
ತನ್ನ ಲವರ್ ಅನ್ನು ತನಗೆ ಬಿಟ್ಟುಕೊಟ್ಟರೂ ತಾಂಡವ್‌ಗೆ ಸಮಾಧಾನ ಇಲ್ಲ. ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯ ಪುರುಷರಿಗೆ ಸಾಕ್ಷಿಯಾಗಿ ನಿಂತಿದ್ದಾನೆ ಈ ತಾಂಡವ್ ಪಾತ್ರಧಾರಿ. ಆದರೆ ಭಾಗ್ಯಳಂಥ ಹೆಣ್ಣು ಕೂಡ ಇದೇ ಭೂಮಿಯ ಮೇಲೆ ಸಾಕಷ್ಟು ಮಂದಿ ಇದ್ದಾರೆ ಎನ್ನುವ ಸತ್ಯ ಆತನಿಗೆ ಅರ್ಥವಾಗುತ್ತಿಲ್ಲವಷ್ಟೇ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಈ ಡೈಲಾಗ್ ಹೇಳಿದ ತಾಂಡವ್ ಎದೆ ಮೇಲೆಯೇ ಭಾಗ್ಯ ಕಾಲಿಟ್ಟುಬಿಟ್ಟಿದ್ದಾಳೆ. ಹಾಗಂತ ನೇರವಾಗಿ ಗಂಡನ ಎದೆ ಮೇಲೆ ಕಾಲಿಟ್ಟಿದ್ದಾಳೆ ಎನ್ನುವ ಅರ್ಥವಲ್ಲ, ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದಿರುವ ತಾಂಡವ್ ಮಾತಿಗೆ ತಿರುಗೇಟು ಕೊಟ್ಟು ಆತನ ಕಚೇರಿಯಲ್ಲಿಯೇ ಕ್ಯಾಂಟೀನ್ ನಡೆಸುವ ಅವಕಾಶ ಪಡೆದುಕೊಂಡಿದ್ದಾಳೆ ಎಂದಷ್ಟೇ ಇದರ ಅರ್ಥ.
ಇದೀಗ ಸೀರಿಯಲ್ನಲ್ಲಿ ಕ್ಯಾಂಟೀನ್ ಒಡತಿಯಾಗಿರೋ ಭಾಗ್ಯ, ರಿಯಲ್ಗಾಗಿ ಸೀರಿಯಲ್ ಮಗಳು ತನ್ವಿ ಜೊತೆ ಸಕತ್ ರೀಲ್ಸ್ಮಾಡಿದ್ದಾರೆ. ಅಷ್ಟಕ್ಕೂ ಭಾಗ್ಯ ಉರ್ಫ್ ಸುಷ್ಮಾ ಕೆ. ರಾವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಇವರು ಸೀರಿಯಲ್ ಮಕ್ಕಳು, ತಾಂಡವ್ ಜೊತೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಇದೀಗ ಮಗಳ ಜೊತೆ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿ ಆಹಾ ಕ್ಯಾಂಟೀನ್ ಒಡತಿಯ ಖುಷಿ ನೋಡಿ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮಿಯಲ್ಲಿ ಸದ್ಯ ಭಾಗ್ಯಳಿಗೆ ಗೆಲುವು ಸಿಕ್ಕಿದೆ. ಇವಳ ಗೋಳು ನೋಡಿ ನೋಡಿ ರೋಸಿ ಹೋಗಿದ್ದ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಅದೇ ವೇಳೆ, ತನ್ವಿ ಪಾತ್ರಧಾರಿ ಅಮೃತಾ ಕೂಡ ದ್ವಿತೀಯ ಪಿಯುಸಿಯಲ್ಲಿ ಹೈಯೆಸ್ಟ್ ಅಂಕ ಗಳಿಸಿರೋ ಖುಷಿಯಲ್ಲಿ ಇದ್ದಾಳೆ.
ಇನ್ನು ಭಾಗ್ಯ ಅಂದ್ರೆ ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಇನ್ನು ಆ್ಯಂಕರ್ ಆಗಿಯೂ ನಟಿ ಸಾಕಷ್ಟು ಫೇಮಸ್ ಆಗಿದ್ದಾರೆ.
ತನ್ನ ಸುಂದರ ಅಭಿನಯದಿಂದ ಒಂದು ಸಲ ಅಮ್ಮನ ಪರ, ಮತ್ತೊಮ್ಮೆ ಅಪ್ಪನ ಪರ, ಮಗದೊಮ್ಮೆ ಗೊಂದಲಗೂಡಾಗಿರುವ ಮನಸ್ಸು... ಹೀಗೆ ಎಲ್ಲಾ ರೀತಿಯ ಅಭಿನಯಕ್ಕೂ ಸೈ ಎನಿಸಿಕೊಂಡಿರುವ ತನ್ವಿಯ ನಿಜವಾದ ಹೆಸರು ಅಮೃತಾ ಗೌಡ. ಅಮೃತಾ ಗೌಡ ದ್ವಿತೀಯ ಪಿಯುಸಿ ಮುಗಿಸಿದ್ದಾಳೆ. ಶಿಕ್ಷಣದ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಷಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾಳೆ.
ರಿಯಲ್ ಅಮ್ಮ ಕೊಟ್ಟ ಟಾರ್ಚರ್ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.