Nivedita Gowda: ಚಡ್ಡಿ ಹೋಗಿ ಲಂಗ ಬಂತು, ನಿವೇದಿತಾ ಲುಕ್ ಬದಲಿಸಿದ ಕಿಶನ್

Published : Apr 24, 2025, 12:24 PM ISTUpdated : Apr 24, 2025, 12:46 PM IST
Nivedita Gowda: ಚಡ್ಡಿ ಹೋಗಿ ಲಂಗ ಬಂತು, ನಿವೇದಿತಾ ಲುಕ್ ಬದಲಿಸಿದ ಕಿಶನ್

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ, ನರ್ತಕ ಕಿಶನ್ ಜೊತೆಗಿನ ಹೊಸ ವಿಡಿಯೋದಲ್ಲಿ ಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಂಗ-ದಾವಣಿಯುಟ್ಟು ಸಾಂಪ್ರದಾಯಿಕ ನೃತ್ಯ ಮಾಡಿರುವ ನಿವೇದಿತಾ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಕಿಶನ್‌ರ ಬಾಡಿ ಪೇಂಟಿಂಗ್ ಕೂಡ ಗಮನ ಸೆಳೆದಿದೆ. ನಿವೇದಿತಾ ಈ ಹಿಂದೆ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ಹೆಚ್ಚು ಸುದ್ದಿಯಲ್ಲಿದ್ದರು.

ಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Bigg Boss fame Nivedita Gowda), ಚಂದನ್ ಶೆಟ್ಟಿ (Chandan Shetty)ಗೆ ಡಿವೋರ್ಸ್ ನೀಡಿದ ಮೇಲೆ ಟ್ರೋಲ್ ಆಗ್ತಾನೆ ಇದ್ದಾರೆ. ಬಾರ್ಬಿ ಡಾಲ್ ಎಂದೇ ಆರಂಭದಲ್ಲಿ ಪ್ರಸಿದ್ಧಿ ಪಡೆದಿದ್ದ ನಿವೇದಿತಾ ಗೌಡ ಹೋಗ್ತಾ ಹೋಗ್ತಾ ತಮ್ಮ ಇಮೇಜ್ ಹಾಳು ಮಾಡಿಕೊಂಡ್ರು ಅಂದ್ರೆ ತಪ್ಪೇನಿಲ್ಲ. ಮೈತುಂಬಾ ಬಟ್ಟೆ ಧರಿಸಿದ್ರೆ ಗೊಂಬೆಯಂತೆ ಕಾಣುವ ನಿವೇದಿತಾ ಅರೆ ಬಟ್ಟೆ ಧರಿಸಿ ರೀಲ್ಸ್ ಮಾಡಿದ್ದೇ ಹೆಚ್ಚು. ಚಿಕ್ಕ ಬಟ್ಟೆ ಧರಿಸಿ ಬಾತ್ ರೂಮ್ ಬೆಡ್ ರೂಮಿನಲ್ಲಿ ರೀಲ್ಸ್ ಮಾಡೋ ನಿವೇದಿತಾಗೆ ಒಳ್ಳೆ ಕಮೆಂಟ್ ಬರೋದೇ ಅಪರೂಪ. ಅಪರೂಪಕ್ಕೆ ಸೀರೆಯುಟ್ಟು ರೀಲ್ಸ್ (Reels) ಮಾಡಿದ್ರೂ ಅದ್ರಲ್ಲೂ ಅಲ್ಲಿ ಇಲ್ಲಿ ಮೈ ಪ್ರದರ್ಶನ ಮಾಡುವ ನಿವೇದಿತಾ, ಪ್ರತಿ ದಿನ ವಿಡಿಯೋ ಹಂಚಿಕೊಳ್ತಾರೆ. ಅವ್ರ ವಿಡಿಯೋಕ್ಕೆ ಅದೆಷ್ಟೇ ಕೆಟ್ಟ ಕಮೆಂಟ್ ಬಂದ್ರೂ ಅವರು ಕ್ಯಾರೆ ಅನ್ನೋದಿಲ್ಲ. ಬಳಕೆದಾರರು ಕೂಡ ಕಮೆಂಟ್ ಹಾಕಿ, ಮಜಾ ತೆಗೆದುಕೊಳ್ಳೋಕೇ ನಿವೇದಿತಾ ವಿಡಿಯೋ ನೋಡ್ತಾರೆ. ಅದೇನೇ ಇರಲಿ ಈ ಬಾರಿ ನಿವೇದಿತಾ ಗೌಡ ತಮ್ಮ ಲುಕ್ ಬದಲಿಸಿದ್ದಾರೆ. ಡಾನ್ಸರ್ ಕಿಶನ್, ನಿವೇದಿತಾ ಜೊತೆ ಇದೇ ಮೊದಲ ಬಾರಿ ವಿಡಿಯೋ ಮಾಡಿದ್ದು, ನಿವೇದಿತಾರನ್ನು ಹೊಸ ರೂಪದಲ್ಲಿ ನೋಡುವ ಅವಕಾಶ ಮಾಡ್ಕೊಟ್ಟಿದ್ದಾರೆ 

ನಿವೇದಿತಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಿಶನ್ ಬಿಳಗಲಿ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಈ ವಿಡಿಯೋ ನೋಡಿದ ಬಳಕೆದಾರರು, ಇದು ನಿವೇದಿತಾನಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಯಾಕೆಂದ್ರೆ ನಿವೇದಿತಾ ಲುಕ್ ಅಷ್ಟು ಚೆನ್ನಾಗಿದೆ. ಲಂಗ – ದಾವಣಿ ಧರಿಸಿ, ಚೆಂದದ ಹಾಡಿಗೆ  ಡಾನ್ಸ್ ಮಾಡಿದ್ದಾರೆ ನಿವೇದಿತಾ. ನಿವೇದಿತಾ ಹಿಂದೆ ಮೈಗೆಲ್ಲ ಬಣ್ಣ ಬಳಿದುಕೊಂಡು ಕೃಷ್ಣನಂತೆ ಡಾನ್ಸ್ ಮಾಡಿದ್ದಾರೆ. ನಿವೇದಿತಾ ಹಿಂದೆ ಡಾನ್ಸ್ ಮಾಡ್ತಿರೋದು ಕಿಶನ್ ಅಂತ ತಕ್ಷಣ ಹೇಳೋದು ಕಷ್ಟ. ನಿವೇದಿತಾ ಗೌಡ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ಮೊದಲ ಬಾರಿ ನಿವೇದಿತಾ ವಿಡಿಯೋಕ್ಕೆ ಲೈಕ್ ಮಾಡ್ತಿದ್ದೇವೆ, ನಿವೇದಿತಾ ಟ್ರೆಡಿಷನಲ್ ಲುಕ್ ತುಂಬಾ ಚೆನ್ನಾಗಿದೆ, ಇಂಥ ಇನ್ನೊಂದು ವಿಡಿಯೋ ಮಾಡಿ, ಡಾನ್ಸ್ ಮೇಲೆ ಮತ್ತಷ್ಟು ಗಮನ ನೀಡಿ ಅನ್ನೋ ಕಮೆಂಟ್ ಗಳನ್ನು ನೋಡ್ಬಹುದು.

Kannada Entertainment Live: ಫೈರ್‌ಫ್ಲೈ ಯಂಗ್‌ ಟೀಮ್‌ನ ಸುಂದ

ವಿಚಿತ್ರ ಅಂದ್ರೆ ನಿವೇದಿತಾ ಸ್ಟೈಲ್ ಗೆ ಲೈಕ್ ಬಂದಷ್ಟು ಕಮೆಂಟ್ ಬಂದಿಲ್ಲ. ಬಳಕೆದಾರರು ಕಿಶನ್ ಹೊಗಳಿದಷ್ಟು ನಿವೇದಿತಾ ಬಗ್ಗೆ ಕಮೆಂಟ್ ಹಾಕಿಲ್ಲ. ಚಡ್ಡಿ ಹಾಕಿ ಡಾನ್ಸ್ ಮಾಡಿದಾಗ ಕೆಟ್ಟ ಕಮೆಂಟ್ ಮಾಡೋರೆಲ್ಲ ಈಗ ಎಲ್ಲಿಗ ಹೋದ್ರು ಗೊತ್ತಿಲ್ಲ. ಇನ್ನು ಕಿಶನ್ ಬಾಡಿ ಪೇಂಟಿಂಗನ್ನು ಅಭಿಮಾನುಗಳು ಇಷ್ಟಪಟ್ಟಿದ್ದಾರೆ. ಅದ್ಭುತವಾಗಿದೆ, ಹೀಗೆ ಸಿದ್ಧವಾಗಲು ತುಂಬಾ ತಾಳ್ಮೆ ಬೇಕು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ನನಗೆ ಕನ್ಫ್ಯೂಸ್ ಆಯ್ತು, ಇದು ಎಐ ಟೂಲ್ಸ್ ಅಂತ ನಾನು ಭಾವಿಸಿದ್ದೆ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. 

ನರಸಿಂಹನ ಮುಂದೆ ಬಯಲಾಗುತ್ತಾ ಜಾಹ್ನವಿ ಅಸಲಿ ಮುಖ;

ಕ್ರಿಯೇಟಿವ್ ವಿಡಿಯೋ ಮಾಡೋದ್ರಲ್ಲಿ ಕಿಶನ್ ಮುಂದಿದ್ದಾರೆ. ಎರಡು ದಿನಗಳ ಹಿಂದೆ ತಮ್ಮ ಭುಜದ ಮೇಲೆ ಮೇಣದಬತ್ತಿ ಇಟ್ಟು, ನೋವಿನಲ್ಲಿಯೇ ವಿಡಿಯೋ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು ಕಿಶನ್. ಅನೇಕ ಸೀರಿಯಲ್ ನಟಿಯರ ಜೊತೆ ಚೆಂದದ ವಿಡಿಯೋ ಮಾಡುವ ಕಿಶನ್ದ್ ಪ್ರತಿ ವಿಡಿಯೋದಲ್ಲೂ ಭಿನ್ನತೆ ಕಾಣ್ಬಹುದು. ಇನ್ನು ನಿವೇದಿತಾ ಸುದ್ದಿಗೆ ಬರೋದಾದ್ರೆ ಕಮೆಂಟ್ ಓದದೇ ವಿಡಿಯೋ ಮಾಡೋದಾಗಿ ಈ ಹಿಂದೆಯೇ ಹೇಳಿದ್ದರು ನಿವೇದಿತಾ. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿರುವ ನಿವೇದಿತಾ, ಚೆಂದನ್ ಶೆಟ್ಟಿ ಜೊತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಪ್ರಸಿದ್ಧಿಗೆ ಬಂದ್ರೂ ಚಂದನ್ ಶೆಟ್ಟಿಗೆ ಡಿವೋರ್ಸ್ ನೀಡಿದ ಮೇಲೆ ನಿವೇದಿತಾ ಪ್ರಸಿದ್ಧಿ ಹೆಚ್ಚಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?