವುದಿಲ್ಲ. 

- ಕ್ರಿಮಿ ಕೀಟಗಳು ಅಂದ್ರೆ ನನಗೆ ಸಿಕ್ಕಾಪಟ್ಟೆ ಭಯ ಆಗುತ್ತೆ. ಮನೆಯೊಳಗೆ ಯಾವುದಾದರೂ ಹುಳ ಬಂದ್ರೆ ಮೊದಲು ಹೊರಗೆ ಓಡುವೆ. ನನ್ನ ತಂದೆ ಬಂದು ಆ ಹುಳ ಸಾಯಿಸಿ ಹೊರ ಹಾಕುವವರೆಗೂ ನನಗೆ ನೆಮ್ಮದಿ ಇಲ್ಲ. ಪ್ರಾಣಿಗಳು ಅಂದ್ರೆನೂ ಇಷ್ಟ ಇಲ್ಲ.

- ಅರುಂಧತಿಯಲ್ಲಿ ಅನುಷ್ಕಾ ಶೆಟ್ಟಿ ಮಾಡಿರುವ ಪಾತ್ರ ನನಗೆ ಡ್ರೀಮ್ ಕ್ಯಾರೆಕ್ಟರ್‌. ಪವರ್‌ಫುಲ್ ಪವರ್ ಪ್ಯಾಕ್ ಆಗಿರುವ ಪಾತ್ರವನ್ನು ಮಾಡಬೇಕು ಅನ್ನೋ ಆಸೆ ತುಂಬಾ ಇದೆ. ಪಾತ್ರ ಸಿಕ್ಕರೆ ಖಂಡಿತ ನಟಿಸುವೆ.

- ನನ್ನ ಬಗ್ಗೆ ವಿಚಿತ್ರ ಫ್ಯಾಕ್ಟ್ ಹೇಳಬೇಕು ಅಂದ್ರೆ ನಾನು ಲಿಪ್‌ಸ್ಟಿಕ್ ವ್ಯಕ್ತಿ. ಬೆಳಗ್ಗೆ ಎದ್ದ ತಕ್ಷಣ ಲಿಪ್‌ಸ್ಟಿಕ್ ಹಾಕಿಕೊಳ್ಳಬೇಕು ಮಲಗುವಾಗಲೂ ಲಿಪ್‌ಸ್ಟಿಕ್ ಬೇಕು. ನನಗೆ ಲಿಪ್‌ಸ್ಟಿಕ್‌ ತುಂಬಾನೇ ಇಷ್ಟ ಯಾಕೆ ಗೊತ್ತಿಲ್ಲ. ಎಲ್ಲೇ ಹೋಗುವಾಗಲೂ ಮೇಕಪ್ ಇಲ್ಲದಿದ್ದರೂ ಪರ್ವಾಗಿಲ್ಲ ಲಿಪ್‌ಸ್ಟಿಕ್ ಇರಬೇಕು. ಮನೆಯಲ್ಲಿದ್ದರೂ ಲಿಪ್‌ಸ್ಟಿಕ್ ಇರಬೇಕು. ಇಲ್ಲದಿದ್ದರೆ ಮನೆ ಇಲ್ಲದವಳ ರೀತಿ ಇರುತ್ತೀನಿ. 

- ಮದ್ವೆ ಅನ್ನೋದು ಸಿಕ್ಕಾಪಟ್ಟೆ ದೊಡ್ಡ ವಿಚಾರ. ಬಾಲ್ಯದಿಂದ ನನ್ನ ಮದುವೆ ಬಗ್ಗೆ ಪ್ಲ್ಯಾನ್ ಮಾಡುತ್ತಿರುವೆ ಹೀಗಾಗಿ ಯಾರೂ ಸಿಗುತ್ತಿಲ್ಲ. ನನ್ನ ಬಟ್ಟೆ ಹೇಗಿರಬೇಕು ಹುಡುಗ ಬಟ್ಟೆ ಮೇಕಪ್ ಮಂಟಪ ಅಲಂಕಾರ, ವಿಡಿಯೋ ಹೇಗೆ ಸೆರೆ ಹಿಡಿಯಬೇಕು, ತಾಳಿ ಕಟ್ಟುವ ಸಮಯದಲ್ಲಿ ಹುಡುಗ ನನಗೆ ಏನು ಹೇಳಬೇಕು. ಎಲ್ಲಾ ಅಭ್ಯಾಸ ಮಾಡಿಕೊಂಡಿದ್ದೀನಿ ಒಂದು ದಿನ ಖಂಡಿತ ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುತ್ತೀನಿ.

- ಒಬ್ಬರ ಜೊತೆ ನಾನು ಮಾತನಾಡುವಾಗ ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಿರುವೆ ಅಂದ್ರೆ nervous ಆಗಿರುವೆ ಎಂದು. ಟೆನ್ಶನ್ ಅಥವಾ concious  ಆಗಿರುವಾಗ ನಾನು ಮೂಗು ಮುಟ್ಟಿಕೊಳ್ಳುವುದು. ಇದು ಸಮಸ್ಯೆ ಅಂತ ಹೇಳುವುದಿಲ್ಲ ಆದರೆ ನನ್ನ ಒಂದು ಕ್ಯಾರೆಕ್ಟರ್.

ಏರ್‌ಪೋರ್ಟ್‌ನಲ್ಲಿ ನಟಿ ನಮ್ರತಾ ಗೌಡಗೆ ಸಂಕಷ್ಟ; ಹೆಸರಿನಲ್ಲಿ ಒಂದು ಅಕ್ಷರ ಹೆಚ್ಚಾಗಿದ್ದಕ್ಕೆ ಬಿಗ್ ಕಿರಿಕ್!

- ನಾನು ಸಿಂಗಲ್, ಎಂಗೇಜ್ ಆಗಿದ್ದೀನಿ ಅಥವಾ ಮದುವೆ ಫಿಕ್ಸ್ ಆಗಿದೆ ಎಂದು ಅನೇಕರಲ್ಲಿ ಪ್ರಶ್ನೆ ಇದೆ. ಜೀವನದಲ್ಲಿ ನಾನು ತುಂಬಾ ಸಿಂಗಲ್ ಆಗಿರುವೆ ಯಾರ ಜೊತೆನೂ ಮಾತನಾಡುತ್ತಿಲ್ಲ ಯಾರ ಮೇಲೂ ಕ್ರಶ್‌ ಇಲ್ಲ ನನಗೆ. ನನ್ನ ಕೆಲಸ ಮೇಲೆ ಗಮನ ಹರಿಸುತ್ತಿರುವ ನನ್ನ ಮನಸ್ಸು ಕದಿಯುವ ವ್ಯಕ್ತಿ ಸಿಕ್ಕಿಲ್ಲ.

- ಜೀವನದಲ್ಲಿ ಒಬ್ಬರಿಂದ inspiration ತೆಗೆದುಕೊಳ್ಳುತ್ತೀನಿ ಅಂದ್ರೆ ಅದು ಪುನೀತ್ ರಾಜ್‌ಕುಮಾರ್ ಅವರು. ಅವರಷ್ಟು ಬೆಳೆಯಲು ಸಾಧನೆ ಅಥವಾ ಸಹಾಯ ಮಾಡಲು ಆಗಿಲ್ಲ ಅಂದ್ರೂ ಅವರ ಹಾದಿಯಲ್ಲಿ ನಡೆಯುವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?